ವಿಷಯಕ್ಕೆ ಹೋಗಿ

ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು

(ಫೋಟೊ ವಿವರ:ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ರಕ್ತ ಸಂಬಂಧಿಕರ ಸ್ಫಧೆ೯ಯಲ್ಲಿ ಜಯಗಳಿಸಿರುವ ದ್ರಾಕ್ಷಾಯಿಣಮ್ಮ, ಸಿದ್ಧಗಂಗಮ್ಮ, ಪುಟ್ಟರಾಜು)

ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು
----------------------------------------------

ಈ ಬಾರಿಯ ಹುಳಿಯಾರು ಗ್ರಾಪಂ ಚುನಾವಣಾ ಫಲಿತಾಂಶದಲ್ಲಿ ಅನೇಕ ಸ್ವಾರಸ್ಯಗಳಿದ್ದು ಗ್ರಾ.ಪಂ.ಚುನಾವಣೆಯ ಕಣಕ್ಕೆ ಐದು ಕುಟುಂಬದಿಂದ ಇಬ್ಬಿಬ್ಬರು ರಕ್ತ ಸಂಬಂಧಿಗಳಂತೆ ಒಟ್ಟು 10ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಅವರಲ್ಲಿ ಮೂರು ಮಂದಿಗೆ ಮಾತ್ರ ಗ್ರಾ.ಪಂ.ಸದಸ್ಯರಾಗುವ ಅದೃಷ್ಟ ಒಲಿದಿರುವುದು ವಿಶೇಷವಾಗಿದೆ.


ಇದುವರೆಗೂ ಗ್ರಾ.ಪಂ.ಅಧ್ಯಕ್ಷರಾಗಿದ್ದ ಶ್ರೀಮತಿ ಮಂಜಮ್ಮ ಅವರು ಈ ಬಾರಿ 8 ನೇ ಬ್ಲಾಕ್ ನಿಂದ ಚುನಾವಣೆಗೆ ಸ್ಪಧಿ೯ಸಿದ್ದರಲ್ಲದೆ ತಮ್ಮ ಪತಿ ರಾಜಣ್ಣ ಅವರನ್ನು ಸಹ 7 ನೇ ಬ್ಲಾಕ್ ನಿಂದ ಚುನಾವಣೆಗೆ ನಿಲ್ಲಿಸಿ ಮತ್ತೊಂದು ಅವಧಿಗಾಗಿ ಅದೃಷ್ಠ ಪರಿಕ್ಷೆಗಿಳಿದಿದ್ದರು. ಮತದಾರರ ಅವಕೃಪೆಯಿಂದಾಗಿ ಠೇವಣಿ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.

ಕಳೆದ ಸಾಲಿನ ಸದಸ್ಯ ಮೀಸೆ ರಂಗಪ್ಪ ಅವರು ತಮ್ಮ ಹಳೆಯ ಕ್ಷೇತ್ರ 6 ಬ್ಲಾಕಿನಲ್ಲಿ ಸ್ಪಧಿ೯ಸುವ ಜೊತೆಗೆ ತಮ್ಮ ಪತ್ನಿ ಕಮಲಮ್ಮ ಅವರನ್ನು 9 ಬ್ಲಾಕಿನಿಂದ ಸ್ಪಧೆ೯ಗೆ ಇಳಿಸಿ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟರಾದರೂ ಮತದಾರ ಮಾತ್ರ ರಂಗಪ್ಪನಿಗೆ ಹೆಚ್ಚಿನ ಅಂತರ ಹಾಗೂ ಆತನ ಪತ್ನಿಗೆ ತೀರಾ ಕಡಿಮೆ ಅಂತರದಿಂದ ಸೋಲಿನ ಕಹಿ ಉಣ್ಣುವಂತೆ ಮಾಡಿದ್ದಾನೆ.

ಮತದಾರರಿಗೆ ತಮ್ಮ ಬಗ್ಗೆ ಒಲವಿದ್ದು ತಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಭಾರಿ ಆತ್ಮವಿಶ್ವಾಸ ಹೊಂದಿದ್ದ ಕಳೆದ ಸಾಲಿನ ಸದಸ್ಯ ಬಡ್ಡಿಪುಟ್ಟರಾಜು ತಾವು ಹಿಂದೆ ಗೆದಿದ್ದ 1 ಬ್ಲಾಕಿನಿಂದ ತಮ್ಮ ಅತ್ತಿಗೆ ಡಿ.ಸಿದ್ದಗಂಗಮ್ಮ ಅವರನ್ನು ಚುನಾವಣಾ ಕಣಕ್ಕಿಳಿಸಿ ತಾವು ಕೂಡ 8 ನೇ ಬ್ಲಾಕಿನಿಂದ ಸ್ಫಧಿ೯ಸಿ ಭಾರಿ ಅಂತರದಿಂದ ಗೆದ್ದರಲ್ಲದೆ ಹಳೆಯ ಕ್ಷೇತ್ರದಲ್ಲಿ ಹಿಂದೆ ತಾವು ಮಾಡಿದ ಸೇವೆಯ ಶ್ರೀರಕ್ಷೆಯಿಂದಾಗಿ ಅತ್ತಿಗೆಯನ್ನೂ ಸಹ ಗೆಲ್ಲಿಸಿಕೊಂಡಿದ್ದು ನಿರೀಕ್ಷಿತವಾಗಿತ್ತು.

ಮಾಜಿ ಜಿ.ಪಂ.ಸದಸ್ಯ ಶಿವರಾಂ ಅವರು ತಮ್ಮಿಬ್ಬರು ಮಕ್ಕಳನ್ನು ಜನಸೇವೆಗಿಳಿಸುವ ನಿಟ್ಟಿನಲ್ಲಿ ನಿರಂಜನಮೂತಿ೯ಯನ್ನು 10 ನೇ ಬ್ಲಾಕಿನಿಂದಲೂ, ಪ್ರದೀಪ್ ಅವರನ್ನು 3 ನೇ ಬ್ಲಾಕಿನಿಂದಲೂ ಚುನಾವಣೆ ಕಣಕ್ಕಿಳಿಸಿದ್ದರು.ಅಲ್ಲದೆ ಇಬ್ಬರ ಪರವಾಗಿ ತಾವೇ ಪ್ರಚಾರದ ನೇತೃತ್ವ ವಹಿಸಿ ಚುನಾವಣೆ ಎದುರಿಸಿದರಾದರೂ ಸಹ ನಿರಂಜನ ಮೂತಿ೯ ಠೇವಣಿ ಕಳೆದುಕೊಂಡರೆ, ಮತ್ತೊಬ್ಬ ಮಗ ಪ್ರದೀಪ್ ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದರಾದರೂ ಬಿಸಿಎಂನ 2 ನೇ ಅಭ್ಯಥಿ೯ ಇವರಿಗಿಂತ ಕೆಲವೇ ಕೆಲವು ಮತ ಹೆಚ್ಚಿಗೆ ಪಡೆದ ಪ್ರಯುಕ್ತ ಚುನಾವಣಾ ನಿಯಮಾನುಸಾರ ಇವರ ಕೊರಳಿಗೆ ಬೀಳಬೇಕಿದ್ದ ಜಯದಮಾಲೆ ಬಿಸಿಎಂ ಅಭ್ಯಥಿ೯ ಪಾಲಾಗಿ ಪರಾಭವಗೊಳ್ಳುವಂತಾಯಿತು.

ವೃತ್ತಿಸಂಬಂಧದಿಂದ ಅನೇಕ ಬಾರಿ ಗ್ರಾಪಂಗೆ ಎಡೆತಾಕಿದ್ದ ಸ್ಟುಡಿಯೋ ದುರ್ಗರಾಜು ಅಲ್ಲಿನ ವ್ಯವಸ್ಥೆಯಿಂದ ಆಕಷಿ೯ತರಾಗಿ ಒಂದು ಕೈ ನೋಡೇಬಿಡುವ ಎಂದು ಇದೇ ಪ್ರಥಮ ಬಾರಿಗೆ ತಾವು 10 ನೇ ಬ್ಲಾಕಿನಿಂದ ಕಣಕ್ಕಿಳಿದರೆ ಅವರ ಅತ್ತಿಗೆ ದ್ರಾಕ್ಷಾಯಿಣಮ್ಮ ಡಾ.ಭೈರೇಶ್ ಅವರು 1 ನೇ ಬ್ಲಾಕಿನಿಂದ ಕಣಕ್ಕಿಳಿದು ಚುನಾಔಣೆ ಎದುರಿಸಿದರು.ಆದರೆ ಮತದಾರರು ಅತ್ತಿಗೆ ದ್ರಾಕ್ಷಾಯಿಣಮ್ಮ ಅವರನ್ನು ಗೆಲ್ಲಿಸಿ ದುರ್ಗರಾಜು ಅವರನ್ನು ಸೋಲಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...