ಮೈತುಂಬ ಚಿಪ್ಪು, ಉದ್ದ ಮೂತಿ, ಉದ್ದ ಬಾಲ ಉದ್ದ ನಾಲಗೆ ಹೊಂದಿರುವ ಆಫ್ರಿಕಾ ಮತ್ತು ಏಷ್ಯಾದ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುವ ಪೆಂಗೋಲಿನ್ ಹುಳಿಯಾರಿನ ತಿಮ್ಲಾಪುರ ಕರೆ ಕೋಡಿ ಸಮೀಪ ಕಂಡುಬಂದು ನೋಡುಗರಿಗೆ ತೀವ್ರ ಕುತೂಹಲಕ್ಕೆ ಕಾರಣವಾಯಿತು.
ಪೆಂಗೋಲಿನ್ ಮೇಲ್ಭಾಗದಲ್ಲಿ ತಲೆಯಿಂದ ಹಿಡಿದು ಬಾಲದವರೆವಿಗೆ ಚಿಪ್ಪಿನ ಕವಚದ್ದರೆ ಇದರ ಹೊಟ್ಟೆ ಮತ್ತು ಮುಖದ ಕೆಳಭಾಗದಲ್ಲಿ ಈ ಕವಚ ಇರುವುದಿಲ್ಲ. ಮುಂಗಾಲುಗಳು ಬಹಳ ಬಲವಾಗಿದ್ದು ಇವುಗಳ ಸಹಾಯದಿಂದ ಇದು ನೆಲ ಅಗೆದು ಬಿಲ ತೋಡುತ್ತದೆ. ಪೆಂಗೋಲಿನ್ ಗೆ ಹಲ್ಲುಗಳಿಲ್ಲದೆ,ಉದ್ದ ನಾಲಗೆಯಿದ್ದು 25 ರಿಂದ 70 ಸೆಂ.ಮೀ. ಉದ್ದವಾಗಿರುತ್ತದೆ. ಈ ನಾಲಗೆಯ ಮೇಲೆ ಅಂಟಿನ ದ್ರವ್ಯಗಳಿರುತ್ತವೆ. ಹಾಗಾಗಿ ಹುತ್ತದೊಳಗೆ ನಾಲಿಗೆ ಇಳಿಸಿ ಇರುವೆ ಹಾಗೂ ಗೆದ್ದಲು ಹುಳುಗಳನ್ನು ಅಂಟಿಸಿ ತಿನ್ನುತ್ತವೆ. ಇದು ಒಂದು ಸಸ್ತನಿ ಪ್ರಾಣಿಯಾಗಿದ್ದು ತನ್ನ ಮರಿಗಳನ್ನು ಬಾಲದ ಮೇಲೆ ಹತ್ತಿಸಿಕೊಂಡು ತಿರುಗಾಡುತ್ತವೆ. ಅಪಾಯ ಬಂದಾಗ ತನ್ನ ಉದ್ದ ದೇಹ ಮತ್ತು ಬಾಲವನ್ನು ಚೆಂಡಿನಂತೆ ಸುತ್ತಿಕೊಳ್ಳುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಚಿಪ್ಪು ಹಂದಿ ಎಂದು ಕರೆಯಲ್ಪಡುವ ಪೆಂಗೋಲಿನ್ ಇಂದು ಹುಳಿಯಾರು ಸಮೀಪದ ಕೆರೆ ಕೋಡಿ ಬಳಿ ಕಂಡು ಬಂದು ನೋಡುಗರಿಗೆ ಅಚ್ಚರಿ ಮೂಡಿಸಿತು. ಅಪರೂಪದ ಪ್ರಾಣಿ ಕಂಡು ಬಂದ ವಿಚಾರ ಎಲ್ಲರಿಗೂ ಹರಡಿ ಸಾಕಷ್ಟು ಜನ ವೀಕ್ಷಿಸಿದರು.ನಂತರ ಪೆಂಗೋಲಿನ್ ಗೆ ಅಪಾಯವಾಗದ ರೀತಿ ಕಾಡಿಗೆ ಬಿಟ್ಟು ಬರಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ