(ಹತ್ಯೆಯಾದ ಹೊನ್ನಮ್ಮಳ ಮೃತ ದೇಹವನ್ನು ತಹಸೀಲ್ದಾರ್ ಕಾಂತರಾಜು ವೀಕ್ಷಿಸುತ್ತಿರುವುದು) (ಮನೆಗಳಿಗೆ ಬೀಗ ಜಡಿದು ಪರಾರಿಯಾಗಿರುವ ಗೋಪಾಲಪುರ ಗ್ರಾಮಸ್ಥರು) ( ಘಟನಾ ಸ್ಥಳಕ್ಕೆ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಹಾಗೂ ತಹಸೀಲ್ದಾರ್ ಕಾಂತರಾಜು ಭೇಟಿ ನೀಡಿರುವುದು) ( ಹೊನ್ನಮ್ಮಳ ಹತ್ಯೆಯನ್ನು ಖಂಡಿಸಿ ಹುಳಿಯಾರಿನಲ್ಲಿ ದಲಿತ ಸಂಘಟನೆಗಳು ರಸ್ತೆ ತಡೆ ನಡೆಸಿರುವುದು) ( ಹುಳಿಯಾರು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿರುವುದು) ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ ----------------------------------------- @ ಗ್ರಾಮದ ಪ್ರತಿ ಮನೆಗೂ ಬೀಗ @ ದಲಿತ ಸಂಘಟನೆಗಳಿಂದ ರಸ್ತೆ ತಡೆ @ ಇಬ್ಬರು ಎಎಸ್ಐ ಸಸ್ಪೆಂಡ್ @ ಗ್ರಾ.ಪಂ.ಅಧ್ಯಕ್ಷೆ ಸೇರಿ 10 ಮಂದಿ ಬಂಧನ @ ಬಿಜೆಪಿ ಮುಖಂಡರಿಂದ ಪ್ರತಿಭಟನೆಗೆ ಬೆಂಬಲ ----------------------------------------------------------------------------------------------- ಗ್ರಾಮಸ್ಥರು ಹಾಗೂ ಅದೇ ಊರಿನ ಮಹಿಳೆಯೊಬ್ಬರ ನಡುವಿನ ವಿವಾದ ಭುಗಿಲೆದ್ದು ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಇಪ್ಪತ್ತೈದು ಮೂವತ್ತು ಜನರ ಗುಂಪೊಂದು ಮಹಿಳೆಯೋರ್ವಳನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಹುಳಿಯಾರು ಸಮೀಪದ ಗೋಪಾಲಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ. ಹತ್ಯೆಯಾದ ನತದೃಷ್ಠೆಯನ್ನು ಡಾಬಾ ಹೊನ್ನಮ್ಮ ಎಂದು ಗುರುತಿಸಲಾಗಿದ್ದು ಈಕೆ ಬಿಜೆಪಿ ದಲಿತ ಮೋರ್ಚ ಉಪಾಧ್ಯಕ್ಷೆಯಾ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070