ಹೊಸದುರ್ಗ ಸಮೀಪದ ಕೆಲ್ಲೋಡು ವೇದಾವತಿ ಹಳ್ಳದ ದಂಡೆಯಲ್ಲಿ ಜಗತ್ತಿನಲ್ಲಿಯೇ ಮೊಟ್ಟಮೊದಲ 35 ಅಡಿ ಎತ್ತರದ ಕನಕದಾಸರ ಏಕಶಿಲಾ ಮೂತಿ೯ ನಿಮಿ೯ಸ ಹೊರಟಿರುವ ಶ್ರೀಮಠಕ್ಕೆ ಉದಾರ ದೇಣಿಗೆ ನೀಡುವ ಮೂಲಕ ಹಾಲಮತ ಸಮಾಜದ ಭವ್ಯ ಪರಂಪರೆಯನ್ನು ಹಾಗೂ ಕನಕಸಾಹಿತ್ಯವನ್ನು ಜೀವಂತವಾಗಿ ಉಳಿಸುವ ಯೋಜನೆಗೆ ಎಲ್ಲರೂ ನೆರವಾಗಿರೆಂದು ಕನಕಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಮನವಿ ಮಾಡಿದರು.
ಹುಳಿಯಾರಿನ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮಠದ ಆವರಣದಲ್ಲಿ ದಿವಂಗತ ಎಚ್.ಎಸ್.ಸಿದ್ದಪ್ಪ, ಎಲ್.ಆರ್.ಲಕ್ಮಮ್ಮ, ಎಚ್.ಕೆ.ಚಂದ್ರಶೇಖರ್ ಅವರ ಸ್ವರಣಾರ್ಥ ಕೃಷಿ ಇಲಾಖೆಯ ಕೃಷ್ಣಪ್ಪ ಅವರು ನಿಮಿ೯ಸಿರುವ ಅತಿಥಿ ಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಮೂತಿ೯ ಕೆತ್ತನೆಗಾಗಿ ದೇವನಹಳ್ಳಿ ಬಂಡೆಯಿಂದ ಭಾರಿ ವಾಹನದಲ್ಲಿ ಬೃಹತ್ ಗಾತ್ರದ ಏಕಶಿಲೆಯನ್ನು ಕೆಲ್ಲೋಡಿಗೆ ಸಾಗಿಸಲಾಗಿದ್ದು ಇನ್ನೊಂದು ವಾರದಲ್ಲಿ ಕೆತ್ತನೆ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರಲ್ಲದೆ ಕನಕದಾಸರ ಏಕಶಿಲಾ ಮೂತಿ೯ ಪ್ರತಿಷ್ಠಾಪನಾ ಸ್ಥಳದಲ್ಲಿ ವಿಶಾಲವಾದ ಮಠ, ಸಮುದಾಯ ಭವನ, ಅತಿಥಿಗೃಹ, ಗುಡಿ ಹೀಗೆ ಸುಂದರವಾದ ಧಾಮಿ೯ಕ ಕೇಂದ್ರವನ್ನು ನಿಮಾ೯ಣ ಮಾಡುವ ಉದ್ದೇಶವಿದ್ದು ಶ್ರೀಮಂತರು, ಬುಡಕಟ್ಟಿನವರು, ಮಠದವರು ಒಂದೊಂದು ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.
ಜಾತಿಗಳೊಳಗೆ ವೈಮನಸ್ಯ ಹಾಗೂ ದ್ವೇಷ ಸಾಧಿಸುವ ಯಾವುದೇ ಸಮುದಾಯದ ಏಳಿಗೆ ಆಗಲಾರದು. ಈ ನಿಟ್ಟಿನಲ್ಲಿ ತಮ್ಮೊಳಗಿರುವ ಸಣ್ಣಪುಟ್ಟ ಕಹಿ ಘಟನೆಗಳನ್ನು ಮರೆತು ಸಂಘಟನೆಯ ಜೊತೆಗೆ ಸ್ನೇಹ, ವಿಶ್ವಾಸ, ಪ್ರೀತಿ, ಸಂಪತ್ತು ಹಂಚಿಕೊಂಡು ಬಾಳುವ ಮೂಲಕ ಸೌಹಾರ್ದ ವಾತಾವರಣ ನಿಮಾ೯ಣ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಪರಮೇಶ್, ಸಣ್ಣದುರ್ಗಣ್ಣ, ಸಿ.ರಾಮಯ್ಯ, ಬನಪ್ಪ, ಒಡೆಯರ್, ದುರ್ಗಣ್ಣ, ಗೋವಿಂದಪ್ಪ, ವರದರಾಜು, ಪೈಲ್ವಾನ್ ಜಯಣ್ಣ, ಶಿವಕುಮಾರ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ