ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಳನಾಡು ಶ್ರೀ ಸಿದ್ಧರಾಮೇಶ್ವರ ಸ್ವಾಮಿಯ ದಸರಾ ಆಚರಣೆ : ಗ್ರಾಮಸ್ಥರ ತೀರ್ಮಾನಕ್ಕೆ

ಬಗೆಹರಿಯದ ವಿವಾದ :ಒಮ್ಮತಕ್ಕೆ ಬರಲು ಕರೆ --------------------------------------------------------- ಹುಳಿಯಾರು:ಸಮೀಪದ ಯಳನಾಡು ಶ್ರೀ ಸಿದ್ಧರಾಮೇಶ್ವರ ಸ್ವಾಮಿಯ ಶ್ರೀ ಕ್ಷೇತ್ರದಲ್ಲಿ ಆರಂಭವಾಗಬೇಕಿರುವ ದಸರಾ ಜಾತ್ರಾಮಹೋತ್ಸವದ ಆಚರಣೆಯ ಬಗ್ಗೆ ತಹಸಿಲ್ದಾರ್ ಸಮಕ್ಷಮದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಹಿಂದಿನ ಸಮಸ್ಯೆಯೇ ಮರುಕಳಿಸಿ ಯಾವೊಂದು ತಿರ್ಮಾನಕ್ಕೆ ಬಾರದೆ ಕಡೆಗೆ ತಹಸೀಲ್ದಾರ್ ಅವರು ಗ್ರಾಮಸ್ಥರೇ ಸೇರಿ ತಾತ್ಕಾಲಿಕ ಸಮಿತಿ ರಚಿಸಿಕೊಂಡು ಒಮ್ಮತದ ತೀರ್ಮಾನ ಕೈಗೊಂಡು ಆಚರಿಸುವಂತೆಯೂ ಇಲ್ಲದಿದ್ದ ಪಕ್ಷದಲ್ಲಿ ಮೇಲಾಧಿಕಾರಿಗಳ ತೀರ್ಮಾನದಂತೆ ನಿರ್ಣಯ ಕೈಗೊಳ್ಳುವುದಾಗಿಯೂ ತಿಳಿಸಿ ಸಭೆ ಮುಗಿಸಿದ ಘಟನೆ ಗುರುವಾರ ರಾತ್ರಿ ನಡೆಯಿತು.            ಶ್ರೀಕ್ಷೇತ್ರದಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ತನ್ನದೆ ಆದ ಇತಿಹಾಸವಿದ್ದು ಇಲ್ಲಿ ನಡೆಯುವ ಸ್ವಾಮಿಯ ಹನ್ನೊಂದು ದಿನಗಳ ಕಾಲದ ದಸರಾ ಮಹೋತ್ಸವಕ್ಕೆ ದೂರದ ಅನೇಕ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿಕೊಂಡು ಹೋಗುವ ಪರಿಪಾಠ ನಡೆದು ಬಂದಿದೆ. ಈವೊಂದು ಸಂಪ್ರದಾಯಕ್ಕೆ ಕೆಲತಿಂಗಳಿನ ಹಿಂದೆ ಗ್ರಾಮದಲ್ಲಿ ದೇವರು ಕರೆದೊಯ್ಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ವೈಮನಸ್ಯದಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟಿಲ್ಲದೆ ನಿತ್ಯದ ಪೂಜಾಕಾರ್ಯದಲ್ಲೂ ಅಡಚಣೆಯುಂಟಾಗಿದ್ದು ದಸರಾ ಜಾತ್ರಾ ಮಹೋತ್ಸವದ ಮೇಲೂ ಪರಿಣಾ

ರಾಜ್ಯಮಟ್ಟಕ್ಕೆ ಆಯ್ಕೆ

ಹುಳಿಯಾರು ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಚಿತ್ರಲಿಂಗೇಶ್ವರ ಪ್ರೌಢಶಾಲೆಯ ಗಣೇಶ್ ಜಿಲ್ಲಾಮಟ್ಟದ ೮೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಈತನನ್ನು ಗೋಪಾಲಪುರ ಯುವಕ ಸಂಘದ ಸದಸ್ಯರು ಅಭಿನಂದಿಸಿದ್ದಾರೆ.

ಕಂದಾಯದ ನಕಲಿ ರಸೀತಿ ನೀಡಿ ವಂಚನೆ: ಕರ ವಸೂಲಿಗಾರನ ವಿರುದ್ಧ ಕ್ರಮಕ್ಕೆ ಮುಂದಾಗದ ಪಂಚಾಯ್ತಿ

ಹುಳಿಯಾರು: ನಕಲಿ ಬಿಲ್ ನೀಡಿ ಕಂದಾಯ ವಸೂಲಿ ಮಾಡಿ ತನ್ನ ಜೇಬಿಗೆ ಇಳಿಸಿದ ಕರ ವಸೂಲಿಗಾರರನನ್ನು ವಜಾಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡು ಅತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯ ಶ್ರೀನಿವಾಸ್ ಹಾಗು ಕೆಲವು ಸದಸ್ಯರು ಪಟ್ಟು ಹಿಡಿದ ಘಟನೆ ಸಮೀಪದ ದೊಡ್ಡಎಣ್ಣೆಗೆರೆ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಜರುಗಿತು. ಹುಳಿಯಾರು ಸಮೀಪದ ದೊಡ್ಡ ಎಣ್ಣೆಗೆರೆ ಗ್ರಾಮಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಕಲಿ ಬಿಲ್                 ನೀಡಿ ಕಂದಾಯ ವಸೂಲಿ ಮಾಡಿದ ಬಿಲ್ ಕಲೆಕ್ಟರ್‌ನನ್ನು ವಜಾ ಗೊಳಿಸುವಂತೆ ಚರ್ಚೆ ನಡೆಯಿತು.                                 ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾರವರ ಅಧ್ಯಕ್ಷತೆಯಲ್ಲಿ ೨೦೧೬-೧೭ ನೇ ಸಾಲಿನ ಬಸವ ವಸತಿ ಯೋಜನೆಯ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಸದಸ್ಯ ಶ್ರೀನಿವಾಸ್ ಮತ್ತಿತರರು ನಕಲಿ ಬಿಲ್ ನೀಡಿ ೬೫೦೦ ರೂಗಳನ್ನು ಸರ್ಕಾರಕ್ಕೆ ವಂಚಿಸಿದ ಕರ ವಸೂಲಿಗಾರನ ವಿರುದ್ಧ ಕ್ರಮ ತೆಗೆದುಕೊಂಡು ನಂತರ ಸಭೆಯನ್ನು ಮುಂದುವರೆಸುವಂತೆ ಪಟ್ಟು ಹಿಡಿದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದು ಕಾರ್ಯದರ್ಶಿ ನಾಗರಾಜು ಸದಸ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸದಸ್ಯರ ಆಕ್ರೋಶ ಕಡಿಮೆಯಾಗಲಿಲ್ಲ, ಕೊನೆಗೆ ಕರ ವಸೂಲಿಗಾರಿನಿಂದ ತಪ್ಪು ಒಪ್ಪಿಗೆ ಪಡೆದು ಇನ್ನು ಮುಂದೆ ಈ ರೀತಿ ಆಗದಂತೆ ಮುಚ್ಚಳಿಕೆ ಪಡೆದುಕೊಳ್ಳುವುದಾಗಿ ತಿಳಿ

ಯಳನಾಡು ಶ್ರೀ ಸಿದ್ಧರಾಮೇಶ್ವರ ಸ್ವಾಮಿಯ ದಸರಾ ಬಗ್ಗೆ ತಹಸಿಲ್ದಾರ್ ನಿರ್ಲಕ್ಷ್ಯ : ಗ್ರಾಮಸ್ಥರ ಆರೋಪ

ಹುಳಿಯಾರು: ಸಮೀಪದ ಯಳನಾಡು ಶ್ರೀ ಸಿದ್ಧರಾಮೇಶ್ವರ ಸ್ವಾಮಿಯ ಶ್ರೀ ಕ್ಷೇತ್ರದಲ್ಲಿ ಆರಂಭವಾಗಬೇಕಿರುವ ದಸರಾ ಜಾತ್ರಾಮಹೋತ್ಸವದ ಆಚರಣೆಯ ಬಗ್ಗೆ ತಹಸಿಲ್ದಾರ್ ಇನ್ನೂ ಸಭೆ ಕರೆಯದೆ ನಿರ್ಲಕ್ಷ್ಯವಹಿಸಿದ್ದಾರೆ ಹಾಗೂ ಕಳೆದ ಮೂರು ತಿಂಗಳಹಿಂದೆ ನಡೆದ ದೊಡ್ಡಜಾತ್ರೆಯ ಆಯವ್ಯಯವನ್ನು ಇದುವರೆಗೂ ನೀಡಿಲ್ಲವೆಂದು ಹುಳಿಯಾರು ಹೋಬಳಿ ಯಳನಾಡು ಗ್ರಾಮಸ್ಥರು ಆರೋಪಿಸಿದ್ದಾರೆ. ಇತಿಹಾಸ : ಶ್ರೀಕ್ಷೇತ್ರದಲ್ಲಿ ನಡೆಯುವ ದಸರ ಮಹೋತ್ಸವಕ್ಕೆ ತನ್ನದೆ ಆದ ಇತಿಹಾಸವಿದ್ದು ಇಲ್ಲಿ ನಡೆಯುವ ಸ್ವಾಮಿಯ ಹನ್ನೊಂದು ದಿನಗಳ ಕಾಲದ ದಸರ ಮಹೋತ್ಸವಕ್ಕೆ ದೂರದ ಅನೇಕ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿಕೊಂಡು ಹೋಗುವ ಪರಿಪಾಠ ನಡೆದು ಬಂದಿದೆ. ಸಮಸ್ಯೆ ಏನು: ಈವೊಂದು ಸಂಪ್ರದಾಯಕ್ಕೆ ಇತ್ತೀಚೆಗೆ ಗ್ರಾಮದಲ್ಲಿ ದೇವರು ಕರೆದೊಯ್ಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ವೈಮನಸ್ಯದಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟಿಲ್ಲದೆ ಪೂಜಾಕಾರ್ಯದಲ್ಲಿ ಅಡಚಣೆಯುಂಟಾಗಿದ್ದು ಇದು ಮುಂದೆ ನಡೆಯಬೇಕಿರುವ ದಸರಾ ಜಾತ್ರಾ ಮಹೋತ್ಸವದ ಮೇಲೂ ಪರಿಣಾಮ ಬೀರಿದೆ.ದಸರಾ ನಡೆಯುವುದೋ ಇಲ್ಲವೋ ಎಂದು ಭಕ್ತರಲ್ಲಿ ಗೊಂದಲ ಮೂಡಿದೆ.           ಗ್ರಾಮದಲ್ಲಿ ಪೂಜಾ ಕಾರ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಕೆಲವೊಂದು ಪೂಜಾಕೈಂಕರ್ಯಗಳನ್ನು ಕೈಬಿಟ್ಟಿರುವುದು ಭಕ್ತರಲ್ಲಿ ಆಕ್ರೋಷಕ್ಕೆ ಕಾರಣವಾಗಿದೆ.ಅನುಚಾನವಾಗಿ ನಡೆದು ಬಂದಿದ್ದ ಧಾರ್ಮ

ಇಂದು ಹುಳಿಯಾರಿನಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಅಂತಿಮ ಹಣಾಹಣಿ ಹಾಗೂ ಸಮಾರೋಪ

ಹುಳಿಯಾರಿನ ಶ್ರೀಪ್ರಸನ್ನ ಗಣಪತಿ ಸೇವಾ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶ್ರೀತಿರುಮಲ-ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಹುಳಿಯಾರಿನ ಸಮಸ್ತ ಭಜನಾ ಮಂಡಳಿಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಆಹ್ವಾನಿತ ಭಜನಾ ಸ್ಪರ್ಧೆಯ ಸಮಾರೋಪ ಇಂದು(ಬುಧವಾರ)ಸಂಜೆ 6.30ಕ್ಕೆ ನಡೆಯಲಿದೆ. ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಿರಾದ ಶಿಡ್ಲಕೋಣ ಮಠದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗಣಪತಿ ದೇವಸ್ಥಾನದ ಅಧ್ಯಕ್ಷ ಡಿ.ಎಸ್.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸುವರು. ಎಚ್.ಎಸ್.ರಮೇಶ್ ಸ್ವಾಮಿ, ಗಾಯಿತ್ರಿರಮೇಶ್, ಲಕ್ಷ್ಮೀಸುಬ್ರಹ್ಮಣ್ಯ, ಶಾಂತ, ರಾಜಕಮಲ, ಪ್ರತಿಭಾ, ರೇಖಾ, ಮಮತಾಗೋಪಾಲ್, ಸೌಮ್ಯಾ ಉಪಸ್ಥಿತರಿರುವರು. ಸ್ಪರ್ಧೆಯ ವಿಜೇತರು ಯಾರೆಂದು ಇಂದಿನ ಭಜನೆಯಲ್ಲಿ ನಿರ್ಧಾರವಾಗಲಿದ್ದು ಭಜನಾ ಪ್ರಿಯರು ಹೆಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.

ದೊಡ್ಡಬಿದರೆಯಲ್ಲಿ ಸ್ವ-ಉದ್ಯೋಗ ತರಬೇತಿ ಕಾರ್ಯಗಾರ ಯಶಸ್ವಿ

           ಹುಳಿಯಾರು ಸಮೀಪದ ದೊಡ್ಡಬಿದರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ದೊಡ್ಡಬಿದರೆ ಮತ್ತು ಚಿಕ್ಕಬಿದರೆ ಸದಸ್ಯರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಸ್ವ-ಉದ್ಯೋಗ ತರಬೇತಿ ಕಾರ್ಯಗಾರ ಯಶಸ್ವೀಯಾಗಿ ನೆರವೇರಿತು.          ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನೆಲಮಂಗಲದ ಅರಿಶಿನಕುಂಟೆ ರುಡ್‌ಸೆಟ್ ಸಂಸ್ಥೆಯ ಉದಯಕುಮಾರ್ ಮಾತನಾಡಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದೆ.ಹಿಂದೆ ಶೇ.೮೦ ರಷ್ಟು ಉದ್ಯೋಗ ಕೃಷಿಯಿಂದ ಸೃಷ್ಠಿಯಾಗುತ್ತಿತ್ತು. ಇಂದು ನಾನಾ ಕಾರಣಗಳಿಗಾಗಿ ಕೃಷಿಯಿಂದ ಯುವ ಸಮುಹ ವಿಮುಖರಾಗುತ್ತಿದ್ದಾರೆ. ಕೈಯಲ್ಲಿ ಮೂರ್ನಾಲ್ಕು ಪದವಿ ಇದ್ದರೂ ಸರ್ಕಾರಿ ಕೆಲಸ ಸಿಗದಾಗಿದೆ. ಪಟ್ಟಣಕ್ಕೆ ಹೋಗಿ ಫ್ಯಾಕ್ಟರಿ ಸೇರಿದರೆ ಹೊಟ್ಟೆಗಾದರೆ, ಬಟ್ಟೆಗಿಲ್ಲ ಎನ್ನುವಂತೆ ಜೀವನ ನಡೆಸಬೇಕಾದ ಅನಿವಾ ರ್ಯತೆ ಸೃಷ್ಠಿಯಾಗಿದೆ. ಹಾಗಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸದ್ಯಕ್ಕೆ ಸ್ವಉದ್ಯೋಗ ದಾರಿ ಎಂದು ಸಲಹೆ ನೀಡಿದರು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸ್ವಉದ್ಯೋಗವೇ ಆಸರೆ ಎಂಬ ಸತ್ಯ ಮನಗಂಡು ಪೂಜ್ಯ ವೀರೇಂದ್ರ ಹೆಗ್ಗಡೆಯವರು ೧೯೮೨ ರಲ್ಲಿ ನಿರುದ್ಯೋಗಿ ಯುವಕ- ಯುವತಿಯರಿಗೆ ಸ್ವ ಉದ್ಯೋಗದ ತರಬೇತಿ ಆರಂಭಿಸಿದರು. ಕರ್ನಾಟಕ ದಲ್ಲಿ ೭ ಶಾಖೆಗಳು ಸೇರಿದಂತೆ ದೇಶಾದ್ಯಂತ ಒಟ್ಟು ೨೭ ಶಾಖೆಗಳು ಕಾರ್ಯಪ್ರವೃತ್ತವಾಗಿವೆ. ಇದರಿಂದ ಸಾವಿರಾರು ಮಂದಿ ಮೊಬೈಲ್, ಕಂಪ

ಹುಳಿಯಾರಿನ ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆ

      ಶತಮಾನದ ಹೆಗ್ಗಳಿಕೆ ಹೊಂದಿರುವ ಸೊಸೈಟಿಯನ್ನು ಆರ್ಥಿಕವಾಗಿ ಬಲಪಡಿಸಲು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದು ಮತ್ತಷ್ಟು ಶೇರುದಾರರನ್ನು ಮಾಡಿಕೊಳ್ಳುವುದರ ಜೊತೆಗೆ ಸಂಘದಲ್ಲಿನ ಎಲ್ಲಾ ಸದಸ್ಯರ ಉಪಯೋಗಕ್ಕಾಗಿ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ದೇವಾನಂದ್ ತಿಳಿಸಿದರು.             ಹುಳಿಯಾರಿನ ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪಿಗ್ನಿ ಏಜೆಂಟರನ್ನು ನೇಮಿಸಿ ದಿನ ನಿತ್ಯ ಹಣ ಸಂಗ್ರಹಿಸುವ ಮೂಲಕ ಅವಶ್ಯಕತೆ ಇರುವ ಸದಸ್ಯರಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲ ನೀಡಲಾಗುವುದು ಎಂದರು.                  ಸಾಲ ಪಡೆದಿರುವ ಸದಸ್ಯರು ಕಾಲಮಿತಿಯೊಳಗೆ ಸಾಲ ಮರುಪಾವತಿ ಮಾಡಿ ಸಹಕಾರ ಸಂಘದ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದ ಅವರು ನಾನಾ ಸಬೂಬುಗಳನ್ನು ಹೇಳಿಕೊಂಡು ಸಾಲ ಮರುಪಾವತಿ ಮಾಡದಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.         ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಹು.ಕೇ.ವಿಶ್ವನಾಥ್, ನಿರ್ದೇಶಕರುಗಳಾದ ಕುಮಾರ್,ಬಡ್ಡಿ ಪುಟಣ್ಣ, ಚೇತನ್, ಸಿದ್ದಗಂಗಮ್ಮ, ವಿಜಯಲಕ್ಷ್ಮಿ ,ಶಿವನಂಜಪ್ಪ, ಪ್ರದೀಪ್ ಇತರರು ಹಾಜರಿದ್ದರು.

ನಶಿಸುತ್ತಿರುವ ನಾಟಕ ಕಲೆಯನ್ನ ಉಳಿಸಿ ಬೆಳೆಸಿ:ಬಿಂಧುಮಾಧವ ಶ್ರೀ

ಹುಳಿಯಾರು: ಟೀವಿ ಮಾಧ್ಯಮಗಳ ಹಾವಳಿಯಿಂದ ಇಂದು ಹರಿಕಥೆ,ನಾಟಕ,ಭಜನೆ ಮುಂತಾದ ದೇಸಿ ಕಲೆ ನಶಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ನಿರ್ವಹಿಸಬೇಕಿದೆ ಎಂದು ಬೆಲಗೂರು ಶ್ರೀಬಿಂಧುಮಾಧವ ಸ್ವಾಮಿಗಳು ತಿಳಿಸಿದರು. ಹುಳಿಯಾರಿನಲ್ಲಿ ರಂಗಭೂಮಿ ಕಲಾವಿದರ ಸಂಘದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಬೆಲಗೂರು ಶ್ರೀಬಿಂಧುಮಾಧವ ಸ್ವಾಮಿಗಳು ಆರ್ಶೀವಚನ ನೀಡಿದರು.         ಹುಳಿಯಾರಿನ ಬಿಂಧುಮಾಧವ ಕಾಂಪ್ಲೆಕ್ಸ್ ನಲ್ಲಿ ತಾಲೂಕು ರಂಗಭೂಮಿ ಕಲಾವಿದರ ಸಂಘದಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ ಕಲೆ, ಸಂಸ್ಕೃತಿ, ಸಂಸ್ಕಾರವೇ ಭಾರತ ದೇಶದ ಆಸ್ತಿ. ಆದರೆ ಪಾಶ್ಚಾತ್ಯ ಸಂಸ್ಕೃತಿಗೆ ಭಾರತೀಯರು ಮಾರುಹೋಗುತ್ತಿರುವುದರಿಂದ ದೇಸಿ ಕಲೆಗಳಾದ ನಾಟಕಕಲೆ, ಸಂಗೀತ, ಜಾನಪದ, ಗಮಕಕಲೆ ಅವಸಾನದತ್ತ ಸಾಗಿದೆ ಎಂದು ವಿಷಾದಿಸಿದರು.            ನಾಟಕ ಕಲೆ ಎಂಬುದು ನಮ್ಮ ಸನಾತನ ಧರ್ಮದಿಂದಲೂ ಬಂದಿರುವಂತಹ ಉತ್ತಮ ಕಲೆಯಾಗಿದ್ದು ರಾಮಾಯಣ, ಮಹಾಭಾರತ ಹಾಗೂ ಹರಿದಾಸರ ಕೀರ್ತನೆಗಳಲ್ಲಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಂತಹ ಒಳ್ಳೆಯ ಸತ್ವ ಅಡಗಿದೆ ಎಂದರು.          ನಾಟಕ ಪ್ರದರ್ಶನದಲ್ಲಿ ಅಭಿನಯಿಸುವ ಕಲಾವಿದರು ಸಮಯ ಪ್ರಜ್ಞೆಯನ್ನ ಹೊಂದಿ ಪ್ರದರ್ಶನದಲ್ಲಿ ಆಕಸ್ಮಿಕವಾಗಿ ಎದುರಾಗುವ ಲೋಪದೋಷಗಳನ್ನ ಸರಿಪಡಿಸಿಕೊಂಡು ಪ್

ಕೆಲಸ ಮಾಡದೆ ಬಿಲ್ ಪಾವತಿ: ದೂರು

        ಇಂಗುಗುಂಡಿ ನಿರ್ಮಿಸದೆ ಬಿಲ್ ಪಾವತಿ ಮಾಡಕೊಂಡಿದ್ದಾರೆ ಎಂದು ಕೆಂಕೆರೆ ಗ್ರಾ . ಪಂ ವ್ಯಾಪ್ತಿಯ 3 ಮತ್ತು 4 ನೇ ಬ್ಲಾಕಿನ ಮತದಾರರಾದ ಬಿ . ಪಿ . ಬಸವರಾಜು , ಕೆ . ವಿ . ಉದಯಕುಮಾರ್ ತಾ . ಪಂ ಇಒ ಅವರಿಗೆ ದೂರು ನೀಡಿದ್ದಾರೆ .     ಕೆಂಕೆರೆ ಗ್ರಾ . ಪಂ ವ್ಯಾಪ್ತಿಯ ಬರದಲೇಪಾಳ್ಯದ ಗೌರಮ್ಮನ ಮನೆಯ ಹತ್ತಿರದ ಕೊಳವೆ ಬಾವಿಗೆ ಇಂಗು ಗುಂಡಿ ನಿರ್ಮಿಸಲಾಗಿದೆ ಎಂದು ಸುಳ್ಳು ದಾಖಲೆ ನೀಡಿ ಹಣ ಪಡೆದಿದ್ದಾರೆ . 2013 ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿ ನಡೆದಿದೆ . ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ . 

ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ವಿಜೇತರು

ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ವಿಜೇತರಾಗಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿಜೇತರನ್ನು ಪ್ರಾ.ಶಾ.ಶಿ.ಸ ರಾಜ್ಯ ಉಪಾಧ್ಯಕ್ಷ ಪರಶಿವಮೂರ್ತಿ.ಎಸ್‌ಡಿಎಂಸಿ ಅಧ್ಯಕ್ಷ ಗೋಪಿನಾಥ್.ದೈಹಿಕ ಶಿಕ್ಷಕ ಬುಳ್ಳಯ್ಯ.ಶಿಕ್ಷಕರಾದ ಬೇಬಿಕಲಾ,ಜಯಮ್ಮ,ರೇಣುಕಾ ಅಭಿನಂದಿಸಿದರು.

ರೈತ ಸಂಘದ ಚಂದ್ರಪ್ಪ ಬಣದ ಪದಾಧಿಕಾರಿಗಳ ಆಯ್ಕೆ

ಹೊಸಹಳ್ಳಿ ಚಂದ್ರಣ್ಣ ಬಣದ ತುಮಕೂರು ಜಿಲ್ಲಾ ರೈತ ಸಂಘದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹೋಬಳಿವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಹೊಸಕೆರೆ ಆನಂದ್, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಕೆ.ಕುಮಾರಯ್ಯ, ಉಪಾಧ್ಯಕ್ಷರಾಗಿ ಶೆಟ್ಟಿಕೆರೆಶಂಕರಪ್ಪ ಅವರನ್ನು ಆಯ್ಕೆ ಮಾಡಲಾಯಿತು.        ಹುಳಿಯಾರು ಹೋಬಳಿ ಗೌರವ ಅಧ್ಯಕ್ಷರಾಗಿ ಸೋಮಜ್ಜನಪಾಳ್ಯದ ಹೆಚ್.ಎಸ್.ಕರಿಯಪ್ಪ, ಕಾರ್ಯದರ್ಶಿಯಾಗಿ ಷೇಕ್ ಮಹಬೂಬ್, ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಪಂಕಜಾಕ್ಷಮ್ಮ ಅವರನ್ನು ಆಯ್ಕೆ ಮಾಡಲಾಯಿತು.           ಹಂದನಕೆರೆ ಹೋಬಳಿ ಅಧ್ಯಕ್ಷರಾಗಿ ಹಳೆಗೊಲ್ಲರಹಟ್ಟಿ ಸಿದ್ಧಲಿಂಗಪ್ಪ, ಉಪ್ಪಾಧ್ಯಕ್ಷರಾಗಿ ಈರಣ್ಣ, ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಶಿವಮ್ಮ ಆಯ್ಕೆಯಾದರು.              ಕಂದಿಕೆರೆ ಹೋಬಳಿ ಅಧ್ಯಕ್ಷರಾಗಿ ಮಲ್ಲಪ್ಪ ಹಾಗೂ ಶೆಟ್ಟಿಕೆರೆ ಹೋಬಳಿ ಅಧ್ಯಕ್ಷರಾಗಿ ಸದಾನಂದ್, ಉಪಾಧ್ಯಕ್ಷರಾಗಿ ಶಿವಣ್ಣ, ಕಾರ್ಯದರ್ಶಿಯಾಗಿ ಕೆಂಪರಾಜು ಆಯ್ಕೆಯಾದರು.           ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾಧ್ಯಕ್ಷ ಹೊಸಹಳ್ಳಿಚಂದ್ರಣ್ಣ, ಸೃಜನ ಮಹಿಳಾ ಘಟಕದ ಜಯಲಕ್ಷಮ್ಮ, ತಾಲೂಕು ಅಧ್ಯಕ್ಷ ಕೆ.ಈಶ್ವರಪ್ಪ,ಶಂಕ್ರಯ್ಯ, ಕೃಷ್ಣಪ್ಪ, ಈರಣ್ಣ, ಧರಣಿಕುಮಾರ್, ಬೀರಲಿಂಗಯ್ಯ, ಅರುಣ್‌ಕುಮಾರ್, ಬುದ್ದಿಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮುಂದೂಡಿದ ರೈತ ಸಂಘದ ರ್ಯಾಲಿ

ಅಡಿಕೆ-ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ------------------------------------------- ಹುಳಿಯಾರು:  ತೆಂಗು ಹಾಗು ಅಡಕೆಯ ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಸೋಮವಾರದಂದು ರಾಜ್ಯ ರೈತಸಂಘ ಕಡೂರಿನಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಾವನ್ನು ತಡೆದ ಪೊಲೀಸರು ಕಾವೇರಿ ತೀರ್ಪಿನ ಮುನ್ನೆಚರಿಕೆ ಕ್ರಮವಾಗಿ ಐನೂರು ರೈತರನ್ನು ಬಂಧಿಸಿದ ಹಿನ್ನಲೆಯಲ್ಲಿ ಮಂಗಳವಾರದಂದು ಹುಳಿಯಾರಿನಿಂದ ಹೊರಟಿದ್ದ ಬೈಕ್ ರ್ಯಾಲಿಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು. ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಮಂಗಳವಾರದಂದು ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿದರು.            ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಮಂಗಳವಾರದದಂದು ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತೆಂಗು ಹಾಗು ಅಡಕೆಯ ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಕಳೆದ ತಿಂಗಳು ತಿಪಟೂರಿನಿಂದ ಕಾಲ್ನಡಿಗೆ ಜಾಥಾದ ಮೂಲಕ ವಿಧಾನ ಸೌಧ ಮುತ್ತಿಗೆ ಹಾಕಲು ಹೊರಟಂತ ಸಂದರ್ಭದಲ್ಲಿ ಸಿದ್ಧಗಂಗಾಮಠದಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ರೈತರ ಆಶಯಗಳಿಗೆ ಸ್ಪಂದಿಸುವುದಾಗಿ ಹಾಗೂ ಸರ್ವಪಕ್ಷ ಸಭೆ ನಡೆಸಿ, ಪ್ರಧಾನಿ ಬಳಿ ನಿಯೋಗ ಒಯ್ಯುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಗಳ ಹೇಳಿಕೆಯನ್ನು ಒಪ್ಪಿ ತಾತ್ಕಾಲಿಕವಾಗಿ ಜಾಥಾವನ್ನು ಮೊಟುಕ

ಆದಾಯ ತೆರಿಗೆ ಜಾಗೃತಿ ಕಾರ್ಯಕ್ರಮ

ಹುಳಿಯಾರು:  ಆದಾಯ ತೆರಿಗೆ ಪಾವತಿದಾರರು ತಮ್ಮ ಅಘೋಷಿತ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಆದಾಯ ತೆರಿಗೆಯ ಐಡಿಎಸ್‌-2016 ಯೋಜನೆಯಡಿ ಘೋಷಿಸಿಕೊಂಡು ಈ ಯೋಜನೆಯಡಿ ಶೇ.45 ರಷ್ಟು ಆದಾಯ ತೆರಿಗೆ ಪಾವತಿಸಿ ನಿಮ್ಮ ಸಂಪಾದನೆಯನ್ನು ಘೋಷಿಸಬಹುದೆಂದು ತಿಪಟೂರು ವಲಯದ ಆದಾಯ ತೆರಿಗೆ ಅಧಿಕಾರಿ ನಿರ್ಮಲ ಸಲಹೆ ನೀಡಿದರು.                       ಹುಳಿಯಾರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರದಂದು ಆದಾಯ ತೆರಿಗೆ ಇಲಾಖೆಯಿಂದ ಏರ್ಪಡಿಸಿದ್ದ ಆದಾಯ ತೆರಿಗೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಯೋಜನೆಯ ಅವಧಿ ಜೂ.1 ರಿಂದ ಸೆ. 30ರ ವರೆಗೆ ಇದ್ದು ತೆರಿಗೆ ಪಾವತಿದಾರರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದರು.                  ನೀವು ಈ ಹಿಂದೆ ನಿಮ್ಮ ಆದಾಯ ಘೋಷಣೆ ಮಾಡಿರದಿದ್ದರೆ, ಸರ್ಕಾರಕ್ಕೆ ತೆರಿಗೆ ಕಟ್ಟಿರದಿದ್ದರೆ ಇದು ಒಂದು ಬಾರಿಯ ಕೊನೆಯ ಅವಕಾಶವಾಗಿದ್ದು ಈ ಯೋಜನೆಯಡಿ ನೀವು ಆದಾಯ ತೆರಿಗೆ ಕಟ್ಟಿ ನಿಮ್ಮ ಸಂಪಾದನೆಯನ್ನು ಘೋಷಿಸಿ ನಿಶ್ಚಿಂತರಾಗಬಹುದು.ಎಲ್ಲಾ ತೆರಿಗೆ ಪಾವತಿದಾರರು ಐಡಿಎಸ್‌ 2016ರ ಯೋಜನೆಯಡಿ ಅಘೋಷಿತ ಆಸ್ತಿ ಘೋಷಿಸಿಕೊಂಡು ಯೋಜನೆ ಲಾಭ ಪಡೆದುಕೊಳ್ಳಬೇಕೆಂದರು.              ಈ ಯೋಜನೆಯನ್ವಯ ಯಾರು ಅಘೋಷಿತ ಆಸ್ತಿಗಳ ರೂಪದಲ್ಲಿ ಆದಾಯವನ್ನು ಘೋಷಣೆ ಮಾಡಿಕೊಳ್ಳಲು ಬಯಸುತ್ತಾರೋ ಅಂತವರು ಯಾವುದೇ ತರಹದ ವಿಚಾರಣೆ ಅಥವಾ ದಂಡ, ಜುಲ್ಮಾನೆಗೆ ಒಳಪ

ಕೆಲಸಕ್ಕೆ ಅಡ್ಡಿ : ಗ್ರಾಮಸ್ಥರ ವಿರುದ್ದ ಠಾಣೆಯಲ್ಲಿ ದೂರು ದಾಖಲು

ಹುಳಿಯಾರು: ಹೋಬಳಿಯ ಹೊಯ್ಸಳಕಟ್ಟೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲ್ಲೇನಹಳ್ಳಿ ಗ್ರಾಮದ ಕೊಳವೆಬಾವಿಯ ಪಂಪ್ ಸೆಟ್ಟನ್ನು ತೆಗೆದು ಬೇರೆ ಗ್ರಾಮಕ್ಕೆ ಅಳವಡಿಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪಂಚಾಯ್ತಿಗೆ ನುಗ್ಗಿ ಬೀಗ ಜಡಿದ ಘಟನೆ ಇದೀಗ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು ಪಿಡಿಓ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸುವ ಮೂಲಕ ತಿರುವು ಪಡೆದುಕೊಂಡಿದೆ.           ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳಿಗೆ ಕರ್ತವ್ಯ ಪಾಲನೆಗೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಹೊಯ್ಸಳಕಟ್ಟೆ ಗ್ರಾಮಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ೧೪ ಜನ ಕಲ್ಲೇನಹಳ್ಳಿ ಗ್ರಾಮಸ್ಥರ ಮೇಲೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.             ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಕಲ್ಲೇನಹಳ್ಳಿ ಗ್ರಾಮದ 1] ತಿಮ್ಮಯ್ಯ ಬಿನ್ ತಿಮ್ಮಯ್ಯ, 2] ನವೀನ್ ಬಿನ್ ರಂಗನಾಥಪ್ಪ, 3] ಮಂಜುನಾಥ ಬಿನ್ ಕರಿಯಪ್ಪ, 4] ಕೃಷ್ಣಮೂರ್ತಿ ಬಿನ್ ಸಿದ್ದಯ್ಯ, 5] ಅಂಗಡಿ ಗಂಗಣ್ಣ ಬಿನ್ ರಂಗಣ್ಣ, 6] ನವೀನ್ [ಕುಂಭಿ] ಬಿನ್ ಗೋವಿಂದಪ್ಪ, 7] ಗಿರೀಶ್ ಬಿನ್ ಮಂಜಣ್ಣ, 8] ಕೇಶವಮೂರ್ತಿ ಬಿನ್ ಕಂಬಯ್ಯ, 9] ಶಿವಣ್ಣ [ಅಕ್ಕಿ] ಬಿನ್ ಮಿಲ್ ಗೋವಿಂದಪ್ಪ, 10] ಕಿಟ್ಟಪ್ಪ ಬಿನ್ ದೊಡ್ಡಮಾರಜ್ಜ, 11] ಈರಣ್ಣ ಬಿನ್ ದಾಸಜ್ಜರ ಭೂತಯ್ಯ, 12] ಬಸವರಾಜು ಬಿನ್ ಮುನಿರಂಗಯ್ಯ, 13] ಮಹದೇವ ಬಿನ್ ಕದುರಯ್ಯ, 14] ಪ್ರವೀಣ್ ಬಿನ್ ರಂಗನಾಥಪ್ಪ ಎಂಬ ೧೪ ಜನ ನಿವಾಸಿಗಳ

ಸಾಲ ಮರು ಪಾವತಿಯಿಂದ ಸಂಘ ಅಭಿವೃದ್ಧಿ : ಕೆ.ಎಂ.ರಾಮಯ್ಯ

ಹುಳಿಯಾರು: ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಸಂಘ ಅಭಿವೃದ್ಧಿಯಾಗಲು ಸಾಧ್ಯ ಎಂದು ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ರಾಮಯ್ಯ ತಿಳಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ರಾಮಯ್ಯ ಮಾತನಾಡಿದರು.                ಹುಳಿಯಾರಿನ ಡಿ.ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ೨೦೧೫-೧೬ನೇ ಸಾಲಿನ ಸರ್ವಸದ್ಯಸರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಡಿಕೈಗಾರಿಕೆ, ಸ್ವಉದ್ಯೋಗ ಗಳಿಗೆ ಸಾಲ ಸೌಲಭ್ಯ ಕಲ್ಪಿಸಿ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸದುದ್ದೇಶದಿಂದ ದೇವರಾಜ ಅರಸು ಸಂಘ ಸ್ಥಾಪಿಸಲಾಯಿತು. ನಮ್ಮ ಆಶಯದಂತೆ ಸಣ್ಣ ಕೈಗಾರಿಕೆ, ಗೂಡಂಗಡಿ, ತಳ್ಳುವ ಗಾಡಿ ವ್ಯಾಪಾರಸ್ಥರಿಗೆ ಸಾಲ ನೀಡಿದ್ದು ನೂರಾರು ಮಂದಿ ಇದರ ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.ಸಾಲ ಪಡೆದವರು ಪ್ರತಿಯೊಬ್ಬರೂ ನಿಗದಿತ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗಬೇಕೆಂದರು.ಪ್ರಸಕ್ತ ಸಾಲಿನಲ್ಲಿ ಸಾಲದ ಸುಳಿಯಲ್ಲೂ ಸಹ ೮೯೨೨೬ / ರೂ ಲಾಭಗಳಿಸಿದೆ ಎಂದರು             ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಪ್ರತಿ ವರ್ಷ ಸದಸ್ಯರಿಗೆ ೫೦ ಸಾವಿರದವರೆಗೆ ಸಾಲ ನೀಡುತ್ತಿದ್ದವು ಕೆಲ ಸದಸ್ಯರು ಹಣ ಕಟ್ಟದೆ ಸಂಘದ ಅಭಿವೃದ್ಧಿಗೆ ಗ್ರಹಣ ಬಡಿದಿತ್ತು. ಈಗ ಕಾರ್ಯಕಾರಿ ಮಂಡಳಿ ಮನವೊಲಿಸಿದ ಪರಿಣಾಮ ಮರುಪಾವತಿ ಸುಗಮವಾಗಿ ನಡೆಯುತ್ತ

ಇಂದು ಸಂಕಷ್ಟಹರ ಗಣಪತಿ ಪೂಜೆ

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಇಂದು ಸೋಮವಾರದಂದು ಸಂಕಷ್ಟಹರ ಚತುರ್ಥಿ ಅಂಗವಾಗಿ ಗಣಪತಿ ಪೂಜೆ ಹಮ್ಮಿಕೊಳ್ಳಲಾಗಿದೆ .ಅಭಿಷೇಕ,ಅರ್ಚನೆ,ವ್ರತಾಚರಣೆಯ ಹಾಗೂ ಚಂದ್ರ ದರ್ಶನದ ನಂತರ ಪ್ರಸಾದ ವಿನಿಯೋಗವಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯವರು ಕೋರಿದ್ದಾರೆ.

ಕಂಚಿಸ್ವಾಮಿಗೆ ಕಾಂಚಾಣದ ಮಳೆ

ಕಂಚೀವರದರಾಜ ಸ್ವಾಮಿಯ ಉತ್ತರೆ ಮಳೆ ಅಂಬಿನೋತ್ಸವ ---------------------- ಹುಳಿಯಾರು :ಹುಳಿಯಾರು ಗಡಿಭಾಗದ ಕಂಚೀಪುರದಲ್ಲಿನ ಕಂಚೀವರದರಾಜ ಸ್ವಾಮಿಯ ಉತ್ತರೆ ಮಳೆ ಅಂಬಿನೋತ್ಸವದ ಆರಂಭವಾಗಿದ್ದು ಪ್ರಯುಕ್ತ ಸೆ.೨೦ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಐತಿಹ್ಯ: ಹೊಸದುರ್ಗ ತಾಲ್ಲೂಕಿನಿಂದ 28 ಕಿ.ಮೀ ದೂರದಲ್ಲಿರುವ ಕಂಚೀಪುರದ ಶ್ರೀ ಕಂಚೀವರದರಾಜ ಸ್ವಾಮಿ ಈ ಭಾಗದಲ್ಲಿ ಬಲು ಪ್ರಸಿದ್ದಿಯಾಗಿದ್ದು ಈ ದೇವರ ಉತ್ಸವಮೂರ್ತಿ ಗುಡಿಯಿಂದ ಹೊರ ನಡೆದರೆ ಸಾಕು, ಕಾಂಚಾಣದ ಮಳೆಯೇ ಸುರಿಯುತ್ತದೆ! ಇದು ಈ ದೇವರ ವಿಶೇಷ.           ಎಲ್ಲೆಡೆ ಜಾತ್ರೆ ಅಂದ್ರೆ ದೇವರ ಮೇಲೆ ಬಾಳೆಹಣ್ಣು ,ಪುರಿ ತೂರಿದರೆ ಕಂಚೀಪುರದ ಜಾತ್ರೆಯಲ್ಲಿ ಕಂಚೀವರದರಾಜ ಸ್ವಾಮಿಗೆ ಭಕ್ತರು ಹರಕೆ ಮಾಡಿಕೊಂಡ ಹಣವನ್ನು ಹುಂಡಿಗೆ ಸಮರ್ಪಿಸುವ ಬದಲು ಚಿಲ್ಲರೆ ರೂಪದಲ್ಲಿ ಸ್ವಾಮಿಯ ಮೇಲೆ ತೂರುವುದು ವಾಡಿಕೆ.        ಪೌರಾಣಿಕ ಕಥೆ ಹಿನ್ನಲೆಯಲ್ಲಿ ಭಕ್ತರು ಸ್ವಾಮಿಯ ಮೇಲೆ ಹಣ ತೂರಿ ಹರಕೆ ತೀರಿಸುವ ಪದ್ಧತಿ ರೂಢಿಗೆ ಬಂದಿದ್ದು ಭಕ್ತರು ತಮ್ಮ ಶಕ್ತ್ಯಾನುಸಾರ ನೂರು ರೂಪಾಯಿಯಿಂದ ಸಹಸ್ರಾರು ರೂಪಾಯಿವರೆಗೂ ಚಿಲ್ಲರೆ ಹಣ ತೂರುವುದು ನಡೆಯುತ್ತದೆ.ಸ್ವಾಮಿಯ ಮೇಲೆ ತೂರಿದ ಹಣವನ್ನು ಯಾರು ಬೇಕಾದರೂ ಆರಿಸಿಕೊಳ್ಳಬಹುದಿದ್ದು ನೋಡುಗರಿಗೆ ಕಾಂಚಣದ ಮಳೆ ಸುರಿದಂತೆ ಭಾಸವಾಗುತ್ತದೆ.            ಉತ್ತರೆ ಮಳೆ ಅಂಬಿನೋತ್ಸವ ಹಾಗೂ ಏಪ್ರಿಲ್ ತಿ

ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ

ಹುಳಿಯಾರಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಇಂದು ಶುಕ್ರವಾರ ಸಂಜೆ ಅನ್ನಸಂತರ್ಪಣೆ ನಡೆಯಲಿದೆ. ಇಂದಿನ ಸೇವಾಕರ್ತರು ಹುಳಿಯಾರು ಲಿಂಗಾಯತ ಸಮುದಾಯದವರು. ಕೆಂಕೆರೆ ಪುರದ ಮಠದಲ್ಲೂ ಸಹ ಹುಣ್ಣಿಮೆ ಅಂಗವಾಗಿ ಇಂದು ಅನ್ನಸಂತರ್ಪಣೆ ನಡೆಯುತ್ತಿದೆ. ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ಇಂದು ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿನಿಯೋಗವಿದೆ.

ಕೋತಿಗೂ ಅಂತ್ಯ ಸಂಸ್ಕಾರ

ಹಳ್ಳಿಗಳಲ್ಲಿ ಇಂದಿಗೂ ಕೋತಿಗಳನ್ನು ಆಂಜನೇಯಸ್ವರೂಪಿ ಅನ್ನುವ ಭಾವನೆಯಿಂದಲೇ ನೋಡುತಿದ್ದು ಅದಕ್ಕೆ ಇಂಬುಕೊಡುವಂತೆ ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ದೊಡ್ಡಎಣ್ಣೆಗೆರೆ ಗೇಟ್ ನಲ್ಲಿ ಇಂದು ಆಕಸ್ಮಿಕವಾಗಿ ರಸ್ತೆಯಲ್ಲಿ ಮೃತಪಟ್ಟ ಕೋತಿಯನ್ನು ಗ್ರಾಮಸ್ಥರೆಲ್ಲ ಸೇರಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ಅಂತ್ಯಸಂಸ್ಕಾರ ನೆರವೇರಿಸಿದರು.

ಮೋಟಾರ್ ಕೆಟ್ಟು ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕ

ವಾರವಾದರೂ ತಲೆ ಹಾಕದ ನಿರ್ವಾಹಕರು ---------------------------------------------- ಹುಳಿಯಾರು: ಪಟ್ಟಣದ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಹಿಂಭಾಗದಲ್ಲಿನ ಶುದ್ಧಕುಡಿಯುವ ನೀರಿನ ಘಟಕದ ಮೋಟಾರ್ ಕೆಟ್ಟು ಬಾಗಿಲು ಮುಚ್ಚಿ ವಾರವಾದರೂ ಇತ್ತ ತಲೆಹಾಕದ ನಿರ್ವಾಹಕರ ವಿರುದ್ಧ ಗರಂ ಆಗಿರುವ ಬಳಕೆದಾರರು ಕೂಡಲೇ ಸಮಸ್ಯೆ ಸರಿಪಡಿಸಿ ಕುಡಿಯಲು ಶುದ್ಧವಾದ ನೀರನ್ನ ಪೂರೈಸದಿದ್ದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹುಳಿಯಾರಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಹಿಂಭಾಗದಲ್ಲಿನ ಶುದ್ಧನೀರಿನ ಘಟಕ ಸ್ಥಗಿತಗೊಂಡು ಬಾಗಿಲುಮುಚ್ಚಿರುವುದು              ಶುದ್ಧ ನೀರಿನ ಈ ಘಟಕವನ್ನು ವಿಧಾನ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ನೀರಿ ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ಥಳಿಯ ಗ್ರಾ.ಪಂ. ಸಹಯೋಗದಲ್ಲಿ ಪ್ರಾರಂಭಿಸಲಾಗಿತ್ತು.               ನೀರು ಹಾಗೂ ಜಾಗ ಒದಗಿಸುವ ಜವಬ್ದಾರಿ ಗ್ರಾಪಂದಾದರೆ ನಿರ್ವಹಣೆ ಬೆಂಗಳೂರಿನ ಪೆಂಟಾಪ್ಯೂರ್ ಆರ್‌ಓ ಸಿಸ್ಟಮ್ಸ್ ಕಂಪನಿಯವರದ್ದು.ಈ ಶುದ್ಧನೀರಿನ ಘಟಕಕ್ಕೆ ದೇವಸ್ಥಾನದ ಕೋಳವೆ ಬಾವಿಯಿಂದ ಮೋಟರ್ ಮುಲಕ ನೀರು ಸರಬರಾಜಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.           ಸದ್ಯ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದ ಮೋಟರ್ ಪಂಪ್ ಕೆಟ್ಟಿರುವುದರಿಂದ ಸರಿಪಡಿಸಲು ಯಾರೊಬ್ಬರು ಮುಂದಾಗದಿರುವುದರಿಂದ ಶುದ್ಧ ಕುಡಿಯು

ನೈಪುಣ್ಯನಿಧಿ ಪ್ರಶಸ್ತಿ ಪತ್ರ ವಿತರಣೆ

        ಹುಳಿಯಾರು ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನೈಪುಣ್ಯನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರೋ.ಬಿಳಿಗೆರೆ ಕೃಷ್ಣಮೂರ್ತಿ ಪ್ರಶಸ್ತಿ ಪತ್ರ ವಿತರಿಸಿದರು.ರಾಮಚಂದ್ರ ಮಿಷನ್ ಸಂಸ್ಥೆಯ ವೈ.ಆರ್.ಗೋಪಿ,ಸಂಚಾಲಕರಾದ ಶಿವಯ್ಯ ಮೊದಲಾದವರಿದ್ದರು. ವಿದ್ಯಾರ್ಥಿಗಳು ಕಲಿಕೆ ಜೀವನವನ್ನು ದುರುಪಯೊಗ ಪಡಿಸಿಕೊಳ್ಳದೇ ಉತ್ತಮ ಸ್ಥಿತಿಯಲ್ಲಿ ತೊಡಗಿಕೊಂಡಲ್ಲಿ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಪ್ರಾಂಶುಪಾಲ ಪ್ರೋ.ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.               ಹುಳಿಯಾರು -ಕೆಂಕೆರೆ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮಚಂದ್ರ ಮಿಷನ್ ಸಂಸ್ಥೆಯವರು ಆಯೋಜಿಸಿದ್ದ ನೈಪುಣ್ಯನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ಪಠ್ಯವಿಷಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯಪೂರಕ ವಿಷಯದಲ್ಲೂ ಸ್ವಯಂಪ್ರೇರಣೆಯಿಂದ ಭಾಗವಹಿಸುವಂತೆ ತಿಳಿಸಿದರು.ವ್ಯಕ್ತಿತ್ವ ವಿಕಸನದ ಮೂಲಕ ಸಮಯ ನಿರ್ವಹಣೆ,ದೃಢಸಂಕಲ್ಪ ಕೈಗೊಳ್ಳುವ ಮನೋಭಾವ ಬೆಳಸಿಕೊಂಡು ಸಮರ್ಥವಾಗಿ ಗುರಿ ತಲುಪಬೇಕೆಂದರು.          ರಾಮಚಂದ್ರ ಮಿಷನ್ ಸಂಸ್ಥೆಯ ವೈ.ಆರ್.ಗೋಪಿ,ಡಾ.ಸಿದ್ಧರಾಮಯ್ಯ, ಡಾ. ಉಮಾ ,ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಂಚಾಲಕರಾದ ಪ್ರೋ. ಶಿವಯ್ಯ ,ಡಾ.ಬಾಳಪ್ಪ ಮತ್ತು ಗ್ರಂಥಪಾಲಕ ಲೋಕೇಶ್ ನಾಯ್ಕ ಹಾಜರಿದ್ದರು.

ಕಾನೂನು ಸಚಿವರು ರೈತರ ಪರ ಇಲ್ಲ :ಸಾಸಲು ಸತೀಶ್ ಆರೋಪ

(14.09.16 ರ ಉದಯವಾಣಿ ಪತ್ರಿಕೆಯಲ್ಲಿನ ವರದಿ) ಚಿಕ್ಕನಾಯಕನಹಳ್ಳಿ: ಎಂಟೂವರೆ ವರ್ಷಗಳಿಂದ ತಾಲೂಕಿನ ಯಾವುದೇ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಬಗರ್ ಹುಕುಂ ಚೀಟಿಗಾಗಿ ಯಾವುದೇ ಅರ್ಜಿ ಸ್ವೀಕರಿಸಿಲ್ಲ. ಯಾರೂ ಹೊಸ ಅರ್ಜಿ ನೀಡಬಾರದು ಎಂದು ಕಾನೂನು ಸಚಿವರು ಜೆಡಿಎಸ್ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದರಿಂದಲೇ ಸಚಿವರು ಹಾಗೂ ಶಾಸಕರು ರೈತರ ಪರವಾಗಿಲ್ಲ ಎಂಬುದು ತಿಳಿಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಆರೋಪಿಸಿದರು.         ಚಿಕ್ಕನಾಯಕನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಗುವಳಿ ಚೀಟಿ ನೀಡಲು ಕೆಲವು ನ್ಯಾಯಾಲಯದ ಮೆಟ್ಟಿಲೇರಿವೆ ಹಾಗೂ ಕೆಲವು ತೊಡಕುಗಳಿವೆ ಎಂದು ಶಾಸಕರು ತಿಳಿಸಿದ್ದಾರೆ. ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.                ಕಾಗೋಡು ತಿಮ್ಮಪ್ಪನವರು ತಿಳಿಸಿರುವಂತೆ ಪ್ರತಿ ಸಾಗುವಳಿದಾರರಿಗೂ ಡಿಸೆಂಬರ್ ಅಂತ್ಯದೊಳಗೆ ಸಾಗುವಳಿ ಚೀಟಿ ನೀಡಬೇಕು. ಶಾಸಕರು ಪ್ರತಿವಾರ ಸಭೆ ನಡೆಸಿ, ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು ಎಂದರು.           ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಮಾತನಾಡಿ, ನಮ್ಮ ತಾಲೂಕಿನ ರೈತರ ಪರವಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.               ಬಗರ್‌ಹುಕುಂ ಕಮಿಟಿ ಸದಸ್ಯ ಅಶೋಕ್ ಮಾತನಾಡಿ, ಈಗಾಗಲೇ ಸರ್ಕಾರಿ ದಾಖಲೆಯಲ್ಲಿ ೧೨ ಸಾವಿರ

ಹೊಯ್ಸಳಕಟ್ಟೆಯಲ್ಲಿ ಗಣೇಶನ ವಿಸರ್ಜನೆ

ಹುಳಿಯಾರು ಸಮೀಪದ ಹೊಯ್ಸಳಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಬೋರನಕಣಿವೆ ಜಲಾಶಯದಲ್ಲಿ ವಿಸರ್ಜಿಸಲಾಯಿತು.

ಯಗಚೀಹಳ್ಳಿಯಲ್ಲಿ ೨೪ನೇ ವರ್ಷದ ಗಣಪತಿ ಮಹೋತ್ಸವದ ಸಂಭ್ರಮ

ಗಣಪತಿ ಹೆಸರಿನಲ್ಲಿ ಎಲ್ಲಾ ಜಾತಿ, ಧರ್ಮದವರು ಒಟ್ಟಿಗೆ ಸೇರಿ ಸಂಭ್ರಮಾಚರಣೆ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಮೆಚ್ಚುಗೆ ವ್ಯಕ್ತಪಡಿಸಿದರು. ಹುಳಿಯಾರು ಸಮೀಪದ ಯಗಚೀಹಳ್ಳಿಯಲ್ಲಿ ನಡೆದ ೨೪ನೇ ವರ್ಷದ ಗಣಪತಿ ಮಹೋತ್ಸವದಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಸಕ ಸುರೇಶ್ ಬಾಬು, ಜಿಪಂ ಸದಸ್ಯ ಮಹಾಲಿಂಗಯ್ಯ,ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ಮೊದಲಾದವರಿದ್ದಾರೆ.              ಹುಳಿಯಾರು ಸಮೀಪದ ಯಗಚೀಹಳ್ಳಿಯಲ್ಲಿ ನಡೆದ ೨೪ನೇ ವರ್ಷದ ಗಣಪತಿ ಮಹೋತ್ಸವದಲ್ಲಿ ಅವರು ಮಾತನಾಡಿ ಮಕ್ಕಳು ಜಾತಿ, ಧರ್ಮ ಭೇದವಿಲ್ಲದೆ ನಿಷ್ಕಲ್ಮಷ ಮನಸ್ಸಿನಿಂದ ಅನ್ಯೋನ್ಯವಾಗಿರುತ್ತಾರೆ. ಬೆಳೆಯುತ್ತ ಜಾತಿ ಸಂಕೋಲೆಯಲ್ಲಿ ಬಂಧಿತರಾಗಿ ವೈಷಮ್ಯ ಕಟ್ಟಿಕೊಳ್ಳುತ್ತಾರೆ. ಗಣಪತಿ ಹೆಸರಿನಲ್ಲಿ ಇಂದು ಎಲ್ಲರೂ ಒಟ್ಟಾಗಿರುವುದು ಸಂತಸಕರ ಎಂದರು.             ಅನೇಕ ವರ್ಷಗಳಿಂದ ನೆನಗುದಿಗೆ ಬಿದಿದ್ದ ಹುಳಿಯಾರು-ಶಿರಾ ರಸ್ತೆಯ ಅಭಿವೃದ್ಧಿಗೆ ೧೯೩ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುವುದಿದ್ದು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು. ಸೆ. ೨೨ರಂದು ಬಿಡ್ ತೆರೆಯುವ ಪ್ರಕ್ರಿಯೆ ನಡೆಯಲಿದೆ ಎಂದರು.              ಗಡಿಗ್ರಾಮಗಳಾದ ದಸೂಡಿ, ದಬ್ಬಗುಂಟೆ ಗ್ರಾಮಗಳನ್ನು ಈ ಹಿಂದೆಯೇ ಸುವರ್ಣ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು ಈಗ ತಾಲ್ಲೂಕಿಗೆ ಎ

ಹುಳಿಯಾರು : ಸಂಭ್ರಮದ ಬಕ್ರೀದ್ ಆಚರಣೆ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹುಳಿಯಾರಿನ ಈದ್ಗಾಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ ನಂತರ ಧರ್ಮ ಗುರುಗಳಾದ ಮೌಲಾನ ಹಜರತ್ ವಸೀಮ್ ಅವರು ಹಬ್ಬದ ಸಂದೇಶ ನೀಡಿದರು . ಹುಳಿಯಾರು : ದಾನ, ಧರ್ಮದ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ಹುಳಿಯಾರು ಪಟ್ಟಣ ಸೇರಿದಂತೆ ಯಾಕೂಬ್ ಸಾಬ್ ಪಾಳ್ಯ , ಬಳ್ಳೆಕಟ್ಟೆ ,ಕಂಪನಹಳ್ಳಿ,ಯಗಚಿಹಳ್ಳಿ, ಗಾಣಾಧಾಳು ಮುಂತಾದೆಡೆ ಮುಸ್ಲಿಂ ಬಾಂಧವರು ಮಂಗಳವಾರದಂದು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.               ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಎಲ್ಲರೂ ಮುಂಜಾನೆಯೇ ಹೊಸಬಟ್ಟೆ ತೊಟ್ಟು ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಈದ್ಗಾಮೈದಾನಕ್ಕೆ ಆಗಮಿಸಿದರು.ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಮೌಲಾನ ಹಜರತ್ ವಸೀಮ್ ಅವರು ಹಬ್ಬದ ಸಂದೇಶ ನೀಡಿ ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು.ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ,ಒಳ್ಳೆತನವಾಗಿ ಬಾಳಿರಿ ಎಂದು ಕರೆ ನೀಡಿದರು.          ಈ ಸಂದರ್ಭದಲ್ಲಿ ನೂರಾನಿ ಮಸೀದಿಯ ಮುತುವಲ್ಲಿ ಬೈಜು ಸಾಬ್,ಬಿಲಾಲ್ ಮಸೀದಿಯ ಮುತುವಲ್ಲಿ ಇಸ್ಮಾಯಲ್ ಸಾಬ್,ಜಹೀರ್ ಸಾಬ್,ಹಬೂಬಕ್ಕರ್ ಸಿದ್ದೀಕ್,ನಂದಿಹಳ್ಳಿ ಶಿವಣ್ಣ , ಮುಸ್ಲಿಂ ಸಮುದಾಯದ ಮುಖಂಡರುಗಳ

ಚಿಕ್ಕನಾಯಕನಹಳ್ಳಿಯಲ್ಲಿ ಡಾ. ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರಿಗೆ ಸನ್ಮಾನ

ಚಿಕ್ಕನಾಯಕನಹಳ್ಳಿಯಲ್ಲಿನ ಕನ್ನಡ ಸಂಘದ ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಸೆ.15 ರ ಗುರುವಾರದಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರ ೧೨೯ನೇ ಜನ್ಮದಿನ ಹಾಗೂ ಶಿಕ್ಷಕರ ಸನ್ಮಾನವನ್ನು ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸುವರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಧ್ವಜರೋಹಣ ನೆರವೇರಿಸುವರು. ಸಂಸದ ಎಸ್ .ಪಿ.ಮುದ್ದಹನುಮೇಗೌಡ ಡಾ.ರಾಧಾಕೃಷ್ಣನ್ ಭಾವಚಿತ್ರ ಅನಾವರಣ ಮಾಡುವರು. ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸುವರು. ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು . ತುಮಕೂರು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಶಿಕ್ಷಕರ ಕ್ರೀಡಾಕೂಟದಲ್ಲಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಬೆಂಗಳೂರಿನ ಇಸ್ರೋ ಹಿರಿಯ ವಿಜ್ಞಾನಿ ಎಚ್. ಎನ್.ಸುರೇಶ್‌ಕುಮಾರ್ ಮಾತನಾಡುವರು. ತಾಪಂ ಅಧ್ಯಕ್ಷೆ ಹೊನ್ನಮ್ಮ ಶೇಷಯ್ಯ ಶಿಕ್ಷಕ ದಿನಾಚರಣೆ ಸಮಿತಿಯಿಂದ ಆಯ್ಕೆಯಾದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು.

ಯಳನಾಡು ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಹಳ್ಳಿಯಲ್ಲಿ ನೀರಿಗಾಗಿ ಪ್ರತಿಭಟನೆ

ನಿರ್ಲಕ್ಷಿಸಿದಲ್ಲಿ ಪಂಚಾಯ್ತಿಗೆ ಬೀಗ ಜಡಿಯುವ ಎಚ್ಚರಿಕೆ ---------------------------------------- ಹುಳಿಯಾರು:ಹೋಬಳಿಯ ಯಳನಾಡು ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಹಳ್ಳಿ ಮಜುರೆ ಮೇಗಲಮನೆ ತೋಟ ಹಾಗೂ ಹುಚ್ಚೇಗೌಡರ ಪಾಳ್ಯದಲ್ಲಿ ಹ್ಯಾ೦ಡ್ ಪ೦ಪ್ ಕೆಟ್ಟುಹೋಗಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗಿದ್ದರೂ ಕೆಟ್ಟುಹೋಗಿರುವ ಹ್ಯಾ೦ಡ್ ಪ೦ಪ್‌ನ್ನು ಕಳೆದ ೪ ತಿ೦ಗಳಿ೦ದ ದುರಸ್ತಿ ಮಾಡಿಸದೇ ನಿರ್ಲಕ್ಷಿಸಿರುವ ಯಳನಾಡು ಗ್ರಾಪ೦ ಅಧ್ಯಕ್ಷರ ವಿರುದ್ದ ಗ್ರಾಪ೦ ಸದಸ್ಯೆ ಪುಷ್ಪ ಹಾಗೂ ಅಲ್ಲಿನ ಗ್ರಾಮಸ್ಥರು ಖಾಲಿ ಕೊಡ ಹಾಗೂ ಜಾನುವಾರುಗಳೊ೦ದಿಗೆ ವಿನೂತನವಾಗಿ ಪ್ರತಿಭಟಿಸಿದರು. ಹುಳಿಯಾರು ಸಮೀಪದ ತಮ್ಮಡಿಹಳಿ ಮೇಗಲಮನೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಮಾಡಿದರು.                     ತಮ್ಮಡಿಹಳ್ಳಿ ಮಜುರೆ ಮೇಗಲಮನೆ ತೊಟದಲ್ಲಿ ಸುಮಾರು ೨೫ ಕ್ಕೊ ಹೆಚ್ಚು ಕುಟು೦ಬಗಳು ವಾಸಿಸುತ್ತಿದ್ದು ಕುಡಿಯುವ ನೀರಿಗಾಗಿ ಇದ್ದ ಹ್ಯಾ೦ಡ್ ಪ೦ಪು ಕಳೆದ ೪ ತಿ೦ಗಳ ಹಿ೦ದೆ ಕೆಟ್ಟು ಹೋಗಿದ್ದು ಇಲ್ಲಿನ ನಾಗರೀಕರು ಪ್ರತೀ ದಿನವೊ ಕುಡಿಯುವ ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪ೦ ಸದಸ್ಯೆ ಪುಷ್ಪ ರವರು ಪ೦ಚಾಯಿತಿ ಸಭೆಯಲ್ಲಿ ಹ್ಯಾ೦ಡ್ ಪ೦ಪ್ ರಿಪೇರಿ ಮಾಡಿಸಲು ಬಹಳಷ್ಟು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಹ್ಯಾ೦ಡ್ ಪ೦ಪ್ ನಿ೦ದ ೨ ಲೆ೦ತ್ ಪೈಪುಗಳನ್ನು ಹೊರತೆಗೆದಿದ್ದು ಬಿಟ್ಟ

ಒತ್ತಡಕ್ಕೆ ಮಣಿದು ಶಿಕ್ಷಕರ ಕೌನ್ಸೆಲ್ಲಿಂಗ್ ಪಟ್ಟಿಯಲ್ಲಿ ಮಾರ್ಪಾಡು:ತನಿಖೆಗೆ ಸಾಸಲು ಸತೀಶ್ ಆಗ್ರಹ

ಶಿಕ್ಷಕರ ಕೌನ್ಸೆಲ್ಲಿಂಗ್ ಪಟ್ಟಿಯಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕೆಂದು ಹುಳಿಯಾರಿನ ಪ್ರವಾಸಿಮಂದಿರದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಾಸಲು ಸತೀಶ್ ಪತ್ರಿಕಾಗೋಷ್ಟಿ ನಡೆಸಿದರು. ಹುಳಿಯಾರು :ತಾಲ್ಲೂಕಿನಲ್ಲಿ ಗಡಿಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಶಿಕ್ಷಕರ ಕೌನ್ಸೆಲ್ಲಿಂಗ್ ಮಾಡಿ ಕೊರತೆಯಿದ್ದ ಹುದ್ದೆಗಳಿಗೆ ಶಿಕ್ಷಕರನ್ನು ನಿಯೋಜನೆ ಮೂಲಕ ವರ್ಗಾವಣೆ ಮಾಡಲಾಗಿದ್ದ ಪಟ್ಟಿಯಲ್ಲಿ ಕೆಲವು ಪ್ರಭಾವಿ ಶಿಕ್ಷಕರ ಮರ್ಜಿಗೆ,ಒತ್ತಡಕ್ಕೆ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆಲ ರಾಜಕೀಯ ಬೆಂಬಲಿತ ಶಿಕ್ಷಕರ ವರ್ಗಾವಣೆಯನ್ನು ತಡೆಹಿಡಿದ್ದಿದ್ದಾರೆಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಾಸಲು ಸತೀಶ್ ಆರೋಪಿಸಿದ್ದಾರೆ.              ಹುಳಿಯಾರಿನ ಪ್ರವಾಸಿಮಂದಿರದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಅವರು ತಾಲ್ಲೂಕಿನ ಗಡಿಭಾಗದ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಸಮರ್ಥರಾಗಿದ್ದು ಶಾಸಕರ ಹಾಗೂ ಕೆಲ ಅರೆ ರಾಜಕಾರಣಿ ಶಿಕ್ಷಕರ ತಾಳಕ್ಕೆ ತಕ್ಕಂತೆ ಕುಣಿದು ಡೆಪ್ಯೂಟೇಷನ್ ಪಟ್ಟಿಯಲ್ಲಿ ಅದಲು ಬದಲು ಮಾಡಿ ತಮಗೆ ಬೇಕಾದಂತೆ ಮಾರ್ಪಾಟು ಮಾಡಿದ್ದಾರೆ.ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಗಡಿಭಾಗಕ್ಕೆ ವರ್ಗಾವಣೆ ಮಾಡಿದ್ದ ಕೆಲ ಶಿಕ್ಷಕರನ್ನು ಹಾಗೆಯೇ ಉಳಿಸಿದ್ದಾರೆ ಎಂದು

ಪತ್ತಿನ ಸಂಘಗಳು ಗ್ರಾಮೀಣ ಪ್ರದೇಶದ ಜನರ ಕಾಮಧೇನುವಾಗಬೇಕು:ಎಂವಿಎನ್

ಹುಳಿಯಾರು: ಬ್ಯಾಂಕ್,ಪತ್ತಿನ ಸಂಘಗಳು ವ್ಯವಹಾರಿಕವಾಗಿ ಲಾಭದಾಯಕವಾಗಿ ನಡೆಯುವುದರ ಜೊತೆಗೆ ಹಣದ ಅಗತ್ಯತೆಯಿರುವವರಿಗೆ ,ದುರ್ಭಲರಿಗೆ ಅವಶ್ಯಕತೆ ಪೂರೈಸುವ ಕಾಮಧೇನುವಾಗಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ ರಾವ್ ಅಭಿಪ್ರಾಯಪಟ್ಟರು. ಹುಳಿಯಾರು ಪಟ್ಟಣದ ಗಾಯತ್ರಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಸಾಹಿತಿ ಎಂ.ವಿ.ನಾಗರಾಜ್ ರಾವ್ ಮಾತನಾಡಿದರು.          ಹುಳಿಯಾರಿನಲ್ಲಿ ಶನಿವಾರದಂದು ನಡೆದ ಗಾಯತ್ರಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಶ್ರೀಮಂತರ ಹಣವನ್ನು ಬ್ಯಾಂಕುಗಳು ಹತ್ತಾರು ಜನಕ್ಕೆ ಸಾಲ ನೀಡುವುದರ ಮುಖಾಂತರ ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದ್ದು ,ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮುಖಾಂತರ ಬ್ಯಾಂಕಿನ ಅಭಿವೃದ್ಧಿಗೆ ನೆರವಾಗಬೇಕು ಎಂದರು.ಶೇರುದಾರರ ನಂಬಿಕೆ ,ವಿಶ್ವಾಸ ಬೆಳಸಿಕೊಂಡಲ್ಲಿ ಮಾತ್ರವೇ ಪತ್ತಿನ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯವೆಂದರು.         ಸೇವಾ ಸಂಘದಲ್ಲಿ ಅಭಿಪ್ರಾಯ,ಭಿನ್ನಾಭಿಪ್ರಾಯ,ಟೀಕೆ ಟಿಪ್ಪಣೆ ಸಹಜವಾಗಿದ್ದು ಟೀಕೆ ಎದುರಿಸಿ ಪ್ರಶಂಸೆ ಸ್ವೀಕರಿಸಿದಲ್ಲಿ ಮಾತ್ರವೇ ಬೆಳವಣಿಗೆ ಸಾಧ್ಯ ಎಂದು ಕಿವಿಮಾತು ಹೇಳಿದರು.           ತುಮಕೂರಿನ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್.ರಮೇಶ್ ಮಾತನಾಡಿ ಹುಳಿಯಾರಿನ ಗಾಯತ್ರಿ ಪತ್ತಿನ ಸಹಕಾರ ಸಂಘ ಪ್ರಾರಂಭವಾದ ಅಲ್ಪ ಅವಧಿಯಲ