ಸಂಸದ ಜಿ.ಎಸ್.ಬಸವರಾಜು ಅವರ ಪ್ರದೇಶಾಭಿವೃದ್ಧಿಯಲ್ಲಿ ಹೋಬಳಿಯ ಯಳನಡು ಗ್ರಾಮದಲ್ಲಿ ನಿಮಾ೯ಣವಾಗುತ್ತಿರುವ ಶ್ರೀ ಗುರು ರೇವಣ್ಣ ಸಿದ್ದೇಶ್ವರ ಸ್ವಾಮಿ ಸಮುದಾಯ ಭವನದ ಕಾಮಗಾರಿಯನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಶನಿವಾರ ವೀಕ್ಷಿಸಿದರು.
ಶೀಘ್ರದಲ್ಲಿಯೇ ವಿದ್ಯುತ್ ಸಂಪರ್ಕ ಪಡೆದುಕೊಂಡು ಲೋಕಾರ್ಪಣೆ ಮಾಡುವಂತೆ ಸೂಚಿಸಿದರಲ್ಲದೆ ಸಮುದಾಯ ಭವನವನ್ನು ಜಾತಿ ತಾರತಮ್ಯ ಮಾಡದೆ ಸಾರ್ವಜನಿಕ ಕಾರ್ಯಕ್ರಮಕ್ಕೆ ಅನ್ಯೋನ್ಯತೆಯಿಂದ ಬಳಸಿಕೊಳ್ಳುವಂತೆ ದೇವಸ್ಥಾನ ಸಮಿತಿ ಸದಸ್ಯರಿಗೆ ಸಲಹೆ ನೀಡಿದರು. ಸಮುದಾಯದ ಸುತ್ತಮುತ್ತ ಅನಗತ್ಯವಾಗಿ ಬೆಳದಿರುವ ಗಿಡಗಂಟೆಗಳನ್ನು ಕಿತ್ತು ಸ್ವಚ್ಚವಾಗಿಡುವಂತೆ ತಿಳಿಸಿದರು.
ತಾ.ಪಂ.ಕಾರ್ಯನಿವಾ೯ಹಣಾಧಿಕಾರಿ ವೇದಮೂತಿ೯, ಕಂದಾಯ ತನಿಖಾಧಿಕಾರಿ ಬಸವರಾಜು, ಗ್ರಾಮದ ಮುಖಂಡ ಬಸವರಾಜು, ಸಿದ್ಧರಾಮಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ