ಹುಳಿಯಾರು:ಹೋಬಳಿಯ ಹೊಯ್ಸಳಕಟ್ಟೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲ್ಲೇನಹಳ್ಳಿ ಗ್ರಾಮದ ಕೊಳವೆಬಾವಿಯ ಪಂಪ್ ಸೆಟ್ಟನ್ನು ತೆಗೆದು ಬೇರೆ ಗ್ರಾಮಕ್ಕೆ ಅಳವಡಿಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪಂಚಾಯ್ತಿಗೆ ನುಗ್ಗಿ ಬೀಗ ಜಡಿದ ಘಟನೆ ಇದೀಗ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು ಪಿಡಿಓ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸುವ ಮೂಲಕ ತಿರುವು ಪಡೆದುಕೊಂಡಿದೆ.
ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳಿಗೆ ಕರ್ತವ್ಯ ಪಾಲನೆಗೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಹೊಯ್ಸಳಕಟ್ಟೆ ಗ್ರಾಮಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ೧೪ ಜನ ಕಲ್ಲೇನಹಳ್ಳಿ ಗ್ರಾಮಸ್ಥರ ಮೇಲೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ಕಲ್ಲೇನಹಳ್ಳಿ ಗ್ರಾಮದ 1] ತಿಮ್ಮಯ್ಯ ಬಿನ್ ತಿಮ್ಮಯ್ಯ, 2] ನವೀನ್ ಬಿನ್ ರಂಗನಾಥಪ್ಪ, 3] ಮಂಜುನಾಥ ಬಿನ್ ಕರಿಯಪ್ಪ, 4] ಕೃಷ್ಣಮೂರ್ತಿ ಬಿನ್ ಸಿದ್ದಯ್ಯ, 5] ಅಂಗಡಿ ಗಂಗಣ್ಣ ಬಿನ್ ರಂಗಣ್ಣ, 6] ನವೀನ್ [ಕುಂಭಿ] ಬಿನ್ ಗೋವಿಂದಪ್ಪ, 7] ಗಿರೀಶ್ ಬಿನ್ ಮಂಜಣ್ಣ, 8] ಕೇಶವಮೂರ್ತಿ ಬಿನ್ ಕಂಬಯ್ಯ, 9] ಶಿವಣ್ಣ [ಅಕ್ಕಿ] ಬಿನ್ ಮಿಲ್ ಗೋವಿಂದಪ್ಪ, 10] ಕಿಟ್ಟಪ್ಪ ಬಿನ್ ದೊಡ್ಡಮಾರಜ್ಜ, 11] ಈರಣ್ಣ ಬಿನ್ ದಾಸಜ್ಜರ ಭೂತಯ್ಯ, 12] ಬಸವರಾಜು ಬಿನ್ ಮುನಿರಂಗಯ್ಯ, 13] ಮಹದೇವ ಬಿನ್ ಕದುರಯ್ಯ, 14] ಪ್ರವೀಣ್ ಬಿನ್ ರಂಗನಾಥಪ್ಪ ಎಂಬ ೧೪ ಜನ ನಿವಾಸಿಗಳ ಗುಂಪೊಂದು ಸೆಪ್ಟೆಂಬರ್ ೧೭ ರಂದು ಗ್ರಾಪಂಕಚೇರಿಗೆ ಬಂದು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತನ್ನನ್ನು ಸೇರಿದಂತೆ ಎಸ್‌ಡಿಎ, ಕಂಪ್ಯೂಟರ್‌ಸಿಬ್ಬಂದಿಯನ್ನು ಕಚೇರಿಯಿಂದ ಅಕ್ರಮವಾಗಿ ಹೊರಗಡೆ ತಳ್ಳಿದ್ದಲ್ಲದೆ, ಕಚೇರಿಯಲ್ಲಿದ್ದ ಕುರ್ಚಿ, ಟೇಬಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಅಸ್ಥವ್ಯಸ್ಥಗೊಳಿಸಿ ಕಛೇರಿಯಲ್ಲಿದ್ದ ಕುರ್ಚಿಗಳನ್ನು ಹೊರಗಡೆ ತಂದು ಹೊಡೆದು ಹಾಕಿ ಗ್ರಾಮ ಪಂಚಾಯಿತಿಯ ಬಾಗಿಲು ಬೀಗ ಹಾಕಿದ್ದಾರೆ ಎಂಬುದು ಆರೋಪಿಸಿದ್ದಾರೆ.
ಈ ಸಮಯದಲ್ಲಿ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿಯ ಸದಸ್ಯರಾದ ರಂಗನಾಥ ರವರು, ಶ್ರೀಮತಿ ರತ್ನಮ್ಮ ರವರು, ನರಸಿಂಹಮೂರ್ತಿ ರವರು ಹಾಗೂ ಮಲ್ಲೇಶ್ ರವರು ಬಂದು ನಮ್ಮನ್ನು ಸಮಾಧಾನಪಡಿಸಿ ಗ್ರಾಪಂ ಕಚೇರಿಗೆ ಹಾಕಿದ್ದ ಬೀಗ ತೆಗೆಸಿದರು ಎಂದು ದೂರು ಸಲ್ಲಿಸಿರುವ ಅವರು ಈ ಗಲಾಟೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ಅಳವಡಿಸಿದ್ದ ಸಿ.ಸಿ ಕ್ಯಾಮರಾದಲ್ಲಿ ಎಲ್ಲಾ ಘಟನೆಗಳು ದಾಖಲಾಗಿರುತ್ತದೆ ಎಂದಿದ್ದಾರೆ.
ಹುಳಿಯಾರು ಪೊಲೀಸ್ ಠಾಣಾ ಮೊ.ನಂ 90/2016 ಕಲಂ:- 143, 147, 427, 448, 353, 504, ರೆ/ವಿ 149 ಐಪಿಸಿ ಅಡಿಯಲ್ಲಿ ಹುಳಿಯಾರು ಠಾಣಾಧಿಕಾರಿ ಪ್ರವೀಣ್‌ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ