ಪಡಿತರ ವಿತರಣೆಯ ತಕರಾರು ಸಂಬಂಧ ಹುಳಿಯಾರು ಹೋಬಳಿ ದಸೂಡಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸೊಸೈಟಿಗೆ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಡಿತರಚೀಟಿದಾರರು ಸಕಾ೯ರ ನಿಗಧಿ ಪಡಿಸಿದಂತೆ ಪಡಿತರ ವಿತರಿಸುತ್ತಿಲ್ಲ ಹಾಗೂ ಹೆಚ್ಚಿನ ದರಕ್ಕೆ ಬೇರೆಯವರಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಇಲ್ಲಿನ ವಿಎಸ್ಎಸ್ಎನ್ ಗೆ ಭೇಟಿ ನೀಡಿದ ತಹಸೀಲ್ದಾರ್ ಪಡಿತರದಾರರ ದೂರಿನ ಬಗ್ಗೆ ಕಾರ್ಯದಶಿ೯ ಈಶ್ವರಪ್ಪ ಅವರಿಂದ ಸ್ಪಸ್ಟನೆ ಪಡೆದರು.
ಕಾಡ್೯ ಲ್ಯಾಪ್ಸ್ ಆಗಿರುವವರಿಗೂ ಪಡಿತರ ನೀಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಕಾರ್ಯದಶಿ೯ ಸಮಜಾಯಿಷಿ ನೀಡಿದರಾದರೂ ಪೋಟೊ ತೆಗೆಸದ ಕಾರಣ ಕಾಡ್೯ಗಳು ಲ್ಯಾಪ್ಸ್ ಆಗಿದ್ದು ಅವರು ತಾಲೂಕು ಕಛೇರಿಗೆ ಬಂದು ಪೋಟೊ ತೆಗೆಯಿಸಿ ಕೊಳ್ಳುವಂತೆ ತಿಳಿಹೇಳಿ ಹಾಗೂ ಅವರಿಗಾಗಿ ಇತರ ಕಾಡ್೯ದಾರರ ಪಡಿತರ ಕಡಿತಕೊಳಿಸದೆ ಸಕಾ೯ರ ನಿಗಧಿ ಪಡಿಸಿರುವಂತೆ ಯುನಿಟ್ ಸಿಸ್ಟಮ್ ಪ್ರಕಾರ ವಿತರಿಸಲು ಸೂಚಿಸಿದರು.
ಅಕ್ಕಿ ಸಕ್ಕರೆಯನ್ನು ಹೆಚ್ಚಿನ ಬೆಲೆಗೆ ಕಾಡ್೯ದಾರರಲ್ಲದವರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಕಾರ್ಯದಶಿ೯ಯನ್ನು ತೀರ್ವ ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ಕಾಡ್೯ದಾರರಿಗೆ ಸಿಗಬೇಕಾದ ಪಡಿತರವನ್ನು ಬೇರೆಯವರಿಗೆ ಮಾರಾಟ ಮಾಡಿದಲ್ಲಿ ಅಮಾನತ್ ಮಾಡುವುದಾಗಿ ಎಚ್ಚರಿಕೆ ನೀಡಿ ಲೋಪವಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕಾಡ್೯ದಾರರಿಗೆ ಹೇಳಿದರು.
ಕಂದಾಯ ತನಿಖಾಧಿಕಾರಿ ಬಸವರಾಜು, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ಗಂಗರಾಜು ಹಾಗೂ ಐವತ್ತಕ್ಕೂ ಹೆಚ್ಚು ಪಡಿತರರದಾರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ