ಹುಳಿಯಾರಿನ ಶ್ರೀಪ್ರಸನ್ನ ಗಣಪತಿ ಸೇವಾ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶ್ರೀತಿರುಮಲ-ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಹುಳಿಯಾರಿನ ಸಮಸ್ತ ಭಜನಾ ಮಂಡಳಿಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಆಹ್ವಾನಿತ ಭಜನಾ ಸ್ಪರ್ಧೆಯ ಸಮಾರೋಪ ಇಂದು(ಬುಧವಾರ)ಸಂಜೆ 6.30ಕ್ಕೆ ನಡೆಯಲಿದೆ.
ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಿರಾದ ಶಿಡ್ಲಕೋಣ ಮಠದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗಣಪತಿ ದೇವಸ್ಥಾನದ ಅಧ್ಯಕ್ಷ ಡಿ.ಎಸ್.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸುವರು. ಎಚ್.ಎಸ್.ರಮೇಶ್ ಸ್ವಾಮಿ, ಗಾಯಿತ್ರಿರಮೇಶ್, ಲಕ್ಷ್ಮೀಸುಬ್ರಹ್ಮಣ್ಯ, ಶಾಂತ, ರಾಜಕಮಲ, ಪ್ರತಿಭಾ, ರೇಖಾ, ಮಮತಾಗೋಪಾಲ್, ಸೌಮ್ಯಾ ಉಪಸ್ಥಿತರಿರುವರು.
ಸ್ಪರ್ಧೆಯ ವಿಜೇತರು ಯಾರೆಂದು ಇಂದಿನ ಭಜನೆಯಲ್ಲಿ ನಿರ್ಧಾರವಾಗಲಿದ್ದು ಭಜನಾ ಪ್ರಿಯರು ಹೆಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ