ಇಂತಹ ಮದುವೆಗೆ ಗೋಡೆಕೆರೆ ಮಹಾಸಂಸ್ಥಾನದ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಶುಭ ಹಾರೈಸಿದರು. ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಸತಿ-ಪತಿ ಇಬ್ಬರೂ ಸಮಾನರು ಎಂಬ ಭಾವನೆಯಲ್ಲಿ ಅನ್ಯೋನತೆಯಿಂದಲೂ ಸಂಸಾರ ಜೀವನವನ್ನು ನಿರ್ವಹಿಸಬೇಕು ಎಂದು ನೂತನ ವಧು-ವರರಿಗೆ ಕಿವಿಮಾತು ಹೇಳಿದರು. ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹವೊಂದೆ ಮಾರ್ಗವಾಗಿದ್ದು ಬಡವರ ಹಾಗೂ ಮಧ್ಯಮ ವರ್ಗದವರ ಪಾಳಿಗೆ ವರದಾನವಾಗಿರುವ ಇಂತಹ ವಿವಾಹ ನಡೆಸುತ್ತಾ ಬಂದಿರುವ ರೋಟರಿ ಸಂಸ್ಥಯ ಕಾರ್ಯ ಶ್ಲಾಘನೀಯ ಎಂದರು.ಸತಿಪತಿಗಳು ಪರಸ್ಪರ ಅಥೈ೯ಸಿಕೊಂಡು ಕಲಹಕ್ಕೆ ಅವಕಾಶ ನೀಡದೆ ಸಾರ್ಥಕ ಜೀವನ ನಡೆಸಿ ಎಂದು ಆಶೀರ್ವಚಿಸಿದರು.
ರೋಟರಿ ಗೌ.ಅಧ್ಯಕ್ಷ ಟಿ.ಆರ್.ಲಕ್ಷ್ಮೀಕಾಂತ್, ಅಧ್ಯಕ್ಷ ಆರ್.ಗೋಪಿನಾಥ್, ರೋಟರಿ ಕಮ್ಯೂನಿಟಿ ಕಾಪ್೯ ರಮೇಶ್, ಯೋಗಿನಾರಾಯಣ ಐಟಿಐ ಕಾಲೇಜಿನ ಪ್ರಾಂಶುಪಾಲ ಬಸವರಾಜು, ದಾನಿಗಳಾದ ರಾಜಗೋಪಾಲಚಾರ್, ಟಿ.ಜಿ.ಮಂಜುನಾಥಗುಪ್ತ, ಎಸ್.ಎಸ್.ಮಲ್ಲಿಕಾಜು೯ನಯ್ಯ, ಟಿ.ಜಿ.ರಮಾಕಾಂತ್, ರಷ್ಮಿ ಎಲೆಕ್ಟ್ರಿಕಲ್ಸ್ ಶ್ರೀನಿವಾಸ್, ನಿವೃತ್ತ ಮುಖ್ಯ ಶಿಕ್ಷಕ ತಿಮ್ಮಯ್ಯ, ಶಿಕ್ಷಕ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಈ ಶುಭ ಸಂದರ್ಭದಲ್ಲಿ ಹುಳಿಯಾರು ಹೋಬಳಿಯಲ್ಲದೆ ಹೊಸದುರ್ಗ, ತುರುವೇಕೆರೆ, ಕಡೂರು, ಅರಸೀಕೆರೆ, ಶಿರಾ ತಾಲೂಕುಗಳ ಒಟ್ಟು 20 ವಧು-ವರರು ದಾಂಪತ್ಯ ಜೀವನ ಸ್ವೀಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ