ಒಂದೇ ಕುಟುಂಬದಲ್ಲಿ ಇಂದು ಒಬ್ಬರಿಗಿಂತ ಹೆಚ್ಚು ಮಂದಿ ಸಕಾ೯ರಿ ಹುದ್ದೆಯಲ್ಲಿ ಇರುವುದು ಸಹಜ. ಆದರೆ ಒಂದೇ ಮನೆಯಲ್ಲಿ ಅಪ್ಪ-ಮಗ ಇಬ್ಬರೂ ಒಂದೇ ವೃತ್ತಿಯಲ್ಲಿದ್ದು ನಿವೃತ್ತರಾಗಿ ಇಂದಿಗೂ ಪಿಂಚಣಿದಾರರಾಗಿರುವುದು ಅಪರೂಪ. ಇಂತಹ ಅಪರೂಪದ ಕುಟುಂಬ ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆಯಲ್ಲಿ ಇದೆ.
ಹೌದು! ತಂದೆ ವೀರಭದ್ರಯ್ಯ ಅವರು ಪೊಲೀಸ್ ಇಲಾಖೆ ಸೇರಿಕೊಂಡು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಧಪೇದಾರ್ ಆಗಿ ನಿವೃತ್ತಿ ಹೊಂದಿ ಸತತ 33 ವರ್ಷಗಳಿಂದ ಇಂದಿಗೂ ಪಿಂಚಣಿತೆಗೆದುಕೊಂಡರೆ ಇವರ ಮಗ ಪಿ.ಮಲ್ಲಿಕಾಜು೯ನಯ್ಯ ಅವರೂ ಸಹ ಅದೇ ಪೊಲೀಸ್ ಇಲಾಖೆ ಸೇರಿಕೊಂಡು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಧಪೇದಾರ್ ಆಗಿ ನಿವೃತ್ತಿ ಹೊಂದಿ ಕಳೆದ 3 ವರ್ಷಗಳಿಂದ ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ.
ವೀರಭದ್ರಪ್ಪನವರಿಗೆ 91 ವರ್ಷಗಳಾಗಿದ್ದರೆ ಮಲ್ಲಿಕಾಜು೯ನಯ್ಯ ಅವರಿಗೆ 61 ವರ್ಷಗಳಾಗಿದ್ದು ಒಂದೇ ಕುಟುಂಬದಲ್ಲಿ ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಸುಖಿ ಸಂಸಾರ ನೆಡೆಸುತ್ತಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ