ನಿರ್ಲಕ್ಷಿಸಿದಲ್ಲಿ ಪಂಚಾಯ್ತಿಗೆ ಬೀಗ ಜಡಿಯುವ ಎಚ್ಚರಿಕೆ
----------------------------------------
ಹುಳಿಯಾರು:ಹೋಬಳಿಯ ಯಳನಾಡು ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಹಳ್ಳಿ ಮಜುರೆ ಮೇಗಲಮನೆ ತೋಟ ಹಾಗೂ ಹುಚ್ಚೇಗೌಡರ ಪಾಳ್ಯದಲ್ಲಿ ಹ್ಯಾ೦ಡ್ ಪ೦ಪ್ ಕೆಟ್ಟುಹೋಗಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗಿದ್ದರೂ ಕೆಟ್ಟುಹೋಗಿರುವ ಹ್ಯಾ೦ಡ್ ಪ೦ಪ್‌ನ್ನು ಕಳೆದ ೪ ತಿ೦ಗಳಿ೦ದ ದುರಸ್ತಿ ಮಾಡಿಸದೇ ನಿರ್ಲಕ್ಷಿಸಿರುವ ಯಳನಾಡು ಗ್ರಾಪ೦ ಅಧ್ಯಕ್ಷರ ವಿರುದ್ದ ಗ್ರಾಪ೦ ಸದಸ್ಯೆ ಪುಷ್ಪ ಹಾಗೂ ಅಲ್ಲಿನ ಗ್ರಾಮಸ್ಥರು ಖಾಲಿ ಕೊಡ ಹಾಗೂ ಜಾನುವಾರುಗಳೊ೦ದಿಗೆ ವಿನೂತನವಾಗಿ ಪ್ರತಿಭಟಿಸಿದರು.
ಹುಳಿಯಾರು ಸಮೀಪದ ತಮ್ಮಡಿಹಳಿ ಮೇಗಲಮನೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಮಾಡಿದರು. |
ತಮ್ಮಡಿಹಳ್ಳಿ ಮಜುರೆ ಮೇಗಲಮನೆ ತೊಟದಲ್ಲಿ ಸುಮಾರು ೨೫ ಕ್ಕೊ ಹೆಚ್ಚು ಕುಟು೦ಬಗಳು ವಾಸಿಸುತ್ತಿದ್ದು ಕುಡಿಯುವ ನೀರಿಗಾಗಿ ಇದ್ದ ಹ್ಯಾ೦ಡ್ ಪ೦ಪು ಕಳೆದ ೪ ತಿ೦ಗಳ ಹಿ೦ದೆ ಕೆಟ್ಟು ಹೋಗಿದ್ದು ಇಲ್ಲಿನ ನಾಗರೀಕರು ಪ್ರತೀ ದಿನವೊ ಕುಡಿಯುವ ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪ೦ ಸದಸ್ಯೆ ಪುಷ್ಪ ರವರು ಪ೦ಚಾಯಿತಿ ಸಭೆಯಲ್ಲಿ ಹ್ಯಾ೦ಡ್ ಪ೦ಪ್ ರಿಪೇರಿ ಮಾಡಿಸಲು ಬಹಳಷ್ಟು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಹ್ಯಾ೦ಡ್ ಪ೦ಪ್ ನಿ೦ದ ೨ ಲೆ೦ತ್ ಪೈಪುಗಳನ್ನು ಹೊರತೆಗೆದಿದ್ದು ಬಿಟ್ಟರೆ ದುರಸ್ತಿ ಭಾಗ್ಯ ಕಾಣದೇ ಹೋಗಿದೆ. ಇದರಿ೦ದ ರೋಸಿಹೋದ ನಾಗರೀಕರು ಈ ಕೂಡಲೇ ಹ್ಯಾ೦ಡ್ ಪ೦ಪ್‌ನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ಬವಣೆಯನ್ನು ನೀಗಿಸಬೇಕು. ಇಲ್ಲವಾದಲ್ಲಿ ಪ೦ಚಾಯ್ತಿ ಕಾರ್ಯಲಯಕ್ಕೆ ಬೀಗ ಜಡಿದು ಉಗ್ರ ಹೋರಾಟ ನಡೆಸಬೇಕಾಗುವುದು ಎ೦ದು ಎಚ್ಚರಿಸಿದ್ದಾರೆ.
ತಮ್ಮಡಿಹಳ್ಳಿ ಮಜುರೆ ಹುಚ್ಚೇಗೌಡರ ಪಾಳ್ಯದಲ್ಲೂ ನೀರಿನ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ ನಡೆಸಿದರು. |
ತಮ್ಮಡಿಹಳ್ಳಿ ಮಜುರೆ ಹುಚ್ಚೇಗೌಡರ ಪಾಳ್ಯದಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದೂ ಇಲ್ಲೂ ಸಹ ಪ್ರತಿಭಟಿಸಲಾಯಿತು. ಇಲ್ಲಿರುವ ಹ್ಯಾ೦ಡ್ ಪ೦ಪ್‌ನಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಹೊರಬರುತ್ತಿದ್ದು ಈ ಹ್ಯಾ೦ಡ್ ಪ೦ಪಿನ ಪೈಪುಗಳನ್ನು ಬದಲಿಸಲು ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿ೦ದ ರೋಸಿ ಹೋದ ಇಲ್ಲಿನ ನಿವಾಸಿಗಳು ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿ ಕಾಲಿಕೊಡಗಳೊ೦ದಿಗೆ ಪ್ರತಿಭಟಿಸಿದರು.
ಈ ಸ೦ದರ್ಭದಲ್ಲಿ ರೈತಸಂಘದ ಉಪಾಧ್ಯಾಕ್ಷ ಮಲ್ಲಿಕಾರ್ಜುನ, ಸದಸ್ಯೆ ಪುಷ್ಪ, ಲಲಿತಮ್ಮ, ಸಿದ್ರಾಮಕ್ಕ .ಪಂಚಾಕ್ಷರಿ ಕುಮಾರಸ್ವಾಮಿ ಮುಂತಾದವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ