ವಿಷಯಕ್ಕೆ ಹೋಗಿ

ವಿದ್ಯಾವಾರಿಧಿಯಲ್ಲಿ ಸಂಭ್ರಮದ ಕೃಷ್ಣಜನ್ಮಾಷ್ಠಮಿ


ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಆವರಣದಲ್ಲಿ ನಡೆದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮವನ್ನು ಪುಟಾಣಿ ಮಕ್ಕಳು ಚಾಲನೆ ನೀಡಿದರು.
ಹುಳಿಯಾರು: ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶ್ರೀಕೃಷ್ಣಜನ್ಮಾಷ್ಠಮಿ ಅಂಗವಾಗಿ ಶಾಲಾ ಮಕ್ಕಳಿಂದ ವೇಷಭೂಷಣ ಸ್ಪರ್ಧೆ ,ನೃತ್ಯ ಮುಂತಾದ ಕಾರ್ಯಕ್ರಮಗಳು ನಡೆಯಿತು. ಪುಟಾಣಿ ಮಕ್ಕಳು ಬಗೆಬಗೆಯ ವೇಷಭೂಷಣವನ್ನ ತೊಟ್ಟು ನಡೆಸಿದ ನೃತ್ಯ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಕೃಷ್ಣ ಸುಧಾಮ ನಾಟಕ ಪ್ರದರ್ಶನ ನಡೆಯಿತು. ಎಲ್.ಕೆ.ಜಿ ಮತ್ತು ಯು.ಕೆ.ಜಿ. ಮಕ್ಕಳು ಶ್ರೀಕೃಷ್ಣನ ವೇಷಭೂಷಣವನ್ನ ತೊಟ್ಟು ನಡೆಸಿದ ಸಂಗೀತದ ನೃತ್ಯ ಪ್ರದರ್ಶನಕ್ಕೆ ಹೈಸ್ಕೂಲ್ ವಿದ್ಯಾರ್ಥಿನಿಯರು ಸಹಾ ಜೊತೆಗೂಡಿ ನೀಡಿದ ನೃತ್ಯಪ್ರದರ್ಶನ ನೋಡುಗರ ಮನಸೂರೆಗೊಡಿತು.


ಕಾರ್ಯಕ್ರಮದಲ್ಲಿ ವಿದ್ಯಾವಾರಿಧಿ ಶಾಲೆಯ ಕಾರ್ಯದರ್ಶಿ ಕವಿತಕಿರಣ್‌, ಪ್ರಾಂಶುಪಾಲ ಮಹದೇವ್ ಸೇರಿದಂತೆ ಶಿಕ್ಷಕವೃಂದ, ಮಕ್ಕಳ ಪೋಷಕರು, ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳು