ಗಣಪತಿ ಹೆಸರಿನಲ್ಲಿ ಎಲ್ಲಾ ಜಾತಿ, ಧರ್ಮದವರು ಒಟ್ಟಿಗೆ ಸೇರಿ ಸಂಭ್ರಮಾಚರಣೆ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಳಿಯಾರು ಸಮೀಪದ ಯಗಚೀಹಳ್ಳಿಯಲ್ಲಿ ನಡೆದ ೨೪ನೇ ವರ್ಷದ ಗಣಪತಿ ಮಹೋತ್ಸವದಲ್ಲಿ ಅವರು ಮಾತನಾಡಿ ಮಕ್ಕಳು ಜಾತಿ, ಧರ್ಮ ಭೇದವಿಲ್ಲದೆ ನಿಷ್ಕಲ್ಮಷ ಮನಸ್ಸಿನಿಂದ ಅನ್ಯೋನ್ಯವಾಗಿರುತ್ತಾರೆ. ಬೆಳೆಯುತ್ತ ಜಾತಿ ಸಂಕೋಲೆಯಲ್ಲಿ ಬಂಧಿತರಾಗಿ ವೈಷಮ್ಯ ಕಟ್ಟಿಕೊಳ್ಳುತ್ತಾರೆ. ಗಣಪತಿ ಹೆಸರಿನಲ್ಲಿ ಇಂದು ಎಲ್ಲರೂ ಒಟ್ಟಾಗಿರುವುದು ಸಂತಸಕರ ಎಂದರು.
ಅನೇಕ ವರ್ಷಗಳಿಂದ ನೆನಗುದಿಗೆ ಬಿದಿದ್ದ ಹುಳಿಯಾರು-ಶಿರಾ ರಸ್ತೆಯ ಅಭಿವೃದ್ಧಿಗೆ ೧೯೩ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುವುದಿದ್ದು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು. ಸೆ. ೨೨ರಂದು ಬಿಡ್ ತೆರೆಯುವ ಪ್ರಕ್ರಿಯೆ ನಡೆಯಲಿದೆ ಎಂದರು.
ಗಡಿಗ್ರಾಮಗಳಾದ ದಸೂಡಿ, ದಬ್ಬಗುಂಟೆ ಗ್ರಾಮಗಳನ್ನು ಈ ಹಿಂದೆಯೇ ಸುವರ್ಣ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು ಈಗ ತಾಲ್ಲೂಕಿಗೆ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಲ್ಲಿ ನಾಲ್ಕು ಕೋಟಿ ರೂ. ಬಿಡುಗಡೆಯಾಗಿದ್ದು ಈ ಹಣದಲ್ಲಿ ಹೊಯ್ಸಲಕಟ್ಟೆ ಜಿಪಂ ವ್ಯಾಪ್ತಿಗೆ ಎರಡು ಕೋಟಿ ರೂ. ಮೀಸಲಿಟ್ಟು ಈ ಭಾಗದ ಹಳ್ಳಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾತನಾಡಿದರು.
ಹೊಯ್ಸಳಕಟ್ಟೆ ಜಿ.ಪಂ ಸದಸ್ಯ ಎಚ್.ಟಿ.ಮಹಾಲಿಂಗಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್, ವಕೀಲರಾದ ರಾಮಚಂದ್ರಯ್ಯ,ದಸೂಡಿ ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್,ಗ್ರಾಪಂ ಸದಸ್ಯ ಮಧುಸೂದನ್, ತಿಮ್ಮೇಗೌಡರು, ಜಗದೀಶ್, ಮುದ್ದುನಾಗರಾಜ್, ಹರೀಶ್, ಬೆಳ್ಳಾರರಾಜಣ್ಣ, ರೂಪಾ, ರಾಘವೇಂದ್ರ, ಶಿಲ್ಪಾ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ