ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಳಗೆರೆಹಳ್ಳಿಯಲ್ಲಿ ಉಕ್ಕಿ ಹರಿದ ನೀರು

ಹುಳಿಯಾರು ಸಮೀಪದ ವಳಗೆರೆಹಳ್ಳಿಯ ನೀರಿನ ಸಮಸ್ಯೆ ಪರಿಹರಿಸಲು ಮುತುವರ್ಜಿ  ವಹಿಸಿ ಬೋರ್ ವೆಲ್ ಗೆ ಚಾಲನೆ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ವಳಗೆರೆಹಳ್ಳಿ ಗ್ರಾಮಸ್ಥರಿಗೆ ಶಾಸಕರೆ ಖುದ್ದಾಗಿ ನಿಂತು ಕೊಳವೆ ಬಾವಿ ಕೊರೆಯಿಸಿಕೊಟ್ಟ ಘಟನೆ ಭಾನುವಾರ ಸಂಜೆ ಜರುಗಿರು. ಹುಳಿಯಾರು ಪಟ್ಟಣಕ್ಕೆ ಹೊಂದಿಕೊಂಡಂತೆ ವಳಗೆರೆಹಳ್ಳಿಯಿದ್ದು ಗ್ರಾಮದಲ್ಲಿ ಬಳಸಲ್ಪಡುತ್ತಿದ್ದ ಏಕೈಕ ಕೊಳವೆ ಬಾವಿ ದುರ್ವಾಸನೆಯಿಂದ ಕೂಡಿದ್ದು ಶುದ್ದ ನೀರಿಗೆ ಕಳೆದೊಂದು ವರ್ಷದಿಂದ ಪರದಾಡುವಂತಾಗಿತ್ತು.ಅಲ್ಲಿರುವ ಶನಿ ಮಹಾತ್ಮ ದೇವಾಲಯಕ್ಕೆ ಆಗಮಿಸುತ್ತಿದ್ದ ಭಕ್ತಾಧಿಗಳಿಗೂ ತೊಂದರೆಯಾಗಿತ್ತು. ಪಟ್ಟಣಕ್ಕೆ ಕಾರ್ಯನಿಮಿತ್ತ ಆಗಮಿಸಿದ್ದ ಶಾಸಕರಿಗೆ ಅಲ್ಲಿನ ಗ್ರಾಮಪಂಚಾಯ್ತಿ ಸದಸ್ಯರು ನೀರಿನ ಸಮಸ್ಯೆ ಬಗ್ಗೆ ತಿಳಿಸುತ್ತಿದ್ದಂತೆ ತಕ್ಷಣವೆ ಕ್ರಮ ಕೈಗೊಂಡ ಶಾಸಕರು ತಾವೇ ಖುದ್ದಾಗಿ ಗ್ರಾಮಕ್ಕೆ ತೆರಳಿ ಪೂಜೆ ಸಲ್ಲಿಸಿ ಕೊಳವೆ ಬಾವಿ ಕೊರೆಸಿದರು.ಸುಮಾರು ಅರವತ್ತು ಅಡಿ ಕೊರೆಯುವುದರೊಳಗೆ ನೀರು ಪ್ರಾರಂಭವಾಗಿದ್ದು ಎಲ್ಲರೂ ಸಂತೋಷಿಸುವಂತಾಯಿತು.೯೦೦ ಅಡೀಯವರೆಗೂ ಬೋರ್ ಕೊರೆಸಿದ್ದು ನೀರು ಉಕ್ಕಿಹರಿದಿದೆ.ಒಟ್ಟಾರೆ ಬಹುದಿನಗಳ ನೀರಿನ ಸಮಸ್ಯೆ ಬಗೆಹರಿದಿದ್ದು ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಹುಳಿಯಾರು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗೀತಾ ,ಉಪಾಧ್ಯಕ್ಷ ಗಣೇಶ್ ಹಾಗೂ ಸದಸ್ಯರುಗಳಾದ ಶಿವಾಜಿರಾವ್,ಚಂದ

ಫ್ಲೋರೈಡ್ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ

   ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದಲ್ಲಿ ಅಂತಹ ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದೆಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರದಂದು ಶಾಸಕ ಸುರೇಶ್ ಬಾಬುರವರು ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ನೆರವೇರಿಸಿದರು.                 ಅವರು ಭಾನುವಾರದಂದು ಪಟ್ಟಣದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.                 ಗ್ರಾಮೀಣ ಭಾಗದ ಜನತೆಯ ಆರೋಗ್ಯ ಕಾಪಾಡಲು ಫ್ಲೋರೈಡ್ ಅಂಶ ಹೆಚ್ಚಾಗಿರುವ ಗ್ರಾಮಗಳನ್ನು ಪಟ್ಟಿಮಾಡಿ ಅಂತಹ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.             ಹುಳಿಯಾರಿನಲ್ಲಿ ಮೊದಲಿನಿಂದಲೂ ಶುದ್ದಕುಡಿಯುವ ನೀರಿಗೆ ಸಮಸ್ಯೆಯಿದ್ದು ಬಳಸಲಾಗುತ್ತಿರುವ ನೀರಿನಲ್ಲಿ ಹೆಚ್ಚಿನ ಫ್ಲೋರೈಡ್ ಅಂಶವಿದ್ದು, ಈ ನೀರು ಕುಡಿದ ಜನರು ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಅದಕೋಸ್ಕರವೇ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಿಂದ ಇಲ್ಲಿ ಶುದ್ಧ ನೀರಿನ ಘಟಕ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರತಿ ಘಟಕಕ್ಕೆ 11 ರಿಂದ 12 ಲಕ್ಷ ವೆಚ್ಚವಾಗಲಿದೆ. ಅಗತ್ಯ

ಮನೆ ಮೀಸಲಿರಿಸದಕ್ಕೆ ಆಕ್ರೋಶ :ಗದ್ದಲದಿಂದ ಮುಂದೂಡಿದ ವಾರ್ಡ್ ಸಭೆ

            ಈ ಸಭೆಯಲ್ಲಿ ಶಾಸಕರ ಮಾತಿಗೆ, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಿದ್ದ ಮೇಲೆ ಈ ಸಭೆಯ ಔಚಿತ್ಯವಾದರೂ ಏನೆಂದು ಪ್ರಶ್ನಿಸಿ ನಮ್ಮ ವಾರ್ಡಿನಲ್ಲಿ ಸಭೆಯೆ ಬೇಡವೆಂದು ಸದಸ್ಯರೆ ಅಡ್ಡಿಪಡಿಸಿ ಮುಂದೂಡಿದ ಘಟನೆ ಪಟ್ಟಣದ ಎಂಟನೆ ವಾರ್ಡಿನಲ್ಲಿ ಜರುಗಿತು.                  ಹುಳಿಯಾರು ಗ್ರಾಮಪಂಚಾಯ್ತಿವತಿಯಿಂದ 2015-16 ನೇ ಸಾಲಿನ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲುವಾಗಿ ಪಟ್ಟಣದ ಎಲ್ಲಾ ಹದಿಮೂರು ವಾರ್ಡ್ಗಳಲ್ಲೂ ಸಭೆ ನಡೆಸಲಾಗಿತ್ತಿದ್ದು ಅದರಂತೆ ಎಂಟನೆ ವಾರ್ಡಿನ ಸಭೆಯನ್ನು ಶನಿವಾರದಂದು ಗಜಾನನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಸತಿ ಯೋಜನೆಗೆ ಸಂಬಂಧಿಸಿದಂತೆ ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದಿರುವ ಸದಸ್ಯರು ಹಾಗೂ ವಾರ್ಡಿನ ನಿವಾಸಿಗಳು.               ಸದಸ್ಯರುಗಳಾದ ಪುಟ್ಟರಾಜು,ಶ್ರೀಮತಿ ಕೆಂಪಮ್ಮ,ಮಾಮಾಜಿಗ್ಮಿ ಹಾಗೂ ಜಯಮ್ಮನವರ ಉಪಸ್ಥಿತಿಯಲ್ಲಿ ಪ್ರಾರಂಭವಾದ ಸಭೆಯಲ್ಲಿ ಅರ್ಜಿ ಸ್ವೀಕರಿಸುವ ಹಂತದಲ್ಲೆ ಸದಸ್ಯ ಪುಟ್ಟರಾಜು ತಮ್ಮ ಬ್ಲಾಕಿನಲ್ಲಿ ಈ ಹಿಂದೆ ಗ್ಯಾಸ್ ಸಿಲಂಡರ್ ಸ್ಪೋಟ ಪ್ರಕರಣದಲ್ಲಿ ದುರ್ಮರಣ ಹೊಂದಿದ್ದ ಪುಟ್ಟಶಾಮಾಚಾರ್ ಕುಟುಂಬಕ್ಕೆ ಮೊದಲು ಆದ್ಯತೆ ನೀಡಿ ಮನೆ ಹಂಚಿಕೆಯಾಗಬೇಕಿದೆ ಎಂದರು.                   ಮಂಜೂರಾಗಿರುವ ಮನೆಗಳ ಪೈಕಿ ಈ ವಾರ್ಡಿಗೆ ನಾಲ್ಕು ಮನೆ ಹಾಗೂ ನೊಂದವರ ಕುಟುಂಬಕ್ಕೆ ನೀಡಬೇಕಾಗಿರುವ ಒಂದು ಮನೆ ಸೇರಿ ಒಟ್ಟ

ಭಾನುವಾರ:ಕೆಂಕೆರೆಯಲ್ಲಿ ಷಟಲ್ ಕಾಕ್ ಟೂರ್ನಮೆಂಟ್

ಹುಳಿಯಾರು ಸಮೀಪದ ಕೆಂಕೆರಯಲ್ಲಿ ಆರ್ ಪಿಎಸ್ ಎಂ ಸ್ನೇಹಿತರ ಬಳಗದಿಂದ ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಒಂದುದಿನದ ಷಟಲ್ ಕಾಕ್ ಟೂರ್ನಿಮೆಂಟ್ ಆಯೋಜಿಸಲಾಗಿದೆ.ಐದನೆ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಕ್ಕೆ ಪವನ್ ಕುಮಾರ್(8088314273) ಹಾಗೂ ಪ್ರವೀಣ್ (9964305288) ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಹೆದ್ದಾರಿ ಬಗ್ಗೆ ಶಾಸಕರಿಂದ ಸಾರ್ವಜನಿಕ ಸಭೆ

ಹುಳಿಯಾರು ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೫೦ ಏ ಗೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆಯನ್ನು ಭಾನುವಾರದಂದು ಏರ್ಪಡಿಸಲಾಗಿದೆ. ಪಟ್ಟಣದ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ನೇತೃತ್ವದಲ್ಲಿ ಹೆದ್ದಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ಸಭೆ ನಡೆಯಲಿದ್ದು ರೋಡ್ ಮಾರ್ಜಿನ್ ,ಬೈ ಪಾಸ್ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕರು ಸಾರ್ವಜನಿಕರ ಸಮಸ್ಯೆಗೆ ಉತ್ತರಿಸಲಿದ್ದಾರೆ.

ನಾಳೆ ಶುದ್ದ ಕುಡಿಯುವ ನೀರಿನಘಟಕಕ್ಕೆ ಶಂಕುಸ್ಥಾಪನೆ

ಸರ್ಕಾರದಿಂದ ಮಂಜೂರಾಗಿರುವ ಶುದ್ದ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ಕಾರ್ಯ ಭಾನುವಾರದಂದು ಬೆ.೯ ಗಂಟೆಗೆ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.         ಶಾಸಕ ಸಿ.ಬಿ.ಸುರೇಶ್ ಬಾಬು ಶಂಕುಸ್ಥಾಪನೆ ನೆರವೇರಿಸಲಿದ್ದು ದೇವಸ್ಥಾನದ ಧರ್ಮದರ್ಶಿ ಶಿವಕುಮಾರ್ ,ಕನ್ವೀನರ್ ಹು.ಕೃ.ವಿಶ್ವನಾಥ್ ,ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗೀತಾ,ಜಿಪಂ ಸದಸ್ಯೆ ಮಂಜುಳಾ ,ತಾಪಂ ಸದಸ್ಯ ನವೀನ್,ನಾಲ್ಕನೇ ಬ್ಲಾಕಿನ ಸದಸ್ಯರಾದ ಧನುಷ್ ರಂಗನಾಥ್,ಶಂಕರ್ ಸೇರಿದಂತೆ ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಪಂ ಸದಸ್ಯರುಗಳು ಭಾಗವಹಿಸಲಿದ್ದಾರೆ.

ವಾರ್ಡ್‌ಗಳಿಗೆ ಸೌಲಭ್ಯ ನೀಡಲು ಆಗ್ರಹ

         ಗ್ರಾಪಂಗಳಿಗೆ ಮನೆ ಗ್ರ್ಯಾಂಟ್ ಗಳು ಬಂದಾಗ ವಾರ್ಡ್ ಸಭೆ ನಡೆಸುವಂತೆ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಏಕೆ ಸಭೆ ನಡೆಸುವುದಿಲ್ಲ ಎಂದು ವಾರ್ಡ್ ಸಭೆಯಲ್ಲಿ ಗ್ರಾಪಂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಳಿಯಾರಿನಲ್ಲಿ ನಡೆಯಿತು.           ಹುಳಿಯಾರು ಗ್ರಾಪಂಗೆ ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯಲ್ಲಿ ಮನೆಗಳ ಗ್ರ್ಯಾಂಟ್‌ಗಳು ಬಂದಿದ್ದು ಇವುಗಳ ಹಂಚಿಕೆಗೆ ಅರ್ಹ ಫಲಾನುಭವಿಗಳ ಗುರುತಿಸುವುದಕ್ಕಾಗಿ ೪ ನೇ ವಾರ್ಡ್ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ವಾರ್ಡ್ ಸಭೆ ನಡೆಸಲಾಯಿತು.         ಈ ಸಭೆಗೆ ಆಗಮಿಸಿದ್ದ ಸ್ಥಳಿಯ ನಿವಾಸಿಗಳು ಮನೆ ಗ್ರ್ಯಾಂಟ್ ಬಂದಾಗ ಮಾತ್ರ ವಾರ್ಡ್‌ಸಭೆ ನಡೆಸುತ್ತೀರ. ಇದೇ ರೀತಿ ವಾರ್ಡ್‌ಗಳಲ್ಲಿನ ಕುಡಿಯುವ ನೀರು, ಒಳ ಚರಂಡಿ, ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸುವ ಸಲುವಾಗಿ ವಾರ್ಡ್ ಸಭೆಗಳನ್ನು ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.            ಇದಕ್ಕೆ ಗ್ರಾಪಂ ಸದಸ್ಯ ರಂಗನಾಥ್ ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಕುರಿಯುವ ನೀರಿನ ಶುದ್ದೀಕರಣ ಘಟಕವನ್ನು ಈ ದೇವಾಲಯದ ಹಿಂಭಾಗದಲ್ಲಿ ಸ್ಥಾಪಿಸಲಾಗುತ್ತಿದೆ. ಮುಂದಿನ ೩ ದಿನದಲ್ಲಿ ಶಾಸಕರು ಉದ್ಘಾಟಿಸಲಿದ್ದಾರೆಂದರು. ೪ ನೇ ವಾರ್ಡ್‌ಗೆ ನೀರಿನ ಸೌಲಭ್ಯ ನಿರಂತರವಾಗಿ ನೀಡ

ಹುಳಿಯಾರು ಗ್ರಾಪಂನಲ್ಲಿ ಇಂದಿನ ಕಡ್ಡಾಯ ಗ್ರಾಮಸಭೆಗೆ ಎಳ್ಳುನೀರು

          ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್ 20ರಂದು ಕಡ್ಡಾಯವಾಗಿ ವಿಶೇಷ ಗ್ರಾಮ ಸಭೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಸೂಚನೆ ಕಳುಹಿಸಲಾಗಿದ್ದರೂ ಹುಳಿಯಾರು ಪಂಚಾಯ್ತಿಯಲ್ಲಿ ಮಾತ್ರ ಇದಕ್ಕೆ ವಿನಾಯತಿ ಎಂಬಂತೆ ಸದಸ್ಯರುಗಳನ್ನು ಮೂರುದಿನಗಳ ತರಬೇತಿಗಾಗಿ ಕಳುಹಿಸಿಕೊಡುತ್ತಿರುವುದು ವಿಪರ್ಯಾಸವಾಗಿದೆ.                ಹೌದು ಇಂದು ರಾಜ್ಯದೆಲ್ಲಡೆ ವಿಶೇಷ ಗ್ರಾಮಸಭೆ ನಡೆಸಿ ವಿವಿಧ ವಸತಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ, ಮುಖ್ಯಮಂತ್ರಿ ಯವರ 21 ಅಂಶ ಕಾರ್ಯಕ್ರಮಗಳ ಬಗ್ಗೆ ಅವಶ್ಯಕತೆಗನು ಗುಣವಾಗಿ ಕ್ರಿಯಾಯೋಜನೆಯನ್ನು ಗ್ರಾಮಸಭೆಯಲ್ಲಿ ಮಂಡಿಸುವುದುದರ ಕುರಿತಂತೆ ಚರ್ಚಿಸಬೇಕಿತ್ತು.ಅಲ್ಲದೆ ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆ.10ರಂದೇ ಸುತ್ತೋಲೆ ಹೊರಡಿಸಿ ಆಗಸ್ಟ್ 20ರಂದು ಕಡ್ಡಾಯವಾಗಿ ವಿಶೇಷ ಗ್ರಾಮ ಸಭೆ ನಡೆಸುವಂತೆಯೂ ಆದೇಶಿಸಿತ್ತು.ಸಭೆಯಲ್ಲಿ ಬಸವ ವಸತಿ,ಇಂದಿರಾ ಆವಾಜ್ ಹಾಗೂ ವಿಶೇಷ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡುವಂತೆಯೂ ಹಾಗೂ ಆ ಸಭೆಯ ನಡವಳಿಯನ್ನು ಎರಡು ದಿನದೊಳಗೆ ಕಳುಹಿಸಿ ಅನುಮೋದನೆ ಪಡೆಯುವಂತೆಯೂ ತಪ್ಪಿದಲ್ಲಿ ಸಂಬಂಧಪಟ್ಟವರ ಮೇಳೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಸೂಚಿಸಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಹೊಸ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಬಳಿಕ ನಡೆಸಲಾಗುವ

ಹುಳಿಯಾರು: ರೈತಸಂಘದಿಂದ ಆತ್ಮಹತ್ಯೆ ತಡೆಗೆ ಅರಿವು ಮೂಡಿಸಲು ಜಾಥಾ

           ಇತ್ತೀಚಿನ ದಿನಗಳಲ್ಲಿ ರೈತರು ನಾನಾ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು ರೈತರು ಯಾವುದೇ ಕಾರಣಕ್ಕೂ ಧೃತಿಗೆಡದೆ ಅತ್ಮಹತ್ಯೆಯಂತ ನಿರ್ಧಾರ ಕೈಗೊಳ್ಳಬಾರದೆಂದು ರೈತ ಸಂಘದ ಅಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಮನವಿಮಾಡಿದರು.                   ಪಟ್ಟಣದಲ್ಲಿ ಸೋಮವಾರ ರೈತಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪರಿವೀಕ್ಷಣಾ ಮಂದಿರದಿಂದ ನಾಡಕಚೇರಿವರೆಗೆ ಜಾಗೃತಿ ಜಾಥಾ ನಡೆಸಿ ರೈತರು ಆತ್ಮಹತ್ಯೆ ಶರಣಾಗದಂತೆ ಉಪತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.                     ರೈತರ ಆತ್ಮಹತ್ಯೆ ತಡೆಗಟ್ಟಲು, ಸಂಕಷ್ಟದಲ್ಲಿರುವ ರೈತರಿಗೆ ಮನೋಸ್ಥೈರ್ಯ ತುಂಬಲು ಆತ್ಮಹತ್ಯೆ ತಡೆಗೆ ರೈತರ ನಡಿಗೆ ಎಂಬ ಜಾಗೃತಿ ಅಭಿಯಾನವನ್ನು ಎಲ್ಲಾ ಹಳ್ಳಿಗಳಲ್ಲು ಆಯೋಜಿಸಲಾಗುತ್ತಿದೆ ಎಂದರು                       ದಲಿತ ಮುಖಂಡ ಲ.ಪು.ಕರಿಯಪ್ಪ ಮಾತನಾಡಿ ಕಳೆದೊಂದು ತಿಂಗಳಿನಿಂದಲೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಭವಿಸಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ. ಬರೀ ಸಾಂತ್ವಾನದಿಂದ ಪ್ರಯೋಜನವಾಗದು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರದ ದವಡೆಯಲ್ಲಿರುವ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕು ಎಂದು ಒತ್ತಾಯಿಸಿದರು.                           ನಿವೃತ್ತ ಶಿಕ್ಷಕ ಸಿದ್ದಬಸಪ್ಪ ನವರು ಮಾತನಾಡಿ ಸರ್ಕಾರದ ರೈತ ವಿರೋಧಿ ನೀತಿಯೆ ಅನ್ನದಾತನ

Nagara panchami

ಮಂಟೇಸ್ವಾಮಿ ಜನಪದ ಕಾವ್ಯ ಪ್ರಯೋಗ ಕುರಿತು ಸಂವಾದ ಇಂದು

ಹುಳಿಯಾರು ಕೆಂಕೆರೆಯೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ಮಂಟೇಸ್ವಾಮಿ ಜನಪದ ಕಾವ್ಯ ಪ್ರಯೋಗ ಕುರಿತು ಚರ್ಚೆಯನ್ನು ಇಂದು ಮಧ್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅಧ್ಯಕ್ಷತೆ ವಹಿಸಲಿದ್ದು ಪ್ರೊ. ಕೃಷ್ಣಮೂರ್ತಿ ಹನೂರು ಇವರ ಜೊತೆ ಸಂವಾದವಿದೆ.ಮೈಸೂರು ನೀಲಗಾರರಿಂದ ಹಾಡುಗಾರಿಕೆ ಇದ್ದು ವಿದ್ಯಾರ್ಥಿಗಳು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ

ಸಾಧಿಸುವ ಛಲ ಹೊಂದಿದಲ್ಲಿ ಏಳ್ಗೆ ಸಾಧ್ಯ

              ಪ್ರತಿಯೊಬ್ಬರಲ್ಲೂ ಗುರಿ ಹಾಗೂ ಸಾಧಿಸುವ ಛಲಯಿದ್ದಲ್ಲಿ ಮಾತ್ರವೇ ಏಳಿಗೆ ಹೊಂದಲು ಸಾಧ್ಯ ಎಂದು ತಿರುಮಲಾಪುರ ಗ್ರಾಪಂ ಅಧ್ಯಕ್ಷ ದೇವರಾಜು ಆಟೋಚಾಲಕರಿಗೆ ಕಿವಿಮಾತು ಹೇಳಿದರು.                 ಹುಳಿಯಾರಿನ ಬಸ್ ನಿಲ್ದಾಣದ ವಂದೇಮಾತರಂ ಆಟೋಚಾಲಕರ ಸಂಘದಿಂದ ಆಚರಿಸಲಾದ ಸ್ವಾತಂತ್ರ್ಯೋತವದಲ್ಲಿ ಎಎಸೈ ಶಿವಣ್ಣ,ತಿರುಮಲಾಪುರ ಗ್ರಾಪಂ ಅಧ್ಯಕ್ಷ ದೇವರಾಜು,ಬಸ್ ಏಜೆಂಟರ್ ಸಂಘದ ವಿಶ್ವಣ್ಣ,ತರಕಾರಿ ಕಾಜಾಪೀರ್ ಹಾಗೂ ಆಟೋ ಚಾಲಕರ ಸಂಘದವರಿದ್ದಾರೆ.     ಪಟ್ಟಣದ ವಂದೇಮಾತರಂ ಆಟೋ ಚಾಲಕರ ಹಾಗೂ ಮಾಲಿಕರ ಸಂಘದಿಂದ ಬಸ್ ನಿಲ್ದಾಣದಲ್ಲಿ ವಿಜೃಂಭಣೆಯಿಂದ ಆಚರಿಸಲಾದ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾವು ಕೂಡ ಇದೇ ಸ್ಥಳದಲ್ಲಿ ಆಟೋ ಚಾಲಕನಾಗಿ ದುಡಿದಿದ್ದು ಸೇವಾ ಮನೋಭಾವದಿಂದ ಕಷ್ಟಪಟ್ಟು ವೃತ್ತಿಯಲ್ಲಿ ತೊಡಗಿಕೊಂಡು ದುಡಿದ ಪರಿಣಾಮ ನಾನಿಂದು ಗ್ರಾಪಂ ಅಧ್ಯಕ್ಷನಾಗಲು ಸಾಧ್ಯವಾಯಿತೆಂದರು.ಚಾಲಕರುಗಳು ವೃತ್ತಿನಿಷ್ಟೆ ಹಾಗೂ ಸೇವಾ ಮನೋಭಾವ ಹೊಂದಿದಾಗ ಮಾತ್ರವೇ ಮುಂದೆ ಬರಲು ಸಾಧ್ಯವೆಂದರು.                         ಧ್ವಜಾರೋಹಣ ನೆರವೇರಿಸಿದ ಎಎಸೈ ಶಿವಣ್ಣ ಮಾತನಾಡಿ ದೇಶಭಿಮಾನದ ದ್ಯೋತಕದ ಸಂಕೇತವಾಗಿ ಆಟೋ ಸಂಘದಿಂದ ಎಲ್ಲರೂ ಒಗ್ಗಟ್ಟಾಗಿ ಇಂತಹ ಆಚರಣೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿದರು.                              ಸ್ವಾತಂತ್ರ್ಯೋತವದ ಅಂಗವಾಗಿ ನೂರಕ್ಕೂ
ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿರಾಯಣ್ನನ ಜನ್ಮದಿನದ ಅಂಗವಾಗಿ ಸಂಗೊಳ್ಳಿರಾಯಣ್ಣ ನೃತ್ಯರೂಪಕ ನೀಡಿದ ತಂಡವನ್ನು ಕನಕ ಯುವ ವೇದಿಕೆಯ ರಾಜು,ಮೋಹನ್,ದಯಾನಂದ್, ರಂಗನಾಥ್,ಪುಟ್ಟರಾಜು ಅಭಿನಂದಿಸಿದರು.

ವೇಷಭೂಷಣ ಸ್ಪರ್ಧೆ

ಪಟ್ಟಣದ ಹಿಪ್ಪೊಕ್ಯಾಂಪಸ್ ಕಾನ್ವೆಂಟ್ ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುಟಾಣಿಗಳಿಗೆ ಮಾಡಿದ್ದ ವೇಷಭೂಷಣ ಸ್ಪರ್ಧೆ ಗಮನಸೆಳೆಯಿತು.

ಹುಳಿಯಾರಿನಲ್ಲಿ ಸಂಭ್ರಮದ ಸ್ವಾತಂತ್ಯ್ರೋತ್ಸವ

ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲೆಡೆ ೬೯ ನೇ ಸ್ವಾತಂತ್ರ್ಯೋತ್ಸವದ ಆಚರಣೆ ಶನಿವಾರದಂದು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾ.ಪಂ.ವತಿಯಿಂದ ಎಂಪಿಎಸ್ ಶಾಲಾ ಮೈದಾನದಲ್ಲಿ ಸಾರ್ವತ್ರಿಕವಾಗಿ ಆಯೋಜಿಸಿದ್ದ ಸ್ವಾತಂತ್ಯ್ರೋತ್ಸವದಲ್ಲಿ ಉಪತಹಶೀಲ್ದಾರ್ ಸತ್ಯನಾರಾಯಣ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ದೇಶಭಕ್ತರ ಹೋರಾಟ ಹಾಗೂ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಿದೆ.ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ.ಎಲ್ಲರು ನಮ್ಮ ಹಕ್ಕು ಭಾಧ್ಯತೆ ಅರಿತು ಇನ್ನೊಬ್ಬರ ಲೇಸು ಬಯಸಬೇಕು. ನಮಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಪಿಡುಗುಗಳು ಇನ್ನೂ ಎಲ್ಲಡೆ ಮನೆ ಮಾಡಿದ್ದು ಇದನ್ನು ತೊಡೆದು ಹಾಕಲು ಯುವಜನತೆ ಸಂಕಲ್ಪ ತೊಡಬೇಕು, ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳೂವ ಅಗತ್ಯವಿದ್ದು ಇದಕ್ಕಾಗಿ ಯುವಶಕ್ತಿಯ ಭಾಗವಹಿಸುವಿಕೆ ಅಗತ್ಯ ಬೇಕಾಗಿದೆ ಎಂದರು. ಗ್ರಾಪಂ ಸದಸ್ಯ ಎಲ್.ಆರ್.ಚಂದ್ರಶೇಖರ್ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬದುಕುವ ಹಕ್ಕು ಸಿಗುವವರೆಗೂ ಸ್ವಾತಂತ್ರ್ಯಕ್ಕೆ ಪೂರ್ಣ ಅರ್ಥ ಬರುವುದಿಲ್ಲ.ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷ ಕಳೆದರೂ ಅನೇಕರು ಇನ್ನೂ ಎಲ್ಲಾ ರೀತಿಯಲ್ಲೂ ಹಿಂದುಳಿದಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಬದ್ಧತೆ ಪ್ರದರ್ಶಿಸಬೇಕು ಎಂದರು. ರೈತಗೀ

ಜಯಕರ್ನಾಟಕದಿಂದ ಸೈಕಲ್ ರೇಸ್

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುಳಿಯಾರು ಜಯಕರ್ನಾಟಕ ಸಂಘಟನೆಯಿಂದ ನಡೆದ ಪುರುಷರ ಜಿಲ್ಲಾ ಮಟ್ಟದ ಸೈಕಲ್ ರೇಸ್ ಸ್ಪರ್ಧೆಯನ್ನು ಸಂಘದ ಅಧ್ಯಕ್ಷ ಮೋಹನ್ ಕುಮಾರ್ ರೈ ಹಾಗೂ ತಾಲ್ಲೂಕು ಯುವಘಟಕದ ಅಧ್ಯಕ್ಷ ಭೈರೇಶ್ ಚಾಲನೆ ನೀಡಿದರು.

ಸ್ವಾತಂತ್ರ್ಯಾ ಹೋರಾಟಗಾರರಿಗೆ ಸನ್ಮಾನ

ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆದ ೬೯ನೇ ಸ್ವಾತಂತ್ರ್ಯೋತ್ಸವದಲ್ಲಿ ಸ್ವಾತಂತ್ರ್ಯಹೋರಾಟಗಾರರಾದ ಸಿದ್ದಭೈರಪ್ಪ ,ವೆಂಕಟಾಚಲಪತಿಶೆಟ್ಟಿ ಅವರನ್ನು ಗ್ರಾಪಂ ಉಪಾಧ್ಯಕ್ಷ ಎಂ.ಗಣೇಶ್ ಸನ್ಮಾನಿಸಿದರು. 

ಕನ್ನಡ ನಿಘಂಟು ವಿತರಣೆ

ಹುಳಿಯಾರು ಹೋಬಳಿಯ ದಬ್ಬಗುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಾನಿಗಳಾದ ರಮೇಶ್ ಅವರು ಕನ್ನಡ ನಿಘಂಟು ವಿತರಿಸಿದರು.ಮಾಜಿ ಗ್ರಾಪಂ ಅಧ್ಯಕ್ಷ ರವಿಕುಮಾರ್,ರುದ್ರೇಶ್ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.

ಹುಳಿಯಾರು ರಂಗನಾಥ ಸ್ವಾಮಿಗೆ ವಿಶೇಷಪೂಜೆ

          ಪಟ್ಟಣದ ಪುರಾಣಪ್ರಸಿದ್ದ ಶ್ರೀ ರಂಗನಾಥ ಸ್ವಾಮಿಯ ಅಮಾವಾಸ್ಯೆ ಪೂಜೆಯು ಶ್ರದ್ಧಭಕ್ತಿಯಿಂದ ನೆರವೇರಿತು.ಸ್ವಾಮಿಗೆ ಮುಂಜಾನೆ ಅಭಿಷೇಕ ನಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.ಹತ್ತಿಯಿಂದ ಸ್ವಾಮಿಗೆ ಮಾಡಲಾಗಿದ್ದ ಅಲಂಕಾರ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.                 ಸಂಜೆ ಮಹಿಳಾ ಭಜನಾ ಮಂಡಳಿಯಿಂದ ಸ್ವಾಮಿಯ ಭಜನೆ ನಡೆದು ಮಹಾಮಂಗಳಾರತಿ ನೆರವೇರಿದ ನಂತರ ದಿ.ಭಾಸ್ಕರಾಚಾರ್ ಕುಟುಂಬವರ್ಗ,ಅರ್ಚಕ ರಾಜಣ್ಣ,ಬಡಿಗಿ ಹನುಮಂತಪ್ಪ ಹಾಗೂ ಬೀರಪ್ಪನವರ ಕುಟುಂಬದವರ ಸೇವಾರ್ಥದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.             ದೇವಸ್ಥಾನ ಸಮಿತಿಯ ಅಧ್ಯಕ್ಷ ರಂಗನಾಥ್ ಶೆಟ್ರು,ಏಕಾದಶಿ ಸಮಿತಿಯ ಸಿ.ವಿಶ್ವನಾಥ್,ಶೇಷಣ್ಣ ಇನ್ನಿತರರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಮಧ್ಯರಾತ್ರಿ ಧ್ವಜಾರೋಹಣ

ಜನಪದರ ನುಡಿಗಟ್ಟನ್ನು ಅರ್ಥೈಸಿ ಅಳವಡಿಸಿಕೊಳ್ಳಿ:ಪ್ರೋ.ಬಿಳಿಗೆರೆ       ------------ ಜನಪದರ ಮೂರು ಮಹಾಕಾವ್ಯಗಳಾದ ಮಂಟೆಸ್ವಾಮಿ ಕಾವ್ಯ,ಜುಂಜಪ್ಪನ ಕಾವ್ಯ,ಮಲೆಮಹದೇಶ್ವರ ಸ್ವಾಮಿ ಕಾವ್ಯಗಳು ಲೋಕವಿರುವವರೆಗೂ ಚಿರಸ್ಥಾಯಿ ಕಾವ್ಯಗಳಾಗಿದ್ದು ಇದರಲ್ಲಿನ ಶ್ರೇಷ್ಟ ನುಡಿಗಟ್ಟುಗಳನ್ನು ಮನನ ಮಾಡಿಕೊಂಡು ಅಳವಡಿಸಿಕೊಳ್ಳಬೇಕೆಂದು ಪ್ರೋ,ಬಿಳಿಗೆರೆ ಕೃಷ್ಣಮೂರ್ತಿ ಕರೆನೀಡಿದರು. ಪ್ರೋ,ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡುತ್ತಿರುವುದು ಅವರು ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ರೈತಸಂಘ ಹಾಗೂ ವಿವಿಧ ಸಂಘಸಂಸ್ಥಗಳ ಸಹಯೋಗದೊಂದಿಗೆ ಪಟ್ಟಣದ ಗಾಂಧಿಭವನದಲ್ಲಿ ಶುಕ್ರವಾರ ಮಧ್ಯರಾತ್ರಿ ೧೨ರ ಸಮಯದಲ್ಲಿ ಆಚರಿಸಿದ ೬೮ ನೇ ಸ್ವಾತಂತ್ಯ್ರ ದಿನಾಚರಣೆಯಲ್ಲಿ ಪಾಲ್ಗೊಂಡು ಜನಪದಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕವಾಗಿ ಹುಳಿಯಾರು ಮುಂದುವರಿದಿದ್ದು ಇಲ್ಲಿರುವ ಅನೇಕ ಕೊರತೆಗಳನ್ನು ನೀಗಿಸಲು ಇಂದಿನ ಯುವಪೀಳಿಗೆ ಮುಂದಾಗಬೇಕು ಎಂದ ಅವರು ಪ್ರಸ್ತುತದಲ್ಲಿ ದೇಶವ್ಯಾಪಿ ಅನೇಕ ಜ್ವಲಂತಸಮಸ್ಯೆಗಳಿದ್ದು ಅವುಗಳ ನಿರ್ಮೂಲನೆಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದರು. ಇಂತಹ ಸಮಸ್ಯೆಗಳ ನಿರ್ಮೂಲನೆಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಪಣತೊಡಬೇಕಿದೆ ಎಂದರು. ಧ್ವಜಾಜರೋಹಣ ನೆರವೇರಿಸಿ ಮಾತನಾಡಿದ ಎಎಸೈ ಶಿವಯ್ಯ ದೇಶಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿದ್ದರ ಸವಿನೆನಪಿ

ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಿ:ಮಂಜುನಾಥ್ ಪ್ರಸಾದ್

               ಮಕ್ಕಳು ಆತ್ಮವಿಶ್ವಾಸ ಹಾಗೂ ದೃಢವಿಶ್ವಾಸ ಬೆಳೆಸಿಕೊಂಡು ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಬೇಕೆಂದು ತಿಪಟೂರು ಏಆರ್ಟಿಓ ಮಂಜುನಾಥ್ ಪ್ರಸಾದ್ ಸಲಹೆ ನೀಡಿದರು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ತಿಪಟೂರು ಏಆರ್ಟಿಓ ಮಂಜುನಾಥ್ ಪ್ರಸಾದ್,ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್,ಪ್ರಾಂಶುಪಾಲ ಟಿ.ಎಸ್.ರವಿ ಪಾಲ್ಗೊಂಡಿದ್ದರು.               ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು                  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧೆಗಳಲ್ಲಿ ಆಸಕ್ತಿ ವಹಿಸಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ತಮ ಕೌಶಲ್ಯ ಪ್ರದರ್ಶಿಸುವುದನ್ನು ರೂಢಿಸಿಕೊಳ್ಳುವಂತೆ .ಕಲೆ,ಸಂಗೀತ,ಸಾಹಿತ್ಯ ,ಕ್ರೀಡಾಚಟುವಟಿಕೆಗಳಂಥ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವಂತೆ ಹಾಗೂ ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರುಗಳಿಸಿ ಸಮಾಜಮುಖಿಯಾಗುವಂತೆ ತಿಳಿಸಿದರು.                   ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್ ಮಾತನಾಡಿ ಸ್ಪರ್ಧಾತ್ಮಕ ಯ

ಸ್ವಾತಂತ್ರ್ಯೋತ್ಸವಕ್ಕೆ ಸಡಗರದ ಸಿದ್ದತೆ

          ಭಾರತದ ೬೯ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ಪಟ್ಟಣದ ಅಂಗಡಿಗಳಲ್ಲಿ ತ್ರಿವರ್ಣ ಧ್ವಜ ,ಬ್ಯಾಡ್ಜ್, ಬ್ಯಾಂಡ್,ಟೋಪಿ ,ತ್ರಿವರ್ಣ ಟೇಪ್ ಗಳ ಮಾರಾಟ ಭರಾಟೆಯಿಂದ ನಡೆಯುತ್ತಿದೆ.ಎಲ್ಲಾ ಅಂಗಡಿಗಳಲ್ಲೂ ಬಾವುಟ ಕೊಳ್ಳಲು ಶಾಲಾ ಮಕ್ಕಳು ಮುಗಿಬಿದಿದ್ದರೆ ಬೈಕ್ ,ಕಾರುಗಳಿಗೆ ಆಟೋ ರಿಕ್ಷಾ ,ವ್ಯಾನ್ ಗಳಿಗೂ ಬಾವುಟ ಕಟ್ಟಲು ಮುಂದಾದ ಪರಿಣಾಮ ಬಾವುಟಗಳಿಗೆ ಬೇಡಿಕೆಯಿತ್ತು. ಪಟ್ಟಣದ ಎಲ್ಲಾ ಶಾಲಾಕಾಲೇಜುಗಳು,ಸರ್ಕಾರಿ ಕಛೇರಿಗಳು,ಸಂಘ ಸಂಸ್ಥೆಗಳು ಸಹ ಆವರಣವನ್ನು ,ಧ್ವಜಸ್ಥಂಭವನ್ನು ಸ್ವಚ್ಛಗೊಳಿಸಿದ್ದು ತಳಿರು ತೋರಣದ ಸಿಂಗಾರಕ್ಕೆ ಮುಂದಾಗಿದ್ದಾರೆ                        ನಾಳಿನ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು ಸೈಕಲ್ ರೇಸ್,ದೇಶಭಕ್ತಿ ಗೀತೆ ಸ್ಪರ್ಧೆ,ನೃತ್ಯ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪಟ್ಟಣದ ಎಂಪಿಎಸ್   ಶಾಲಾ ವರಣದಲ್ಲಿ ನಡೆಯುವ ಸಾರ್ವಜನಿಕ ಆಚರಣೆಯಲ್ಲಿ ಎಲ್ಲಾ ಶಾಲೆಯ ಮಕ್ಕಳು,ಗ್ರಾಪಂ ಸದಸ್ಯರುಗಳು,ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳೂ ಸಿಬ್ಬಂದಿ ವರ್ಗ,ಕನ್ನಡಪರ ಸಂಘಟನೆಗಳು ಭಾಗವಹಿಸುತ್ತಿದ್ದು ಮುಂಜಾನೆ ಎಂಟುಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.         ನಾಡಕಛೇರಿಯ ಉಪತಹಸಿಲ್ದಾರ್ ಸತ್ಯನಾರಾಯಣ್ ಧ್ವಜಾರೋಹಣ ನೆರವೇರಿಸಲಿದ್ದಾರೆ.ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ಶಾಸಕರು, ಜನಪ್ರತಿ ನಿಧಿಗಳು,ವಿವಿಧ ಇಲಾಖೆಯ ಅಧಿಕಾರಿಗಳ ಹಾಗೂ ಗಣ

ಕಾಮನಬಿಲ್ಲು ಫೌಂಡೇಷನ್ ವತಿಯಿಂದ ಹಣ್ಣು ವಿತರಣೆ

           ಪಟ್ಟಣದ ಕಾಮನಬಿಲ್ಲು ಫೌಂಡೇಷನ್ ವತಿಯಿಂದ ೬೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆ ಹಾಗೂ ಸ್ಪಂದನ ನರ್ಸಿಂಗ್ ಹೋಮಿನ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.    ಗೌರವಾಧ್ಯಕ್ಷ ಈಶ್ವರಯ್ಯ ಮಾತನಾಡಿ ಸಂಘದಿಂದ ಕಳೆದ ಕೆಲ ವರ್ಷಗಳಿಂದ ಈ ಒಂದು ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು ಈ ಬಾರಿ ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ರಕ್ತ ಪರೀಕ್ಷೆ ಶಿಬಿರ ಹಮ್ಮಿಕೊಳ್ಳುವುದಾಗಿ ತಿಳಿಸಿದರು.     ಈ ವೇಳೆ ವಿಶ್ವನಾಥ್,ಕಾರ್ಯದರ್ಶಿ ವಿಜಯ್ ಕುಮಾರ್,ಏಜೆಂಟ್ ಕೇಶವ, ಮೆಡಿಕಲ್  ಚನ್ನಬಸವಯ್ಯ, ಸ್ಟುಡಿಯೋ   ರವಿ,ಕರವೇ  ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.                       

ಶ್ರೀಮತಿ ವಂದನಾ ನಟರಾಜು ಅವರು ರಚಿಸಿರುವ ಸ್ವಾತಂತ್ರ್ಯ ಗೀತೆ

ಸ್ವಾತಂತ್ರ್ಯದ ನೆನಪಿಗಾಗಿ ನಮ್ಮೂರಿನ ಶ್ರೀಮತಿ ವಂದನಾ ನಟರಾಜು ಅವರು ರಚಿಸಿರುವ ಸ್ವಾತಂತ್ರ್ಯ ಗೀತೆ  

ಸಾಂತ್ವಾನದ ಬದಲು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ:ಸತೀಶ್ ಕೆಂಕೆರೆ

         ಮುಖ್ಯಮಂತ್ರಿಗಳೆ ,ರೈತರ ಬಗ್ಗೆ ಸಾಂತ್ವಾನ ಮತ್ತು ಸತ್ತ ರೈತರ ಸಾವಿಗೆ ಪರಿಹಾರ ಘೋಶಿಸುವ ಬದಲು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ಮೂಲಕ ಹಾಗೂ ಸಾಲ ಮನ್ನಾ ಮಾಡುವ ಮೂಲಕ ಸರ್ಕಾರ ಕೂಡಲೇ ಅನ್ನದಾತನ ನೆರವಿಗೆ ಮುಂದಾಗಿ ರೈತರ ಆತ್ಮಹತ್ಯೆ ತಡೆಗಟ್ಟಬೇಕು,ಇಲ್ಲದಿದ್ದಲ್ಲಿ ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆಯಾಗುತ್ತದೆಂದು ಹಸಿರುಸೇನೆಯ ಕೆಂಕೆರೆ ಸತೀಶ್ ಎಚ್ಚರಿಸಿದರು. ಹೋಬಳಿಯ ಗಡಿಗ್ರಾಮವಾದ ದಸೂಡಿಯಲ್ಲಿ ರೈತ ಸಂಘದ ಬಲವರ್ಧನೆ ಹಾಗೂ ರೈಅತರ ಆತ್ಮಹತ್ಯೆ ತಡೆ ಜಾಗೃತಿ ಜಾಥದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು ರೈತರ ಸಾವು ಸಾಲದಿಂದಾದರೂ ಸಹ ಸಾಲಮಾಡಿ ಸಾಯುವ ಸ್ಥಿತಿಯುಂಟಾಗಲು ಆಳುವ ಸರ್ಕಾರಗಳ ರೈತವಿರೋಧಿ ನೀತಿಯೇ ಕಾರಣ ಎಂದರು. ಹೋಬಳಿಯ ಗಡಿಗ್ರಾಮವಾದ ದಸೂಡಿಯಲ್ಲಿ ರೈತ ಸಂಘದ ಬಲವರ್ಧನೆ ಹಾಗೂ ರೈಅತರ ಆತ್ಮಹತ್ಯೆ ತಡೆ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದ ರೈತರು. ಮಂತ್ರಿ ಮಹೋದಯರೇ ಸತ್ತ ರೈತರ ಮನೆ ಬಾಗಿಲಿಗೆ ಬಂದು ಸಾಂತ್ವಾನ ಹೇಳಿ ಪ್ರಚಾರಗಿಟ್ಟಿಸುವ ಬದಲು ರೈತರ ಸಮಸ್ಯೆಗೆ ಸರಿಯಾದ ಪರಿಹಾರ ಹುಡುಕಿ ಎಂದರು.ಸಾಂತ್ವಾನದ ಬದಲು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ಎಂದರು.ರಾಜ್ಯದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಆತ್ಮಹತ್ಯೆ ತಡೆಯಲು ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಪ್ರೋತ್ಸಾಹ ಧನ ಹಾಗೂ ಸುಲಭ ದರದ ಸಾಲ ಸೌಲಭ್ಯಗಳನ್ನು ನೀಡ

ಹುಂಡಿಕಳ್ಳರೆ ಸೆರೆ

         ದೇವಾಲಯವೊಂದರ ಹುಂಡಿಹಣ ದೋಚಲು ಸಂಚು ನಡೆಸಿ ಹೊಂಚುಹಾಕಿದ್ದ ನಾಲ್ವರು ಗ್ರಾಮಸ್ಥರಿಗೆ ಸೆರೆ ಸಿಕ್ಕ ಪ್ರಕರಣ ಹುಳಿಯಾರು ಸಮೀಪದ ಕೆಂಕೆರೆಯ ಪುರದಮಠದಲ್ಲಿ ಬುಧವಾರ ಸಂಜೆ ಜರುಗಿದೆ.  ಕೆಂಕೆರೆಯ ಪುರದಮಠದ ಮರುಳಸಿದ್ದೇಶ್ವರ ಗವಿಗುಡ್ಡದಲ್ಲಿ ನಿಧಿ ಹಾಗೂ ಹುಂಡಿ  ಹಣ ಇರಬಹುದೆಂಬ  ಲೆಕ್ಕಾಚಾರದಲ್ಲಿ ಹೊರಜಿಲ್ಲೆಯ ನಾಲ್ವರು ತಮ್ಮಡಿಹಳ್ಳಿಯ ವ್ಯಕ್ತಿಯಾದ ವರುಣ್ ಎಂಬಾತನೊಂದಿಗೆ ಸೇರಿ ಹಣ ದೋಚಲು ಸಂಚು ರೂಪಿಸಿದ್ದಾರೆ.                ಎರಡು ಬೈಕಿನಲ್ಲಿ ಆಗಮಿಸಿದ್ದ ಈ ನಾಲ್ಕು ಮಂದಿ ಗವಿಗುಡ್ಡಕ್ಕೆ ಹೋಗಿ ಸಂಜೆಯಾದರೂ ಮರಳದಿದ್ದನ್ನೂ ನೋಡಿದ ಕುರಿಗಾಹಿಗಳು ಊರಿಗೆ ಫೋನಾಯಿಸಿ ಜನರನ್ನು ಕರೆಸಿ ಗುಹೆಯೊಳಗೆ ನುಗ್ಗಿದ್ದಾಗ ಇವರೆಲ್ಲ ಸೆರೆಸಿಕ್ಕಿದ್ದಾರೆ.ನಂತರ ಹುಳಿಯಾರು ಠಾಣೆಗೆ ಒಪ್ಪಿಸಿದ ಇವರುಗಳನ್ನು ವಿಚಾರಣೆ ಮಾಡಿದಾಗ ಟಿವಿಯಲ್ಲಿ ಗವಿಗುಡ್ಡದ ಬಗ್ಗೆ ಪ್ರಸಾರವಾಗಿದ್ದನ್ನು ನೋಡಿ ಪ್ರೇರಿತರಾದ ನಾವುಗಳು ಈ ಕೃತ್ಯ ಎಸೆಗಲು ಬಂದಿದ್ದಾಗಿ ತಿಳಿಸಿದ್ದಾರೆ.                  ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಪ್ರವೀಣ್ ತನಿಖೆಯನ್ನು ಕೈಗೊಂಡಿದ್ದಾರೆ.                             ಬಂಧಿತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ವೆಂಕಟೇಶ್ ,ಆಂಧ್ರಪ್ರದೇಶದ ರಾಮಾಂಜಿ ಉರ್ಫ್ ರೆಡ್ಡಿ ,ಹೋಬಳಿಯ ತಮ್ಮಡಿಹಳ್ಳಿಯ ವರುಣ ಹಾಗೂ ದೊಡ್ಡಬಳ್ಳಾಪುರ ಗ್ರಾಮದ ಬಾಶೆಟ್ಟಿಹಳ್ಳಿಯವರಾದ

ಸ್ವಾತಂತ್ರ್ಯೋತ್ಸವದಂದು ಸೈಕಲ್ ರೇಸ್

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುಳಿಯಾರಿನಲ್ಲಿ ಜಯಕರ್ನಾಟಕ ಸಂಘಟನೆಯಿಂದ ಪುರುಷರ ಜಿಲ್ಲಾ ಮಟ್ಟದ ಸೈಕಲ್ ರೇಸ್ ಸ್ಪರ್ಧೆಯನ್ನು ಆಗಸ್ಟ್ ಹದಿನೈದರಂದು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 1೦ ಗಂಟೆಗೆ ಸರಿಯಾಗಿ ಸ್ಪರ್ಧೆ ಆರಂಭವಾಗಲಿದ್ದು ಸ್ಪರ್ಧಿಗಳು ಹುಳಿಯಾರು ಪೋಲಿಸ್ ಠಾಣೆ ಸರ್ಕಲ್ ನಿಂದ ಹೊರಟು ಸಾಲ್ಕಟ್ಟೆ ಕ್ರಾಸ್ ತಲುಪಿ ಅಲ್ಲಿ ಕೊಡುವ ಟೋಕನ್ ಪಡೆದು ವಾಪಸ್ಸು ಹುಳಿಯಾರಿಗೆ ಮರಳಬೇಕಿದೆ. ಸ್ಪರ್ಧೆಗೆ ಗೇರ್ ಸೈಕಲ್ ಬಳಸುವಂತಿಲ್ಲ ಎಂಬ ನಿಬಂಧನೆಯಿದ್ದು ಪ್ರಥಮ ಬಹುಮಾನವಾಗಿ ಸೈಕಲ್,ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಮೊಬೈಲ್ ನೀಡಲಾಗುವುದು . ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ರೈ 9141726144 ಹಾಗೂ ತಾಲ್ಲೂಕು ಯುವಘಟಕದ ಅಧ್ಯಕ್ಷ ಭೈರೇಶ್ 9448748280 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇಂದು ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ

            ಹುಳಿಯಾರು ಪಟ್ಟಣದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಗಾಂಧಿಭವನದ ಮುಂಭಾಗ ಆ.೧೪ ರ ಮಧ್ಯರಾತ್ರಿ ೬೯ ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುವುದು.             ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಿಎಸೈ ಪ್ರವೀಣ್ ಕುಮಾರ್ ಧ್ವಜಾರೋಹಣ ನೆರೆವೇರಿಸಲಿದ್ದಾರೆ.                ಪ್ರೋ ಬಿಳಿಗೆರೆ ಕೃಷ್ಣಮೂರ್ತಿ,ಶಿಕ್ಷಕ ಕೊಟ್ಟಿಗೆ ಮನೆ ಗುರುಮೂರ್ತಿ ಪ್ರಧಾನ ಭಾಷಣ ಮಾಡಲಿದ್ದು ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್,ಜಿಲ್ಲಾಪಂಚಾಯ್ತಿ ಸದಸ್ಯೆ ಮಂಜುಳ,ಉಪತಹಸಿಲ್ದಾರ್ ಬಸವರಾಜು,ರೈತಸಂಘದ ಕೆಂಕೆರೆ ಸತೀಶ್ ಸೇರಿದಂತೆ ಗ್ರಾಪಂ ಸದಸ್ಯರುಗಳು,ಹತ್ತಾರು ಸಂಘದ ಸದಸ್ಯರುಗಳು ಭಾಗವಹಿಸಲಿದ್ದಾರೆ.ಮಧ್ಯ ರಾತ್ರಿ ೧೧ ಗಂಟೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.

ಹುಳಿಯಾರಿನ ವಾಸವಿ ಶಾಲೆಯ ಮಕ್ಕಳಿಗೆ ಬಹುಮಾನ

ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಹುಳಿಯಾರಿನ ವಾಸವಿ ಶಾಲೆಯ ಮಕ್ಕಳಿಗೆ ಶಾಲೆಯವತಿಯಿಂದ ನಡೆದ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯವರು ಬಹುಮಾನ ವಿತರಿಸಿದರು

ಸ್ವಾತಂತ್ರ್ಯೋತ್ಸವಕ್ಕೆ ವಿದ್ಯಾರ್ಥಿಗಳ ತಾಲೀಮು

            ಭಾರತದ ೬೯ನೇ ಸ್ವಾತಂತ್ರ್ಯೋತ್ಸವಕ್ಕೆ ಪಟ್ಟಣದ ಎಲ್ಲಾ ಶಾಲೆಗಳಲ್ಲಿ ಭರದ ಸಿದ್ಧತೆ ನಡೆದಿದ್ದು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಯಾ ಶಾಲೆಗಳಲ್ಲಿ ಶುಕ್ರವಾರದಂದು ಶಿಸ್ತುಬದ್ದ ತಾಲೀಮು ನಡೆಯಿತು.                       ಪಟ್ಟಣದ ಎಂಪಿಎಸ್ ಶಾಲಾ ಮೈದಾನದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯದಿನಾಚರಣೆಗೆ ಎಲ್ಲಾ ಶಾಲಾಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು ಅಲ್ಲಿ ಧ್ವಜಾರೋಹಣದ ನಂತರ ನಡೆಯುವ ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಳೆದ 15 ದಿನಗಳಿಂದ ಪೂರ್ವ ತಯಾರಿ ಎಲ್ಲಾ ಶಾಲೆಗಳಿಲ್ಲಿ ಜೋರಾಗಿ ನಡೆದಿದ್ದು ಇಂದು ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಅಂತಿಮ ತಾಲೀಮು ನಡೆಸಿ ವೀಕ್ಷಿಸಲಾಯಿತು.                     ವಾಸವಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪ್ರದರ್ಶನಕ್ಕಾಗಿ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ಅಂತಿಮ ಕಸರತ್ತು ನಡೆಸಲಾಯಿತು.ನಾಳಿನ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಡೆಸಿದ ಪೂರ್ವ ತಯಾರಿಯಲ್ಲಿ ಧ್ವಜವಂದನೆ,ರೈತಗೀತೆ,ವಂದೇಮಾತರಂ,ಧ್ವಜಾರೋಹಣ,ಬ್ಯಾಂಡ್ ಒಟ್ಟಿಗೆ ರಾಷ್ಟ್ರಗೀತೆ ಹಾಡುವುದು ಹಾಗೂ ಪಥಸಂಚಲನೆಯ ಕ್ರಮದ ಬಗ್ಗೆ ವಿವರಿಸಲಾಯಿತು. ಹುಳಿಯಾ

ಈ ಶಾಲೆಯಲ್ಲಿ ಏಳು ಅವಳಿ ಜವಳಿ ವಿದ್ಯಾರ್ಥಿಗಳು

ಅವಳಿ ಮಕ್ಕಳಿಗಾಗಿ ದಿನಾಚರಣೆ                  ಅವಳಿ ಮಕ್ಕಳೂ ಅಪರೂಪವೂ ಅಲ್ಲ ಹಾಗಂತ ಸಾಮಾನ್ಯವು ಅಲ್ಲ.ಆದರೆ ಒಂದೇ ಶಾಲೆಯಲ್ಲಿ ಮಾತ್ರ ಒಟ್ಟು ಏಳು ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಅಪರೂಪ.ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆ ಇಂತಹದೊಂದು ಅಪರೂಪದ ವಿಚಾರಕ್ಕೆ ಭಾಜನವಾಗಿದೆ.                       ಈ ಶಾಲೆಯಲ್ಲಿರುವ ಏಳು ಅವಳಿಗಳಲ್ಲಿ ಮೂರು ಜೋಡಿ ಗಂಡು ,ಎರಡು ಜೋಡಿ ಹೆಣ್ಣು ಹಾಗೂ ಇನ್ನೇರಡು ಜೋಡಿ ಹುಡುಗ ಹುಡುಗಿಯರಿದ್ದಾರೆ.ಈ ಮಕ್ಕಳೆಲ್ಲಾ ಒಂದೆರೀತಿ ಕಂಡುಬರುವುದರಿಂದ ಕೆಲವೊಮ್ಮೆ ಶಿಕ್ಷಕರು ಹಾಗೂ ಗೆಳಯರು ಕೂಡ ಬೆಸ್ತು ಬಿದ್ದ ಘಟನೆಗಳಿವೆ.             ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅವಳಿ ಮಕ್ಕಳ ದಿನಾಚರಣೆಯಲ್ಲಿ ಪೋಷಕರೊಂದಿಗೆ ಅವಳಿ ಮಕ್ಕಳೂ ಭಾಗವಹಿಸಿರುವುದು.ಕವಿತಾಕಿರಣ್ , ಪ್ರಾಂಶುಪಾಲ ಟಿ.ಎಸ್.ರವಿ ಇದ್ದಾರೆ.  ನಮ್ಮ ಶಾಲಯಲ್ಲಿ ಬರೋಬರಿ ಎಳು ಅವಳಿ ಜವಳಿಗಳಿರುವುದು ಹೆಮ್ಮೆಯ ವಿಚಾರ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್.ಕೆಲವೊಮ್ಮೆ ಅವಳಿಜವಳಿ ಮಕ್ಕಳನ್ನು ಗುರುತುಹಿಡಿಯುವುದಿಕ್ಕಾಗದೆ ಯಾರೋ ಮಾಡಿದ ತಪ್ಪಿಗೆ ಯಾರೋ ಒದೆ ತಿಂದ ಪ್ರಸಂಗವೂ ನಡೆದಿದೆ ಎನ್ನುತ್ತಾರೆ.                 ವಿದೇಶದಲ್ಲಿ ಆಗಸ್ಟ್ ಎಂಟರಂದು ಅವಳಿ ಜವಳಿಗಳ ದಿನಾಚರಣೆ ಮಾಡುವ ರೀತಿ ಈ ಶಾಲೆಯಲ್ಲೂ ಅವಳಿ ಮಕ್ಕಳ ದಿನಾಚರಣೆಯನ್ನು ಆ ಮಕ್ಕಳೊ

ತಾಲ್ಲೂಕ್ ಮಟ್ಟದ ಕ್ರೀಡಾಕೂಟಕ್ಕೆ ಬೋರನಕಣಿವೆ ವಿದ್ಯಾರ್ಥಿಗಳು

ಕ್ರೀಡಾಕೂಟದಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳೊಂದಿಗೆ ಸಾಧನೆಮಾಡಿದ ಮಕ್ಕಳೊಂದಿಗೆ ಮುಖ್ಯಶಿಕ್ಷಕ ಮೈಲಾರಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು.  ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಎರಡು ದಿನಗಳ ಕಾಲ ಹುಳಿಯಾರು ಹೋಬಳಿ ಪ್ರೌಢಶಾಲೆಗಳ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಜರುಗಿತು.ಗುಂಪುಕ್ರೀಡೆಗಳಲ್ಲಿ ಬೋರನಕಣಿವೆ ಶಾಲೆಯ ವಿದ್ಯಾರ್ಥಿಗಳು ವಿವಿಧ ಗುಂಪುಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು ಬಾಲಕ ವಿಭಾಗದಲ್ಲಿ ಥ್ರೋಬಾಲ್.ಬಾಲ್ ಬ್ಯಾಡ್ಮಿಂಟನ್ ಮತ್ತು ಷಟಲ್ ಬ್ಯಾಡ್ಮಿಂಟನ್‍ನಲ್ಲಿ ಹಾಗೂ ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್.ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಾಧನೆಮಾಡಿದ ಮಕ್ಕಳನ್ನು ಮುಖ್ಯಶಿಕ್ಷಕ ಮೈಲಾರಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.

ದಬ್ಬಗುಂಟೆ ಶಾಲೆಯಲ್ಲಿ ಶಿಕ್ಷಕರ ಕೊರತೆ :ಪೋಷಕರ ಪ್ರತಿಭಟನೆ

ಶಿಕ್ಷಕರನ್ನು ಕೊಠಡಿಗೆ ಕೂಡಿ ಬೀಗ ಜಡಿದ ಗ್ರಾಮಸ್ಥರು                                                -------------------------------            ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗು ಣವಾಗಿ ಶಿಕ್ಷಕರಿಲ್ಲದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಎಸ್ಡಿಎಂಸಿ ಸದಸ್ಯರ ನೇತೃತ್ವದಲ್ಲಿ ಹೋಬಳಿಯ ದಬ್ಬಗುಂಟೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗೆ ಬೀಗ ಜಡಿದು ಶಾಲೆಯನ್ನು ಬಂದ್ ಮಾಡಿ ಮಕ್ಕಳೊಂದಿಗೆ ಪೋಷಕರು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ನಡೆಯಿತು. ಹುಳಿಯಾರು ಹೋಬಳಿ ದಬ್ಬಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಕೊರತೆ ನೀಗಿಸುವಂತೆ ಒತ್ತಾಯಿಸಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಮಕ್ಕಳೊಂದಿಗೆ ಶಾಲೆಗೆ ಬೀಗ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.             ಸಮಸ್ಯೆ ಏನು : ದಬ್ಬಗುಂಟೆ ಶಾಲೆಯಲ್ಲಿ 1ನೇ ತರಗತಿಯಿಂದ 7 ನೇ ತರಗತಿವರೆಗೆ ಇದ್ದು 238 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಬೇಕಾಗಿರುವ ಶಿಕ್ಷಕರ ಹುದ್ದೆ ೮ . ಆದರೆ ಸದ್ಯಕ್ಕಿರುವವರು ನಾಲ್ವರು ಮಾತ್ರ. ಅದರಲ್ಲಿ ಒಬ್ಬರು ಮುಖ್ಯಶಿಕ್ಷಕ, ಮತ್ತೊಬ್ಬರು ದೈಹಿಕ ಶಿಕ್ಷಕ.ಉಳಿದಿಬ್ಬರು ಸಹಶಿಕ್ಷಕರು.ಶಾಲೆಯಲ್ಲಿ ಮುಖ್ಯ ಶಿಕ್ಷಕ, ಗಣಿತ, ವಿಜ್ಞಾನ, ಕನ್ನಡ, ನಲಿ–ಕಲಿ ಶಿಕ್ಷಕರ ನೇಮಕವಾಗಬೇಕಿದೆ.ದೈಹಿಕ ಶಿಕ್ಷಕರು ಕ್ರೀಡಾಕೂಟಕ್ಕೆ ಮಕ್ಕಳನ್ನು ತಯಾರಿ ಮಾ

ಭ್ರಷ್ಟಾಚಾರ ನಿರ್ಮೂಲನೆಗೆ ವಿದ್ಯಾರ್ಥಿ ದಿಸೆಯಲ್ಲೇ ಪಣ ತೊಡಿ : ಜಗದೀಶ್

ಪ್ರಸಕ್ತ ಸನ್ನಿವೇಶದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿದ್ಯಾರ್ಥಿಗಳು ಪಣತೊಡಬೇಕು ಎಂದು ತುಮಕೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೆ.ಎಸ್.ಜಗದೀಶ್ ತಿಳಿಸಿದರು.          ಹುಳಿಯಾರು–ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾದ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಪ್ರತಿಯೊಂದು ರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೇ ಮುಂದೊಂದು ದಿನ ಕಷ್ಟಕರ ಸ್ಥಿತಿ ನಿರ್ಮಾಣವಾಗುತ್ತದೆ. ವಿದ್ಯಾರ್ಥಿ ಶಕ್ತಿ ದೇಶದ ಬೆನ್ನುಲುಬಾಗಿದ್ದು ಆ ಸಮುದಾಯದ ಮೇಲೆ ಗುರುತರ ಜವಾಬ್ದಾರಿ ಇದೆ. ದೇಶ ವಿಷಮ ಸ್ಥಿತಿ ತಲುಪುವ ಮೊದಲು ವಿದ್ಯಾರ್ಥಿಗಳು ಭ್ರಷ್ಟಾಚಾರ ಮಾಡುವುದಿಲ್ಲ, ಮಾಡುವವರನ್ನೂ ಬಿಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು ಎಂದರು. ಹುಳಿಯಾರು–ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಬೆಳಗುಲಿ ಶಶಿಭೂಷಣ್ ಮಾತನಾಡಿದರು.ಪ್ರೊ: ಕೆ.ಎಸ್.ಜಗದೀಶ್ ,ನಂದಿಹಳ್ಳಿ ಶಿವಣ್ಣ, ನಟರಾಜು, ಬೀಬಿ ಪಾತಿಮಾ, ಮಂಜುಳಾ, ಜಲಾಲ್ ಸಾಬ್, ರಿಯಾಜ್ ಇತರರಿದ್ದರು.            ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾತನಾಡಿ ವಿದ್ಯಾರ್ಥಿ

ಕ್ಷಮಾಗುಣ ಉಳ್ಳವನು ದೇವರಿಗೆ ಸಮಾನ

             ಆದರ್ಶ ಮನುಷ್ಯನಲ್ಲಿ 16 ಗುಣಗಳಿರುತ್ತವೆ. ಇದರಲ್ಲಿ ಕ್ಷಮಾಗುಣ ಎಲ್ಲದಕ್ಕಿಂತ ದೊಡ್ಡದು. ಈ ಗುಣ ಉಳ್ಳವನು ದೇವರಿಗೆ ಸಮಾನ ಎಂದು ರಾಜ್ಯ ಮಾದಿಗ ದಂಡೋರದ ರಾಜ್ಯ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಅವರು ತಿಳಿಸಿದರು.                     ಹುಳಿಯಾರು ಸಮೀಪದ ರಾಮನಗರ ಗ್ರಾಪಂ ವ್ಯಾಪ್ತಿಯ ಗಂಟೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.                 ಹುಳಿಯಾರು ಸಮೀಪದ ಗಂಟೇನಹಳ್ಳಿಯಲ್ಲಿ ಏರ್ಪಡಿಸಿದ್ದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ರೈತ ಮುಖಂಡ ಕೆಂಕೆರೆ ಸತೀಶ್ ಮಾತನಾಡಿದರು.              ಹುಟ್ಟುವಾಗ ಯಾರೂ ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಸಾಯುವಾಗ ಯಾರಿಗೂ ಹೀಗೆ, ಇಲ್ಲೇ ಸಾಯತ್ತೇನೆಂದು ತಿಳಿದಿರುವುದಿಲ್ಲ. ಹುಟ್ಟು, ಸಾವುಗಳೆರಡೂ ವಿಧಿ ನಿಯಮ. ಈ ನಿಯಮದ ಅನುಸಾರ ಎಲ್ಲರೂ ಸೌಹಾರ್ದತೆಯಿಂದ ಬಾಳಿಬದುಕಿ ಭೂಮಿ ಮೇಲಿನ ನಾಲ್ಕು ದಿನದ ಪಯಣವನ್ನು ಮುಗಿಸಬೇಕು. ಆದರೆ ಜಾತಿ, ಪಕ್ಷ ಎಂಬ ವಿಷ ಜಾಲದಲ್ಲಿ ಸಿಲುಕಿ ಅಶಾಂತಿಯಿಂದ ಬದುಕುತ್ತಿದ್ದಾನೆ ಎಂದು ನೊಂದು ನುಡಿದರು.                  ಡಿಎಸ್‍ಎಸ್ ಸಂಚಾಲಕ ಲಿಂಗದೇವರು ಅವರು ಮಾತನಾಡಿ ಬೀಸೋ ಗಾಳಿ, ಹರಿಯುವ ನೀರು, ಬೆಳಗುವ ಸೂರ್ಯ ಮೇಲ್ಜಾತಿ, ಕೀಳ್ಜಾತಿ ಎನ್ನದೆ ಎಲ್ಲರಿಗೂ ಸಮಾನತ ತೋರುತ್ತದೆ. ಹೀಗೆ ಪ್ರಕೃತಿ ಮಾ

ಪಟ್ಟಣಕ್ಕೊಂದು ವ್ಯವಸ್ಥಿತ ಕ್ರೀಡಾಂಗಣ ಅವಶ್ಯ

ಗ್ರಾಮೀಣ ಭಾಗದ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಯ ಉತ್ತೇಜನಕ್ಕಾಗಿ ಹೋಬಳಿ ಮಟ್ಟದಲ್ಲಿ ಸುಸ್ಸಜಿತವಾದ ಕ್ರೀಡಾಂಗಣದ ಅವಶ್ಯಕತೆಯಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದು ತಾಲ್ಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್ ಅಭಿಪ್ರಾಯಪಟ್ಟರು.                         ಎಂಪಿಎಸ್ ಆವರಣದಲ್ಲಿ ನಡೆದ ಹುಳಿಯಾರು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಬಿ ವಿಭಾಗದ ಕ್ರೀಡಾಕೂಟ ಪಟ್ಟಣದ ಎಂಪಿಎಸ್ ಆವರಣದಲ್ಲಿ ಹುಳಿಯಾರು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಬಿ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಶಾಲಾ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲು ವಿಶಾಲವಾದ ಕ್ರೀಡಾಂಗಣ ಅವಶ್ಯ.ಆದರೆ ಹೋಬಳಿ ಪ್ರದೇಶವಾದ ಹುಳಿಯಾರಿನಲ್ಲೂ ವ್ಯವಸ್ಥಿತವಾದ ಕ್ರೀಡಾಂಗಣವೇ ಇಲ್ಲವಾಗಿದ್ದು ಇದರಿಂದ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಆಸಕ್ತಿ ಕಳೆದುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು..                                    ಗ್ರಾಮೀಣ ಪ್ರದೇಶದ ಅನೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಹಾಗೂ ಆಟದ ಮೈದಾನ ಸೇರಿದಂತೆ ಯಾವುದೇ ಮೂಲಭೂತ ಕ್ರೀಡಾ ಸೌಲಭ್ಯಗಳಿಲ್ಲದಿದ್ದರೂ ಶಿಕ್ಷಕರ ಕಾಳಜಿಯಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆಯುತ್ತಿವೆ.ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅನಾವರಣಕ್ಕ