(ಫೋಟೊ ವಿವರ:ಹುಳಿಯಾರಿನಲ್ಲಿ ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘವು ಉಪ್ಪಾರ ವಿದ್ಯಾಥಿ೯ಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಕೆರೆಸೂರಗೊಂಡನಹಳ್ಳಿಯ ಓಂಕಾರಮೂತಿ೯ ಅವರು ಬಹುಮಾನ ಸ್ವೀಕರಿಸಿದರು. ಆರ್.ರಾಮಣ್ಣ, ಜಿ.ಎಸ್.ಕೃಷ್ಣಮೂತಿ೯, ಶಾರದಾ ಸೀತರಾಮಯ್ಯ, ಡಿ.ಸಿದ್ದಬಸವಯ್ಯ, ಕಲ್ಲಹಳ್ಳಿ ರೇಣುಕಯ್ಯ ಇದ್ದಾರೆ. )
ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘವು ಭಗೀರಥ ಜಯಂತಿ ಅಂಗವಾಗಿ ತಾಲೂಕಿನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಉಪ್ಪಾರ ವಿದ್ಯಾಥಿ೯ಗಳಿಗೆ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿತು.
ಎಸ್ಎಸ್ಎಲ್ಸಿಯಲ್ಲಿ ಹೆಣ್ಣು ಮಕ್ಕಳ ವಿಭಾಗದಿಂದ ನಡುವನಹಳ್ಳಿಯ ಎನ್.ಡಿ.ಪಲ್ಲವಿ(535 ಅಂಕಗಳು), ಕಲ್ಲಳ್ಳಿಯ ಕೆ.ಆರ್.ಯಮುನ(524 ಅಂಕಗಳು), ಸಂಗೇನಹಳ್ಳಿಯ ಎಸ್.ಎಚ್.ಪವಿತ್ರ(490 ಅಂಗಗಳು)ಹಾಗೂ ಗಂಡು ಮಕ್ಕಳ ವಿಭಾಗದಿಂದ ಕೆರೆಸೂರಗೊಂಡನಹಳ್ಳಿಯ ಓಂಕಾರಮೂತಿ೯(480 ಅಂಕಗಳು), ಹುಳಿಯಾರಿನ ಅನಿಲ್(461 ಅಂಕಗಳು) ಗೂಬೆಹಳ್ಳಿಯ ದೊರೇಶ್(461 ಅಂಕಗಳು) ದೊಡ್ಡಬಿದರೆಯ ಬಸವರಾಜು(429 ಅಂಕಗಳು) ಇವರುಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು.
ಪಿಯುಸಿಯಲ್ಲಿ ಕಲಾ ವಿಭಾಗದಿಂದ ತೊರೆಮನೆ ಟಿ.ಎಸ್.ಲಕ್ಷ್ಮೀದೇವಿ(494 ಅಂಕಗಳು), ನಂದಿಹಳ್ಳಿ ಎನ್.ಜಿ.ಪವಿತ್ರ(474 ಅಂಕಗಳು), ವಿಜ್ಞಾನ ವಿಭಾಗದಿಂದ ಹುಳಿಯಾರು ಮಮತ(447 ಅಂಕಗಳು), ನಡುನಳ್ಳಿರೇಖಾಮಣಿ(400 ಅಂಕಗಳು), ವಾಣಿಜ್ಯ ವಿಭಾಗದಿಂದ ಅವಳಗೆರೆ ದಿನೇಶ್(453 ಅಂಕಗಳು), ದೊಡ್ಡಬಿದರೆಕಾಳಪಾತಯ್ಯ(446 ಅಂಕಗಳು) ಇವರುಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದುಕೊಂಡರು.
ಆರ್.ರಾಮಣ್ಣ, ಜಿ.ಎಸ್.ಕೃಷ್ಣಮೂತಿ೯, ಶಾರದಾ ಸೀತರಾಮಯ್ಯ, ಡಿ.ಸಿದ್ದಬಸವಯ್ಯ, ಕಲ್ಲಹಳ್ಳಿ ರೇಣುಕಯ್ಯ, ಗುಬೆಹಳ್ಳಿ ಶಂಕರಪ್ಪ, ಶಿವಸ್ವಾಮಿ, ಹೊನ್ನಯ್ಯ, ದೊಡ್ಡೆಣ್ಣೇಗೆರೆ ಸಿ.ಓಂಕಾರಮೂತಿ೯ ಅವರು ಬಹುಮಾನ ವಿತರಿಸಿದರು.
ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪುಟ್ಟಯ್ಯ, ಹನುಮಂತಪ್ಪ, ಬಿ.ಸಿದ್ದಯ್ಯ, ಬಿ.ಜಿ.ಅನಂತಯ್ಯ, ಶಿವಣ್ಣ, ಚಂದ್ರಯ್ಯ, ಅನಂತಯ್ಯ,ಯಲ್ಲಪ್ಪ , ಟಿ.ಎಸ್.ಧನಂಜಯ್ಯ, ಸುಮಂಗಳಯಲ್ಲಪ್ಪ,ನಾಗೇಂದ್ರಪ್ಪ,ಚಂದ್ರಮ್ಮನರಸಿಂಹಯ್ಯ, ಎನ್.ಬಿ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ