(ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಮರಿರಂಗಪ್ಪ ಅವರ ಅಂತಿಮ ದರ್ಶನವನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಪಡೆದು ಅಂತ್ಯ ಸಂಸ್ಕಾರಕ್ಕೆ ಹಣ ನೀಡಿದರು. ಒಳಚಿತ್ರದಲ್ಲಿ ಮೃತ ಮರಿರಂಗಪ್ಪ)
ಹುಲಿಯಾರು ಹೋಬಳಿ ದಸೂಡಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಮರಿರಂಗಪ್ಪ(90) ಅವರು ಮಂಗಳವಾರ ಮುಂಜಾನೆ ವಿಧಿವಶರಾದರು.
ವೃಧಾಪ್ಯದಿಂದ ನಿಧನರಾದ ಸ್ವಾತಂತ್ರ್ಯ ಹೋರಾಟಗಾರರನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಅಂತಿಮ ದರ್ಶನ ಪಡೆದು ಸಕಾ೯ರದ ಪರವಾಗಿ ಗೌರವ ಸಮಪಿ೯ಸಿದರು.
ಮೃತರು ಶಿರಾ ತಾಲೂಕು ಬೆಂಜೆ ಗ್ರಾಮದ ಮೂಲದವರಾಗಿದ್ದು ಸುಮಾರು 60 ವರ್ಷಗಳಿಂದ ಹೋಬಳಿಯ ದಸೂಡಿ ಗ್ರಾಮದಲ್ಲಿ ವಾಸವಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 1939 ರಲ್ಲಿ 3 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು.
ಇವರು ಪತ್ನಿ ಗಂಗಮ್ಮ, 3 ಮಂದಿ ಗಂಡು ಮಕ್ಕಳು, 12 ಮಮ್ಮೊಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಕಾ೯ರದ ಪರವಾಗಿ ತಹಸೀಲ್ದಾರ್ ಟಿ.ಸಿ.ಕಾಂತರಾಜು ಸೇರಿದಂತೆ ಕಂದಾಯ ತನಿಖಾಧಿಕಾರಿ ಬಸವರಾಜು, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ಗಂಗರಾಜು ಅಲ್ಲದೆ ಗ್ರಾಮದ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು. ಸಂಜೆ ಮೃತರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ