ಹೊಸಹಳ್ಳಿ ಚಂದ್ರಣ್ಣ ಬಣದ ತುಮಕೂರು ಜಿಲ್ಲಾ ರೈತ ಸಂಘದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹೋಬಳಿವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಹೊಸಕೆರೆ ಆನಂದ್, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಕೆ.ಕುಮಾರಯ್ಯ, ಉಪಾಧ್ಯಕ್ಷರಾಗಿ ಶೆಟ್ಟಿಕೆರೆಶಂಕರಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಹುಳಿಯಾರು ಹೋಬಳಿ ಗೌರವ ಅಧ್ಯಕ್ಷರಾಗಿ ಸೋಮಜ್ಜನಪಾಳ್ಯದ ಹೆಚ್.ಎಸ್.ಕರಿಯಪ್ಪ, ಕಾರ್ಯದರ್ಶಿಯಾಗಿ ಷೇಕ್ ಮಹಬೂಬ್, ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಪಂಕಜಾಕ್ಷಮ್ಮ ಅವರನ್ನು ಆಯ್ಕೆ ಮಾಡಲಾಯಿತು.
ಹಂದನಕೆರೆ ಹೋಬಳಿ ಅಧ್ಯಕ್ಷರಾಗಿ ಹಳೆಗೊಲ್ಲರಹಟ್ಟಿ ಸಿದ್ಧಲಿಂಗಪ್ಪ, ಉಪ್ಪಾಧ್ಯಕ್ಷರಾಗಿ ಈರಣ್ಣ, ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಶಿವಮ್ಮ ಆಯ್ಕೆಯಾದರು.
ಕಂದಿಕೆರೆ ಹೋಬಳಿ ಅಧ್ಯಕ್ಷರಾಗಿ ಮಲ್ಲಪ್ಪ ಹಾಗೂ ಶೆಟ್ಟಿಕೆರೆ ಹೋಬಳಿ ಅಧ್ಯಕ್ಷರಾಗಿ ಸದಾನಂದ್, ಉಪಾಧ್ಯಕ್ಷರಾಗಿ ಶಿವಣ್ಣ, ಕಾರ್ಯದರ್ಶಿಯಾಗಿ ಕೆಂಪರಾಜು ಆಯ್ಕೆಯಾದರು.
ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾಧ್ಯಕ್ಷ ಹೊಸಹಳ್ಳಿಚಂದ್ರಣ್ಣ, ಸೃಜನ ಮಹಿಳಾ ಘಟಕದ ಜಯಲಕ್ಷಮ್ಮ, ತಾಲೂಕು ಅಧ್ಯಕ್ಷ ಕೆ.ಈಶ್ವರಪ್ಪ,ಶಂಕ್ರಯ್ಯ, ಕೃಷ್ಣಪ್ಪ, ಈರಣ್ಣ, ಧರಣಿಕುಮಾರ್, ಬೀರಲಿಂಗಯ್ಯ, ಅರುಣ್‌ಕುಮಾರ್, ಬುದ್ದಿಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ