(ಹುಳಿಯಾರಿನಲ್ಲಿ ಇಂದು ನಡೆದ ಗ್ರಾಮಪಂಚಾಯ್ತಿ ಚುನಾವಣೆಯ ನೋಟ )
ಹುಳಿಯಾರು ಗ್ರಾಮಪಂಚಾಯ್ತಿಯ 33 ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಅಲ್ಲಲ್ಲಿ ನಡೆದ ಕೆಲ ಸಣ್ಣಪುಟ್ಟ ಘಟನೆಗಳ ಹೊರತುಪಡಿಸಿದಲ್ಲಿ ಬಹುತೇಕ ಶಾಂತಿಯುತವಾಗಿತ್ತು.ರಾತ್ರಿ 8 ಗಂಟೆಯವರೆಗೂ ವಾಡು೯ವಾರು ವಿವರ ಲಭ್ಯವಾಗದಿದ್ದು ಒಟ್ಟಾರೆ ಶೇ 70% ಮತದಾನ ನಡೆದಿದೆ ಎನ್ನಲಾಗಿದೆ.

ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ್ದ ಮತದಾನ 9 ರಿಂದ 1 ಗಂಟೆಯವರೆಗೂ ಚುರುಕಾಗಿತ್ತು. ಮತದಾನ ಕೇಂದ್ರದ ಹೊರಭಾಗದಲ್ಲಿ ಅಭ್ಯಥಿ೯ಗಳ ಪರ ಅವರ ಬೆಂಬಲಿಗರು,ಕುಟುಂಬ ವರ್ಗದವರು ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಮದ್ಯಾಹ್ನನದ ನಂತರ ಮತದಾನ ಮಾಡದೆ ಮನೆಯಲಿಳುದಿದ್ದ ಆಯಾ ಬ್ಲಾಕಿನ ಮತದಾರರನ್ನು ಓಲೈಸಿ ಆಯಾ ಬ್ಲಾಕಿನ ಅಭ್ಯಥಿ೯ಗಳು ಮತಘಟ್ಟೆಗೆ ಕರೆತಂದು ಮತಹಾಕಿಸುವ ಪ್ರಯತ್ನ ನಡೆಸುತ್ತಿದ್ದರು. ಕೆಂಕೆರೆ,ಹುಳಿಯಾರು 5,9 ನೇ ಬ್ಲಾಕ್ ನಲ್ಲಿ ಬೆಂಬಲಿಗರ ನಡುವೆ ಮಾತಿನ ಚಕಮುಖಿ ಘರ್ಷಣೆ ನಡೆದು ಪೋಲಿಸರ ಸಕಾಲಿಕ ಆಗಮನದಿಂದ ಅಹಿತಕರ ಘಟನೆ ಸಂಭವ ತಪ್ಪಿದೆ.ಎಲ್ಲಡೆ ಬಿಗಿ ಪೋಲಿಸ್ ಬಂದೋಬಸ್ತ್ ನಿಂದಾಗಿ ಶಾಂತಿಯುತ ಮತದಾನ ಸಾಗಿತ್ತು.ಒಟ್ಟಾರೆ ಇಂದು ನಡೆದ ಚುನಾವಣೆಯಲ್ಲಿ ಹುಳಿಯಾರು ಗ್ರಾ.ಪಂನ 33 ಸ್ಥಾನಕ್ಕೆ ಒಟ್ಟು 13 ಬ್ಲಾಕುಗಳಿಂದ 131 ಅಭ್ಯಥರ್ಿಗಳ ಭವಿಷ್ಯವನ್ನು ಮತದಾರ ಬರೆದಿದ್ದು ಯಾರು ಆಯ್ಕೆಯಾಗುತ್ತಾರೋ ಎಂದು ತಿಳಿಯಲು ಇದೇ ತಿಂಗಳ 17 ನೇ ತಾರಿಖಿನವರೆಗೆ ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ