ಹುಳಿಯಾರು ಸುತ್ತಮುತ್ತ ಸುಮಾರು 1500 ನಾರಿನ ಹುರಿ ತಯಾರಿಸುವ ಕಾಮಿ೯ಕರಿದ್ದು ಇತ್ತೀಚಿನ ದಿನಗಳಲ್ಲಿ ಈ ಭಾಗದ ಬಹು ಮುಖ್ಯ ಹಾಗೂ ಪ್ರತಿಷ್ಠಿತ ಗುಡಿ ಕೈಗಾರಿಕೆಯಾಗಿದೆ. ಈ ವೃತ್ತಿಯ ಬಲವರ್ಧನೆಗೆ ಹುಳಿಯಾರಿನಲ್ಲಿ ಕಾಯರ್ ಪಾಕ್೯ ನಿಮಿ೯ಸುವುದು ಅಗತ್ಯ ಎಂದು ರಾಜ್ಯ ತೆಂಗು ನಾರು ಉತ್ಪಾದಕರ ಸಂಘದ ಉಪಾಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೋಚಕಟ್ಟೆ ತಾಂಡ್ಯದಲ್ಲಿ ಸೆಂಟ್ರಲ್ ಕಾಯರ್ ಬೋಡ್೯ನಿಂದ ನಾರು ಹುರಿ ತಯಾರಿಸುವ ಕಾಮಿ೯ಕರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಾ೯ರ ಮತ್ತು ಕಾಯರ್ ಬೋಡ್೯ ನಡುವಿನ ಸಂಪರ್ಕದ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ನಾರು ಹುರಿ ತಯಾರಕರಿಗೆ ಸಿಗಬಹುದಾದ ಹಣಕಾಸು ಸೇರಿದಂತೆ ಇನ್ನಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದ ಅವರು ಕಾಯರ್ ಬೋಡ್೯ ಈ ಬಗ್ಗೆ ಗಮನ ಹರಿಸಬೇಕೆಂದರು.
ಕೆನರಾ ಬ್ಯಾಂಕ್ ಮ್ಯಾನೇಜರ್ ಸತೀಶ್ ಅವರು ಮಾತನಾಡಿ ನಾರು ತಯಾರಕ ಉದ್ದಿಮೆಯನ್ನು ಆಧುನಿಕರಣ ಗೊಳಿಸಿ ಆಥಿ೯ಕ ಚೈತನ್ಯ ನೀಡುವ ಸಲುವಾಗಿ ಸಕಾ೯ರದ ನೀತಿ ಹಾಗೂ ಬ್ಯಾಂಕಿನ ನಿಯಮದನ್ವಯ ಸಾಲ ಸೌಲಭ್ಯ ವಿತರಿಸಲು ಕೆನರಾ ಬ್ಯಾಂಕ್ ಸದಾ ಸಿದ್ದ ಎಂದರು.
ಸೆಂಟ್ರಲ್ ಕಾಯರ್ ಬೋಡ್೯ ಇನ್ಸ್ಫೆಕ್ಟರ್ ಮಂಜುನಾಥ್ ಅವರು ಮಾತನಾಡಿ ಆಥಿ೯ಕ ಸಹಾಯ, ಸಹಾಯಧನ, ತರಬೇತಿ ಆಧುನಿಕ ಯಂತ್ರೋಪಕರಣಗಳು, ವಿದ್ಯುತ್ ಚಾಲಿತ ಹುರಿ ತಾಯಾರಿಸುವ ಯಂತ್ರಗಳು ಹೀಗೆ ಕಾಯರ್ ಬೋಡ್೯ನಿಂದ ಸಿಗಬಹುದಾದ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು.
ಹುಳಿಯಾರು ತೆ.ಉ.ಸಂಘದ ಅಧ್ಯಕ್ಷ ಹನುಮಾನಾಯ್ಕ, ಗ್ರಾಮ ಪಂಚಾಯ್ತಿ ಸದಸ್ಯ ಕಾಂತರಾಜು, ರೇವುನಾಯಕ್, ದಯಾಳ್, ಮಲ್ಲಿಕಾಜು೯ನ್, ರಾಮಕೃಷ್ಣನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ