---------------------------------------
ಕಾಯರ್ ಇಂಡಸ್ಟ್ರಿ ಬಗ್ಗೆ ಮೆಚ್ಚುಗೆ- ನೂತನ ತಂತ್ರಜ್ಞಾನ ಬಳಕೆಗೆ ಸಲಹೆ
ನಾರು ಉದ್ದಿಮೆಯ ಅಧ್ಯಯನದ ಸಲುವಾಗಿ ಕನಾ೯ಟಕ ರಾಜ್ಯಕ್ಕೆ ಆಗಮಿಸಿರುವ ಸೆಂಟ್ರಲ್ ಕಾಯರ್ ಬೋಡ್೯ ರಿಮೋಟ್ ಸ್ಕೀಂ ಛೇರ್ಮನ್ ಹಾಗೂ ಕೇರಳ ಶಾಸಕ ಆನಂದನ್ ಅವರ ನೇತೃತ್ವದ ತಂಡ ಹುಳಿಯಾರಿನ ಪೇಟೆ ಬೀದಿಯಲ್ಲಿರುವ ರೂಪಾ ಚಂದ್ರಶೇಖರ್ ಮಾಲೀಕತ್ವದ ಸಪ್ತಗಿರಿ ಕಾಯರ್ ಫೈಬರ್ಸ್ ಗೆ ಸೋಮವಾರ ಭೇಟಿ ನೀಡಿದರು.ಉತ್ತಮ ಗುಣಮಟ್ಟದ ನಾರಿನ ವಿವಿಧ ಉತ್ಪನ್ನಗಳನ್ನು ತಯಾರಿಸಿ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಾರು ತಯಾರಿಕೆ ಬಗ್ಗೆ ವಿವಿಧ ಕಾರ್ಯ ಹಂತಗಳನ್ನು ವೀಕ್ಷಿಸಿದ ತಂಡ ನೂತನ ತಂತ್ರಜ್ಞಾನ ಬಳಸಿ ಘಟಕ ಅಭಿವೃದ್ಧಿಪಡಿಸಲು ಬೋಡ್೯ನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ನಂತರ ಇಲ್ಲಿನ ನಾರಿನ ಉದ್ದಿಮೆ ಬಗ್ಗೆ ಪ್ರತಿಕಿಯೆ ವ್ಯಕ್ತಪಡಿಸಿದ್ದಿಷ್ಟು.
ತಾಂತ್ರಿಕತೆಯಲ್ಲಿ ಬಹಳ ಹಿಂದಿದೆ: ಕನಾ೯ಟಕ ರಾಜ್ಯ ಕಲ್ಪತರು ನಾಡೆಂದು ಹೆಸರಾಗಿದ್ದು ನಾರು ಉದ್ದಿಮೆ ನಂಬಿ ಅನೇಕರು ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರದಲ್ಲಿ ಕನಾ೯ಟಕ ರಾಜ್ಯ ನಾರು ಉತ್ಪಾದನೆಯಲ್ಲಿ 3 ನೇ ಸ್ಥಾನದಲ್ಲಿದ್ದು ಇಲ್ಲಿನ 16 ಜಿಲ್ಲೆಗಳಲ್ಲಿ ನಾರು ಉದ್ದಿಮೆಗಳಿವೆ. ಆದರೆ ಕೇರಳ ಹಾಗೂ ತಮಿಳುನಾಡಿಗೆ ಹೋಲಿಸಿದರೆ ಕನಾ೯ಟಕ ತಾಂತ್ರಿಕತೆಯಲ್ಲಿ ಬಹಳ ಹಿಂದಿದೆ. ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದು ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಸಕ್ತ ಉದ್ದಿಮೆದಾರರು ಹಾಗೂ ಬ್ಯಾಂಕ್ ಮ್ಯಾನೇಜರ್ ತಂಡವನ್ನು ಕೇರಳಕ್ಕೆ ಕರೆಸಿಕೊಂಡು ಅಲ್ಲಿನ ತಂತ್ರಜ್ಞಾನ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಯರ್ ಪಿತ್ ಗೂ ಬೇಡಿಕೆ ಬಂದಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪಾದನೆ ಸಾಮಥ್ಯ ಹೆಚ್ಚಿಸುವ ಹಾಗೂ ಹೊಸಬರನ್ನು ಈ ಉದ್ದಿಮೆಗೆ ಕರೆತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಕಾ೯ರ ಕಳೆದ ಬಾರಿ 200 ಕೋಟಿ ರು. ಅನುದಾನ ನೀಡಿದ್ದು ಈ ಬಾರಿ 300 ಕೋಟಿ ರು. ಬೇಡಿಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಉರುವಲಾಗಿ ಬಳಕೆಗೆ ಅಸಮಧಾನ: ಇಲ್ಲಿ ಬಹಳಷ್ಟು ಮಂದಿ ತೆಂಗಿನ ಮೊಟ್ಟೆಯನ್ನು ಉರುವಲಿಗಾಗಿ ಬಳಕೆ ಮಾಡುತ್ತಿರುವುದು ದುರದೃಷ್ಟಕರ.ಉರುವಲು ಬದಲಾಗಿ ತೆಂಗಿನ ಮಟ್ಟೆಯಿಂದ ನಾರು ತಯಾರಿಸುವುದು ಅತ್ಯಂತ ಲಾಭಕರ ಅಲ್ಲದೆ ನಿರುದ್ಯೋಗ ಸಮಸ್ಯೆ ಕೂಡ ನಿವಾರಿಸಬಹುದು.ಈ ನಿಟ್ಟಿನಲ್ಲಿ ಸಕಾ೯ರ ನಾರು ತಯಾರಿಕಾ ಗುಡಿಕೈಗಾರಿಕೆಗೆ ಪ್ರೋತ್ಸಹ ನೀಡಬೇಕು ಹಾಗೂ ಉರುವಲು ಬಳಕೆಯನ್ನು ತಡೆಯಲು ಕಠಿಣ ಕಾನೂನು ರಚಿಸಬೇಕೆಂದರು.
ಅಖಿಲ ಭಾರತ ನಾರು ಉತ್ಪಾದಕರ ಸಂಘದ ಅಧ್ಯಕ್ಷ ಕಾಮರಾಜನ್, ಕಾಯರ್ ಬೋಡ್೯ ಸದಸ್ಯ ಪ್ರಸಾದ್, ಸಹಾಯಕ ನಿದೇ೯ಶಕ ಸುಧಾಕರ್ ಪಿಳ್ಳೆ, ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಎಂ.ವಿ.ಸತ್ಯನ್, ಮ್ಯಾನೇಜರ್ ಸತೀಶ್, ಹುಳಿಯಾರು ಕಾಯರ್ ಇಂಡಸ್ಟ್ರಿಯ ಎಲ್.ಆರ್.ಚಂದ್ರಶೇಖರ್, ಎಲ್.ಆರ್.ಬಾಲಾಜಿ ಉಪಸ್ಥಿತರಿದ್ದರು.
ನಂತರ ಸಮೀಪದ ಪೋಚಕಟ್ಟೆ ಲಂಬಾಣಿ ತಾಂಡ್ಯಕ್ಕೆ ತೆರಳಿ ಅಲ್ಲಿನ ಪ್ರತಿಯೊಂದು ಮನೆಯಲ್ಲಿಯೂ ನಾರಿನ ಹುರಿ ತಯಾರಿಸುತ್ತಿರುವುದನ್ನು ಕಂಡು ಕಾಯರ್ ಬೋಡ್೯ನಿಂದ ಸಬ್ಸಿಡಿಯಲ್ಲಿ ವಿದ್ಯುತ್ ಚಾಲಿತ ರಾಟೆ ನೀಡುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ