ಪಟ್ಟಣದ ಸ್ಪಂದನ ನರ್ಸಿಂಗ್ ಹೋಂ ವತಿಯಿಂದ ಎಂಪಿಎಸ್ ಶಾಲಾ ಆವರಣ ಹಾಗೂ ಡಾ.ರಾಜ್ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ನಸಿ೯ಂಗ್ ಹೋಂನ ವೈದ್ಯ ಡಾ.ನಾಗರಾಜು ಶುದ್ದ ಪರಿಸರಕ್ಕೆ ಮರಗಳ ಕಾಣಿಕೆ ಅತ್ಯಮೂಲ್ಯವಾಗಿದ್ದು ದಿನೇ ದಿನೆ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿ ಪ್ರಕೃತಿಯಲ್ಲಿ ವೈಪರಿತ್ಯಗಳು ಉಂಟಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನರ್ಸಿಂಗ್ ಹೋಂ ವತಿಯಿಂದ ಇಂದು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಸಂಘ-ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ಹುಳಿಯಾರು ಪಟ್ಟಣದಾಧ್ಯಂತ ಸಸಿನೆಡುವ ಗುರಿ ಹೊಂದಲಾಗಿದೆ ಎಂದರು.
ಪ್ರತಿಯೊಬ್ಬರೂ ಕೇವಲ ಒಂದೇ ಒಂದು ಮರ ಬೆಳಸುವ ಸಂಕಲ್ಪ ಮಾಡಿದರೂ ಸಾಕೂ ಗ್ಲೋಬಲ್ ವಾಮಿ೯ಂಗ್ ಎಂಬ ಭೂತವನ್ನು ಬಡಿದೋಡಿಸಬಹುದು ಎಂದು ಸಿದ್ಧಶ್ರೀ ಕ್ಲೀನಿಕ್ ನ ಡಾ.ವೈ.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ಜಿ.ಪಂ.ಸದಸ್ಯ ಹೊನ್ನಪ್ಪ, ಗ್ರಾ.ಪಂ.ಸದಸ್ಯ ಎಚ್.ಆರ್.ರಂಗನಾಥ್, ಡಾ.ರಾಜಶೇಖರ್, ಮೆಡಿಕಲ್ ಗೋಪಾಲ್, ಎಲ್ಐಸಿ ಏಜೆಂಟ್ ನಾಗರಾಜು, ಸ್ಪಂದನ ಮೆಡಿಕಲ್ ಮೂರ್ತಣ್ಣ, ಎಂಪಿಎಸ್ ಮುಖ್ಯ ಶಿಕ್ಷಕ ಭೀಮಯ್ಯ, ಶಿಕ್ಷಕ ಎಂ.ಷಬ್ಬೀರ್, ಸ್ಪೋರ್ರ್ಸ್ ಕ್ಲಬ್ ನ ಚನ್ನಬಸವಯ್ಯ, ಗುಲಾಬಿ ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ