ಟಿಪ್ಪುಸುಲ್ತಾನ್ 211 ನೇ ಪುಣ್ಯತಿಥಿ ಅಂಗವಾಗಿ ಹುಳಿಯಾರಿನ ಟಿಪ್ಪುಸುಲ್ತಾನ್ ಯುವಕ ಸಂಘದಿಂದ ಇಂದಿರಾನಗರದ ಉದು೯ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
ಸ್ಡಿಎಂಸಿ ಅಧ್ಯಕ್ಷ ದಸ್ತಗಿರಿ ಸಾಬ್ ಮಾತನಾಡಿ ಶಾಲೆಯಲ್ಲಿ 90 ಮಕ್ಕಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದು ಶಿಕ್ಷಕರ ಕೊರತೆ ಬಗ್ಗೆ ಸಂಭಂದಪಟ್ಟವರು ಗಮನಹರಿಸಬೇಕೆಂದರು. ರೆಹಮಾನ್ ಖಾನ್ ಮಾತನಾಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಮಹತ್ವದಾಗಿದ್ದು ಅವರುಗಳ ಕಲಿಕೆ ಬಗ್ಗೆ ಆಸಕ್ತಿ ಹಾಗೂ ನಿಗಾವಹಿಸಬೇಕೆಂದರು.
ಡಾ.ಷರೀಫ್ ಮಾತನಾಡಿ ಸಕಾ೯ರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯ ಲಭ್ಯವಾಗುತ್ತಿದ್ದರು ಹೆಚ್ಚಿನ ಹಣ ತೆತ್ತು ಕಾನ್ವೆಂಟ್ ಸಂಸ್ಕೃತಿಯತ್ತ ಪೋಷಕರು ವಾಲುತ್ತಿರುವುದು ದುರದೃಷ್ಠಕರ ಎಂದರು.
ಸಿಆರ್ಪಿ ಮಹಲಿಂಗಯ್ಯ,ಇಲಾಹಿ,ಶಿಕ್ಷಕಿಯರಾದ ಸಲ್ಮಾ, ಆಫಶಾನ್,ಟಿಪ್ಪುಯುವಕ ಸಂಘದ ಅಧ್ಯಕ್ಷ ಎಂ.ಡಿ.ಫಯಾಜ್,ಉಪಾಧ್ಯಕ್ಷ ಅಪ್ಸರ್ ಆಲಿ,ಮುಜೀಬ್,ಸೈಯದ್ ಇಫಾ೯ನ್ ಗಿರಿಯಾನಾಯ್ಕ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ