ವಾರವಾದರೂ ತಲೆ ಹಾಕದ ನಿರ್ವಾಹಕರು
----------------------------------------------
ಹುಳಿಯಾರು:ಪಟ್ಟಣದ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಹಿಂಭಾಗದಲ್ಲಿನ ಶುದ್ಧಕುಡಿಯುವ ನೀರಿನ ಘಟಕದ ಮೋಟಾರ್ ಕೆಟ್ಟು ಬಾಗಿಲು ಮುಚ್ಚಿ ವಾರವಾದರೂ ಇತ್ತ ತಲೆಹಾಕದ ನಿರ್ವಾಹಕರ ವಿರುದ್ಧ ಗರಂ ಆಗಿರುವ ಬಳಕೆದಾರರು ಕೂಡಲೇ ಸಮಸ್ಯೆ ಸರಿಪಡಿಸಿ ಕುಡಿಯಲು ಶುದ್ಧವಾದ ನೀರನ್ನ ಪೂರೈಸದಿದ್ದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹುಳಿಯಾರಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಹಿಂಭಾಗದಲ್ಲಿನ ಶುದ್ಧನೀರಿನ ಘಟಕ ಸ್ಥಗಿತಗೊಂಡು ಬಾಗಿಲುಮುಚ್ಚಿರುವುದು |
ಶುದ್ಧ ನೀರಿನ ಈ ಘಟಕವನ್ನು ವಿಧಾನ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ನೀರಿ ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ಥಳಿಯ ಗ್ರಾ.ಪಂ. ಸಹಯೋಗದಲ್ಲಿ ಪ್ರಾರಂಭಿಸಲಾಗಿತ್ತು.
ನೀರು ಹಾಗೂ ಜಾಗ ಒದಗಿಸುವ ಜವಬ್ದಾರಿ ಗ್ರಾಪಂದಾದರೆ ನಿರ್ವಹಣೆ ಬೆಂಗಳೂರಿನ ಪೆಂಟಾಪ್ಯೂರ್ ಆರ್‌ಓ ಸಿಸ್ಟಮ್ಸ್ ಕಂಪನಿಯವರದ್ದು.ಈ ಶುದ್ಧನೀರಿನ ಘಟಕಕ್ಕೆ ದೇವಸ್ಥಾನದ ಕೋಳವೆ ಬಾವಿಯಿಂದ ಮೋಟರ್ ಮುಲಕ ನೀರು ಸರಬರಾಜಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಸದ್ಯ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದ ಮೋಟರ್ ಪಂಪ್ ಕೆಟ್ಟಿರುವುದರಿಂದ ಸರಿಪಡಿಸಲು ಯಾರೊಬ್ಬರು ಮುಂದಾಗದಿರುವುದರಿಂದ ಶುದ್ಧ ಕುಡಿಯುವ ನೀರಿನ ಘಟಕವೇ ಸ್ಥಗಿತಗೊಂಡಿದೆ.
ಮೋಟಾರ್ ಸರಿಪಡಿಸಬೇಕಾಗಿರುವವರು ಗ್ರಾಮಪಂಚಾಯ್ತಿಯವರು ಎಂದು ಘಟಕದ ನಿರ್ವಹಣೆ ಹೊತ್ತ ಬೆಂಗಳೂರಿನ ಪೆಂಟಾಪ್ಯೂರ್ ಕಂಪನಿಯವರು ಬೇಜವಬ್ದಾರಿ ಉತ್ತರ ನೀಡಿ ರಿಪೇರಿಗೆ ಮುಂದಾಗದಿರುವುದು ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.
ಆದರೆ ಗ್ರಾಮಪಂಚಾಯ್ತಿಯವರು ಇದಕ್ಕೂ ನಮಗೂ ಸಂಬಂಧವಿಲ್ಲ, ಜಾಗ ಹಾಗೂ ನೀರು ಕೊಡುವುದಷ್ಟೆ ನಮ್ಮ ಕೆಲಸ.ನೀರಿನ ದುಡ್ಡು ತೆಗೆದುಕೊಂಡ ಕಂಪನಿಯವರು ಈ ರೀತಿ ಉತ್ತರ ಕೊಟ್ಟು ಸಾರ್ವಜನಿಕರನ್ನು ದಿಕ್ಕುತಪ್ಪಿಸುತ್ತಿದ್ದಾರೆಂದು ಉತ್ತರಿಸುತ್ತಾರೆ.
ಒಟ್ಟಾರೆ ಶುದ್ಧ ನೀರಿನ ಘಟಕ ಸ್ಥಗಿತಗೊಂಡು ಒಂದು ವಾರ ಕಳೆದರೂ ಸಹ ಯಾರೊಬ್ಬರು ಸಹ ಸರಿಪಡಿಸಿ ಸಾರ್ವಜನಿಕರಿಗೆ ಶುದ್ಧ ನೀರು ಕೊಡುವಲ್ಲಿ ವಿಫಲರಾಗಿರುವುದು ಇವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ