
ಶುಕ್ರವಾರದಂದು ಹುಳಿಯಾರಿನ ಶ್ರೀದುಗಾ೯ಪರಮೇಶ್ವರಿ, ಶ್ರೀಹುಳಿಯಾರಮ್ಮ ಹಾಗೂ ಶ್ರೀಆಂಜನೇಯಸ್ವಾಮಿ ದೇವರುಗಳ ಆಗಮಿಸಿ ಕುಂಭ ಸ್ಥಾಪಿಸುವ ಮೂಲಕ ಮಹೋತ್ಸವ ಆರಂಭಗೊಂಡಿತು.ಶನಿವಾರದಂದು ಅರ್ಚಕರುಗಳಾದ ಎಚ್.ಎಸ್.ಲಕ್ಷ್ಮೀನರಸಿಂಹಯ್ಯ ನೇತೃತ್ವದಲ್ಲಿ ಹೆಚ್.ಕೆ.ಗುಂಡಣ್ಣ, ಸತ್ಯನಾರಾಯಣ,ಸೀತರಾಮಣ್ಣ,ಜೆ.ಗುಂಡಪ್ಪ, ಗಣೇಶ್ ಅವರ ಮಾರ್ಗದರ್ಶನದಲ್ಲಿ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಗಣಪತಿ ನವಗ್ರಹ, ಶನೇಶ್ವರ ಶಾಂತಿ, ಹೋಮ, ಕುಂಭಾಭಿಷೇಕ ಮುಂತಾದ ಧಾಮಿ೯ಕ ಚಟುವಟಿಕೆಗಳು ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಅನ್ನಸಂತರ್ಪಣೆ, ಮುಖ್ಯ ಪ್ರಾಣ ಭಜನಾ ಮಂಡಲಿಯಿಂದ ಸಂಜೆ ಭಜನೆ, ಶ್ರೀಸ್ವಾಮಿಯವರೊಂದಿಗೆ ಆಹ್ವಾನಿತ ದೇವರುಗಳ ಕೈಲಾಸರೂಢ ಮುತ್ತಿನ ಮಂಟಪದಲ್ಲಿ ಕುಳ್ಳಿರಿಸಿ ರಾತ್ರಿ ರಾಜ ಬೀದಿ ಉತ್ಸವ ಮಾಡಲಾಯಿತು.
ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಟಿ.ಆರ್.ಕುಮಾರಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ್, ಜಂಟಿ ಕಾರ್ಯದಶಿ೯ ಲೋಕೇಶ್, ಖಜಾಂಜಿ ಡಿ.ಎಸ್.ನಾಗರಾಜು, ಹುಳಿಯಾರು ಸಂಘದ ಗೌ.ಅಧ್ಯಕ್ಷ ಎಸ್.ಚಂದ್ರಯ್ಯ, ಅಧ್ಯಕ್ಷ ಟೈಲರ್ ಪುಟ್ಟಣ್ಣ, ಕಾರ್ಯದಶಿ೯ ಆರ್.ಬಸವರಾಜು, ಖಜಾಂಜಿ ಕೆ.ಸಿ.ಯೋಗೇಶ್, ನಿದೇ೯ಶಕರಾದ ಎಚ್.ವಿ.ಚಂದ್ರಶೇಖರ್, ಚಂದ್ರಮ್ಮ, ಕೆ.ಸಿ.ಲೋಕೇಶಪ್ಪ, ಎಚ್.ವಿ.ರಾಜು, ಎಚ್.ಕೆ.ಲೋಕೇಶ್, ಎಚ್.ಬಿ.ಚಂದ್ರಶೇಖರ್, ಎಚ್.ಕೆ.ಮೋಹನ್ ಕುಮಾರ್, ಧನಪಾಲ್, ಡಿ.ಎಸ್.ಅನಂತರಾಜು, ಕಾತುರಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ