ಕರ್ತವ್ಯನಿರತರಾಗಿದ್ದ ಹುಳಿಯಾರು ಎಎಸೈ ಈರಮರಿಯಪ್ಪ ತೀವ್ರ ಹೃದಯಾಘಾತಕೊಳಗಾಗಿ ಚಿಕ್ಕನಾಯಕನಹಳ್ಳಿ ಸಕಾ೯ರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.ಮೃತರಿಗೆ 56 ವರ್ಷ ವಯಸ್ಸಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಠಾಣೆಯಲ್ಲಿ ಎಎಸೈ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಶನಿವಾರ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ ಭಾನುವಾರ ಚಿಕ್ಕನಾಯಕನಹಳ್ಳಿ ಸಕಾ೯ರಿ ಪದವಿ ಪೂರ್ವ ಕಾಲೇಜಿನಲ್ಲಿ ಇರಿಸಲಾಗಿದ್ದ ಮತಪೆಟ್ಟಿಗೆಗಳ ಕಾವಲಿಗೆ ತೆರಳಿದ್ದರು.ಅಲ್ಲಿಯೇ ತೀವ್ರ ಹೃದಯಾಘಾತಕೊಳಗಾಗಿ ಸಕಾ೯ರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದರು.ಮೃತರು ಪತ್ನಿ,ಮೂರು ಮಂದಿ ಮಕ್ಕಳನ್ನು ಅಗಲಿದ್ದಾರೆ.
ಹೃದಯಾಘಾತದಿಂದ ಸಾವನಪ್ಪಿದ ಹುಳಿಯಾರು ಎಎಸೈ ಈರಮರಿಯಪ್ಪ
ಮೃತದೇಹವನ್ನು ಹುಳಿಯಾರು ಪೋಲಿಸ್ ಠಾಣೆ ಮುಂದೆ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು.ತಹಸಿಲ್ದಾರ್ ಕಾಂತರಾಜು,ಸಿಪಿಐ ರವಿಪ್ರಸಾದ್,ಹುಳಿಯಾರು ಪಿಎಸೈ ಪಾರ್ವತಿಯಾದವ್,ಹಂದನಕೆರೆ ಪಿಎಸೈ ಲಕ್ಷೀಪತಿ, ಸಹೋದ್ಯೋಗಿಗಳು ಸೇರಿದಂತೆ ರೈತಸಂಘದ ಕೆಂಕೆರೆಸತೀಶ್,ಕೆ.ಪಿ.ಮಲ್ಲೇಶ್,ಬಿಜೆಪಿ ಮುಖಂಡರಾದ ದಬ್ಬಗುಂಟೆ ರವಿಕುಮಾರ್,ತಾಪಂ ಸದಸ್ಯ ಶಿವನಂಜಪ್ಪ,ಜೆಡಿಎಸ್ ಮುಖಂಡ ನಂದಿಹಳ್ಳಿ ಶಿವಣ್ಣ,ಸೈಯದ್ ಜಲಾಲ್ ಸಾಬ್,ವಕೀಲ ಸದಾಶಿವು, ವಕೀಲ ವಿಶ್ವನಾಥ್,ಬಸ್ ಏಜೆಂಟ್ ಸಂಘದ ಕಾರ್ಯದಶಿ೯ ವಿಶ್ವನಾಥ್ ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆದರು. ನಂತರ ಹುಟ್ಟೂರಾದ ಶಿರಾ ತಾಲ್ಲೂಕ್ ಯರಗುಂಟೆ ಪಕ್ಕದ ರತ್ನಸಂದ್ರ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು.ಸಂಜೆ ಸಕಾ೯ರಿ ಮರ್ಯಾದೆಯೊಂದಿಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
(ಹುಳಿಯಾರು ಎಎಸ್ಐ ಈರಮರಿಯಪ್ಪ ಅವರು ಚುನಾವಣಾ ಕರ್ತವ್ಯ ನಿರತರಾದ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವನಪ್ಪಿದ್ದು ಇಲ್ಲಿನ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದ ಮೃತದೇಹಕ್ಕೆ ತಾಲ್ಲೂಕ್ ಆಡಳಿತದ ಪರವಾಗಿ ತಹಸಿಲ್ದಾರ್ ಟಿ.ಸಿ.ಕಾಂತರಾಜು ಅವರು ಅಂತಿಮ ಗೌರವ ಸಲ್ಲಿಸಿದರು. ಪಿಎಸೈ ಪಾರ್ವತಿಯಾದವ್ ಇತರರು ಇದ್ದಾರೆ. )

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ