ತುಮಕೂರು ಹಾಲು ಒಕ್ಕೂಟದಿಂದ ಸ್ಥಾಪಿತವಾದ 76 ನೇ ಹಾಲು ಉತ್ಪಾದಕರ ಸಹಕಾರ ಸಂಘವಾಗಿ ಹುಳಿಯಾರು ಸಮೀಪದ ಚಿಕ್ಕೆಣ್ಣೇಗೆರೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಎನ್.ಗಂಗಾಧರಯ್ಯ, ಕಾರ್ಯದಶಿ೯ಯಾಗಿ ಸಿ.ವಿ.ರಮೇಶ್, ಹಾಲು ಪರೀಕ್ಷಕರಾಗಿ ಪ್ಯಾರಾಜಾನ್ ಅವರುಗಳು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸಿ.ಬಿ.ರಾಜಣ್ಣ, ನಂಜುಂಡಯ್ಯ, ಕಂಸಾಗರಯ್ಯ, ಕರಿಯಪ್ಪ, ಸಿ.ಕೆ.ಕಲ್ಲೇಶಾಚಾರ್, ಸಿ.ಎಚ್.ಚಂದ್ರಯ್ಯ, ಶ್ರೀಮತಿ ಜಯಮ್ಮ, ಮಹಾಲಿಂಗಯ್ಯ ಅವರುಗಳು ಆಯ್ಕೆಯಾಗಿದ್ದಾರೆ.
ನೂತನ ಸಂಘವನ್ನು ತುಮಕೂರು ಹಾಲು ಒಕ್ಕೂಟದ ನಿದೇ೯ಶಕ ಹಾಗೂ ಚಿ.ನಾ.ಹಳ್ಳಿ ನಂದಿನಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಅವರು ಉದ್ಘಾಟಿಸಿದರು. ಸುಬ್ರಾಯಭಟ್, ಎ.ಪಿ.ಯರಗುಂಟಪ್ಪ, ಡಿ.ಸಿ.ನಟರಾಜ ಅರಸ್, ಮಲ್ಲಯ್ಯ, ಕರಿಯಪ್ಪ, ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ