ನಮ್ಮ ಪಂಚಾಯ್ತಿಗೆ ಅಭಿವೃದ್ಧಿ ಚಿಂತಕರು ಬೇಕು ಎಂದಿರುವ ಹುಳಿಯಾರಿನ ಟಿಪ್ಪೂ ಸುಲ್ತಾನ್ ಯುವಕ ಸಂಘದ ಪದಾಧಿಕಾರಿಗಳು ಪ್ರಸಕ್ತ ಸಾಲಿನ ಗ್ರಾ.ಪಂ.ಚುನಾವಣೆಗೆ ಎಂತಹ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಮತದಾನದ ಮಹತ್ವವನ್ನು ಕರಪತ್ರದ ಮೂಲಕ ಮತದಾರರನ್ನು ಎಚ್ಚರಗೊಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.ಮತದಾರರು ಜನಪ್ರತಿನಿಧಿಗಳಿಂದ ಏನ್ನನ್ನು ನಿರೀಕ್ಷಿಸಬೇಕು ಹಾಗೂ ಮತದಾರರ ಬೇಡಿಕೆ ಏನೆಂಬುದರ ಬಗ್ಗೆ ಕರಪತ್ರದ ಮೂಲಕ ಪ್ರಚಾರ ಪಡಿಸಿದ್ದಾರೆ. ಗ್ರಾಮ ಪಂಚಾಯ್ತಿ ಎಂದರೆ ರಾಜ್ಯಕ್ಕೆ ವಿಧಾನಸೌಧ ಇರುವ ಹಾಗೆ ನಮ್ಮ ಗ್ರಾಮಕ್ಕೆ ಈ ಗ್ರಾಮ ಪಂಚಾಯ್ತಿ. ನಮ್ಮ ಗ್ರಾಮದ ಅಗತ್ಯ ಕೆಲಸಗಳನ್ನು ನಾವೇ ನಿರ್ಧರಿಸಿ ಮಾಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಇದರಲ್ಲಿದೆ ಎನ್ನುವ ಮಹತ್ವ ಅರಿವು ಮೂಡಿಸುವ ಜೊತೆಗೆ ಈ ಭಾಗದ ಸಮಸ್ಯೆಗಳ ಅರಿವಿರುವ ಹಾಗೂ ಗ್ರಾಮವನ್ನು ಅಭಿವೃದ್ಧಿ ದಾರಿಯಲ್ಲಿ ಕೊಂಡೊಯ್ಯುವ ಸಚಾರಿತ್ಯ ಉಳ್ಳ ಸಮರ್ಥ ಅಭ್ಯಥಿ೯ಯನ್ನು ನಿರ್ಧರಿಸಿ ಜಾತಿ,ಮತ,ಭೇದ-ಭಾವವಿಲ್ಲದೆ ಆಯ್ಕೆ ಮಾಡುವ ಜವಾಬ್ದಾರಿ ಪಾಠವನ್ನು ಈ ಕರಪತ್ರದಲ್ಲಿ ಹೇಳಲಾಗಿದೆ. ಹಣ, ಹೆಂಡ, ಸೀರೆಗಳ ಆಮೀಷಕ್ಕೆ ಒಳಗಾಗಿ ಅಸಮರ್ಥರನ್ನು ಆಯ್ಕೆ ಮಾಡಿದಲ್ಲಿ ಮುಂದಿನ ಐದು ವರ್ಷ ಸಮಸ್ಯೆಗಳೊಂದಿಗೆ ಕಾಲ ಕಳೆಯ ಅನಿವಾರ್ಯತೆಯನ್ನು ನಾವೇ ಆಹ್ವಾನಿಸಿದಂತಾಗುತ್ತದೆ. ಹಾಗಾಗಿ ಮತದಾನದ ವೇಳೆ ಜಾಗೃತರಾಗಿ ಮತ ಚಲಾಯಿಸಿ ಎಂಬ ಎಚ್ಚರಿಕೆ ಇದೆ.
ಮತದಾರರ ಬೇಡಿಕೆ : ಸಮರ್ಪಕ ಶುದ್ಧ ಕುಡಿಯುವ ನೀರಿನ ಪೂರೈಕೆ, ಪ್ರತಿ ಬೀದಿಗಳಲ್ಲೂ ಬೀದಿದೀಪಗಳ ಅಳವಡಿಕೆ,ಪ್ರತಿ ದಿನ ಗ್ರಾಮ ಸ್ವಚ್ಚತೆ, ಚರಂಡಿ ಸ್ವಚ್ಚತೆ, ಫಾಗಿಂಗ್, ಬೀದಿ ನಾಯಿ, ಹಂದಿ ಹಾವಳಿ ತಪ್ಪಿಸಿ, ವಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಹೀಗೆ ನಮ್ಮಿಂದ ಆರಿಸಿ ಬರುವ ಪ್ರತಿನಿಧಿಗಳು ಗ್ರಾಮದಲ್ಲಿ ಬಹುಮುಖ್ಯವಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿಯೂ ಸಹ ಕರಪತ್ರದ ಹಿಂಬದಿಯಲಿದೆ.
ಒಟ್ಟಾರೆ ಮುಸ್ಲಿಂ ಸಂಘದ ಪದಾಧಿಕಾರಿಗಳು ಗ್ರಾ.ಪಂ.ಚುನಾವಣೆ ಹೇಗಿರಬೇಕು ಎಂಬ ಜವಾಬ್ದಾರಿಯನ್ನು ಸಮರ್ಥವಾಗಿ ಪ್ರದಶಿ೯ಸಿದೆ. ಎಲ್ಲ ಸಂಘ-ಸಂಸ್ಥೆಗಳೂ ಇಷ್ಟು ಮಾತ್ರದ ಮತದಾನದ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈಹಾಕಿದರೂ ಸಾಕು ಪಂಚಾಯ್ತಿಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಬಹುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ