ಹುಳಿಯಾರಿನ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನಲ್ಲಿ ಲ್ಲಿ ದ್ವಿಚಕ್ರವಾಹನ ಹಾಗೂ ಚಿನ್ನಾಭರಣ ಸಾಲ ವಿತರಣೆ ಚಾಲನೆ ನೀಡಿ ಮಾತನಾಡಿದ ಅವರು ಸದರಿ ಬ್ಯಾಂಕಿನ ಮೂಲಭೂತ ಸೌಲಭ್ಯ ನಿಮಾ೯ಣಕ್ಕೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಅಪೆಕ್ಸ್ ಬ್ಯಾಂಕ್ ನಿದೇ೯ಶಕರ ಅನುಧಾನದಲ್ಲಿ 50 ಸಾವಿರ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಹಕಾರ ಸಂಘಗಳು ಸಹಕಾರಿ ಸದಸ್ಯರ ಸಹಕಾರದಿಂದ ಬೆಳೆಯಬೇಕಿದ್ದು ಪ್ರತಿಯೊಬ್ಬ ಸದಸ್ಯರು ವಾಷಿ೯ಕ ಮಹಾಸಭೆಗೆ ಕಡ್ಡಾಯವಾಗಿ ಹಾಜರಾಗುವ, ಸೂಕ್ತ ಸಲಹೆ-ಸಚನೆ ನೀಡುವ, ಅನುಮಾನಗಳನ್ನು ಪ್ರಶ್ನಿಸುವ ಹಾಗೂ ಕಾರ್ಯದಶಿ೯ಯಿಂದ ಸೂಕ್ತ ಸಮಜಾಯಿಸಿ ಸಿಗದಿದ್ದಲ್ಲಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದರು.
ತು.ಜಿ.ಸ.ಕೇ.ಬ್ಯಾಂಕ್ ನಿದೇ೯ಶಕ ಎಸ್.ಆರ್.ರಾಜ್ ಕುಮಾರ್ ಅವರು ಮಾತನಾಡಿ ಕೆ.ಎನ್.ಆರ್ ಅವರು ಹಳ್ಳಿ ರೈತರ ಕಷ್ಟಕ್ಕೆ ಸ್ಪಂಧಿಸುವ ಸಲುವಾಗಿ ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ಯಾವುದೇ ಅಡಮಾನವಿಲ್ಲದೆ ಕೇವಲ ನಂಬಿಕೆಯ ಮೇಲೆ ಸ್ತ್ರೀಶಕ್ತಿ ಸಂಘಗಳಿಗೆ 1 ರಿಂದ 5 ಲಕ್ಷ ರು.ವರೆವಿಗೆ ಸಾಲ ನೀಡಿದರು. ವಾಣಿಜ್ಯ ಬ್ಯಾಂಕುಗಳು ಇದನ್ನು ಅನುಕರಿಸಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುತ್ತಿವೆ ಎಂದರಲ್ಲದೆ ಚಿ.ನಾ.ಹಳ್ಳಿ ತಾಲೂಕಿನ ರೈತರು ಮಳೆ ಮಾರುತಗಳನ್ನು ನಂಬಿ ವ್ಯವಸಾಯ ಮಾಡುವವರಾಗಿದ್ದು ಮಳೆ ಕೈಕೊಟ್ಟರೆ ಅವರ ಜೀವನ ನಿರ್ವಹಣೆ ಏರುಪೇರಾಗುತ್ತದೆ. ಹಾಗಾಗಿ ಉಪಕಸುಬುಗಳಿಗೆ ಬ್ಯಾಂಕುಗಳು ಸಾಲ ನೀಡಬೇಕು ಎಂದರು.
ತು.ಜಿ.ಸ.ಕೇ.ಬ್ಯಾಂಕ್ ಕೆಂಚಮಾರಯ್ಯ ಅವರು ಮಾತನಾಡಿ ರಾಜ್ಯದಲ್ಲಿ ಮೊದಲ ಭಾರಿಗೆ ಕಾಮದೇನು ಕ್ರೆಡಿಟ್ ಕಾಡ್೯ ಹಾಗೂ ಯಶಸ್ವಿನಿಗೆ ಅರ್ಧ ಹಣ ಬ್ಯಾಂಕಿನಿಂದ ಕಟ್ಟುವ ಮಹತ್ವದ ಯೋಜನೆ ಜಾರಿಗೆ ತಂದ ಕೀತಿ೯ ಕೆ.ಎನ್.ಆರ್ ಗೆ ಸಲ್ಲಬೇಕು ಎಂದರಲ್ಲದೆ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಿಗದ ಕಡಿಮೆ ಬಡ್ಡಿದರ ಸಾಲ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಸಿಗಲಿದ್ದು ಇದರ ಸದುಪಯೋಗ ಪಡೆದುಕೊಂಡು ಆಥಿ೯ಕ ಚೈತನ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಹುಳಿಯಾರು ಪ್ರಾ.ಕೃ.ಸ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ರಾಮಯ್ಯ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತು.ಜಿ.ಸ.ಕೇ.ಬ್ಯಾಂಕ್ ವ್ಯವಸ್ಥಾಪಕ ನಿದರ್ೇಶಕ ಟಿ.ಎ.ನರಸಿಂಹಮೂತಿ೯, ಕುಬೇಂದ್ರ ಕುಮಾರ್, ರಾಮಕೃಷ್ಣಪ್ಪ, ಎಸ್.ಬಿ.ಜಯರಾಂ, ಜಾಫರ್ ಸಾಬ್ ಮತ್ತಿತರರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ.ರಮೇಶ್, ಎಚ್.ಆರ್.ರಂಗನಾಥ್, ಬಾಲಯ್ಯ, ಎನ್.ಜಿ.ಬೋರಲಿಂಗಯ್ಯ, ಕೆಂಚಮ್ಮ, ಎ.ಟಿ.ಗುರುವಯ್ಯ, ಮೇಲ್ವಿಚಾರಕ ಎಚ್.ಬಿ.ಜಯರಾಂ, ವ್ಯವಸ್ಥಾಪಕ ಶಿವಣ್ಣ ಅವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ