ಮೊನ್ನೆ ಹುಳಿಯರು ಗಾಂಧಿಪೇಟೆಯಲ್ಲಿರುವ ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಯಲ್ಲಿ ಜನವೋ ಜನ. ವಯೋವೃದ್ಧರು, ನವ ದಂಪತಿಗಳು, ಅಂಗವಿಕಲರು ಹೀಗೆ ರೋಗಬಾಧಿತರ ದಂಡು ಅಲ್ಲಿ ನೆರೆದಿತ್ತು. ಆದರೆ ಅಲ್ಲಿ ತಜ್ಞ ವೈದ್ಯರ ತಂಡ ಇರಲಿಲ್ಲ, ರೋಗ ಪರೀಕ್ಷಕ ಸಾಧನಗಳ ಸುಳಿವು ಮೊದಲೇ ಇಲ್ಲ. ಇನ್ನು ಇಂಗ್ಲೀಷ್ ಮೆಡಿಸಿನ್ ಹಾವಳಿ ಇಲ್ಲವೆ ಇಲ್ಲ ಬಿಡಿ.
ಆದರೂ ಅಲ್ಲಿ ನಡೆಯುತ್ತಿದುದು ಆರೋಗ್ಯ ಶಿಬಿರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಎಂದಿನಂತೆ ಮಾಮೂಲಿ ಆರೋಗ್ಯ ಶಿಬಿರವಾಗಿರಲಿಲ್ಲ. ಸ್ಟೆಥಾಸ್ಕೊಪ್ನಲ್ಲಿ ತಪಾಸಣೆ ನಡೆಸಿ ರೋಗ ಪತ್ತೆ ಮಾಡುವುದಿರಲಿ ಸ್ವತಃ ರೋಗಿಗಳಿಂದ ಸಮಸ್ಯೆ ಕೇಳದೆ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಒಂದು ವಿಭಿನ್ನ ಹಾಗೂ ಅಪರೂಪದ ಆರೋಗ್ಯ ಶಿಬಿರ!
ಹೌದು, ಈ ಶಿಬಿರದ ವೈದ್ಯರ ಎದುರು ಸುಮ್ಮನೆ ಕುಳಿತರೆ ಸಾಕು ತಮಗೆ ಬಾಧಿಸುತಿರುವ ರೋಗವನ್ನು ಕರಾರುವಕ್ಕಾಗಿ ಹೇಳುತ್ತಾರೆ. ಎಷ್ಟು ವರ್ಷದಿಂದ ಬಾಧಿಸುತ್ತಿದೆ, ಯಾವ ರೀತಿ ಬಾಧಿಸುತ್ತಿದೆ, ಇದರ ನಿಮರ್ೂಲನೆಗಾಗಿ ಪಟ್ಟ ವೇದನೆ ಹೀಗೆ ಎಲ್ಲವನ್ನೂ ವಿವರಿಸುತ್ತಾರೆ. ಇಷ್ಟೇ ಅಲ್ಲ, ರೋಗಿ ಬರದಿದ್ದರೂ ಕೂಡ ಆತನ ಪರವಾಗಿ ಬಂದವರಿಗೆ ರೋಗಿ ಇರುವ ದಿಕ್ಕು, ಆತನ ರೋಗಲಕ್ಷಣ ಹೇಳುವುದು ಇವರ ವಿಶೇಷ.
ರೋಗಿಗಳನ್ನು ಮುಟ್ಟದೆ ಆತನಿಗೆ ಬಾಧಿಸುತ್ತಿರುವ ಕಾಯಿಲೆ ಹೇಳುವುದನ್ನು ಪರೀಕ್ಷಿಸುವ ಸಲುವಾಗಿ ರೋಗ ವಿಲ್ಲದ ಅನೇಕರು ಸುಮ್ಮನೆ ಕುಳಿತು ಕೊನೆಗೆ ನಿಮಗೆ ಯಾವ ರೋಗವಿಲ್ಲ ಎನ್ನಿಸಿಕೊಂಡು ವಾಪಸ್ಸಾಗಿದ್ದಾರೆ. ಹೀಗೆ ಪವಾಡದ ರೀತಿ ರೋಗ ಪತ್ತೆ ಹಚ್ಚುವ ವೈದ್ಯ ಶಿವಮೊಗ್ಗ ಜಿಲ್ಲೆ, ತಾವರಕೊಪ್ಪ ಶಿವಗಿರಿ ಕ್ಷೇತ್ರದ ಸೂರ್ಯನಾರಾಯಣ ಆಯುರ್ವೇದ ಆರೋಗ್ಯ ಕೇಂದ್ರದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ.
ಈ ಸ್ವಾಮೀಜಿ ಕೇವಲ ರೋಗವನ್ನು ಪತ್ತೆ ಹಚ್ಚುವುದಷ್ಟೆ ಅಲ್ಲ, ತಾವೇ ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದ ಔಷಧಿ ನೀಡಿ ರೋಗ ನಿವಾರಿಸುವುದರಲ್ಲೂ ಎತ್ತಿದ ಕೈ. ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದರೂ ಮಕ್ಕಳಿಲ್ಲದೆ ಕೊರಗುತ್ತಿರುವವರಿಗೆ ಮಕ್ಕಳ ಫಲ, ದಶಕಗಳ ಕಾಲದಿಂದ ಕಾಡುತ್ತಿರುವ ಸೊಂಟ, ಬೆನ್ನು, ಮಂಡಿ ನೋವು ನಿವಾರಣೆ ಹಾಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಗ್ಯಾಸ್ಟ್ರಿಕ್ಗಳಿಂದ ಮುಕ್ತಿ ನೀಡಿದ್ದಾರೆ.
ಮಗನಿಗೆ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆ ಬಂದು ಕಿದ್ವಾಯಿ ಸೇರಿದಂತೆ ಅನೇಕ ಆಸ್ಪತ್ರೆಗಳನ್ನು ತಿರುಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಯಾರೋ ಸ್ನೇಹಿತರ ಮಾಹಿತಿ ಮೇರೆಗೆ ಶ್ರೀಸ್ವಾಮೀಜಿಯವರನ್ನು ಭೇಟಿಯಾಗಿ ಅವರು ನೀಡಿದ ಔಷಧಿ ಬಳಸಲು ಆರಂಭಿಸಿದೆ. ಆಶ್ಷರ್ಯಕರ ರೀತಿಯಲ್ಲಿ ಕೆಲವೇ ವಾರದಲ್ಲಿ ಕ್ಯಾನ್ಸರ್ ಮಂಗಮಾಯಿತು ಎನ್ನುತ್ತಾರೆ ಇಲ್ಲಿನ ಆರ್ಯವೈಶ್ಯ ಜನಾಂಗದ ಅನಂತರಾಮು.
ತಾಯಿಗೆ ಸ್ಕಿನ್ ಅಲರ್ಜಿ ಆಗಿ ಬಹಳ ವರ್ಷಗಳಿಂದ ಬಾಧಿಸುತಿತ್ತು. ಇದಕ್ಕಾಗಿ ಅಲೆಯದ ಆಸ್ಪತ್ರೆಗಳಿಲ್ಲ, ಬಳಸದ ಔಷಧಗಳಿಲ್ಲ. ಕೊನೆಗೆ ಶ್ರೀಸ್ವಾಮೀಜಿಯವರ ಸೂಚನೆಯಂತೆ ಆಯುರ್ವೇದ ಚಿಕಿತ್ಸೆ ಪಡೆದ ಬಳಿಕ ಗುಣಮುಖವಾಗುತ್ತಿದೆ ಎನ್ನುತ್ತಾರೆ ಪಿಗ್ಮಿ ಕಲೆಕ್ಟರ್ ತಿಮ್ಲಾಪುರ ರವಿ. ಹಾಗೆಯೆ ಮಕ್ಕಳಿಲ್ಲದ ವೇದನೆಯಲ್ಲಿದ್ದ ತಮಗೆ ಇವರನ್ನು ಕಂಡ ಬಳಿಕ ಶುಭವಾಗಿದೆ ಎನ್ನುತ್ತಾರೆ ಎಸ್ಎಲ್ಆರ್ ಪ್ರದೀಪ್, ಪಾರಿಜಾತ ರವಿ ಹಾಗೂ ನವೀನ್.
ಸ್ವತಃ ಸ್ವಾಮೀಜಿಯವರನ್ನು ಈ ಬಗ್ಗೆ ಕೇಳಿದರೆ ತಮಗೆ ಹಣ ಹಾಗೂ ಹೆಸರು ಮಾಡುವ ದುರುದ್ದೇಶ ವಿಲ್ಲ. ತಮಗೆ ತಿಳಿದ ವಿದ್ಯೆಯಿಂದ ಅನೇಕರಿಗೆ ಅನುಕೂಲ ಮಾಡುತ್ತಿದ್ದೇನೆ. ಇದುವರೆವಿಗೂ ಯಾರಿಗೂ ಸಂದರ್ಶನ ನೀಡಿಲ್ಲ. ತಮ್ಮ ಬಗ್ಗೆ ಬರೆಯ ಬೇಕೆಂದರೆ ಅನುಕೂಲ ಪಡೆದವರ ಅನಿಸಿಕೆಗಳನ್ನು ಆಲಿಸಿ ಬೇಕಿದ್ದರೆ ಬರೆಯಿರಿ ಎಂದು ಮುಗುಳ್ನಕ್ಕು ಮೌನರಾಗುತ್ತಾರೆ.
ಇಂತಿಷ್ಟೆ ಹಣ ಕೊಡಿ ಎಂದು ಕಡ್ಡಿ ತುಂಡಾಗುವಂತೆ ಕೇಳದ ಇವರು ರೋಗಿಗಳು ಕೊಟ್ಟಷ್ಟೆ ಹಣಕ್ಕೆ ತೃಪ್ತರಾಗುತ್ತಾರೆ. ಈಗಾಗಲೇ ಇವರು ಅನೇಕ ಮಂದಿಯ ಕಾಯಿಲೆಗಳು ವಾಸಿಮಾಡಿದ್ದರೆ. ಈಗಲೂ ವಾಸಿಮಾಡುತ್ತಿದ್ದರೆ. ಇಲ್ಲಿಯವರೆವಿಗೂ ಯಾವ ಊರಿನಲ್ಲೂ ಆರೋಗ್ಯ ಶಿಬಿರ ಮಾಡದ ಇವರು ಹುಳಿಯಾರಿನಲ್ಲಿ ಮಾಡುತ್ತಿರುವುದು ಈ ಭಾಗದ ಜನರ ಸುಯೋಗವಾಗಿದೆ. ಈ ಶಿಬಿರದಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎನ್ನುತ್ತಾರೆ ಥಿಯಾಸಫಿಕಲ್ ನ ಎಂ.ಆರ್.ಗೋಪಾಲ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ