ಬೇಸಿಗೆ ರಜೆ ಮಜದಲ್ಲಿದ್ದ ಮಕ್ಕಳನ್ನು ಪುನಃ ಶಾಲೆಗೆ ಸೆಳೆಯುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಂತೆ ಯಗಚಿಹಳ್ಳಿ ಸಕಾ೯ರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಬ್ಬದ ವಾತವರಣದಲ್ಲಿ ಶಾಲೆ ಆರಂಭಿಸಿತ್ತು.
ಶಾಲೆ ಕೊಠಡಿಗಳು ಸೇರಿದಂತೆ ಆವರಣ ಸ್ವಚ್ಚಗೊಳಿಸಿ, ಬಾಳೆದಿಂಡು, ಮಾವಿನ ತೋರಣಗಳಿಂದ ಶಾಲೆ ಸಿಂಗರಿಸಿ ಬಣ್ಣ, ಬಣ್ಣದ ರಂಗೋಲಿ ಮೂಡಿಸಿ ಮಕ್ಕಳನ್ನು ಶಾಲೆಯೆಡೆಗೆ ಆಕಷಿ೯ಸಿತ್ತು. ಅದರಲ್ಲೂ ಶಾಲೆಯ ಮೊದಲ ದಿನವೇ ಬರೋಬ್ಬರಿ 43 ವಿದ್ಯಾಥಿ೯ಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಅಲ್ಲದೆ, ಸಮವಸ್ತ್ರ, ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತಲ್ಲದೆ ಪಾಯಸದ ಊಟ ನೀಡಿ ಮಕ್ಕಳನ್ನು ಸಂಭ್ರಮದ ಕಡಲಲ್ಲಿ ತೇಲಿಸಿತ್ತು.
ಶಾಲಾ ಶಿಕ್ಷಕರು,ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಕೆಲ ಪೋಷಕರು ಶಾಲೆ ಪ್ರಾರಂಭದ ಸಡಗರ ನಿಮಾ೯ಣದಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ಮೊದಲ ಸಭೆ ನಡೆಸಿ ಕುಡಿಯುವ ನೀರು ಸರಬರಾಜವಿನ ದುರಸ್ಥಿ, ಶಾಲಾ ಆವರಣದ ಸುತ್ತ ಮುಳ್ಳುತಂತಿ ನಿಮಾ೯ಣ, ಬಯೋಗಾರ್ಡನ್ ಅಭಿವೃದ್ಧಿ, ಶಾಲಾ ಕೊಠಡಿಗಳ ಸುಣ್ಣ-ಬಣ್ಣಗಳಂತಹ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿಧಾ೯ರ ಕೈಗೊಳ್ಳಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸಿ.ಎನ್.ವಿಶಾಲಾಕ್ಷಿ, ಶಿಕ್ಷಕರಾದ ಆಸ್ಮಾನ್ ಉನ್ನೀಸಾ, ಹನುಮಂತರಾಜು, ಎ.ಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ನಾಗರಾಜು, ಸದಸ್ಯರಾದ ಆಲ್ತೀಫ್ ಸಾಬ್, ಎನ್.ಬಸವರಾಜು, ಪೋಷಕರಾದ ದಾದಾಪೀರ್, ತ್ಯಾಗರಾಜು, ಜಮ್ರುದ್ ಸಾಬ್, ರಾಮಕ್ಕ, ಸಲ್ಮಾಖಾನಂ, ರಜೀಯಾಬೀ ಮತ್ತಿತರರು ಶಾಲಾ ಆರಂಭದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ