ಹುಳಿಯಾರು ಹೋಬಳಿಯ ಎಲ್ಲಾ ಗ್ರಾಮಗಳ ಮಹಿಳೆಯರು ತಮ್ಮದೇ ಆದ ಸಹಕಾರಿ ಸಂಘವನ್ನು ಸ್ಥಾಪಿಸಿಕೊಳ್ಳುವ ಚಿಂತನೆ ನಡೆಸಿ ಈ ಬಗ್ಗೆ ಷೇರು ಸಂಗ್ರಹಣೆಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವನೆಗೆ ಸಹಕಾರಿಗಳ ಸಹಾಯಕ ನಿಬಂಧಕರು ತಿಪಟೂರು ಉಪವಿಭಾಗಕರು ಮನ್ನಣೆ ನೀಡಿ ಷೇರು ಸಂಗ್ರಹಣೆಗೆ ಇಲಾಖಾ ಅನುಮತಿ ನೀಡಿದ್ದಾರೆ ಎಂದು ಮುಖ್ಯ ಪ್ರವರ್ತಕರಾದ ಎಸ್.ಶಾರದ ಜಗದೀಶ್ ತಿಳಿಸಿದ್ದಾರೆ.
ಮಹಿಳೆಯರಲ್ಲಿ ಮಿತವ್ಯಯ ಹಾಗೂ ಉಳಿತಾಯ ಭಾವನೆಯನ್ನು ಪ್ರಚೋದಿಸಿ ಎಲ್ಲಾ ವಿಧದ ಠೇವಣಿಯನ್ನು ಸಂಗ್ರಹಿಸಿ ಮಹಿಳೆಯರ ಆಥಿ೯ಕ ಅಭಿವೃದ್ಧಿಗಾಗಿ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಮತ್ತು ಬ್ಯಾಂಕಿಗ್ ಸೌಲಭ್ಯಗಳನ್ನು ನೀಡುವ ಘನ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಉದ್ದೇಶಿತ ಸಹಕಾರಿ ಸಂಘಕ್ಕೆ ಶ್ರೀಗಾಯತ್ರಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರ ಸಂಘ ಎಂದು ನೊಂದಾಯಿಸಲು ನಿರ್ಧರಿಸಲಾಗಿದೆ. ಎರಡು ಲಕ್ಷದ ರು. ಷೇರು ಸಂಗ್ರಹಣೆಯ ಗುರಿಯನ್ನು ಇಲಾಖೆ ನೀಡಿದ್ದು ಷೆರು ಧನವನ್ನು 1 ಸಾವಿರ ರು.ಗಳೆಂದು ನಿಗಧಿ ಮಾಡಿ ಸಂಗ್ರಹಣಾ ಕಾರ್ಯ ಆರಂಭಿಸಲಾಗಿದೆ. ಅಲ್ಲದೆ, ಇಲ್ಲಿನ ಬಿಎಚ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ಕಟ್ಟಡದಲ್ಲಿ ಕಾಯಾ೯ರಂಭ ಮಾಡಲಿದೆ ಎಂದು ವಿವರಿಸಿದರು.
ಸದರಿ ಸಂಸ್ಥೆಯ ಸ್ಥಾಪನೆ ಕಾರ್ಯದಲ್ಲಿ ಬೆಂಗಳೂರಿನ ಸೌಹಾರ್ದ ಸಹಕಾರಿ ತರಬೇತುದಾರ ವೈ.ಕುಮಾರ್ ಹಾಗೂ ತುಮಕೂರು ಸಹಕಾರಿ ಸಲಹೆಗಾರ ಶಂಕರ್ ಹೆಗ್ಗಡೆ ಅವರ ಮಾರ್ಗದರ್ಶನ ಹಾಗೂ ಸಲಹೆ ನೀಡುತ್ತಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಷೇರು ಪಡೆಯುವ ಮೂಲಕ ಮಹಿಳ ಸಹಕಾರ ಸಂಘ ಸ್ಥಾಪನೆಗೆ ಬೆಂಬಲ ಸೂಸುವಂತೆ ಮುಖ್ಯಪ್ರವರ್ತಕರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ