(ಹುಳಿಯಾರು ಗ್ರಾಮ ಪಂಚಾಯ್ತಿ )
ಲೇಖನ: ಡಿ.ಆರ್.ನರೇಂದ್ರಬಾಬು
ಹುಳಿಯಾರು
ಹಳ್ಳಿಗಳ ವಿಧಾನ ಸೌಧವಾಗಿರುವ ಗ್ರಾಮ ಪಂಚಾಯ್ತಿಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತಕ್ಕೆ ನೂತನ ಸದಸ್ಯರನ್ನು ಆಯ್ಕೆಮಾಡುವ ಚುನಾವಣೆ ಸಜ್ಜುಗೊಂಡಿದ್ದು ಶನಿವಾರದಂದು ಮುಹೂರ್ತ ನಿಗಧಿಯಾಗಿದೆ.
ಜಯಚಂದ್ರರವರು ತಮ್ಮ ವಿಧಾನಸಭಾ ಕ್ಷೇತ್ರವನ್ನು ಬದಲಿಸಿದ ದಿನದಿಂದ ನೆಲಕಚ್ಚಿರುವ ಕಾಂಗ್ರೆಸ್ ಈ ಚುನಾವಣೆಯನ್ನು ಎದುರಿಸುವಲ್ಲಿ ವಿಫಲವಾದಂತೆ ಕಂಡು ಬಂದಿದ್ದು ಹಾಲಿ ಶಾಸಕ ಸಿ.ಬಿ.ಸುರೇಶ್ಬಾಬು ಬೆಂಬಲಿತ ಜೆಡಿಎಸ್ ಅಭ್ಯಥಿ೯ಗಳು ಹಾಗೂ ಸ್ಥಳೀಯರೂ ಆದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಬೆಂಬಲಿತ ಬಿಜೆಪಿ ಅಭ್ಯಥಿ೯ಗಳೊಂದಿಗೆ ಅಂತಿಮ ಹಣಾಹಣಿ ನಡೆಯುವ ಲಕ್ಷಣಗಳು ಗೋಚರಿಸುತ್ತಿದೆ.
ಈ ಮಧ್ಯೆ ಕೆಲವೆಡೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬೆಂಬಲಿತ ಜೆಡಿಯು ಅಭ್ಯಥಿ೯ಗಳು ಸೇರಿದಂತೆ ಪಕ್ಷೇತರ ಅಭ್ಯಥಿ೯ಗಳೂ ಸಹ ಮತದಾರರನ್ನು ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಒಟ್ಟಾರೆ ಅಭ್ಯಥಿ೯ಗಳ ಪ್ರಚಾರದ ಭರಾಟೆ ಗಮನಿಸಿದರೆ ಪಂಚಾಯ್ತಿಯಲ್ಲಿ ವರ್ಷನೂ ಗಟ್ಟಲೆಯಿಂದ ಕಾಡುತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆಯಾಗಲಿ, ಮುಂದೆ ತಾವು ಮಾಡುವ ಅಭಿವೃದ್ಧಿ ಕೆಲಸಗಳ ಬಗ್ಗೆಯಾಗಲಿ ಪ್ರಚಾರದಲ್ಲಿ ಬೆಳಕು ಚೆಲ್ಲದಿರುವುದು ದುರಂತದ ಸಂಗತಿಯಾಗಿದೆ.
@ ಪಂಚಾಯ್ತಿಯ ಹಿನ್ನೋಟ: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಬಿಟ್ಟರೆ ಅಭಿವೃದ್ಧಿಯಲ್ಲಿ ಮಾತ್ರ ಜಿಲ್ಲೆಯಲ್ಲಿಯೇ ಅತೀ ಹಿಂದುಳಿದ ಪಂಚಾಯ್ತಿ ಎನ್ನುವಂತಾಗಿದೆ. ಅಧ್ಯಕ್ಷೆ, ಕಾರ್ಯದಶಿ೯, ಸದಸ್ಯರ ನಡುವೆ ಸಾಮರಸ್ಯದ ಕೊರತೆಯಿಂದ ಕಳೆದ ಐದು ವರ್ಷಗಳು ಗುರುತರವಾದ ಪ್ರಗತಿ ಕಾಣದೆ ಸಮಸ್ಯೆಯಲ್ಲಿಯೇ ಅಂತ್ಯವಾಯಿತು. ಸ್ಥಳೀಯ ಆದಾಯ ಸೇರಿದಂತೆ ವಿವಿಧ ಮೂಲಗಳಿಂದ ದಂಡಿಯಾಗಿ ಅನುದಾನ ಹರಿದು ಬಂದಿದ್ದು ಪ್ರತಿಯೊಂದು ಬ್ಲಾಕುಗಳಲ್ಲೂ ಭ್ರಷ್ಟತೆಯ ವಾಸನೆ ರಾಚುವುದು ಬಿಟ್ಟರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.
@ ವಸತಿ ಯೋಜನೆ: ವಸತಿ ಯೋಜನೆಯಲ್ಲಿಯೂ ಅವ್ಯವಹಾರ ನಡೆಯುತ್ತದೆ ಎನ್ನುವುದನ್ನು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದು ಈ ಪಂಚಾಯ್ತಿ. ಅನೇಕ ಮಾನದಂಡಗಳು, ಅನೇಕ ಅಧಿಕಾರಿಗಳ ಕಣ್ಗಾವಲು ಹಾಗೂ ವಿವಿಧ ಹಂತಗಳಲ್ಲಿ ಹಣ ಬಿಡುಗಡೆ ಎಂಬ ಕಟ್ಟು ನಿಟ್ಟಿನ ಯೋಜನೆಯಾದ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಹಿಂದೆ ಕಟ್ಟಿದ ಮನೆಗೆ ಬಿಲ್ಲು, ಯಾರದೋ ಮನೆಗೆ ಬಿಲ್ಲು, ಮನೆಯನ್ನೇ ಕಟ್ಟದೆ ಕಂಪ್ಯೂಟರ್ ಗ್ರಾಫಿಕ್ಸ್ ಮಾಡಿ ಬಿಲ್ಲು ಹೀಗೆ ಅನೇಕ ರೀತಿ ಭ್ರಷ್ಟಚಾರ ಎಸಗಿ ರಾಜ್ಯದ ಅಧಿಕಾರಿಗಳು ಭ್ರಷ್ಟಾಚಾರ ಹೀಗೂ ಮಾಡಬಹುದೇ ಎಂದು ಹೌಹಾರಿದ್ದು, ರಾಜ್ಯದಲಿಯೇ ಪ್ರಥಮವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದಲ್ಲದೆ ಅಂದಿನಿಂದ ಕಡು ಬಡವರಿಗೆ ಸೂರು ಇಲ್ಲದಂತೆ ಮಾಡಿದ್ದೇ ಈ ಪಂಚಾಯ್ತಿಯ ಕುಖ್ಯಾತಿ.
@ ಹಳ್ಳ ಹಿಡಿದ ಉದ್ಯೋಗ ಖಾತ್ರಿ: ಕೇಂದ್ರ ಸಕಾ೯ರದ ಮಹತ್ವಾಕಾಂಕ್ಷೆ ಯೋಜನೆ ಉದ್ಯೋಗ ಖಾತ್ರಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬರುತ್ತಿದ್ದರೂ ಕೂಡ ಇಂತಹ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಮೊದಲ ಅನುಷ್ಠಾನದಲ್ಲಿಯೇ ಹಳ್ಳ ಹಿಡಿಸಿದರು. ಅಧ್ಯಕ್ಷರು ಹಾಗೂ ಕಾರ್ಯದಶಿ೯ಗಳ ಬೇಜವಾಬ್ದಾರಿಯಿಂದ ತೋಟಗಾರಿಕೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿಸಲಾಗದೆ ಬಿಡುಗಡೆಯಾದ ಹಣವನ್ನು ಉಪಯೋಗ ಮಾಡಲೇಬೇಕಾದ್ದರಿಂದ ಕೆಲವು ಕಾಂಪೌಡು ಹಾಗೂ ತಡೆ ಅಣೆಗೆ ಮಾತ್ರ ವಿನಿಯೋಗಿಸಿ ಅತ್ಯಗತ್ಯವಾಗಿ ಆಗಲೇಬೇಕಾದ ಕೆಲಸಗಳಿಗೆ ಎಳ್ಳುನೀರು ಬಿಟ್ಟರು.
@ ಮೂಲಭೂತ ಸೌಕರ್ಯ ಮರಿಚಿಕೆ: ಪೈಪ್ ಲೈನ್, ಮೋಟರ್, ಬೀದಿದೀಪ, ನೈರ್ಮಲ್ಯೀಕರಣವು ಪಟ್ಟಣದ ಸಮಸ್ಯೆ ನಿವಾರಿಸುವ ಬದಲು ಕೆಲ ಗ್ರಾ.ಪಂ.ಸದಸ್ಯರ ಆದಾಯದ ಮೂಲವಾಗಿದ್ದು ದುರಂತ. 12 ನೇ ಹಣಕಾಸು ಯೋಜನೆ ಕೂಡ ಸಮರ್ಪಕವಾಗಿ ಅನುಷ್ಠಾನವಾಗದೆ ಅವ್ಯವಹಾರಕ್ಕೆ ಕಾರಣವಾಗಿದೆ ಎಂದು ಸದಸ್ಯಸದಸ್ಯರ ಮಡುವೆಯೇ ಚಕಮಕಿಗೆ ಕಾರಣವಾಗಿದ್ದು ಮತನೀಡಿ ಗೆಲ್ಲಿಸಿದ ಮತದಾರರ ದೌಭಾ೯ಗ್ಯ. ಐದು ವರ್ಷದ ಆಡಳಿತದಲ್ಲಿ ಅನೇಕ ಕಾರ್ಯದಶಿ೯ಗಳು ಬಂದು ಹೋಗಿದ್ದು ಲೆಕ್ಕನೂ ಇಲ್ಲ, ಪೊಲೀಸ್ ಉಪಸ್ಥಿತಿಯಲ್ಲಿ ಸಭೆಗಳನ್ನು ನಡೆಸಿದ್ದು ಹಿಂದೆಂದೂ ಕೇಳದ ಸಂಗತಿಯಾಗಿತ್ತು.
ಅಧ್ಯಕ್ಷರ ಚುನಾವಣೆಯಲ್ಲಿ ಖಾಯಂ ದುಡ್ಡು, ಸದಸ್ಯರುಗಳೇ ಆಯ್ಕೆ ಮಾಡುವ ಎಂಎಲ್ಸಿ ಚುನಾವಣೆ, ಮಳಿಗೆ ಹರಾಜು, ಕಾಮಗಾರಿ ಕಮಿಷನ್ ಹೀಗೆ ಅನೇಕ ದುಡ್ಡಿನ ಬಾಬತ್ತುಗಳು ಅಭ್ಯಥಿ೯ಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಐದು ವರ್ಷಗಳಿಂದ ಹಗರಣಗಳು ನೋಡಿ, ಕೇಳಿ, ಪತ್ರಿಕೆಗಳಲ್ಲಿ ಓದಿರುವ ಮತದಾರರು ಯಾರು ಬಂದರೂ ಇಷ್ಟೆ ಎನ್ನುವ ಮನೋಭಾವ ತಾಳಿದ್ದಾರೆ.
(ಹುಳಿಯಾರು ಗ್ರಾಮ ಪಂಚಾಯ್ತಿ ಮುಂದೆ ನಡೆದಿದ್ದ ಧರಣಿಯ ಸಂಗ್ರಹ ಚಿತ್ರ)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ