ಹುಳಿಯಾರು ಹೋಬಳಿಯ 10 ಗ್ರಾಮ ಪಂಚಾಯ್ತಿಗಳಿಂದ 192 ಸ್ಥಾನಗಳ ಪೈಕಿ 3 ಗ್ರಾ.ಪಂ.ಗಳಲ್ಲಿ 5 ಸ್ಥಾನಗಳು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು ಉಳಿದ 187 ಸ್ಥಾನಗಳ ಚುನಾವಣೆಗೆ ಒಟ್ಟು 616 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹುಳಿಯಾರು ಗ್ರಾ.ಪಂನ 33 ಸ್ಥಾನಕ್ಕೆ 131, ಕೆಂಕೆರೆ ಗ್ರಾ.ಪಂ.ನ 18 ಸ್ಥಾನಕ್ಕೆ 54, ಯಳನಡು ಗ್ರಾ.ಪಂ.ನ 17 ಸ್ಥಾನಕ್ಕೆ 62, ತಿಮ್ಲಾಪುರ ಗ್ರಾ.ಪಂ.ನ 18 ಸ್ಥಾನಕ್ಕೆ 66, ದೊಡ್ಡಬಿದರೆ ಗ್ರಾ.ಪಂ.ನ 18 ಸ್ಥಾನಕ್ಕೆ 55, ಬರಕನಹಾಲ್ ಗ್ರಾ.ಪಂ.ನ 16 ಸ್ಥಾನಕ್ಕೆ 52, ಗಾಣಧಾಳು ಗ್ರಾ.ಪಂ.ನ 18 ಸ್ಥಾನಕ್ಕೆ 60, ದಸೂಡಿ ಗ್ರಾ.ಪಂ.ನ 18 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 16 ಸ್ಥಾನಕ್ಕೆ 48, ಹೊಯ್ಸಲಕಟ್ಟೆ ಗ್ರಾ.ಪಂ.ನ 20 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 18 ಸ್ಥಾನಕ್ಕೆ 49, ಕೋರಗೆರೆ ಗ್ರಾ.ಪಂ.ನ 15 ಸ್ಥಾನಗಳ ಪೈಕಿ 1 ಅವಿರೋಧ ಆಯ್ಕೆ ನಡೆದಿದ್ದು ಉಳಿದ 14 ಸ್ಥಾನಕ್ಕೆ 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ದಸೂಡಿ ಗ್ರಾ.ಪಂಯಲ್ಲಿನ ಉಮ್ಲಾನಾಯ್ಕನತಾಂಡ್ಯದ ಪರಿಶಿಷ್ಠ ಜಾತಿ ಮಹಿಳಾ ಮೀಸಲು ಸ್ಥಾನಕ್ಕೆ ಮಂಜಿಬಾಯಿ, ಹಾಗೂ ಎಮ್ಮೆಕರನಟ್ಟಿಯ ಬಿಸಿಎಂ(ಎ) ಮಹಿಳಾ ಮೀಸಲು ಸ್ಥಾನಕ್ಕೆ ಕರಿಯಮ್ಮ, ಹೊಯ್ಸಲಕಟ್ಟೆ ಗ್ರಾ.ಪಂ.ಯಲ್ಲಿನ ನುಲೇನೂರು ಬ್ಲಾಕಿಗೆ ಈರಣ್ಣ, ಕಲ್ಲೇನಹಳ್ಳಿ ಬ್ಲಾಕಿಗೆ ಮಂಜುನಾಥ್ ಮತ್ತು ಕೋರಗೆರೆ ಗ್ರಾ.ಪಂ.ನ ಮರಾಠಿಪಾಳ್ಯದ ಪರಿಶಿಷ್ಠಜಾತಿ ಮಹಿಳಾ ಮೀಸಲು ಸ್ಥಾನಕ್ಕೆ ಸಿದ್ಧರಾಮಕ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ