ಹುಳಿಯಾರು ಸಮೀಪದ ಸೀಗೆಬಾಗಿಯಲ್ಲಿ ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವವಿದ್ಯಾಲಯ, ಶ್ರೀ ವರದರಾಜಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಕನಾ೯ಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ್ಲಿ ತೆಗೆದುಕೊಳ್ಳಲಾದ ನೀರು ನಿರ್ವಹಣೆ ಪ್ರಾತ್ಸೆಕ್ಷಿಕೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಈ ಯೋಜನೆಯಲ್ಲಿ ರೈತರ ಬೆಳೆಗಳ ಇಳುವರಿ ಸುದಾರಣೆ ಮಾಡಿ ಆಥಿ೯ಕ ಮಟ್ಟ ಉತ್ತಮಗೊಳಿಸುವ ಸಲುವಾಗಿ ನೊಂದಾಯಿತ ರೈತರಿಗೆ ನೀರು ನಿರ್ವಹಣೆ, ಆಹಾರ ಬೆಳೆ, ತೋಟಗಾರಿಕೆ ಬೆಳೆ, ಮೇವಿನ ಬೆಳೆಗಳ ಬಗ್ಗೆ ಪ್ರಾತ್ಸಕ್ಷಿಕೆ ನೀಡುವುದಲ್ಲದೆ ಸಮಗ್ರ ಕೃಷಿ ಪದ್ಧತಿ, ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ತರಬೇತಿ, ಪರಿಸರ ತರಬೇತಿ, ಅಧ್ಯಯನ ಪ್ರವಾಸ, ಮಣ್ಣು ಪರೀಕ್ಷೆ ಹೀಗೆ ಹತ್ತು ಹಲವು ತಿಳುವಳಿಕೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬೆಂಗಳೂರಿನ ನೀರು ತಜ್ಷ ಕೆ.ಆರ್.ಶೆಟ್ಟರ್ ಅವರು ಮಾತನಾಡಿ ಕೆರೆಯ ನೀರು ಪುಕ್ಕಟ್ಟೆ ಸಿಗುವುದರಿಂದ ರೈತರು ತಮ್ಮ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಳಕೆಮಾಡುತ್ತಿದ್ದಾರೆ. ಇದರಿಂದ ಕೆರೆಯಲ್ಲಿ ನೀರು ಖಾಲಿಯಾಗಿ ಅಂತರ್ಜಲ ಮಟ್ಟ ಕುಸಿತವಾಗುತ್ತದೆ. ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೆ, ಕೃಷಿ ಭೂಮಿಗೆ ಉಪ್ಪಿನಾಂಶ ಇಳಿದು ತನ್ನ ಪೋಷಕಾಂಶ ಕಳೆದುಕೊಳ್ಳುತ್ತದೆ. ಹಾಗಾಗಿ ರೈತರು ನೀರಿನ ದುರ್ಭಳಕೆ ಬಿಟ್ಟು ಮಿತವಾಗಿ ನೀರು ಬಳಸಿ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದರು.
ಹೆಚ್ಚು ಗೊಬ್ಬರ ಹಾಕಿದರೆ ಹೆಚ್ಚು ಬೆಳೆ ಬರುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ರೈತರಿದ್ದು ಹೆಚ್ಚು ಗೊಬ್ಬರ ಹಾಗೂ ಔಷಧಿ ಬಳಸಿದರೆ ಇಳುವರಿಯಲ್ಲಿ ಕಡಿಮೆಯಾಗುತ್ತದೆ. ಅಲ್ಲದೆ, ಇವುಗಳಲ್ಲಿನ ವಿಷ ನೀರಿನ ಮೂಲಕ ಭೂಮಿ ಸೇರಿ ನಂತರದ ಬೆಳೆಯಲ್ಲಿ ಸೇರಿಕೊಂಡು ವಿಷಯುಕ್ತ ಆಹಾರವಾಗಿ ನಮ್ಮ ಆರೋಗ್ಯಕ್ಕೇ ಮಾರಕವಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಗೆಬಾಗಿ ಶ್ರೀ ವರದರಾಜಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ದಯಾನಂದ್ ವಹಿಸಿದ್ದರು. ಕೃಷಿ ವಿಶ್ವವಿದ್ಯಾಲಯ ಪ್ರಾದ್ಯಾಪಕ ಕೇಶವರೆಡ್ಡಿ, ಕೃಷಿ ಅಧಿಕಾರಿ ಮಹಾಲಿಂಗಪ್ಪ, ಸಂಯೋಜಕ ಮಲ್ಲಿಕಾಜು೯ನ್, ತುಮಕೂರು ಕೃಷಿ ತಜ್ಞ ಶ್ರೀನಿವಾಸ ಮೂತಿ೯, ಹುಳಿಯಾರು ಕೃಷಿ ಇಲಾಖೆಯ ಶಿವಣ್ಣ, ಸೋರಲಮಾವು ಕರಿಯಪ್ಪ, ಗ್ರಾ.ಪಂ.ಸದಸ್ಯ ರೇವಣ್ಣ ಮತ್ತಿತರರು ಇದ್ದರು.
ಕ್ಷೇತ್ರ ತಜ್ಞ ಜಯಣ್ಣ ಅವರ ನಿರೂಪಣೆಯಲ್ಲಿ ಕಾಂತರಾಜು ಸ್ವಾಗತಿಸಿ, ಕೃಷಿ ತರಬೇತಿದಾರ ರಜ್ಹುಲ್ ಸಾಬ್ ಅನುಭವ ಹಂಚಿಕೊಂಡು, ಗಿರಿಯಪ್ಪ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ