ಪದವಿ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ವಿದ್ಯಾಥಿ೯ಗಳು ಕಾಪಿ ಮಾಡುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಜಾಗೃತದಳಕ್ಕೆ ಸಿಕ್ಕಿಬಿದ್ದು ಡಿಬಾರ್ ಆದ ಘಟನೆ ಹುಳಿಯಾರಿನಲ್ಲಿ ಗುರುವಾರ ಜರುಗಿದೆ.
ಪ್ರಥಮ ಎಚ್ಇಪಿ 2 ನೇ ಸೆಮಿಸ್ಟರ್ ಬರೆಯುತ್ತಿದ್ದ ದುರ್ಗರಾಜು ಹಾಗೂ ಬಿಬಿಎಂ 3 ನೇ ಸೆಮಿಸ್ಟರ್ನಲ್ಲಿ ಹಿಂದೆ ಅನುತೀರ್ಣರಾಗಿ ಈಗ ಮರು ಪರೀಕ್ಷೆ ಬರೆಯುತ್ತಿದ್ದ ದಯಾನಂದ್ ಅವರುಗಳೇ ಕಾಪಿ ಮಾಡುವಾಗ ಸಿಕ್ಕಿಬಿದ್ದ ವಿದ್ಯಾಥಿ೯ಗಳಾಗಿದ್ದರೆ. ದುರ್ಗರಾಜ್ ಅವರು ಚಪ್ಪಲಿ ಒಳಗೆ ಕಾಪಿಚೀಟಿ ಹಾಗೂ ದಯಾನಂದ್ ಅವರು ಉತ್ತರವುಳ್ಳ ಐದಾರು ಕಂಪ್ಯೂಟರ್ ಶೀಟ್ ಗಳನ್ನು ತಂದು ಕಾಪಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ತುಮಕೂರು ವಿಶ್ವವಿದ್ಯಾನಿಲಯದ ಜಾಗೃತದಳದ ಅಧಿಕಾರಿ ಪ್ರಸನ್ನ ಅವರು ಬೆಳಿಗ್ಗೆ ತಪಾಸಣೆಗೆ ಬಂದಿದ್ದಾಗ ಕಾಪಿ ಮಾಡುತ್ತಿದ್ದ ದುರ್ಗರಾಜು ಹಾಗೂ ಮಧ್ಯಾಹ್ನದ ಸಮಯದಲ್ಲಿ ತಪಾಸಣೆಗೆ ಬಂದಾಗ ಕಾಪಿ ಮಾಡುತ್ತಿದ್ದ ದಯಾನಂದ್ ನೇರವಾಗಿ ಸಿಕ್ಕಿಬಿದ್ದು ಡಿಬಾರ್ ಆಗಿ ಪರೀಕ್ಷೆ ಕೇಂದ್ರದಿಂದ ಹೊರಬಿದ್ದಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ