ಇಂಗುಗುಂಡಿ ನಿರ್ಮಿಸದೆ ಬಿಲ್ ಪಾವತಿ ಮಾಡಕೊಂಡಿದ್ದಾರೆ ಎಂದು ಕೆಂಕೆರೆ ಗ್ರಾ.ಪಂ ವ್ಯಾಪ್ತಿಯ 3 ಮತ್ತು 4ನೇ ಬ್ಲಾಕಿನ ಮತದಾರರಾದ ಬಿ.ಪಿ.ಬಸವರಾಜು, ಕೆ.ವಿ.ಉದಯಕುಮಾರ್ ತಾ.ಪಂ ಇಒ ಅವರಿಗೆ ದೂರು ನೀಡಿದ್ದಾರೆ.
ಕೆಂಕೆರೆ ಗ್ರಾ.ಪಂ ವ್ಯಾಪ್ತಿಯ ಬರದಲೇಪಾಳ್ಯದ ಗೌರಮ್ಮನ ಮನೆಯ ಹತ್ತಿರದ ಕೊಳವೆ ಬಾವಿಗೆ ಇಂಗು ಗುಂಡಿ ನಿರ್ಮಿಸಲಾಗಿದೆ ಎಂದು ಸುಳ್ಳು ದಾಖಲೆ ನೀಡಿ ಹಣ ಪಡೆದಿದ್ದಾರೆ. 2013ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿ ನಡೆದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ