ಹುಳಿಯಾರು: ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಸಂಘ ಅಭಿವೃದ್ಧಿಯಾಗಲು ಸಾಧ್ಯ ಎಂದು ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ರಾಮಯ್ಯ ತಿಳಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ರಾಮಯ್ಯ ಮಾತನಾಡಿದರು. |
ಹುಳಿಯಾರಿನ ಡಿ.ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ೨೦೧೫-೧೬ನೇ ಸಾಲಿನ ಸರ್ವಸದ್ಯಸರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಡಿಕೈಗಾರಿಕೆ, ಸ್ವಉದ್ಯೋಗ ಗಳಿಗೆ ಸಾಲ ಸೌಲಭ್ಯ ಕಲ್ಪಿಸಿ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸದುದ್ದೇಶದಿಂದ ದೇವರಾಜ ಅರಸು ಸಂಘ ಸ್ಥಾಪಿಸಲಾಯಿತು. ನಮ್ಮ ಆಶಯದಂತೆ ಸಣ್ಣ ಕೈಗಾರಿಕೆ, ಗೂಡಂಗಡಿ, ತಳ್ಳುವ ಗಾಡಿ ವ್ಯಾಪಾರಸ್ಥರಿಗೆ ಸಾಲ ನೀಡಿದ್ದು ನೂರಾರು ಮಂದಿ ಇದರ ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.ಸಾಲ ಪಡೆದವರು ಪ್ರತಿಯೊಬ್ಬರೂ ನಿಗದಿತ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗಬೇಕೆಂದರು.ಪ್ರಸಕ್ತ ಸಾಲಿನಲ್ಲಿ ಸಾಲದ ಸುಳಿಯಲ್ಲೂ ಸಹ ೮೯೨೨೬ / ರೂ ಲಾಭಗಳಿಸಿದೆ ಎಂದರು
ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಪ್ರತಿ ವರ್ಷ ಸದಸ್ಯರಿಗೆ ೫೦ ಸಾವಿರದವರೆಗೆ ಸಾಲ ನೀಡುತ್ತಿದ್ದವು ಕೆಲ ಸದಸ್ಯರು ಹಣ ಕಟ್ಟದೆ ಸಂಘದ ಅಭಿವೃದ್ಧಿಗೆ ಗ್ರಹಣ ಬಡಿದಿತ್ತು. ಈಗ ಕಾರ್ಯಕಾರಿ ಮಂಡಳಿ ಮನವೊಲಿಸಿದ ಪರಿಣಾಮ ಮರುಪಾವತಿ ಸುಗಮವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪಿಗ್ನಿ ಕಟ್ಟುವ ವ್ಯಾಪರಸ್ಥರಿಗೆ ೧೦ ಸಾವಿರದಿಂದ ೫೦ ಸಾವಿರದವರೆಗೆ ಸಾಲ ನೀಡುವುದಾಗಿ ಭರವಸೆ ನೀಡಿದರು.
ಸದಸ್ಯರಾದ ಎಚ್.ಎಸ್.ಮಲ್ಲೇಶ್, ರಾಮು,ಸಣ್ಣರಂಗಯ್ಯ, ಮಂಜುನಾಥ್, ಎಚ್.ಆರ್.ಸುರೇಶ್, ಮುಕುಂದಯ್ಯ, ಅಂಜಮ್ಮ ಎಚ್.ಡಿ.ಚಂದ್ರಯ್ಯ, ನೌಕರ ವರ್ಗದ ಎಚ್.ಎನ್.ದಿವ್ಯ, ಪಿಗ್ನಿ ಏಜೆಂಟ್ ದಿವಾಕರ್, ರಘುನಾಥ್, ಯೋಗಿಶ್ ಸೇರಿದಂತೆ ಷೇರುದಾರರು ಮತ್ತಿತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ