ಹುಳಿಯಾರು ಹೋಬಳಿ ಕೆಂಕೆರೆ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ನಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿರುವುದಾಗಿ ಸ್ವತಃ ಬ್ಯಾಂಕಿನ ನೂತನ ಕಾರ್ಯಕಾರಿ ಮಂಡಳಿ ಸದಸ್ಯರು ಪತ್ತೆ ಹಚ್ಚಿ ಮ್ಯಾನೇಜರ್ ಬಿ.ರಾಜಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಚೀಮಾರಿ ಹಾಕಿದ ಘಟನೆ ಮಂಗಳವಾರ ಜರುಗಿದೆ.
ಬೈಕ್ ಹಾಗೂ ಚಿನ್ನ ಸಾಲ ನೀಡುವ ವಿಚಾರವಾಗಿ ನೂತನ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಸಭೆಯಲ್ಲಿ 2009-10 ನೇ ಸಾಲಿನ ಆಯವ್ಯಯ ದಾಖಲಾತಿಯಲ್ಲಿ 2 ಲಕ್ಷ ರು. ಉಳಿಕೆ ಹಣ ಇದ್ದು ಈ ಹಣ ಡಿಸಿಸಿ ಬ್ಯಾಂಕಿನಲ್ಲಿರುವ ಪಿಎಸಿಬಿ ಖಾತೆಗೆ ಜಮೆ ಆಗದಿರುವುದು ಹಾಗೂ ಸದರಿ ಬ್ಯಾಂಕಿನ ಕ್ಯಾಷ್ ಬಾಕ್ಸ್ನಲ್ಲಿ ಇಲ್ಲದಿರುವ ಸತ್ಯ ತಿಳಿದು ಬಂದಿತು.
ಇದರಿಂದ ಸಹಜವಾಗಿ ಗಾಭರಿಯಾದ ಕಾರ್ಯಕಾರಿ ಮಂಡಳಿ ಮ್ಯಾನೇಜರ್ ಅನ್ನು ಪ್ರಶ್ನಿಸಲಾಗಿ 60 ಸಾವಿರ ರು.ಗಳನ್ನು ಕಛೇರಿ ದುರಸ್ಥಿಗೆ ಬಳಕೆ ಮಾಡಿದ್ದು ಉಳಿದ 1.40 ಲಕ್ಷ ರು.ಗಳನ್ನು ಷೇರುದಾರರಿಗೆ ಸಾಲ ನೀಡಿರುವುದಾಗಿ ಸಬೂಬು ಹೇಳಿದರು. ಪ್ರತಿಯಾಗಿ ಮಂಡಳಿಯವರು ಸಾಲ ಪಡೆದವರ ಪಟ್ಟಿ ಹಾಗೂ ಸಾಲ ನೀಡಿರುವ ದಾಖಲಾತಿಯನ್ನು ತೋರಿಸುವಂತೆ ಪಟ್ಟು ಹಿಡಿದಾಗ ದಾಖಲಾತಿ ತೋರಿಸಲು ವಿಫಲವಾಗಿ ಇನ್ನೇರಡು ದಿನಗಳಲ್ಲಿ ಹಣ ಬ್ಯಾಕಿಕೆ ಜಮೆ ಮಾಡುವುದಾಗಿ ಕೇಳಿಕೊಳ್ಳುವ ಮೂಲಕ ಮ್ಯಾನೇಜರ್ ಹಣವನ್ನು ದುರ್ಬಳಕೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ: ಸದರಿ ಬ್ಯಾಂಕಿನಲ್ಲಿ ಪಡಿತರ ಸಾಮಗ್ರಿಗಳನ್ನು ಸಹ ವಿತರಿಸಲಾಗುತ್ತಿದ್ದು ಪಡಿತರದಾರರಿಗೆ ಸರ್ಕಾರ ನಿಗಧಿ ಮಾಡಿರುವುದಕ್ಕಿಂತ ಕಡಿಮೆ ಪಡಿತರ ವಿತರಿಸುತ್ತಿದ್ದಾರೆ. ಅಲ್ಲದೆ ಬೆಲೆಯನ್ನು ಹೆಚ್ಚುವರಿಯಾಗಿ ಬಲವಂತದಿಂದ ವಸೂಲಿ ಮಾಡಿ ವಂಚಿಸುತ್ತಿದ್ದಾರೆ ಎಂಬ ಆರೋಪವೂ ಸಹ ಮ್ಯಾನೇಜರ್ ಮೇಲೆ ಕೇಳಿಬಂದಿತು.
ಟ್ರಾಂಜಾಕ್ಷನ್ ನಡೆಯುತ್ತಿಲ್ಲ: ಮ್ಯಾನೇಜರ್ ಸರಿಯಾಗಿ ಕಛೇರಿ ಬಾರದೆ ತಮಗೆ ಮನಸ್ಸಿಗೆ ಬಂದಂತೆ ಬಾಗಿಲು ತೆರೆಯುವುದರಿಂದ ದಿನನಿತ್ಯದ ಬ್ಯಾಂಕ್ ವಹಿವಾಟು ಸ್ಥಗಿತಗೊಂಡು ನಷ್ಟದಲ್ಲಿ ನಡೆಯುವಂತಾಗಿದೆ. ಇದರಿಂದ 9 ಸ್ತ್ರೀಶಕ್ತಿ ಸಂಘಗಳಲ್ಲಿ 6 ಸಂಘಗಳು ಬೇಸತ್ತು ತಮ್ಮ ಖಾತೆ ಮುಚ್ಚಿಸಿದ್ದಾರೆ. ಅಲ್ಲದೆ 2 ವರ್ಷಗಳಿಂದ ಎಸ್ಬಿ ಖಾತೆ ಮಾಡಿಸಿದ್ದವರಿಗೆ ಸರಿಯಾಗಿ ಪಾಸ್ ಪುಸ್ತಕ ವಿತರಿಸದೆ ವಹಿವಾಟಿನಲ್ಲಿ ಗೋಲ್ ಮಾಡಲಾಗಿದೆ ಎಂದು ದೂರಲಾಗಿದೆ.
ಯಶಸ್ವಿನಿ ರಿನಿವಲ್ ಮಾಡುತ್ತಿಲ್ಲ: ತಮ್ಮ ಆತ್ಮೀಯರ ಮನೆ ಬಾಗಿಲಿಗೆ ತೆರಳಿ ಹೊಸ ಯಶಸ್ವಿನಿ ಕಾರ್ಡ್ ಸೇರಿದಂತೆ ರಿನಿವಲ್ ಮಾಡಿಸುತ್ತಿದ್ದಾರೆಯೇ ವಿನಃ ಸಮಾನ್ಯ ಜನರು ಇಂದಿಗೂ ಸಹ ಕಛೇರಿಗೆ ಅಲೆಯುತ್ತಿದ್ದರೂ ರಿನಿವಲ್ ಮಾಡಲಾಗಿಲ್ಲ. ಅಲ್ಲದೆ ಬ್ಯಾಂಕಿನಲ್ಲಿ ಹಣ ವಿಲ್ಲದ ಕಾರಣ ಮುಂಗಾರಿಗೆ ಗೊಬ್ಬರ ತಂದು ರೈತರಿಗೆ ಅನುಕೂಲ ಮಾಡುವುದು ಕಷ್ಟವಾಗಿದೆ ಎಂದು ಹೇಳಲಾಗಿದೆ.
ಪಿಗ್ಮಿ ಹಣದ ದಾಖಲೆ, ಸಾಲ ಹಾಗೂ ಮರು ಪಾವತಿ ದಾಖಲಾತಿ ಸೇರಿದಂತೆ ಕಛೇರಿಯಲ್ಲಿ ಯಾವುದೇ ಹಣಕಾಸಿನ ದಾಖಲಾತಿ ಇಲ್ಲದೆ ಕಾಟಚಾರದ ನಿರ್ವಹಣೆಯಾಗಿದ್ದು ಮೇಲಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಮ್ಯಾನೇಜರ್ ಮೇಲೆ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧ್ಯಕ್ಷ ಜಯಣ್ಣ ಸದಸ್ಯರಾದ ಷಡಾಕ್ಷರಿ, ಚಂದ್ರಶೇಖರ್, ಚನ್ನಬಸವಯ್ಯ ಸೇರಿದಂತೆ ಮತ್ತಿತರರು ಮನವಿ ಮಾಡಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ