ವಿಷಯಕ್ಕೆ ಹೋಗಿ

ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ

(ಹತ್ಯೆಯಾದ ಹೊನ್ನಮ್ಮಳ ಮೃತ ದೇಹವನ್ನು ತಹಸೀಲ್ದಾರ್ ಕಾಂತರಾಜು ವೀಕ್ಷಿಸುತ್ತಿರುವುದು)

(ಮನೆಗಳಿಗೆ ಬೀಗ ಜಡಿದು ಪರಾರಿಯಾಗಿರುವ ಗೋಪಾಲಪುರ ಗ್ರಾಮಸ್ಥರು)

(ಘಟನಾ ಸ್ಥಳಕ್ಕೆ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಹಾಗೂ ತಹಸೀಲ್ದಾರ್ ಕಾಂತರಾಜು ಭೇಟಿ ನೀಡಿರುವುದು)
(ಹೊನ್ನಮ್ಮಳ ಹತ್ಯೆಯನ್ನು ಖಂಡಿಸಿ ಹುಳಿಯಾರಿನಲ್ಲಿ ದಲಿತ ಸಂಘಟನೆಗಳು ರಸ್ತೆ ತಡೆ ನಡೆಸಿರುವುದು)
(ಹುಳಿಯಾರು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿರುವುದು)

ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ
-----------------------------------------
@ ಗ್ರಾಮದ ಪ್ರತಿ ಮನೆಗೂ ಬೀಗ @ ದಲಿತ ಸಂಘಟನೆಗಳಿಂದ ರಸ್ತೆ ತಡೆ @ ಇಬ್ಬರು ಎಎಸ್ಐ ಸಸ್ಪೆಂಡ್ @ ಗ್ರಾ.ಪಂ.ಅಧ್ಯಕ್ಷೆ ಸೇರಿ 10 ಮಂದಿ ಬಂಧನ @ ಬಿಜೆಪಿ ಮುಖಂಡರಿಂದ ಪ್ರತಿಭಟನೆಗೆ ಬೆಂಬಲ
-----------------------------------------------------------------------------------------------

ಗ್ರಾಮಸ್ಥರು ಹಾಗೂ ಅದೇ ಊರಿನ ಮಹಿಳೆಯೊಬ್ಬರ ನಡುವಿನ ವಿವಾದ ಭುಗಿಲೆದ್ದು ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಇಪ್ಪತ್ತೈದು ಮೂವತ್ತು ಜನರ ಗುಂಪೊಂದು ಮಹಿಳೆಯೋರ್ವಳನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಹುಳಿಯಾರು ಸಮೀಪದ ಗೋಪಾಲಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ.

ಹತ್ಯೆಯಾದ ನತದೃಷ್ಠೆಯನ್ನು ಡಾಬಾ ಹೊನ್ನಮ್ಮ ಎಂದು ಗುರುತಿಸಲಾಗಿದ್ದು ಈಕೆ ಬಿಜೆಪಿ ದಲಿತ ಮೋರ್ಚ ಉಪಾಧ್ಯಕ್ಷೆಯಾಗಿದ್ದಳಲ್ಲದೆ ಕಳೆದ ಎರಡು ಬಾರಿ ಬಿಜೆಪಿಯಿಂದ ಜಿ.ಪಂ.ಚುನಾವಣೆಗೆ ಸ್ಪಧಿ೯ಸಿ ಆ ಭಾಗದಲ್ಲಿ ಬಿ.ಜೆ.ಪಿ.ನಾಯಕಿಯಾಗಿ ಗುರುತಿಸಿಕೊಂದಿದ್ದರು.

@ ಘಟನೆಯ ಹಿನ್ನೆಲೆ: ಗ್ರಾಮಸ್ಥರಿಗೂ ಹಾಗೂ ಮೃತಳಿಗೂ ಹಿಂದಿನಿಂದಲೂ ಹಳೆಯ ವೈಷಮ್ಯವಿದ್ದು ಸದ್ಯ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಳಚರಂಡಿ ನಿರ್ವಹಿಸುವ ಕಬ್ಬಿಣದ ಸಾಮಗ್ರಿ ಹಾಗೂ ಸಿಮೆಂಟ್ ಗಳ ಕಳುವಿನ ಬಗ್ಗೆ ಹಾಗೂ ದೇವಸ್ಥಾನ ನಿಮಿ೯ಸುವ ಉದ್ದೇಶದಿಂದ ಕಡಿಯಲಾಗಿದ್ದ ಮರ ಯಾರಿಗೆ ಸೇರಿದ್ದು ಎಂಬ ವಿಚಾರವಾಗಿ ಗ್ರಾಮಸ್ಥರು ಹಾಗೂ ಮೃತ ಹೊನ್ನಮ್ಮನ ನಡುವೆ ಕಳೆದ ಕೆಲ ತಿಂಗಳಿನಿಂದ ತಕರಾರು ಉಂಟಾಗಿತ್ತು. ಈ ಸಂಬಂಧ ಪರಸ್ಪರರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

@ ಪ್ರಾಣ ಬೆದರಿಕೆ: ಅಂದಿನಿಂದ ಕೊಲೆಯಾದ ದಿನದವರೆವಿಗೂ ಗ್ರಾಮಸ್ಥರು ಹಾಗೂ ಹೊನ್ನಮ್ಮನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ಗ್ರಾಮಸ್ಥರಿಂದ ಪ್ರಾಣ ಬೆದರಿಕೆ ಇದೆ ಎಂದು ಈಕೆ ಮುಖ್ಯಮಂತ್ರಿ, ರಾಜ್ಯಪಾಲರು, ಮಾನವ ಹಕ್ಕು ಆಯೋಗ, ಎಸ್ಪಿ, ಜಿಲ್ಲಾಧಿಕಾರಿ ಇವರುಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂಧಿಯನ್ನು ಗ್ರಾಮಕ್ಕೆ ನಿಯೋಜಿಸಿ ವಿವಾದ ಇತ್ಯರ್ಥವಾಗುವವರೆಗೂ ಮರವನ್ನು ಅರಣ್ಯ ಅಧಿಕಾರಿಗಳ ವಶದಲ್ಲಿ ಇರಿಸಲಾಗಿತ್ತು.

@ ಅಮಾನುಷ ಹತ್ಯೆ: ಹೀಗಿದಾಗ್ಯೂ ಮರದ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಕೊಲೆಯಾದ ದಿನದ ಮಧ್ಯಾಹ್ನವಷ್ಟೆ ಚಿ.ನಾ.ಹಳ್ಳಿ ಸಿಪಿಐ ರವಿಪ್ರಸಾದ್ ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಎರಡೂ ಕಡೆಯವರಿಗೂ ಸೂಚಿಸಿದ್ದರು. ಅದೇ ದಿನ ಸಂಜೆ ಹುಳಿಯಾರಿನಿಂದ ಹಿಂದಿರುಗಿದ ಹೊನ್ನಮ್ಮಳಿಗೂ ಹಾಗೂ ಗ್ರಾಮಸ್ಥರಿಗೂ ಮತ್ತೊಮ್ಮೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿ ಗ್ರಾಮದ ಇಪ್ಪತ್ತು ಮೂವತ್ತು ಜನರ ಗುಂಪೊಂದು ಆಕೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಚರಂಡಿಗೆ ಬಿದ್ದ ಅವಳ ಮೇಲೆ ಚಪ್ಪಡಿ ಕಲ್ಲುಗಳನ್ನು ಎತ್ತಿಹಾಕಿದಲ್ಲದೆ ಅರೆಬರೆ ಜೀವವಿದ್ದ ಅವಳನ್ನು ರಸ್ತೆಗೆ ಎಳೆದು ತಂದು ಮತ್ತೊಮ್ಮೆ ಕಲ್ಲಿನಿಂದ ಜಜ್ಜಿ ಪಕ್ಕದ ತಿಪ್ಪೆಗೆ ಬಿಸಾಕಿ ಅಮಾನುಷವಾಗಿ ಹತ್ಯೆಗೈದಿದ್ದಾರೆ.
ಹತ್ಯೆಯ ನಂತರ ಗ್ರಾಮದಿಂದ ಕೂಡಲೇ ಎಲ್ಲರೂ ಪರಾರಿಯಾಗಿದ್ದಾರೆ. ರಾತ್ರಿ ನಂತರ ಇಡೀ ಗ್ರಾಮದ ಮನೆಗಳು ಬೀಗ ಜಡಿದಿದ್ದು ಗ್ರಾಮ ಬಿಕೋ ಎನ್ನುತ್ತಿತ್ತು .

ಘಟನೆ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಟಿ.ಸಿ.ಕಾಂತರಾಜು, ಸಿಪಿಐಗಳಾದ ರವಿಪ್ರಸಾದ್, ತಿಮ್ಮಯ್ಯ, ರಾಮಕೃಷ್ಣ ಹಾಗೂ ಎಸ್ಐ ಶಿವಕುಮಾರ್ ಮತ್ತಿತರರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಮೊಕ್ಕಾಂ ಹೂಡಿ ನಡುರಾತ್ರಿಯಲ್ಲಿ ಪರಾರಿಯಾಗಿದ್ದವರ ಪೈಕಿ 10 ಮಂದಿಯನ್ನು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಿ ಮೃತ ಹೊನ್ನಮ್ಮನ ಶವವನ್ನು ಶವಪರೀಕ್ಷೆಗಾಗಿ ಹುಳಿಯಾರು ಸಕಾ೯ರಿ ಆಸ್ಪತ್ರಗೆ ಸಾಗಿಸಿದರು.

@ ದಲಿತ ಸಂಘಟನೆಗಳಿಂದ ರಸ್ತೆ ತಡೆ: ಬೆಳಿಗ್ಗೆ ಹುಳಿಯಾರಿನಲ್ಲಿ ದಲಿತ ಸಂಘಟನೆಗಳ ಅಪಾರ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ, ರಕ್ಷಣೆ ನೀಡುವಲ್ಲಿ ವಿಫಲರಾದ ಎಎಸ್ಐಗಳನ್ನು ಅಮಾನತ್ ಗೊಳಿಸುವಂತೆ, ಕುಟುಂಬಕ್ಕೆ ಪರಿಹಾರ ನೀಡಿ ಮಗನಿಗೆ ಉದ್ಯೋಗ ಕಲ್ಪಿಸುವಂತೆ ಹಾಗೂ ಘಟನೆಯನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಪಟ್ಟು ಹಿಡಿದು ರಸ್ತೆ ತಡೆ ನಡೆಸಿದರು.

@ ಇಬ್ಬರು ಎಎಸ್ಐ ಸಸ್ಪೆಂಡ್: ಪ್ರತಿಭಟನೆಯ ಗಂಭೀರ ಸ್ವರೂಪ ಅರಿತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಖುದ್ದು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿ ಕರ್ತವ್ಯ ಲೋಪ ಎಸಗಿದ ಹಂದನಕೆರೆ ಎಎಸ್ಐಗಳಾದ ಕೃಷ್ಣನಾಯ್ಕ ಹಾಗೂ ಗಂಗಾಧರಪ್ಪ ಅವರನ್ನು ಈಗಾಗಲೇ ಸಸ್ಪೆಂಡ್ ಮಾಡಿರುವುದಾಗಿಯೂ ಹಾಗೂ 10 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿಯೂ, ಸಮಾಜ ಕಲ್ಯಾಣ ಇಲಾಖೆಯಿಂದ ಮೃತ ಕುಟುಂಬಕ್ಕೆ 1 ಲಕ್ಷರು ಪರಿಹಾರ ನೀಡುವುದಾಗಿಯೂ, ಮಗನ ಅರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡುವ ಭರವಸೆ ನೀಡಿದರಲ್ಲದೆ ಆಕೆಯ ಕುಟುಂಬ ಹಾಗೂ ಸ್ನೇಹಿತೆ ಮೀನಾಕ್ಷಮ್ಮ ಅವರಿಗೆ ಕಾನೂನು ರಕ್ಷಣೆ ನೀಡುವುದಾಗಿ ಹೇಳಿ ಪ್ರತಿಭಟನಾ ನಿರತರನ್ನು ಶಾಂತಗೊಳಿಸಿದರು.

@ ಪ್ರಮುಖರ ಭೇಟಿ: ಘಟನೆ ಸ್ಥಳಕ್ಕೆ ಇಂದು ಮುಂಜಾನೆ ಎಸ್ಪಿ ಪಿ.ಹರ್ಷ ಹಾಗೂ ಅಡಿಷನಲ್ ಎಸ್ಪಿ ಶಿವಶಂಕರ್ ಅವರು ಭೇಟಿ ನೀಡಿ ಘಟನೆ ವಿವರ ಪಡೆದುಕೊಂಡು ತನಿಖಾಧಿಕಾರಿಯಾಗಿ ತಿಪಟೂರು ಡಿವೈಎಸ್ಪಿ ಶಿವರುದ್ರಸ್ವಾಮಿ ಅವರನ್ನು ನೇಮಿಸಿದರು. ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್, ಕೆ.ಲಕ್ಕಪ್ಪ, ಗಂಗಹನುಮಯ್ಯ, ಹಿರಿಯೂರು ಕೋಡಿಹಳ್ಳಿ ಮಠದ ಮಾರ್ಕಂಡೇಯ ಮುನಿ ಸ್ವಾಮೀಜಿ ಸೇರಿದಂತೆ ದಲಿತ ಸಂಘಟನೆಗಳ ಪಾವಗಡ ಶ್ರೀರಾಂ, ದೊಡ್ಡೇಗೌಡರು, ಸುರೇಶ್ ಹಳೇಮನೆ, ನಾಗರತ್ನಮ್ಮ, ಕಲ್ಯಾಣಮ್ಮ, ಚನ್ನಬಸವಯ್ಯ, ಕೆಂಚಪ್ಪ, ನಾರಾಯಣ್ ರಾಜ್, ಹೊಸಕೆರೆ ಮಲ್ಲಿಕಾಜರ್ಯನಯ್ಯ, ರಾಜಸಿಂಹ, ಕುಮಾರ್, ಲಿಂಗದೇವರು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

@ ಬಂಧಿತರಾದ 10 ಮಂದಿ: ಹೊನ್ನಮ್ಮನನ್ನು ಹತ್ಯೆಗೈದವರ ಪೈಕಿ ಚೌಳಕಟ್ಟೆ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ, ಆಕೆಯ ಪತಿ ರಂಗನಾಥ್, ಚನ್ನಮ್ಮ, ರಂಗಯ್ಯ, ಜಯಣ್ಣ, ಸ್ವಾಮಿ, ಯಲ್ಲಪ್ಪರರಾಮಯ್ಯ, ರಾಮಯ್ಯ, ಮಂಜುನಾಥ್ ಸುರೇಶ್ ಎಂಬುವವರನ್ನು ಈಗಾಗಲೇ ಬಂಧಿತ ಆರೋಪಿಗಳಾಗಿದ್ದಾರೆ.


























































ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...