ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕರ ಸಂಸ್ಥೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಂಘಗಳಿಗೆ ಸಕಾ೯ರದ ಪ್ರೋತ್ಸಾಹ ಧನವಲ್ಲದೆ ಹಾಲು ಉತ್ಪಾದಕರು ಉತ್ಪಾದಿಸುವ ಪ್ರತಿ ಲೀಟರ್ ಹಾಲಿಗೆ 2 ರು ಪ್ರೋತ್ಸಾಹ ಧನ ನೀಡುತ್ತಿದ್ದು ಕನಾ೯ಟಕ ಹಾಲು ಮಹಾಮಂಡಳಿಯ ಡೈರಿಗಳಿಗೆ ಹಾಲು ಹಾಕುವ ಮೂಲಕ ಮಂಡಳಿಯ ಡೈರಿಗಳನ್ನು ಸಧೃಢಗೊಳಿಸಿ ಎಂದು ತುಮಕೂರು ಹಾಲು ಒಕ್ಕೂಟದ ನಿದೇ೯ಶಕ ಹಾಗೂ ಚಿ.ನಾ.ಹಳ್ಳಿ ನಂದಿನಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಕಿವಿ ಮಾತು ಹೇಳಿದರು.
ಹುಳಿಯಾರು ಸಮೀಪದ ಚಿಕ್ಕೆಣ್ಣೇಗೆರೆಯಲ್ಲಿ ನೂತನವಾಗಿ ಸ್ಥಾಪಿತವಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಲೀಟರ್ ಹಾಲಿಗೆ 2 ರು. ಪ್ರೋತ್ಸಾಹಧನವಲ್ಲದೆ ಹಸು ಖರೀದಿಗೆ ಶೇ.6 ರ ಬಡ್ಡಿದರದಲ್ಲಿ 70 ಸಾವಿರದವರೆವಿಗೂ ಸಾಲ ನೀಡಲಿದ್ದು ಈ ಸೌಲಭ್ಯಗಳು ಖಾಸಗಿ ಡೈರಿಗಳಲ್ಲಿ ಸಿಗುವುದಿಲ್ಲ. ಖಾಸಗಿಯವರ ಹಾಲಿನ ಡೈರಿಗಳು ಏಕಚಕ್ರಾಧಿಪತ್ಯವುಳ್ಳವುಗಳಾಗಿದ್ದು ಹಾಲು ಹಾಕುವ ರೈತನಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಕನಾ೯ಟಕ ಹಾಲು ಮಹಾಮಂಡಳಿಯ ಡೈರಿಗಳು ಹಾಲು ಹಾಕುವ ರೈತರಿಗೇ ಕಾರ್ಯಕಾರಿ ಮಂಡಳಿ ಅಧಿಕಾರ ನೀಡಿ ಎಲ್ಲಾ ಹಣಕಾಸು ವ್ಯವಹಾರದಲ್ಲಿ ಭಾಗಿಮಾಡಿಕೊಳ್ಳುತ್ತವೆ. ಹಾಗಾಗಿ ಖಾಸಗಿ ಹಾಲಿನ ಡೈರಿಗೆ ಮರುಳಾಗದೆ ಕನಾ೯ಟಕ ಹಾಲು ಮಂಡಳಿಯ ಡೈರಿಗಳನ್ನು ಸ್ಥಾಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಸುಬ್ರಾಯಭಟ್ ಅವರು ಮಾತನಾಡಿ ಇಂದು ಹೈನುಗಾರಿಗೆ ಹಳ್ಳಿಗಳ ರೈತರ ಆಥಿ೯ಕ ಕಷ್ಟ ನೀಗಿಸುವ ಉದ್ಯಮವಾಗಿದೆ.ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ಹಿಂದೆ 34 ಸಂಘಗಳಿದ್ದು ಈಗ 76 ಸಂಘಗಳಾಗಿ ದಿನಕ್ಕೆ 25 ಸಾವಿರ ಲೀ. ಹಾಲು ಶೇಖರಣೆಯಾಗುತ್ತಿದೆ. ಜಿಲ್ಲೆಯಲ್ಲಿ ದಿನವೊಂದಕ್ಕೆ 3.39 ಲಕ್ಷ ಲೀ. ಹಾಲು ಶೇಖರಣೆಯಾಗಿ 1.70 ಲೀ. ಅನ್ನು ಜಿಲ್ಲೇಯಲ್ಲಿಯೇ ಬಳಸಿಕೊಂಡು ಉಳಿದದನ್ನು ಬಳ್ಳಾರಿ ಹಾಗೂ ಕೇರಳಕ್ಕೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದರಲ್ಲದೆ, ಇಂದಿನ ಜಾಗತೀಕರಣದಲ್ಲಿ ಕೃಷಿಕರು ಗುಣಮಟ್ಟಕ್ಕೆ ಹಾಗೂ ಪರಿಶುದ್ದತೆಗೆ ಗಮನ ಹರಿಸುವ ಅಗತ್ಯವಿದ್ದು ಶುದ್ಧಹಾಲು ಉತ್ಪಾದನೆಗೆ ರಾಸುಗಳ ಆರೋಗ್ಯ, ಖನಿಜ ಮಿಶ್ರಣ ಆಹಾರ, ಕಾಲಕಾಲಕ್ಕೆ ಲಸಿಕೆ ಹಾಗೂ ಕೊಟ್ಟಿಗೆ ಸ್ವಚ್ಚವಾಗಿಟ್ಟುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕೆಣ್ಣೇಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್.ಗಂಗಾಧರಯ್ಯ ವಹಿಸಿದ್ದರು. ತು.ಹಾ.ಒಕ್ಕೂಟದ ಚಿ.ನಾ.ಹಳ್ಳಿ ತಾಲೂಕು ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ, ದೊಡ್ಡಎಣ್ಣೇಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಸಿ.ನಟರಾಜ ಅರಸ್, ನೂತನ ಗ್ರಾ.ಪಂ.ಸದಸ್ಯರಾದ ಮಲ್ಲಯ್ಯ, ಕರಿಯಪ್ಪ, ಗಂಗಮ್ಮ, ಚಿಕ್ಕೆಣ್ಣೇಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಿ.ಬಿ.ರಾಜಣ್ಣ, ನಂಜುಂಡಯ್ಯ, ಕಂಸಾಗರಯ್ಯ, ಕರಿಯಪ್ಪ, ಸಿ.ಕೆ.ಕಲ್ಲೇಶಾಚಾರ್, ಸಿ.ಎಚ್.ಚಂದ್ರಯ್ಯ, ಜಯಮ್ಮ, ಮಹಾಲಿಂಗಯ್ಯ ರಮೇಶ್, ಪ್ಯಾರೇಜಾನ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ