ಶತಮಾನದ ಹೆಗ್ಗಳಿಕೆ ಹೊಂದಿರುವ ಸೊಸೈಟಿಯನ್ನು ಆರ್ಥಿಕವಾಗಿ ಬಲಪಡಿಸಲು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದು ಮತ್ತಷ್ಟು ಶೇರುದಾರರನ್ನು ಮಾಡಿಕೊಳ್ಳುವುದರ ಜೊತೆಗೆ ಸಂಘದಲ್ಲಿನ ಎಲ್ಲಾ ಸದಸ್ಯರ ಉಪಯೋಗಕ್ಕಾಗಿ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ದೇವಾನಂದ್ ತಿಳಿಸಿದರು.
ಹುಳಿಯಾರಿನ ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪಿಗ್ನಿ ಏಜೆಂಟರನ್ನು ನೇಮಿಸಿ ದಿನ ನಿತ್ಯ ಹಣ ಸಂಗ್ರಹಿಸುವ ಮೂಲಕ ಅವಶ್ಯಕತೆ ಇರುವ ಸದಸ್ಯರಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲ ನೀಡಲಾಗುವುದು ಎಂದರು.
ಸಾಲ ಪಡೆದಿರುವ ಸದಸ್ಯರು ಕಾಲಮಿತಿಯೊಳಗೆ ಸಾಲ ಮರುಪಾವತಿ ಮಾಡಿ ಸಹಕಾರ ಸಂಘದ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದ ಅವರು ನಾನಾ ಸಬೂಬುಗಳನ್ನು ಹೇಳಿಕೊಂಡು ಸಾಲ ಮರುಪಾವತಿ ಮಾಡದಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಹು.ಕೇ.ವಿಶ್ವನಾಥ್, ನಿರ್ದೇಶಕರುಗಳಾದ ಕುಮಾರ್,ಬಡ್ಡಿ ಪುಟಣ್ಣ, ಚೇತನ್, ಸಿದ್ದಗಂಗಮ್ಮ, ವಿಜಯಲಕ್ಷ್ಮಿ ,ಶಿವನಂಜಪ್ಪ, ಪ್ರದೀಪ್ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ