(ಫೋಟೊ ವಿವರ:ಹುಳಿಯಾರು ಹೋಬಳಿ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವದ ಉದ್ಘಾಟನೆಯನ್ನು ಶ್ರೀ ಮಾರುತಿ ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ನೆರವೇರಿಸಿದರು. ಸೋಮಶೇಖರ್, ಶ್ರೀನಿವಾಸಮೂತಿ೯, ವೆಂಕಟೇಶ್, ಸಂತೋಷ್, ಕರಿಯಮ್ಮ ನಾಗರಾಜು ಮತ್ತಿತರರು ಇದ್ದಾರೆ.)
ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವ ವಿದ್ಯಾಲಯ, ಜಿಲ್ಲಾ ಮಾರ್ಗದರ್ಶನ ತಂಡ, ಶ್ರೀಮಾರುತಿ ಕೆರೆ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಹೋಬಳಿಯ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ರೈತರ ಕ್ಷೇತ್ರ ಪಾಠಶಾಲೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ನೀರಿನ ಸದ್ಭಳಕೆಯ ನಿಟ್ಟಿನಲ್ಲಿ ಕನಾ೯ಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ್ಲಿ ಆಯ್ಕೆಯಾಗಿರುವ ರಾಜ್ಯದ 8 ಜಿಲ್ಲೆಗಳಲ್ಲಿನ 24 ತಾಲೂಕುಗಳ 694 ಕೆರೆಗಳಲ್ಲಿನ ನೀರುಘಂಟಿಗಳ ಜ್ಞಾನದ ಮಟ್ಟಕ್ಕೆ ಅನುಗುಣವಾಗಿ ನೀರು ನಿರ್ವಹಣೆ, ನೀರಿನ ಅವಶ್ಯಕತೆಗೆ ಅನುಗುಣದ ಬೆಳೆ ತಿಳುವಳಿಕೆ ಹೀಗೆ ಅನೇಕ ವಿಷಯದ ಬಗ್ಗೆ ಶೀಘ್ರದಲ್ಲಿಯೇ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಾರ್ಗದರ್ಶನ ತಂಡದ ಹುಳಿಯಾರು ಮುಖ್ಯಸ್ಥ ವೆಂಕಟೇಶ್ ಮಾತನಾಡಿದರು.
ಶ್ರೀ ಮಾರುತಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಜಿನಿಯರ್ ಸಂತೋಷ್, ಗ್ರಾ.ಪಂ.ಸದಸ್ಯ ನಾಗರಾಜು, ಕರಿಯಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ, ರಮೇಶ್, ರೇವಣ್ಣ, ಜಯಣ್ಣ, ಕಾಂತರಾಜು, ರಜುಲ್ ಮತ್ತಿತರರು ಉಪಸ್ಥಿತರಿದ್ದರು.
(ಫೋಟೊ ವಿವರ:ಹುಳಿಯಾರು ಹೋಬಳಿ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಲ್ಲಾ ಸಂಯೋಜಕ ಸೋಮಶೇಖರಪ್ಪ ಮಾತನಾಡಿದರು.)
ನೀರಿನ ಸದ್ಭಳಕೆಗೆ ಒತ್ತು ನೀಡಿ: ಸೋಮಶೇಖರಪ್ಪ
ದಿನೆ ದಿನೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿದೆ. ಅಲ್ಲದೆ, ಅಂತರ್ಜಲ ಮಟ್ಟ ಕುಸಿಯುತ್ತಿದ್ದು ರೈತರು ನೀರಿನ ಪ್ರಮಾಣ ಮನಗಂಡು ನೀರಿನ ಸದ್ಭಳಕೆಗೆ ಒತ್ತು ನೀಡಿ ಅಲ್ಪಾವದಿ ಬೆಳೆ, ಹೊಸ ಪದ್ಧತಿಯ ಬೆಳೆ ಬೆಳೆದು ನೀರು ನಿರ್ವಹಣೆ ಮಾಡಬೇಕೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಲ್ಲಾ ಸಂಯೋಜಕ ಸೋಮಶೇಖರಪ್ಪ ಕರೆ ನೀಡಿದರು.
ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವ ವಿದ್ಯಾಲಯ, ಜಿಲ್ಲಾ ಮಾರ್ಗದರ್ಶನ ತಂಡ, ಶ್ರೀಮಾರುತಿ ಕೆರೆ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಹೋಬಳಿಯ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ರೈತರ ಕ್ಷೇತ್ರ ಪಾಠಶಾಲೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ನೀರಿನ ಸದ್ಭಳಕೆಯ ನಿಟ್ಟಿನಲ್ಲಿ ಕನಾ೯ಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ್ಲಿ ಆಯ್ಕೆಯಾಗಿರುವ ರಾಜ್ಯದ 8 ಜಿಲ್ಲೆಗಳಲ್ಲಿನ 24 ತಾಲೂಕುಗಳ 694 ಕೆರೆಗಳಲ್ಲಿನ ನೀರುಘಂಟಿಗಳ ಜ್ಞಾನದ ಮಟ್ಟಕ್ಕೆ ಅನುಗುಣವಾಗಿ ನೀರು ನಿರ್ವಹಣೆ, ನೀರಿನ ಅವಶ್ಯಕತೆಗೆ ಅನುಗುಣದ ಬೆಳೆ ತಿಳುವಳಿಕೆ ಹೀಗೆ ಅನೇಕ ವಿಷಯದ ಬಗ್ಗೆ ಶೀಘ್ರದಲ್ಲಿಯೇ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ತುಮಕೂರು ಕೃಷಿ ತಜ್ಞ ಶ್ರೀನಿವಾಸಮೂತಿ೯ ಅವರು ಮಾತನಾಡಿ ರಾಸಾಯನಿಕ ಗೊಬ್ಬರವನ್ನು ಕಡಿಮೆ ಮಾಡಿ ಖಚಿ೯ಲ್ಲದೆ ತಯಾರಿಸಿದ ಸಾವಾಯವ ಗೊಬ್ಬರ ಬಳಸಿ ಹಾಗೂ ರಾಸಾಯನಿಕ ಔಷಧಿ ಬದಲು ಬೇವಿನ ಬೀಜ, ಬೆಳುಳ್ಳಿ ಕಷಾಯ ಬಳಸಲು ರೈತರು ಮುಂದಾಗಬೇಕು. ಇದರಿಂದ ಹೆಚ್ಚು ಇಳುವರಿ ಬರುತ್ತದೆ, ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಹೇಳಿದರು.
ಜಿಲ್ಲಾ ಮಾರ್ಗದರ್ಶನ ತಂಡದ ಹುಳಿಯಾರು ಮುಖ್ಯಸ್ಥ ವೆಂಕಟೇಶ್ ಮಾತನಾಡಿದರು.
ಶ್ರೀ ಮಾರುತಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಜಿನಿಯರ್ ಸಂತೋಷ್, ಗ್ರಾ.ಪಂ.ಸದಸ್ಯ ನಾಗರಾಜು, ಕರಿಯಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ, ರಮೇಶ್, ರೇವಣ್ಣ, ಜಯಣ್ಣ, ಕಾಂತರಾಜು, ರಜುಲ್ ಮತ್ತಿತರರು ಉಪಸ್ಥಿತರಿದ್ದರು.
(ಫೋಟೊ ವಿವರ:ಹುಳಿಯಾರು ಹೋಬಳಿ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಲ್ಲಾ ಸಂಯೋಜಕ ಸೋಮಶೇಖರಪ್ಪ ಮಾತನಾಡಿದರು.)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ