ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು ಅಭಿವೃದ್ಧಿಗೆ ಬದ್ದ :ಶಾಸಕ ಸುರೇಶ್ ಬಾಬು

ತಾಲ್ಲೂಕ್ ಮಟ್ಟಕ್ಕೆ ಸರಿಸಮಾನಾಗಿರುವ ಹುಳಿಯಾರಿನ ಅಭಿವೃದ್ಧಿಗೆ ತಾವು ಹೆಚ್ಚು ಒತ್ತು ನೀಡಿದ್ದು ಅಗತ್ಯ ಸೌಲಭ್ಯ ಒದಗಿಸಲು ತಾವು ಬದ್ದವಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ನುಡಿದರು. ಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಬೆಂಗಳೂರಿನ ಪೆಂಟಾಪ್ಯೂರ್ ಕಂಪನಿ ಹಾಗೂ ಗ್ರಾಪಂ ಸಂಯುಕ್ತಾಶ್ರಯಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹುಳಿಯಾರಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು.ಜಿಪಂ ಸದಸ್ಯೆ ಮಂಜುಳಮ್ಮ,ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಮ್ಮ,ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ಉಪಾಧ್ಯಕ್ಷ ಗಣೇಶ್,ವಾರ್ಡ್ ಸದಸ್ಯ ಧನುಷ್ ರಂಗನಾಥ್,ದಯಾನಂದ್ ಚಿತ್ರದಲ್ಲಿದ್ದಾರೆ. ಹುಳಿಯಾರು ಭಾಗದಲ್ಲಿ ನೀರಿನ ಸಮಸ್ಯೆ ತೀವ್ರತರವಾಗಿದ್ದು ಇಲ್ಲಿ ದೊರೆಕುವ ನೀರಿನ ಟಿಡಿಎಸ್ ಗರಿಷ್ಟ ಮಟ್ಟಮುಟ್ಟಿದ್ದು ಫ್ಲೋರೈಡ್‌ಯುಕ್ತ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಇಲ್ಲಿನ ಜನರಿಗೆ ಶುದ್ದ ಕುಡಿಯುವ ನೀರು ಕೊಡಲು ಸಂಕಲ್ಪಮಾಡಿದ ಫಲವಾಗಿ ಇಂದು ಎರಡು ರೂಪಾಯಿಗೆ ಹತ್ತು ಲೀಟರ್ ನೀರು ಕೊಡುವ ಈ ಘಟಕಕ್ಕೆ ಚಾಲನೆ ನೀಡಲಾಗಿದೆ.ಈ ಘಟಕದ ನೀರು ಸುರಕ್ಷಿತವಾಗಿದ್ದು ಅತಿ ಕಡಿಮೆ ದರಕ್ಕೆ ನೀರು ಸಿಗುವ ಜತೆಗೆ ಶುದ್ಧ ನೀರಿನಿಂದ ಜನರ ಆರೋಗ್ಯ ಸಮಸ್ಯೆಗ

ಬೋರನಕಣಿವೆ ಸಾಯಿ ಮಂದಿರದಲ್ಲಿ ಇಂದು ಹುಣ್ಣಿಮೆ ಪೂಜೆ

ಹುಳಿಯಾರು ಸಮೀಪದ ಬೋರನಕಣಿವೆಯ ಸಾಯಿಬಾಬ ಮಂದಿರದಲ್ಲಿ ಹುಣ್ಣಿಮೆ ಪೂಜೆ ಏರ್ಪಡಿಸಲಾಗಿದೆ.ಇದರಂಗವಾಗಿ ಮುಂಜಾನೆ ಬಾಬಾಗೆ ಕಾಕಡಾರತಿ ನಂತರ ಸತ್ಯನಾರಾಯಣಪೂಜೆ ,೧೨ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯ್ಗವಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯ ವಿಠಲ್ ಕೋರಿದ್ದಾರೆ, ಹುಳಿಯಾರಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಪೂಜೆ ಅಂಗವಾಗಿ ವಿಶೇಷ ಪೂಜೆ ಹಾಗೂ ಸಂಜೆ ಭಜನೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಇಂದು ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಹುಳಿಯಾರು ಪಟ್ಟಣದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಸೋಮವಾರದಂದು ಚಾಲನೆ ನೀಡಲಿದ್ದಾರೆ.ಬೆಳಿಗ್ಗೆ ಹತ್ತು ಗಂಟೆಗೆ ಗ್ರಾಮಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರುಗಳು,ದೇವಾಲಯ ಸಮಿತಿ ಸದಸ್ಯರುಗಳ ಸಮ್ಮುಖದಲ್ಲಿ ಉದ್ಘಾಟನ ಸಮಾರಂಭ ಏರ್ಪಡಿಸಲಾಗಿದೆ. ನೀರಿನ ಘಟಕದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ ಮಾತನಾಡಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್ ಹುಳಿಯಾರಿನಲ್ಲಿ ಬಳಸಲಾಗುತ್ತಿರುವ ನೀರಿನಲ್ಲಿ ಹೆಚ್ಚಿನ ಫ್ಲೋರೈಡ್ ಅಂಶವಿದ್ದು, ಈ ನೀರು ಬಳಸಿದಲ್ಲಿ ಜನರು ಹಲವು ರೋಗಗಳಿಗೆ ತುತ್ತಾಗುತ್ತಾರೆ.ಹಾಗಾಗಿ ಶುದ್ದಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಿಂದ ಶುದ್ಧ ನೀರಿನ ಘಟಕ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರತಿ ಘಟಕಕ್ಕೆ 11 ರಿಂದ 12 ಲಕ್ಷ ವೆಚ್ಚವಾಗಲಿದ್ದು ಎರಡು ರೂಪಾಯಿಗೆ ಇಪ್ಪತ್ತು ಲೀಟರ್ ಶುದ್ದನೀರು ದೊರೆಯಲಿದೆ.

ವಿದ್ಯುತ್ ವೈರ್ ತುಳಿದು ರೈತನ ಸಾವು

ಹುಳಿಯಾರು ಹೋಬಳಿ ಭಟ್ಟರಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ವಿದ್ಯುತ್ ತಂತಿ ತುಳಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ಭಟ್ಟರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತವ್ಯಕ್ತಿಯು ಭಟ್ಟರಹಳ್ಳಿ ವಾಸಿ ಶಿವಣ್ಣ (೫೦) ಎಂದು ಗುರುತಿಸಲಾಗಿದೆ. ಈತ ತಮ್ಮ ತೆಂಗಿನ ತೋಟಕ್ಕೆ ನಡೆದು ಹೋಗುತ್ತಿರುವಾಗ ಮಾರ್ಗಮಧ್ಯೆ ವಿದ್ಯುತ್ ಕಂಬದಿಂದ ಕೃಷಿ ಪಂಪಸೆಟ್‌ಗೆ ಎಳೆಯಲಾಗಿದ್ದ ಮೈನ್ಸ್ ವೈರ್ ಆಕಸ್ಮಿಕವಾಗಿ ಕಟ್ಟಾಗಿ ಬಿದ್ದಿದೆ. ಇದನ್ನು ಗಮನಿಸದ ಶಿವಣ್ಣ ವಿದ್ಯುತ್‌ನ ಮೈನ್ಸ್ ವೈರ್ ತುಳಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬೆಸ್ಕಾಂನ ಎ.ಇ.ಇ. ರಾಜಶೇಖರ್ ಹಾಗೂ ಹುಳಿಯಾರು ಪೊಲೀಸ್ ಸ್ಥಳಕ್ಕೆ ತೆರಳಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಎಪಿಎಂಸಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಅಶೋಕ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. 

ಹುಳಿಯಾರು:ಉತ್ತಮ ಮಳೆ

ಹುಳಿಯಾರು ಪಟ್ಟಣದಲ್ಲಿ ಶನಿವಾರ ಮುಂಜಾನೆಯಿಂದದ ಸತತ ಮೂರು ಘಂಟಗಳ ಕಾಲ ಬಂದ ಮಳೆಯಿಂದಾಗಿ ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಯಿತು. ಗುರುವಾರ ರಾತ್ರಿ ಕೂಡ ಗುಡುಗು ಸಹಿತ ಮಳೆಯಾಗಿತ್ತು.ಹವಮಾನ ಇಲಾಖೆಯ ಪ್ರಕಾರ ಬಂಗಾಳ ಕೊಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಭಾನುವಾರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯಲು ಕಾರಣ ಎನ್ನಲಾಗಿದೆ. ಭಾನುವಾರ ಬಂದ ಮಳೆಯಿಂದ ಬಸ್ ನಿಲ್ದಾಣ ತುಂಬಿ ಸಂಚಾರಕ್ಕೆ ಅಡಿಯಾಗಿರುವುದು. ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲೂ ಕೂಡ ಮಳೆಯಾಗಿದ್ದು ಕೆರೆಕಟ್ಟೆಗಳಿಗೆ ನೀರು ಬರಲು ಸಹಕಾರಿಯಾಗಿದೆ.ಎಲ್ಲಡೆ ತೋಟತುಡಿಕೆಗಳಲ್ಲಿ ನೀರು ನಿಲ್ಲುವ ಮಟ್ಟಕ್ಕೆ ಮಳೆಯಾಗಿದ್ದು ತೆಂಗುಬೆಳೆಗಾರರಿಗೆ ಹರ್ಷ ಮೂಡಿಸಿದೆ.ಎರಡುಮೂರು ದಿನದೀಂದ ಬರುತ್ತಿರುವ ತುಂತುರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಮುಂಜಾನೆ ಸುರಿದ ಮಳೆಯಿಂದ ಬಸ್ ನಿಲ್ದಾಣದಲ್ಲಿ ನೀರು ನಿಂತು ಓಡಾಡಲು ಕಷ್ಟವಾಗಿ ಪರಿಣಮಿಸಿತು.ಈ ಬಗ್ಗೆ ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಿಸದಿರುವುದು ಕಾರಣವಾಗಿದ್ದು ಇನ್ನೂ ಹೆಚ್ಚಿನ ಮಳೆ ಆದಲ್ಲಿ ಸಾಕಷ್ಟು ಸಮಸ್ಯೆಯಾಗಲಿದ್ದು ಈ ಬಗ್ಗೆ ಪಂಚಾಯ್ತಿಯವರು ತುರ್ತಾಗಿ ಗಮನ ಹರಿಸುವ ಅವಶ್ಯಕತೆಯಿದೆ.

ಹುಳಿಯಾರಿನಲ್ಲಿ ಕರ್ನಾಟಕ ಬಂದ್‌ ಯಶಸ್ವಿ

ಮಹದಾಯಿ ಮತ್ತು ಕಳಸಾ-ಬಂಡೂರಿಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತಸಂಘ ಶನಿವಾರದಂದು ಕರೆದಿದ್ದ ಬಂದ್ ಗೆ ಹುಳಿಯಾರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಅಂಗಡಿಮುಗ್ಗಟ್ಟುಗಳು,ಹೋಟೆಲ್ ಗಳನ್ನು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ಮುಖಾಂತರ ಹೋರಾಟಕ್ಕೆ ಕೈಜೋಡಿಸಿದರು. ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಹುಳಿಯಾರು ಎಪಿಎಂಸಿಅಂಗಡಿಗಳು ಬಾಗಿಲು ಮುಚ್ಚಿರುವುದು. ಮುಂಜಾನೆ ಸುರಿದ ಮಳೆಯು ಕೂಡ ಬಂದ್ ಗೆ ಸಹಕಾರಿಯಾಗಿದ್ದು ಹತ್ತು ಗಂಟೆಯವರೆಗೂ ಮಳೆ ಬರುತ್ತಿದ್ದರಿಂದ ಜನ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿ ಬಂದ್ ನ ಯಶಸ್ಸಿಗೆ ಕಾರಣವಾಯಿತು.  ವರ್ತಕರ ಸಂಘ, ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರು, ಕಾರ್ಮಿಕರು,ಕನ್ನಡಪರ ಸಂಘಟನೆಗಳು,ರೈತಸಂಘ ಸೇರಿದಂತೆ ಮುಂತಾದ ಸಂಘಟನೆಳು ಬಂದ್‌ಗೆ ಸಾಥ್‌ ನೀಡಿದ್ದರಿಂದ ಯಾವುದೇ ವ್ಯಾಪಾರ ವ್ಯವಹಾರ ಜರುಗದೆ ಪಟ್ಟಣ ವ್ಯವಹಾರ ಬಹುತೇಕ ಸ್ತಬ್ಧವಾಗಿತ್ತು. ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.ಮೆಡಿಕಲ್ ಸ್ಟೋರ್,ಆಸ್ಪತ್ರೆ,ಪೆಟ್ರೋಲ್ ಬಂಕ್ ಎಂದಿನಂತೆ ತೆರದಿತ್ತು.ಖಾಸಗಿ ಬಸ್ ಗಳು,ಲಾರಿಗಳು,ಆಟೋಗಳು,ಟೂರಿಸ್ಟ್‌ ಟ್ಯಾಕ್ಸಿಗಳು ರಸ್ತೆಗಿಳಿಯದಿದ್ದರಿಂದ ಬಹುತೇಕ ನಿರ್ಜನವಾಗಿತ್ತು. ಕೆ ಎಸ್ ಆರ್ಟಿಸಿ ಬಸ್‌ಗಳು ಕೂಡ ಆಗಮಿಸದ್ದರಿಂದ ಬಸ್‌ ಸಂ

ದಸೂಡಿಯಲ್ಲಿ ಗಣಪತಿ ವಿಸರ್ಜನೆ ಸಂಭ್ರಮ

Add caption ಹುಳಿಯಾರು ಸಮೀಪದ ದಸೂಡಿಯಲ್ಲಿ ಗಣಪತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು .   ಶ್ರೀ ವಿನಾಯಕಾಂಜನೇಯಸ್ವಾಮಿ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶವಮುರ್ತಿಯನ್ನು ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ರಾಜಬೀದಿಯಲ್ಲಿ ಬೆಳ್ಳಿಯರಥದಲ್ಲಿ ಕೂರಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಜನರು ವಿಘ್ನ ನಿವಾರಕನಿಗೆ ಜಯಕಾರ ಹಾಕಿದರು.             ಈ ಸಂದರ್ಭದಲ್ಲಿ ವಿನಾಯಕನ ಕಾಯ್ರಕ್ರಮವನ್ನು ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿಸಿದ ಶ್ರೀ ವಿನಾಯಕಾಂಜನೇಯಸ್ವಾಮಿ ಸಂಘದ ಕಾರ್ಯಕರ್ತರಾದ ಪ್ರಸನ್ನ ನಾಯ್ಕ ದಸೂಡಿ, ಪ್ರಶಾಂತ್, ಹಿರಣ್ಣಯ್ಯ, ಸಂಗಮ್ , ಶ್ರೀನಿವಾಸ್, ಕುಮಾರ್, ಶರತ್ ಮತ್ತು ಇನ್ನಿತರರಿಗೆ ಯುವ ಮುಖಂಡರಾದ ಆರ್. ಜನಾರ್ಧನ್ ಅಭಿನಂದನೆ ತಿಳಿಸಿ ಸನ್ಮಾನ ಮಾಡಿದರು.ರಂಗಸ್ವಾಮಯ್ಯ ಉಪಸ್ಥಿತರಿದ್ದರು. ಅದ್ದೂರಿ ಉತ್ಸವದ ನಂತರ ವಿಶೇಷ ಪೂಜೆ ಹಾಗೂ ಮಂಗಳಾರತಿ ಸಲ್ಲಿಸಿ ಕೆರೆಯಲ್ಲಿ ಶ್ರೀ ಸ್ವಾಮಿಯನ್ನು ವಿಸರ್ಜಿಸಲಾಯಿತು,

ಶಾಲಾಭಿವೃದ್ಧಿ ಸಮಿತಿಗೆ ಆಯ್ಕೆ

ಹುಳಿಯಾರು ಕ್ಲಸ್ಟರ್‌ನ ಕೆಂಕೆರೆ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನೂತನವಾಗಿ ಶಾಲಾಭಿವೃದ್ಧಿ ಸಮಿತಿ ರಚಿಸಿ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಚ್.ಎಸ್. ನಾಗರಾಜು, ಉಪಾಧ್ಯಕ್ಷರಾಗಿ ಪ್ರೇಮಕುಮಾರಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯ ಶಿಕ್ಷಕರು ಕೆ.ಶಾಂತವೀರಯ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಕ ಎಸ್.ಜಯಣ್ಣ ವಂದಿಸಿದರು. ಸಭೆಯಲ್ಲಿ ಎಲ್ಲಾ ಸದಸ್ಯರು ಸಹಶಿಕ್ಷಕರು, ಪೋಷಕರು ಹಾಜರಿದ್ದರು

ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಹುಳಿಯಾರು: ರೈತ ಸಂಘದ ಪುನರ್ ರಚನೆ ನಡೆದು ಹೋಬಳಿ ಘಟಕದ ನೂತನ ಅಧ್ಯಕ್ಷರ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷರಾದ ಚಂದ್ರಣ್ಣ ಮತ್ತು ಜಯಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಹೋಬಳಿ ಅಧ್ಯಕ್ಷರಾಗಿ ಎನ್. ಬಸವರಾಜು, ಉಪಾಧ್ಯಕ್ಷರಾಗಿ ಎಚ್. ಕೆ.ರಾಜಶೇಖರಯ್ಯ, ಕಾರ್ಯದರ್ಶಿಯಾಗಿ ಗೋಪಿನಾಯ್ಕ, ಪ್ರಧಾನ ಸಂಘಟನಾ ಸಂಚಾಲಕರಾಗಿ ರಂಗನಾಥ, ಸಂಚಾಲಕರಾದ ಕೆ.ಎಸ್.ಮೋಹನ್ ಕುಮಾರ್, ಕರಿಯಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಗ್ರಾಮ ಘಟಕದ ಅಧ್ಯಕ್ಷರಾಗಿ ಬಸವರಾಜು, ಪೊಚಕಟ್ಟೆ ಅಧ್ಯಕ್ಷ ನಾರಾಯಣಪ್ಪ, ಪದಾಧಿಕಾರಿಗಳಾದ ಹೊಸಳ್ಳಿ ಪಾಳ್ಯ ಗಂಗಣ್ಣ, ನಂದಿಹಳ್ಳಿ ಹನುಮಂತಯ್ಯ, ಜಯಣ್ಣ, ಎನ್.ಬಿ. ರಮೇಶ್, ಎಸ್‌ಎಂಪಿ ಲೋಕೇಶ್, ಬಳ್ಳೆಕಟ್ಟೆ ನಾಗಣ್ಣ, ಜಮಿವುಲ್ಲಾ, ಅಬೂಬ್‌ಖಾನ್, ಮಹಮದ್‌ಜಿಲಾನ್ ಮತ್ತಿತರರು ಭಾಗವಹಿಸಿದ್ದರು.

ವದಂತಿಗೆ ಕಿವಿಗೊಡಬೇಡಿ

ಪಟ್ಟಣದಲ್ಲಿ ಮಕ್ಕಳ ಅಪಹರಣದ ವದಂತಿ ಹಬ್ಬಿರುವ ಹಿನ್ನಲೆಯಲ್ಲಿ ಗಾಳಿಸುದ್ದಿಗೆ ಕಿವಿಗೊಡಬೇಡಿರೆಂದು ಪೋಲಿಸ್ ಇಲಾಖೆಯಿಂದ ಹುಳಿಯಾರಿನ ವಾಸವಿ ಶಾಲೆಯ ಮಕ್ಕಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸೈ ನರಸಿಹಯ್ಯ ,ಎಎಸೈ ಶಿವಪ್ಪ ಮಾತನಾಡಿದರು.

ಕೃಷ್ಣ ವೇಷಭೂಷಣ ಸ್ಪರ್ಧೆ

ಹುಳಿಯಾರಿನ ವಾಸವಿ ಶಾಲೆಯಲ್ಲಿ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಕೃಷ್ಣರಾಧೆಯರ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟ್ಟಾಣಿಗಳು

ಮಕ್ಕಳ ಅಪಹರಣಕಾರನೆಂಬ ಗುಮಾನಿ:ಸಾರ್ವಜನಿಕರಿಂದ ಥಳಿತ

ಪೋಲಿಸ್ ಠಾಣೆಯ ಮುಂದೆ ಜಮಾಯಿಸಿರುವ ಸಾರ್ವಜನಿಕರು. ಯುವಕನೊಬ್ಬ ಬಾಲಕಿಯನ್ನು ಹಿಡಿದು ಎಳೆದಾಡಿದ ಪರಿಣಾಮ ಸಾರ್ವಜನಿಕರಿಂದ ಗೂಸ ತಿಂದ ಪ್ರಕರಣ ಹುಳಿಯಾರಿನ ದುರ್ಗಮ್ಮನ ದೇವಾಲಯದ ಮುಂದೆ ರಾತ್ರಿ ಏಳೂವರೆ ಸುಮಾರಿಗೆ ಜರುಗಿತು. ದೇವಾಲಯದ ಮುಂದೆ ನಿಂತಿದ್ದ ಬಾಲಕಿಯನ್ನು ಕೈಹಿಡಿದೆಳೆದಾಗ ಬಾಲಕಿ ಚೀರಾಡಿದ ಪರಿಣಾಮ ಆಕೆಯ ಕೈಬಿಟ್ಟು ತಪ್ಪಿಸಿಕೊಂಡು ಓಡುತ್ತಿದ್ದ ಆತನನ್ನು ಅಟ್ಟಿಸಿಕೊಂಡು ಬಸ್ ನಿಲ್ದಾಣದ ಬಳಿ ಹಿಡಿದ ಸಾರ್ವಜನಿಕರು ಸರಿಯಾಗಿ ಥಳಿಸಿ ಪೋಲಿಸರಿಗೊಪ್ಪಿಸಿದ್ದಾರೆ.ಆತ ಮಕ್ಕಳ ಕಳ್ಳನೆಂದೆ ದೇವಾಲಯದ ಮುಂದೆ ಸೇರಿದ್ದ ನೂರಾರು ಮಹಿಳೆಯರು ಪೋಲಿಸರೊಂದಿಗೆ ವಾಗ್ವಾದಕ್ಕಿಳಿದರು. ಕಳೆದೊಂದು ವಾರದಿಂದ ಮಕ್ಕಳ ಅಪಹರಣಕಾರರ ಸುದ್ದಿಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ಈತನನ್ನು ಮಕ್ಕಳ ಕಳ್ಳನೆಂದೆ ಬಗೆದು ಪೋಲಿಸ್ ಠಾಣೆಯ ಮುಂದೆ ಜಮಾಯಿಸಿ ಆತನನ್ನು ತಮಗೊಪ್ಪಿಸುವಂತೆ ಇಲ್ಲವೇ ಸರಿಯಾಗಿ ಆತನ ವಿಚಾರಣೆ ಮಾಡುವಂತೆ ಒತ್ತಾಯಿಸಿದರು. ಠಾಣೆಯ ಮುಂದೆ ಜಮಾಯಿಸಿದ್ದ ನೂರಾರು ಮಂದಿಯನ್ನು ನಿಭಾಯಿಸುವಷ್ಟರಲ್ಲಿ ಪೋಲಿಸರು ಹೈರಾಣಾದರು.ಇದೇ ವೇಳೆ ಜಮಾಯಿಸಿದ್ದ ಮಹೆಳೆಯರು ಮಕ್ಕಳ ಅಪಹರಣಕಾರರನ್ನು ಪೋಲಿಸರು ಶಿಕ್ಷಿಸದೆ ರಕ್ಷಿಸುತ್ತಿದ್ದಾರೆಂದು ಆರೋಪಿಸಿದರು. ಸಧ್ಯ ನಡೆದ ವಿಚಾರಣೆ ವೇಳೆಯಲ್ಲಿ ಈತ ಸಿಂಗಾಪುರ ಗ್ರಾಮದವನಾಗಿದ್ದು ಬುದ್ದಿಮಾಂದ್ಯನೆಂದು ತಿಳಿದುಬಂದಿದ್ದು ಇದನ್ನೊಪ್ಪದ ಸಾರ್ವಜನಿಕರು ಪೋಲಿಸರು ಕ್ರಮ ಕ

ಮಕ್ಕಳ ಅಪಹರಣ ವದಂತಿಗೆ ಕಿವಿಗೊಡಬೇಡಿ

ಕಳೆದ ಮೂರ್ನಾಲ್ಕು ದಿನಗಳಿಂದ ಹುಳಿಯಾರು ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಕ್ಕಳ ಅಪಹರಣದ ಬಗ್ಗೆ ಹಬ್ಬಿರುವ ವದಂತಿ ಸುಳ್ಳಾಗಿದ್ದು,ಇಂತಹ ಯಾವುದೇ ಪ್ರಕರಣಗಳು ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿಲ್ಲದಿದ್ದು ಈ ಬಗ್ಗೆ ಸಾರ್ವಜನಿಕರು,ಪೋಷಕರು ಆತಂಕಕ್ಕೆ ಒಳಾಗಾಗುವ ಅಗತ್ಯವಿಲ್ಲವೆಂದು ಹುಳಿಯಾರು ಠಾಣೆಯ ಎ ಎಸ್ ಐ ಶಿವಪ್ಪ ಮನವಿ ಮಾಡಿದರು. ಅವರು ಪಿಎಸ್ ಐ ನರಸಿಂಹಯ್ಯನವರ ಮಾರ್ಗದರ್ಶನದಲ್ಲಿ ಪಟ್ಟಣದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಭೆ ನಡೆಸಿದಲ್ಲದೆ ನಂತರ ತಾವೇ ಖುದ್ದಾಗಿ ಆಟೋದಲ್ಲಿ ಸಾರ್ವಜನಿಕವಾಗಿ ಮೈಕ್ ಹಾಕಿಕೊಂಡು ಪ್ರಚಾರ ನಡೆಸಿದರು.  ಹುಳಿಯಾರು ಪಟ್ಟಣದಲ್ಲಿ ಮಕ್ಕಳ ಅಪಹರಣದ ಬಗ್ಗೆ ಹಬ್ಬಿರುವ ಸುಳ್ಳುವದಂತಿಗಳಿಗೆ ಕಿವಿಗೊಡಬಾರದೆಂದು ಸಾರ್ವಜನಿಕರಿಗೆ ತಾವೇ ಖುದ್ದಾಗಿ ತೆರಳಿ ಮನವಿ ಮಾಡುತ್ತಿರುವ ಎ ಎಸ್ ಐ ಶಿವಪ್ಪ. ವಿದ್ಯಾವಾರಿಧಿ,ಕನಕದಾಸ,ವಾಸವಿ ಮತ್ತಿತರ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಅನಗತ್ಯ ಭಯ ಬೇಡವೆಂದು ತಿಳಿಸಿದರು.ಮಕ್ಕಳನ್ನು ಅಪಹರಿಸಿ ಕಣ್ಣುಕೀಳುವ,ಕಿಡ್ನಿ ಕಸಿಯುವ ಬಗ್ಗೆ ಹಬ್ಬಿರುವ ವದಂತಿಗಳಿಗೆ ಪೋಷಕರು ಭಯಭೀತರಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಭಯಪಡುವ ಪ್ರಮೇಯ ಬೇಡವೆಂದರು.ಶಾಲಾಗಳಲ್ಲಿ ಮಕ್ಕಳ ಪೋಷಕರನ್ನು ಹೊರತು ಪಡಿಸಿ ಸಂಬಂಧಿಕರೆಂದು ಹೇಳಿಕೊಂಡು ಬರುವ ಯಾವುದೇ

ಇಂದಿರಾಗಾಂಧಿ–ರಾಜೀವ್‌ಗಾಂಧಿ ಭಾವಚಿತ್ರದ ಅಂಚೆ ಚೀಟಿ ರದ್ದತಿಗೆ ಆಕ್ರೋಶ

                           ಅಂಚೆ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ                                  ------------------------------------- ಇಂದಿರಾ ಮತ್ತು ರಾಜೀವ್‌ಗಾಂಧಿ ಭಾವಚಿತ್ರದ ಅಂಚೆಚೀಟಿಗಳನ್ನು ರದ್ದುಪಡಿಸುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಹುಳಿಯಾರಿನ ಅಂಚೆ ಕಚೇರಿ ಎದುರು ಪ್ರತಿಭಟಿಸಿದರು.ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಭಾವಚಿತ್ರದ ಅಂಚೇಚೀಟಿಗಳನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದಿರಾ ಮತ್ತು ರಾಜೀವ್‌ಗಾಂಧಿ ಭಾವಚಿತ್ರದ ಅಂಚೆಚೀಟಿಗಳನ್ನು ರದ್ದುಪಡಿಸುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಹುಳಿಯಾರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಅಂಚೆ ಕಚೇರಿ ಎದುರು ಪ್ರತಿಭಟಿಸಿದರು. ದೇಶಕ್ಕೆ ಉನ್ನತ ಕೊಡುಗೆ ನೀಡಿದ ಪ್ರಧಾನಮಂತ್ರಿಗಳ ಭಾವಚಿತ್ರವಿರುವ ಅಂಚೆಚೀಟಿಗಳನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಈ ರಾಷ್ಟ್ರನಾಯಕರಿಗೆ ಅವಮಾನ ಮಾಡಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣ, ಗರೀಬಿ ಹಠಾವೋ ಮುಂತಾದ ಜನಪರ ಕಾರ್ಯಕ್ರಮಗಳ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಇಂದಿರಾ ಗಾಂಧಿಯಂತಹ ನಾಯಕರ ಭಾವಚಿತ್ರವುಳ್ಳ ಅಂಚೆ ಚೀಟಿಗಳನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಹೊಸಳ್ಳಿ ಅಶೋಕ

ಪಿಡಿಒ ಗೈರು :ಸ್ಥಗಿತಗೊಂಡ ಆಡಳಿತ

                                     ಗ್ರಾ.ಪಂಚಾಯ್ತಿಗೆ ಸದಸ್ಯರಿಂದಲೇ ಬೀಗ                                                     ---------------- ರಜೆ ಮೇಲೆ ತೆರಳಿರುವ ಪಿಡಿಓ ಗೈರು ಹಾಜರಿಯಿಂದ ಉದ್ಯೋಗಖಾತ್ರಿ ಯೋಜನೆ ಹಾಗೂ ವಸತಿ ಯೋಜನೆ ಸ್ಥಗಿತಗೊಂಡಿದ್ದು ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯರೇ ಕಚೇರಿಗೆ ಬೀಗ ಜಡಿದಿರುವ ಘಟನೆ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆಯಲ್ಲಿ ಗುರುವಾರ ಜರುಗಿದೆ. ಇಲ್ಲಿನ ಪಿಡಿಓ ಕಳೆದ ಒಂದು ತಿಂಗಳಿಂದ ರಜೆ ಮೇಲೆ ತೆರಳಿರುವ ಪರಿಣಾಮ ಉದ್ಯೋಗ ಖಾತ್ರಿ ಕೆಲಸಗಳು ಸೇರಿದಂತೆ ಅನೇಕ ಕಾರ್ಯಗಳು ಸ್ಥಗಿತಗೊಂಡಿವೆ. ಅಲ್ಲದೆ ಸರ್ಕಾರದಿಂದ ವಸತಿ ಯೋಜನೆಯಡಿ ಮಾಡಬೇಕಿದ್ದ ಫಲಾನುಭವಿಗಳ ಆಯ್ಕೆ ಸಹ ನಡೆಸಲಾಗದೆ ವಸತಿಹೀನ ಬಡವರಿಗೆ ತೊಂದರೆಯಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಹುಳಿಯಾರು ಸಮೀಪದ ಹೊಯ್ಸಳಕಟ್ಟೆಯಲ್ಲಿ ಉದ್ಯೋಗ ಖಾತ್ರಿ ಹಾಗೂ ವಸತಿ ಯೋಜನೆ ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಗ್ರಾ.ಪಂಚಾಯ್ತಿ ಕಛೇರಿಗೆ ಸದಸ್ಯರು ಬೀಗ ಜಡಿದಿರುವುದು. ಕುಡಿಯುವ ನೀರು, ಬೀದಿದೀಪ, ಸ್ವಚ್ಛತೆ ನಿರ್ವಹಣೆಗಾಗಿ ಇನ್‌ಚಾರ್ಜ್ ಪಿಡಿಓ ನೀಡಲಾಗಿದ್ದು ಮೂಲ ಸೌಕರ್ಯ ಸೇವೆಯಲ್ಲಿ ತೊಡಕಿಲ್ಲದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಮೋಟಾರ್ ಕೆಟ್ಟರೆ, ಪೈಪ್ ಲೈನ್ ದುರಸ್ಥಿಗೆ, ಬೀದಿದೀಪ ಖರೀದಿಗೆ ಜೊತೆಗೆ ೧೩ ನೇ ಹಣಕಾಸು ಯೋಜನೆಯಲ

ಮೊಬೈಲ್ ಕರೆ ಮಾಡಿ ಎಟಿಎಂ ನಂಬರ್ ಪಡೆದು ಹಣ ವಂಚನೆ

        ತಾನು ಎಸ್ ಬಿಐ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಮೊಬೈಲ್ ಕರೆ ಮಾಡಿ ಮಾತನಾಡಿ ಖಾತೆದಾರನ ಎಟಿಎಂ ಕಾರ್ಡ್ ನಂಬರ್ ಹಾಗೂ ಪಾಸ್ ವರ್ಡ್ ಪಡೆದು ಕ್ಷಣಾರ್ಧದಲ್ಲೆ ಆತನ ಖಾತೆಯಿಂದ ಹನ್ನೆರಡು ಸಾವಿರಐದುನೂರು ರೂಪಾಯಿ ಲಪಾಟಾಯಿಸಿರುವ ಘಟನೆ ಪಟ್ಟಣದ ಎಸ್ ಬಿಐ ನಲ್ಲಿ ಜರುಗಿದೆ.                  ಪಟ್ಟಣದ ಕೋಳಿ ವ್ಯಾಪಾರಿ ಮುಬಾರಕ್ ಪಾಷ ಎಂಬುವರೆ ಹಣ ಕಳೆದುಕೊಂಡವರು.ಈತ ಎಸ್ ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಖಾತೆಯಿಂದ ಮೊದಲು ಐದು ಸಾವಿರ ನಂತರ ಏಳು ಸಾವಿರದ್ ಐದುನೂರು ರೂಪಾಯಿಗಳು ಪಾಸ್ ವರ್ಡ್ ಹೇಳಿದ ಒಂದೇ ನಿಮಿಷದಲ್ಲಿ ಕಳೆದುಕೊಂಡಿದ್ದಾನೆ.ಈ ಹಣ ಮುಂಬಯಿಯ ಖಾತೆಯೊದಕ್ಕೆ ಜಮಾವಾಗಿರುವ ಮೆಸೇಜ್ ಬಂದಿದೆ. ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನಂಬರ್ ಕೊಟ್ಟು ವಂಚನೆಗೊಳಪಟ್ಟ ಹುಳಿಯಾರಿನ ಮುಬಾರಕ್ ಪಾಷ                   ಈತ ಕೋಳೀ ವ್ಯಾಪಾರಕ್ಕೆ ಕೋಳಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲ್ಲಿ ಈತನ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ತಾನು ಎಸ್ ಬಿಐ ಬ್ಯಾಂಕಿನ ಸಿಬ್ಬಂದಿ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ನಿನ್ನ ಎಟಿಎಂ ಕಾರ್ಡಿನಲ್ಲಿನ ತಾಂತ್ರಿ ಸಮಸ್ಯೆಯಿಂದ ಕಾರ್ಡ್ ಲಾಕ್ ಮಾಡಲಾಗುತ್ತದೆ ಎಂದು ಹೇಳಿದ್ದಾನೆ.ಲಾಕ್ ಆದರೆ ಸಮಸ್ಯೆಯಾಗುತ್ತದೆ ಇದಕ್ಕೇನು ಮಾಡಬೇಕೆಂದು ಕೇಳಿದಾಗ ಅದನ್ನು ಸರಿಮಾಡಲು ನಿಮ್ಮ ಎಟಿಎಂ ನಂಬರ್ ಹಾಗೂ ಮೆಸೇಜ್ ನಲ್ಲಿ ಬರುವ ಓಟಿಪಿ ನಂಬರ್ ತಿಳಿಸುವಂತೆ ಹೇಳಿ

ರಾಸುಗಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಹುಳಿಯಾರು ಹೋಬಳಿ ದಬ್ಬಗುಂಟೆ ಗ್ರಾಮದಲ್ಲಿ ಕಾಲು ಬಾಯಿ ಲಸಿಕೆ ಕಾರ್ಯಕ್ರಮಕ್ಕೆ ದಸೂಡಿ ಗ್ರಾ.ಪಂ. ಮಾಜಿ ಅ‘್ಯಕ್ಷ ದಬ್ಬಗುಂಟೆ ರವಿಕುಮಾರ್ ಚಾಲನೆ ನೀಡಿದರು. ಇಂದು ಹೈನುಗಾರಿಕೆ ಲಾಭದಾಯಕವಾಗಿದ್ದು ರಾಸುಗಳನ್ನು ಸಾಕುವುದು ಉದ್ಯಮವಾಗಿ ಮಾರ್ಪಟ್ಟಿದೆ.ಉತ್ತಮ ಹಸುಗಳನ್ನು ಸಾಕಿ ಅವುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಪೋಷಿಸಿದಲ್ಲಿ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದರು. ರೈತರು ರಾಸುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತಾಳಿದಲ್ಲಿ ರೋಗ ಉಲ್ಬಣವಾಗಿ ಸಾವನ್ನಪ್ಪಿದಾಗ ಜೀವನ ನಡೆಸಲಾಗದೆ ಪಶ್ಚಾತ್ತಾಪಪಡುವಂತಾಗುತ್ತದೆ. ಹಾಗಾಗಿ ಕೇವಲ ಹಾಲು ಕರೆಯುವಾಗ ಮಾತ್ರವಲ್ಲದೆ ಮೇವು ತಿನ್ನಿಸುವಾಗ, ನೀರು ಕುಡಿಸುವಾಗ ಸೇರಿದಂತೆ ಆಗಾಗ ಅದರ ಮೈ ಸವರುವ, ದೇಹದಲ್ಲಾಗುವ ಬದಲಾವಣೆ ಗಮನಿಸುವ ಮೂಲಕ ಅನಾರೋಗ್ಯದ ಬಗ್ಗೆ ಸುಳಿವು ಅರಿವು ತಕ್ಷಣ ಚಿಕಿತ್ಸೆ ಕೊಡಿಸುವುದನ್ನು ರೂಢಿಸಿಕೊಂಡರೆ ಒಳಿತು ಎಂದರು. ದಬ್ಬಗುಂಟೆ ಪ್ರಾಥಮಿಕ ಪಶು ಚಿಕಿತ್ಸಾಲಯದ ಎಲ್.ರವೀಂದ್ರ ಅವರು ಮಾತನಾಡಿ ಲಸಿಕೆ ಹಾಕುವುದರಿಂದ ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿ ಆರೋಗ್ಯಕರವಾಗಿರಲು ಸಹಕಾರಿಯಾಗುತ್ತದೆ. ರೈತರು ತಮ್ಮ ರಾಸುಗಳ ಬಗ್ಗೆ ಗಮನ ನೀಡಬೇಕು, ಕಾಲುಬಾಯಿ ರೋಗ ಗಾಳಿ ಮುಖಾಂತರ ಹರಡುತ್ತದೆ, ಹಾಗಾಗಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು, ಕ್ರಿಮಿನಾಶಕ ದ್ರಾವಣ ಸಿಂಪಡಿಸುವುದು, ಮೃದು ಆಹಾರವಾದ ಗಂಜಿ, ಬಾಳೆಹಣ್ಣು, ರಾಗಿ ಅಂಬಲಿ ತಿನ್ನಿಸುವುದು

ತಾಪಂ,ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಥಾನ ಕೊಡಿಸುವುದೇ ಗುರಿ

ಹುಳಿಯಾರು ಎಪಿಎಂಸಿ ಚುನಾವಣೆಯಲ್ಲಿ ಈ ಬಾರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅನ್ನು ಮುಂದಿನ ತಾಪಂ,ಜಿಪಂ ಚುನಾವಣೆಯಲ್ಲೂ ಸಹ ಅಧಿಕಾರಕ್ಕೆ ತಂದು ಕೂರಿಸುವುದೇ ನನ್ನ ಗುರಿ ಎಂದು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಘೋಷಿಸಿದರು. ಹುಳಿಯಾರು ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಸಿ.ಸಿದ್ಧರಾಮಯ್ಯ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡರುಗಳು. ಹುಳಿಯಾರು ಎಪಿಎಂಸಿ ಅಧ್ಯಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸಂತಸ ಹಂಚಿಕೊಳ್ಳಲು ವೈ.ಸಿ.ಸಿದ್ಧರಾಮಯ್ಯ ಅವರ ಮನೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ನಾನು ಸೋಲುಂಡಿದ್ದರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಇದರ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ೬೦ ಸಾವಿರಕ್ಕೂ ಹೆಚ್ಚು ಮತಗಳು ಲಭಿಸಿದ್ದು ಅಲ್ಲದೆ ನಂತರದ ಎಲ್ಲ ಚುನಾವಣೆಗಳಲ್ಲೂ ಮುನ್ನಡೆ ಸಾಧಿಸುತ್ತಾ ನಡೆದಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತಿರುವ ಸೂಚನೆಯಾಗಿದೆ .ಸಧ್ಯ ಬರಲಿರುವ ತಾಪಂ,ಜಿಪಂ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಗೆ ಅಧಿಕಾರ ಹಿಡಿಯುವಂತೆ ಮಾಡುವುದೇ ನನ್ನ ಗುರಿ ಎಂದರು. ನೂತನ ಎಪಿಎಂಸಿ ಅಧ್ಯಕ್ಷ ವೈ.ಸಿ.ಸಿದ್ಧರಾಮಯ್ಯ ಮಾತನಾಡಿ ತಮ್ಮ ಮೇಲಿನ ವಿಶ್ವಾಸವಿಟ್ಟು ಗೆಲುವಿಗೆ ಕಾರಣರಾದ ಎಲ್ಲರಿಗೂ ತಾ

ಸಾಲ ಮರುಪಾವತಿಗೆ ಉದಾಸೀನ ಬೇಡ: ಕೆ.ಎಂ.ರಾಮಯ್ಯ

ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸದಸ್ಯರುಗಳು ಮರುಪಾವತಿ ಸಮಯದಲ್ಲಿ ಉದಾಸೀನ ಮಾಡಸೆ ಸಕಾಲಕ್ಕೆ ಕಟ್ಟುವ ಮೂಲಕ ಸಹಾಕಾರ ಸಂಘಗಳ ಅಭಿವೃದ್ಧಿಗೆ ಕಾರಣಿಕರ್ತರಾಗಬೇಕು ಎಂದು ಹುಳಿಯಾರು ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ರಾಮಯ್ಯ ಮನನಿ ಮಾಡಿದರು. ಅವರು ಪಟ್ಟಣದಲ್ಲಿ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಳಿಯಾರಿನ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಕೆ.ಎಂ.ರಾಮಯ್ಯ ಉದ್ಘಾಟಿಸಿದರು.  ಸಹಕಾರ ತತ್ವದಡಿ ಸೊಸೈಟಿ ಸ್ಥಾಪಿಸಲಾಗಿದ್ದು ಹಿಂದುಳಿದವರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಮ್ಮಲ್ಲಿ ಸಾಲ ಸೌಲಭ್ಯ ಸುಲಭವಾಗಿ ದೊರೆಯುತ್ತಿದ್ದು, ಇದನ್ನು ದುರ್ಬಳಕೆ ಮಾಡದೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕೆಂದು ತಿಳಿಸಿದರು. ಸಾಲ ಪಡೆದವರು ಮರುಪಾವತಿಗೆ ಹೆಚ್ಚು ಒತ್ತು ನೀಡಿದಲ್ಲಿ ಉಳಿದ ಸದಸ್ಯರಿಗೂ ಸಾಲದ ಯೋಜನೆ ಸಹಕಾರಿಯಾಗುತ್ತದೆ ಎಂದರು.            ಕಳೆದೆರಡು ವರ್ಷಗಳಿಂದ ಲೆಖ್ಖಪರಿಶೋಧಕರ ಸಮಸ್ಯೆಯಾಗಿದ್ದು ಬೇರೊಬ್ಬರನ್ನು ತೆಗೆದುಕೊಳ್ಳುವಂತೆ ತಿಳಿಸಿದ ಅವರು ಸಂಘದ ಸದಸ್ಯರುಗಳು ಬ್ಯಾಂಕಿನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮುಖಾಂತರ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು. ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಸದಸ್ಯರುಗಳಾ

ಹುಳಿಯಾರು ಎಪಿಎಂಸಿ ಚುನಾವಣೆ

ಕಾಂಗ್ರೆಸ್ ನ ಸಿದ್ಧರಾಮಯ್ಯ ಗೆಲುವು ==================== ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ಬಿಗಿ ಪೊಲೀಸ್ ಬಂದೋ ಬಸ್ತ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಸಿ.ಸಿದ್ಧರಾಮಯ್ಯ ಗೆಲುವು ಸಾಧಿಸಿದ್ದಾರೆ. ಇದುವರೆಗೂ ಅಧ್ಯಕ್ಷರಾಗಿದ್ದ ಬಿಜೆಪಿಯ ಸಣ್ಣಯ್ಯ ಅವರು ದಿಢೀರ್ ರಾಜೀನಾಮೆ ನೀಡಿದ್ದರಿಂದ ಶುಕ್ರವಾರದಂದು ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಸಿ.ಸಿದ್ಧ ರಾಮಯ್ಯ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಬಸವರಾಜು ನಡುವೆ ಹಣಾಹಣಿಯ ಸ್ಪರ್ಧೆ ನಡೆಯಿತು. ಹುಳಿಯಾರು ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಸಿ.ಸಿದ್ಧರಾಮಯ್ಯ ಅವರನ್ನು ಅಭಿಮಾನಿಗಳು ಅಭಿನಂದಿಸಿದರು ಒಟ್ಟು ಸ್ಥಾನ :ಹುಳಿಯಾರು ಎಪಿಎಂಸಿಗೆ ಹಾಲಿ ಸರ್ಕಾರದ ನಾಮ ನಿರ್ದೇಶನದ ೪ ಸದಸ್ಯರು ಸೇರಿ ಒಟ್ಟು ೧೫ ಮಂದಿ ಸದಸ್ಯರಿದ್ದು ಇವರಲ್ಲಿ ಸಿದ್ಧರಾಮಯ್ಯ ಅವರಿಗೆ ೮ ಹಾಗೂ ಬಸವರಾಜು ಅವರಿಗೆ ೭ ಮತ ಲಭಿಸಿದ್ದು ಸಿದ್ದರಾಮಯ್ಯವರು ೧ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೆದಿದ್ದು ಹೀಗೆ: ಎಪಿಎಂಸಿಯಲ್ಲಿ ಈ ಹಿಂದೆ ಕೇವಲ ಒಂದು ಸ್ಥಾನ ಹೊಂದಿದ್ದ ಕಾಂಗ್ರೆಸ್‌ಗೆ ಕಳೆದ ಚುನಾವಣೆ ನಂತರ ಸಣ್ಣಯ್ಯನವರು ಸೇರಿ ೩ ಮಂದಿ ಅಧಿಕೃತವಾಗಿ ಸೇರ್ಪಡೆಗೊಂಡು ನಾಲ್ಕಕ್ಕೆ ಏರಿತ್ತು.ಸರ್ಕಾರದ ನಾಮ ನಿರ್

ಯಳನಾಡುವಿನಲ್ಲಿ ಶುದ್ಧ ನೀರಿನ ಘಟಕಕ್ಕೆ ಶಂಕುಸ್ಥಾಪನೆ

ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸ ಹೊರಟಿರುವುದು ಶ್ಲಾಘನೀಯವಾಗಿದ್ದು ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸ್ಥಾಪಿಸಿರುವ ಈ ಘಟಕವನ್ನು ಸಾರ್ವಜನಿ ಕರು ಸದ್ಬಳಕೆ ಮಾಡಿ ಕೊಳ್ಳಬೇಕು. ಇದರಿಂದ ಆರೋಗ್ಯ ಉತ್ತಮವಾಗಿ ರುತ್ತದೆ ಎಂದು ತಾ.ಪಂ. ಮಾಜಿ ಸದಸ್ಯ ವೈ.ಆರ್. ಮಲ್ಲಿಕಾರ್ಜುನಯ್ಯ ತಿಳಿಸಿದರು. ಹುಳಿಯಾರು ಹೋಬಳಿ ಯಳನಡುವಿನಲ್ಲಿ ಸರ್ಕಾರದ ವತಿಯಿಂದ ನಿರ್ಮಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಬಹುಮುಖ್ಯ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಹಳ್ಳಿಹಳ್ಳಿಗೆ ಶುದ್ಧ ನೀರಿನ ಘಟಕ ತೆರೆದು ಕೇವಲ ೨ ರೂಗೆ ೨೦ ಲೀಟರ್ ಮಿನರಲ್ ವಾಟರ್ ಕೊಡುವ ಯೋಜನೆ ಪ್ರಾರಂಭಿಸಿರುವುದು ಶ್ಲಾಘನೀಯ. ಇಲ್ಲಿನ ನಿವಾಸಿಗಳು ಇದರ ಸದ್ಬಳಕೆ ಮಾಡಿಕೊಂಡು ಅಡಿಗೆ ಹಾಗೂ ಕುಡಿಯಲು ಇಂತಹ ನೀರನ್ನು ಬಳಸಿ ಆರೋಗ್ಯದಿಂದಿರುವಂತೆ ಕಿವಿ ಮಾತು ಹೇಳಿದರು. ಗ್ರಾ.ಪಂ.ಅಧ್ಯಕ್ಷ ಟಿ.ಎಸ್.ಬಸವರಾಜು ಅವರು ಮಾತನಾಡಿ ಯಳನಡು ಗ್ರಾಮ ಧಾರ್ಮಿಕ ಕ್ಷೇತ್ರವಾಗಿದ್ದು ಶ್ರೀ ಸಿದ್ಧರಾಮೇಶ್ವರ ಸ್ವಾಮಿಗೆ ರಾಜ್ಯಾದ್ಯಂತವಲ್ಲದೆ ಹೊರ ರಾಜ್ಯದಲ್ಲೂ ಭಕ್ತರಿದ್ದಾರೆ. ಸ್ವಾಮಿಯ ದರ್ಶನಕ್ಕೆ ನ

ಈ ಪಂಚಾಯ್ತಿ ಮಳಿಗೆಗಳಲ್ಲಿ ೧೮ ವರ್ಷದಿಂದ ಬಾಡಿಗೆ ವಸೂಲಿಯಾಗಿಲ್ಲ.

ಬಾಡಿಗೆಯು ಎಷ್ಟೆಂದು ನಿಗದಿಯೂ ಮಾಡಿಲ್ಲ ---------------------- ವರದಿ : ಡಿ.ಆರ್.ನರೇಂದ್ರ ಬಾಬು ಹುಳಿಯಾರು ಪಂಚಾಯ್ತಿ ಹಣ ಬಳಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ಮಳಿಗೆಯ ಬಾಡಿಗೆ ವಸೂಲಿ ಮಾಡಲು ಪಂಚಾಯ್ತಿ ಅಧಿಕಾರಿಗಳು ಅಸಡ್ಡೆ ಮಾಡಿದ ಪರಿಣಾಮ ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನೆಂಟು ವರ್ಷಗಳಿಂದ ಗ್ರಾಪಂ ಮಳಿಗೆಗಳ ಬಾಡಿಗೆ ವಸೂಲಿಯಾಗದೆ ಲಕ್ಷಾಂತರ ರೂಪಾಯಿ ಬಾಕಿ ಬೆಳದಿದೆ.ಆ ಬಾಕಿಯನ್ನಾದರೂ ವಸೂಲಿ ಮಾಡೋಣವೆಂದರೆ ಯಾವ ಸಾಲಿನಿಂದ ಬಾಕಿ ನಿಂತಿದೆ,ಇವರುಗಳು ಇಟ್ಟಿರುವ ಠೇವಣಿಯಾದರೂ ಎಷ್ಟು ಎಂಬುದರ ಬಗ್ಗೆ ಸರಿಯಾದ ದಾಖಲೆಗಳೆ ಇಲ್ಲದಾಗಿದೆ. ಹುಳಿಯಾರು ಬಸ್ ನಿಲ್ದಾಣದಲ್ಲಿನ ೬ ಮಳಿಗೆಗಳ ಲಕ್ಷಾಂತರ ರೂಪಾಯಿ ಬಾಕಿ ವಸೂಲಾತಿಗಾಗಿ ಮಳಿಗೆಗೆ ಬೀಗ ಜಡಿದರು. ಲಭ್ಯವಿಲ್ಲ :ಇದಕ್ಕೆ ನಿಗದಿಪಡಿಸಲಾದ ಬಾಡಿಗೆ ಎಷ್ಟು,ಇದರ ಹಾಲಿ ಮಾಲೀಕರ್ಯಾರು,ಈ ಸಾಲಿನವರೆಗೂ ಇದರ ಬಾಡಿಗೆ ಬಾಕಿಯಿರುವುದೆಷ್ಟು ...ಉಹೂ..ಇದ್ಯಾವುದೆ ವಿವರ ಈ ಪಂಚಾಯ್ತಿಯಲ್ಲಿ ಸಿಗುವುದಿಲ್ಲ.ಹತ್ತಾರು ವರ್ಷದ ಹಿಂದಿನ ಪುಸ್ತಕವೊಂದರಲ್ಲಿ ಅರ್ಧಪುಟದಲ್ಲಿ ಹಿಂದಿನ ಕಾರ್ಯದರ್ಶಿ ಬರೆದಿರುವ ಮಳಿಗೆ ಲೆಕ್ಕದಲ್ಲಿ ಮಾತ್ರ ಬಾಡಿಗೆದಾರರ ಹೆಸರು ದಾಖಲಾಗಿರುವುದು ಬಿಟ್ಟರೆ ಇದುವರೆಗೂ ಅದರ ಪೋಸ್ಟಿಂಗ್ ಕೂಡ ಮುಂದಿನ ಪುಸ್ತಕಕ್ಕೆ ಆಗಿಲ್ಲ.ಸದ್ಯ ಲಭ್ಯವಿರುವ ಅರ್ಧಪುಟದ ಮಾಹಿತಿ ಪ್ರಕಾರ ಈ ಮಳಿಗೆಗಳ ಹದಿನೆಂಟು

ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿಗೆ ದೋಣಿ ಸೇವೆ

ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕೆಂಕೆರೆ ಕಾಳಮ್ಮ ದೇವಿಯ ಸಮ್ಮುಖದಲ್ಲಿ ಏಳುಕೋಟಿ ಮೈಲಾರಲಿಂಗೇಶ್ವರನ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಏಳುಕೋಟಿ ಮೈಲಾರಲಿಂಗೇಶ್ವರನ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಿಂಗರಾಜು ಮತ್ತು ಮೈಲಾರಪ್ಪನವರ ಸೇವಾರ್ಥದಲ್ಲಿ ನಡೆದ ದೋಣಿ ಸೇವೆಯ ಅಂಗವಾಗಿ ಕಾಳಮ್ಮ ದೇವಿಯನ್ನು ಕರೆದುಕೊಂಡು ಬಂದು ಊರಿನ ಗೌಡರ ಮನೆಯಲ್ಲಿ ನಂದಾದೀಪ ಹಚ್ಚಿ ಪೂಜಿಸಿದ್ದಲ್ಲದೆ, ದೇವಾಲಯದಲ್ಲಿ ಕಥೆ ಓದಿಸುವ ಕಾರ್ಯ ನಡೆಯಿತು. ಮುಂಜಾನೆ ದೇವರುಗಳ ಜೊತೆ ಡಮರುಗ, ಕಂಬಳಿ ಹೊದ್ದ ಗೊರವಯ್ಯಗಳನ್ನು ಸಕಲವಾದ್ಯಗಳೊಂದಿಗೆ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು. ಗೊರವಯ್ಯಗಳನ್ನು ಸಾಕ್ಷಾತ್ ಮೈಲಾರಲಿಂಗೇಶ್ವರನ ಪ್ರತಿರೂಪವೆಂದೆ ನಂಬಿರುವ ಭಕ್ತ ಸಮೂಹ ಗೊರಪ್ಪಗಳ ದೋಣಿಗೆ ಬಾಳೆಹಣ್ಣಿನ ರಸಾಯನ ತುಂಬಿಸುವ ಸೇವೆ ಜರುಗಿಸಿದರು. ಪೂಜೆ ಮುಗಿದ ನಂತರ ಬಾಳೆಹಣ್ಣಿನ ಪ್ರಸಾದವನ್ನು ಆಗಮಿಸಿದ್ದ ಭಕ್ತರಿಗೆ ವಿತರಿಸಲಾಯಿತು. ದೇವಾಲಯ ಸಮಿತಿಯವರು,ಗ್ರಾಮದ ಮುಖಂಡರು ಹಾಗೂ ಸುತ್ತೇಳು ಹಳ್ಳಿಗಳ ಭಕ್ತರು ಆಗಮಿಸಿ ದೋಣಿ ಸೇವೆಯಲ್ಲಿ ಪಾಲ್ಗೊಂಡು ಸ್ವಾಮಿಯ ಅಶೀರ್ವಾದಕ್ಕೆ ಭಾಜನರಾದರು.

ಮಕ್ಕಳಿಗೆ ಪರಂಪರೆಯ ಬಗ್ಗೆ ತಿಳಿಸಿ:ಕಿರಣ್ ಕುಮಾರ್

         ವಿದ್ಯಾವಾರಿಧಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ  ಭಾರತೀಯ ಸಂಸ್ಕೃತಿ ಬಹಳ ಹಿರಿದಾಗಿದ್ದು, ಆಚಾರ ವಿಚಾರ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.           ಪಟ್ಟಣದ ಸುವರ್ಣಮುಖಿ ಕ್ಯಾಂಪಸ್ ನಲ್ಲಿ ಗುರುವಾರದಂದು ಯುಕೆಜಿ ಹಾಗೂ ಎಲ್.ಕೆ.ಜಿ ಮಕ್ಕಳಿಗಾಗಿ ವಿದ್ಯಾವಾರಿಧಿ ಶಾಲೆಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದ್ದು ಅವುಗಳನ್ನು ಆಚರಿಸುವ ಮುಖಾಂತರ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕೆಂದರು. ಇಂತಹ ಆಚರಣೆಯಿಂದ ಮಕ್ಕಳಲ್ಲಿ ಆತ್ಮಸ್ಥರ್ಯ ವೃದ್ಧಿಸುತ್ತದೆ , ಎಲ್ಲಾ ಶಾಲೆಗಳಲ್ಲೂ ಇಂತಹ ಆಚರಣೆಗಳನ್ನು ನಡೆಸಬೇಕಿದೆ ಎಂದರು. ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣವೇಷಧಾರಿ ಮಕ್ಕಳೊಂದಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್ ,ಕವಿತಾ ಕಿರಣ್ ಹಾಗೂ ಪ್ರಾಂಶುಪಾಲ ರವಿ ಇದ್ದಾರೆ.                   ಕೃಷ್ಣ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ ,ಇಸ್ಕಾನ್ ಮೂಲಕ ಪ್ರಪಂಚದಲ್ಲೆಲ್ಲ ಹರಡಿರುವ ಕೃಷ್ಣನ

ಶ್ರೀ ಗುರುಗಿರಿಸಿದ್ದೇಶ್ವರ ಸ್ವಾಮಿ ನಿಜೈಕ್ಯ ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಸಚಿವ ಜಯಚಂದ್ರ

ಹಂದನಕೆರೆಯ ಶ್ರೀ ಗುರುಗಿರಿಸಿದ್ದೇಶ್ವರ ಸ್ವಾಮಿಯ ನಿಜೈಕ್ಯ ಕ್ಷೇತ್ರದ ಸನ್ನಿಧಿಗೆ ವಿಶೇಷ ಶಕ್ತಿಯಿದ್ದು ಈ ಸ್ಥಳದ ಮಹಿಮೆಯಿಂದಾಗಿಯೇ ತಮಗೆ ಇರುವ ಖಾತೆ ಜೊತೆಗೆ ಮುಜರಾಯಿ ಖಾತೆಯೂ ದೊರೆಯುವಂತಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಹಂದನಕೆರೆ ಹೋಬಳಿ ಸಬ್ಬೇನಹಳ್ಳಿ ಸಮೀಪದ ಶ್ರೀ ಗುರುಗಿರಿಸಿದ್ದೇಶ್ವರ ಸ್ವಾಮಿಯ ಮೂಲ ಸನ್ನಿಧಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದ ಲೋಕಾರ್ಪಣಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಂದನಕೆರೆ ಕ್ಷೇತ್ರಕ್ಕೆ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ಈ ಕ್ಷೇತ್ರಕ್ಕೆ ತಾವು ಧಾರ್ಮಿಕ ಸಚಿವನಾಗಿ ಆಗಮಿಸದೆ ಭಕ್ತನಾಗಿ ಆಗಮಿಸಿರುವೆ ಎಂದರು. ಸ್ವಾಮಿಯ ಮೂಲ ಕ್ಷೇತ್ರ ಅರಣ್ಯ ಇಲಾಖೆಗೆ ಸೇರಿರುವುದರಿಂದ ಕಾನೂನಿನ ತೊಡಕಿನಿಂದ ಜೀರ್ಣೋದ್ಧಾರ ಕಾರ್ಯ ಕಷ್ಟವಾಗಿದ್ದು ಇದರ ಬದಲಿಗೆ ಹಂದನಕೆರೆ ಊರೊಳಗಿರುವ ನಿಜೈಕ್ಯ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡುವುದು ಸುಲಭದ ಕಾರ್ಯವಾಗಿದ್ದು ಕಾರ್ಯಕಾರಿ ಮಂಡಳಿ ಒಪ್ಪಿಗೆ ನೀಡಿದಲ್ಲಿ ಶಾಸಕರ ಜೊತೆ ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.  ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿ ದ್ದರು. ಸಚಿವರ ಪತ್ನಿ ನಿರ್ಮಾಲಾಜಯಚಂದ್ರ, ದೇವಸ್ಥಾನದ ಅರ್ಚಕ ರುದ್ರೇಶ್, ವಿದ್ವಾನ್ ಚಂದ್ರಶೇಖರಶಾಸ್ತ್ರಿ, ಜಿಪಂ ಸದಸ್ಯೆ ಜಾನಮ್ಮ, ತಾಪಂ ಸದಸ್ಯೆ ಹೇಮಾವತಿ, ಚ

ಜಿಲ್ಲಾಮಟ್ಟಕ್ಕೆ ಆಯ್ಕೆ

ಹುಳಿಯಾರಿನ ವಾಸವಿ ಶಾಲಾಮಕ್ಕಳು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ತಾಲ್ಲೂಕ್ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ವಿಜೇತ ಮಕ್ಕಳಿಗೆ ಪಾರಿತೋಷಕ ವಿತರಿಸಿದರು.

ಇಂದು ಬಿಎಂ ಎಸ್ ಕಾಲೇಜಿನಲ್ಲಿ ಅಪ್ಪಿಕೋ ಚಳುವಳಿಯ ೩೨ ನೇ ವರ್ಷಾಚರಣೆ

ಪಶ್ಚಿಮಘಟ್ಟ ಉಳಿಸಿ ಅಭಿಯಾನ,ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಹಾಗೂ ಹುಳಿಯಾರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಅಪ್ಪಿಕೋ ೩೨ ,ಎಂಟನೇ ವರ್ಷದ ಸಹ್ಯಾದ್ರಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಹುಳಿಯಾರಿನ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕುವೆಂಪು ವಿವಿಯ ಪ್ರೊ .ಬಿ.ಬಿ.ಹೊರಟ್ಟಿ ಉದ್ಘಾಟಿಸಲಿದ್ದು ಬಯಲು ಸೀಮೆಯಲ್ಲಿ ನೀರಿನ ಸುಸ್ಥಿರ ಬಳಕೆ ಬಗ್ಗೆ ಮಳೆಕೊಯ್ಲು ತಜ್ಞರಾದ ವಿಶ್ವನಾಥ್ ಮಾಹಿತಿ ನೀಡಲಿದ್ದಾರೆ. ಸಂತೆಕಡೂರು ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಎ.ಎಸ್.ಚಂದ್ರಶೇಖರ್,ಪ್ರೊ ಎನ್.ಇಂದಿರಮ್ಮ,ಶ್ರೀಕಾಂತ್ ಅನಗೊಂಡನಹಳ್ಳಿ,ಮುರಳಿಧರ ಗುಂಗುರುಮಳೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಅಧ್ಯಕ್ಷತೆ ವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಪ್ಪಿಕೋ ಚಳುವಳಿಯ ಕಾರ್ಯಕರ್ತ ಶಿರಸಿಯ ಪಾಂಡುರಂಗ ಹೆಗ್ಗಡೆ ಕೋರಿದ್ದಾರೆ.

ಕೆಂಚಮ್ಮನ ಸನ್ನಿಧಿಯಲ್ಲಿ ವಿಶೇಷ ಪೂಜೆ

     ಹುಳಿಯಾರಿನ ಶ್ರೀಕೆಂಚಮ್ಮದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಕಡೆ ಭಾನುವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ಕನ್ನೇಕೇರು ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಅನ್ನಸಂತರ್ಪಣೆ ನಡೆಯಿತು.              ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಕೆಂಚಮ್ಮ ದೇವಿಯ ಕನ್ನಿಕೆರೆ ಸೇವೆ ನಡೆದುಕೊಂಡು ಬರುತ್ತಿದ್ದು ಇದರ ಅಂಗವಾಗಿ ಕೆಂಚಮ್ಮ ದೇವಿ,ದುರ್ಗಮ್ಮ ದೇವಿ ಹಾಗು ಹುಳಿಯಾರಮ್ಮ ದೇವಿಯನ್ನು ದೇವಾಲಯದಿಂದ ಹುಳಿಯಾರು ಕೆರೆಏರಿ ಮೇಲಿರುವ ಕೆಂಚಮ್ಮನವರ ಮೂಲಸ್ಥಾನಕ್ಕೆ ಕರೆತರಲಾಯಿತು.ನಂತರ ಕಳಸ ಸ್ಥಾಪನೆ ಗಂಗಮ್ಮನ ಪೂಜೆ ಕಾರ್ಯಕ್ರಮ ನಡೆಯಿತು. ಹುಳಿಯಾರಿನ ಕೆಂಚಮ್ಮದೇವಿಯು ಹೊತ್ತ ಮಕ್ಕಳನ್ನು ನಡೆಮುಡಿಯೊಂದಿಗೆ ಆಗಮಿಸುತ್ತಿರುವುದು.            ಕಳಸವನ್ನು ಹೊತ್ತ ಹೆಣ್ಣುಮಕ್ಕಳು ಗ್ರಾಮ ದೇವತೆಗಳೊಂದಿಗೆ ನಡೆಮುಡಿಯೊಂದಿಗೆ ಪಟ್ಟಣದ ರಾಜ ಬೀದಿ ಮೂಲಕ ಸಾಗುತ್ತಾ ದೇವಿಯ ಒಡಪುಗಳನ್ನು ಹಾಡುತ್ತಾ ಮಂಗಳ ವಾದ್ಯದೊಂದಿಗೆ ಲಿಂಗಾಯತರ ಬಡಾವಣೆಯಲ್ಲಿರುವ ಕೆಂಚಮ್ಮ ದೇವಾಲಯಕ್ಕೆ ಕರೆ ತಂದು ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು. ಅಮ್ಮನವರ ಅಭಿಷೇಕ ಅರ್ಚನೆ, ಅಲಂಕಾರ ಸೇರಿದಂತೆ ವಿವಿಧ ಪೂಜೆ ಕಾರ್ಯಗಳು ನಡೆದು ಮಹಾಮಂಗಳರತಿ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.           ಸಂಜೆ ಪುನಃ ಎಲ್ಲಾ ದೇವರುಗಳನ್ನು ಪನಿವಾರ ಸೇವೆಗಾಗಿ ಕೆಂಚಮ್ಮನ ತೋಪಿನ ಬಳಿಯ ಮೂಲಸ್ಥಾನಕ್ಕೆ ಕರೆದೊಯ್ದು ಅಮ್ಮನವರಿಗೆ ಆರತಿಸೇವೆ ಸಲ

ಕೆಂಚಮ್ಮನ ದೇವಸ್ಥಾನದಲ್ಲಿ ಅನ್ನಸಂತರ್ಪಣೆ

ಕೆಂಚಮ್ಮನ ದೇವಸ್ಥಾನದಲ್ಲಿ ಇನ್ನೇನು ಅನ್ನಸಂತರ್ಪಣೆ ಶುರುವಾಗಲಿದೆ..ಸಂಜೆ 5ಗಂಟೆಯಿಂದ ಕೆರೆ ಏರಿಮೇಲಿನ ಕೆಂಚಮ್ಮನ ತೋಪಿನ ಬಳಿ ಪನಿವಾರ ಸೇವೆಯಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಿ ಅಂತ ದೇವಸ್ಥಾನದ ಸಮಿತಿಯವರು ಕೋರಿದ್ದಾರೆ.

ಅಂಗಾರಕ ಸಂಕಷ್ಟಹರದ ಅಂಗವಾಗಿ ಹೋಮ

        ಹುಳಿಯಾರು ಪಟ್ಟಣದ ಶ್ರೀಪ್ರಸನ್ನ ಗಣಪತಿ ದೇವಾಲಯದಲ್ಲಿ ಮಂಗಳವಾರದಂದು ಅಂಗಾರಕ ಸಂಕಷ್ಟಹರದ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಹಾಗೂ ಹೋಮ ನಡೆಯಿತು. ಮಂಗಳವಾರದಂದು ಅಂಗಾರಕ ಸಂಕಷ್ಟಹರ ಚತುರ್ಥಿ ಬಂದಿರುವುದು ವಿಶೇಷವಾಗಿದ್ದು ದೇವಾಲಯಗಳಿಗೆ ಹೆಚ್ಚು ಭಕ್ತಾಧಿಗಳು ಆಗಮಿಸಿ ಗಣೇಶನಿಗೆ ಮೋದಕ ಅರ್ಪಿಸಿ ಪೂಜಿಸುವ ಮೂಲಕ ಆಚರಿಸಿದರು. ಸತ್ಯನಾರಾಯಣ ಮೇಸ್ಟ್ರು ಹಾಗೂ ರಾಜಣ್ಣ ಅವರ ಪೌರೋಹಿತ್ಯದಲ್ಲಿ ಹೋಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಪುಣ್ಯಾಹ, ದೇವನಾಂದಿ, ಪಂಚಾಮೃತಾಭಿಷೇಕ, ನವಗ್ರಹ ಹೋಮ,ಮೃತ್ಯುಂಜಯ ಹೋಮ,ಅಂಗಾರಕ ಗಣಪತಿ ಗಣಪತಿ ಹೋಮ ನಡೆದು ಪುರ್ಣಾಹುತಿ ಹಾಗೂ ಮಹಾಮಂಗಳಾರತಿ ಸಮರ್ಪಿಸಿದ ನಂತರ ಪಾನಕ ಪನಿವಾರ ವಿತರಿಸಲಾಯಿತು. ಹೂವಿನಬಸವರಾಜು,ನಟರಾಜು,ಶ್ರೇಯಸ್ ದಂಪತಿಗಳು ಹೋಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಂಕಷ್ಟಹರದ ಉಪವಾಸ ವೃತ ಕೈಗೊಂಡ ಮಹಿಳೆಯರು ಪಾಲ್ಗೊಂಡು ಗಣೇಶನಿಗೆ ಪೂಜೆ ಸಲ್ಲಿಸಿದರು.ದೇವಾಲಯ ಸಮಿತಿಯ ಸುದರ್ಶನಚಾರ್,ತಮ್ಮಯ್ಯ ,ಚೇತನ್ ಮತ್ತಿತರರು ಪಾಲ್ಗೊಂಡಿದ್ದರು.

ಇದು ಗ್ರಾಮಸಭೆಯಲ್ಲ ಗದ್ದಲದ ಸಭೆ

ಗದ್ದಲದಲ್ಲೆ ಮುಗಿದ ಹುಳಿಯಾರು ಗ್ರಾಪಂ ಗ್ರಾಮ ಸಭೆ --------------------------          ವಿವಿಧ ಯೋಜನೆಯ ಫಲಾನುಭವಿಗಳ ಆಯ್ಕೆ ಕುರಿತು ಕರೆಯಲಾಗಿದ್ದ  ಹುಳಿಯಾರು ಗ್ರಾಮಸಭೆ ಸಾರ್ವಜನಿಕರ ಗದ್ದಲಕ್ಕೆ ಬಲಿಯಾಯಿತು.                     ಪೂರ್ವ ನಿಯೋಜನೆಯಂತೆ ಬುಧವಾರ ಬೆಳಗ್ಗೆ ಹುಳಿಯಾರು ಗ್ರಾಮಪಂಚಾಯಿತಿ ಆವರಣದಲ್ಲಿ ೨೦೧೫-೧೬ ನೇ ಸಾಲಿನ ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಮಾಡಲು ಗ್ರಾಮಸಭೆಯನ್ನು ಕರೆಯಲಾಗಿತ್ತು. ಗ್ರಾಮಸಭೆ ಬಗ್ಗೆ ತಿಳುವಳಿಕೆ ನೀಡಲು ಕರಪತ್ರಗಳನ್ನು ಹಂಚಲಾಗಿತ್ತು.ಅಲ್ಲದೆ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ವಾರ್ಡ್ ಸಭೆ ನಡೆಸಿ ವಸತಿ ಯೋಜನೆಯ ಅರ್ಹರಿಂದ ಅರ್ಜಿಯನ್ನು ಸ್ವೀಕರಿಸಲಾಗಿತ್ತು. ಹುಳಿಯಾರಿನಲ್ಲಿ ವಸತಿಯೋಜನೆ ಫಲಾನುಭವಿಗಳ ಆಯ್ಕೆಗಾಗಿ ನಡೆದ ಗ್ರಾಮ ಸಭೆ                 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್ ಎಲ್ಲರನ್ನು ಸ್ವಾಗತಿಸಿ ೨೦೧೫-೧೬ನೇ ಸಾಲಿನ ಇಂದಿರಾ ಅವಾಜ್ ಮತ್ತು ಬಸವ ವಸತಿ ಯೋಜನೆಯಡಿ ೫೪ ಮನೆಗಳು ಮಂಜೂರಾಗಿದ್ದು ನಿಯಮಾವಳಿಯಂತೆ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಇತರ ಸಮುದಾಯಗಳ ಪಲಾನುಭವಿಗಳ ಪಾರದರ್ಶಕ ಆಯ್ಕೆಗಾಗಿ ಗ್ರಾಮ ಸಭೆ ಆಯೋಜಿಸಲಾಗಿದೆ .ಪ್ರತಿ ವಾರ್ಡಿನಲ್ಲೂ ಅರ್ಜಿ ಪಡೆದು ಪರಿಶೀಲಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ.ಅಲ್ಲಿ ಆಯ್ಕೆಯಾಗದವರನ್ನು ಇಲ್ಲಿ ಆಯ್ಕೆ ಮಾಡಲಾಗುವುದು

ಹುಳಿಯಾರಿನಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

       ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಹಾಗೂ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಸಾರಿಗೆ ಒಕ್ಕೂಟಗಳು ಬುಧವಾರ ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಪಟ್ಟಣದಲ್ಲಿ ಯಾವುದೇ ಬೆಂಬಲ ದೊರೆಯದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.      ಬಸ್ ಸಂಚಾರ ಹೊರತುಪಡಿಸಿ ಯಾವುದೇ ಸೇವೆಗಳಲ್ಲಿ ವ್ಯತ್ಯಯವಾಗದೆ ಎಲ್ಲಾ ಸೇವೆಗಳು ಎಂದಿನಂತಿತ್ತು..ಅಂಗಡಿಮುಗ್ಗಟ್ಟುಗಳು,ಕಛೇರಿಗಳು ಎಂದಿನಂತೆ ತೆರೆದಿತ್ತು. ಹುಳಿಯಾರಿನಲ್ಲಿ ಬಂದ್ ಪ್ರಯುಕ್ತ ಸಂಚರಿಸದ ಖಾಸಗಿ ಬಸ್ಸುಗಳು ನಿಲ್ದಾಣದಲ್ಲೆ ನಿಂತಿದ್ದವು.          ಶಾಲೆ, ಕಾಲೇಜು ರಜೆ ಘೋಷಿಸದಿದ್ದರಿಂದ ಪೋಷಕರು ಗೊಂದಲದಲ್ಲಿದ್ದರು.ಸಂಚಾರ ವ್ಯವಸ್ಥೆಯಲ್ಲಿ ಏರುಪೇರು ಆಗಿದ್ದರಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನಾನುಕೂಲವಾಯಿತು. ಅಷ್ಟೊಇಷ್ಟೊ ವಿದ್ಯಾರ್ಥಿಗಳು ಬಂದರಾದರೂ ನಂತರ ರಜೆ ಕೊಡಲಾಯಿತು.ಕ್ರೀಡಾಕೂಟಕ್ಕೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳು ಮುಷ್ಕರದಿಂದ ಕಂಗೆಟ್ಟರು. ಸರ್ಕಾರಿ ಬಸ್‌ಗಳ ಸೇವೆ ಇರಲಿಲ್ಲ.ಮುಂಚಿತವಾಗೆ ಬಂದ್ ಬಗ್ಗೆ ತಿಳಿದಿದ್ದರಿಂದ ಪ್ರಯಾಣಿಕರು ಕೂಡ ಹೆಚ್ಚಾಗಿ ಕಂಡುಬರಲಿಲ್ಲ.ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದ್ದರಿಂದ ಬಹುತೇಕ ಖಾಸಗಿ ಬಸ್‌ಗಳು ಸಂಚರಿಸಲಿಲ್ಲ. ಮಧ್ಯಾಹ್ನದ ನಂತರ ಆಲ್ಲೊಂದು ಇಲ್ಲೊಂದು ಖಾಸಗಿ ಬಸ್ಸುಗಳು ಓಡಾಡುತ್ತಿದ್ದವು. ಆಟೋಗಳು ಸಹ

ವಿದ್ಯಾವಾರಿಧಿ ಶಾಲೆಗೆ ಯಡಿಯೂರಪ್ಪ ಭೇಟಿ

ಹುಳಿಯಾರಿನ ವಿದ್ಯಾವಾರಿಧಿ ಶಾಲೆಗೆ ಭೇಟಿ ನೀಡಿದ್ದ  ಮಾಜಿ   ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್ ಹಾಗೂ ಕಾರ್ಯದರ್ಶಿ ಕವಿತಾ ಕಿರಣ್ ಸ್ವಾಗತಿಸಿದರು .  ರೈತ ಚೈತನ್ಯ ಯಾತ್ರೆ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಬಿ.ಎಸ್.ಯಡಿಯೂರಪ್ಪನವರು ಹಾಗೂ ಶೋಭಾ ಕರಂದ್ಲಾಜೆ ಸಂಸದೆ ಕಿಬ್ಬನಹಳ್ಳಿಗೆ ತೆರಳುವ ಮಾರ್ಗ ಮಧ್ಯೆ ಹುಳಿಯಾರಿನ ವಿದ್ಯಾವಾರಿಧಿ ಶಾಲೆಗೆ ಭೇಟಿ ನೀಡಿದ್ದರು.ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್,ಶಾಲೆಯ ಕಾರ್ಯದರ್ಶಿ ಶ್ರೀಮತಿ ಕವಿತಾ ಕಿರಣ್ ಕುಮಾರ್ ಹಾಗೂ ಶಾಲಾ ಆಡಳಿತ ಮಂಡಳಿಯವರು ಸ್ವಾಗತಿಸಿದರು.ನಂತರ ಮಾತನಾಡಿದ ಅವರು ರೈತ ಚೈತನ್ಯ ಯಾತ್ರೆಗೆ ರಾಜ್ಯದ ಎಲ್ಲ ಕಡೆ ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬಿಜೆಪಿ ರೈತರ ಪರವಾಗಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬೇಡಿ ಎಂದರು. ಇದೇ ವೇಳೆ ಹುಳಿಯಾರು ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದಂತೆ ಬೈಪಾಸ್ ರಸ್ತೆ ನಿರ್ಮಿಸಲು ಶಿಫಾರಸ್ಸು ಮಾಡುವಂತೆ ನಾಗರೀಕ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. 

ಇಂದು ಗ್ರಾಮಸಭೆ

ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲು ಹುಳಿಯಾರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಶ್ರೀಮತಿ ಹೆಚ್.ಎಸ್.ಗೀತಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮುಂಜಾನೆ ೧೧ ಗಂಟೆಗೆ ಗ್ರಾಮ ಸಭೆ ಕರೆಯಲಾಗಿದೆ.ಈಗಾಗಲೆ ಆಯಾ ವಾರ್ಡ್ ಗಳಲ್ಲಿ ಸಭೆಗಳ ಮೂಲಕ ಆರ್ಜಿ ಸ್ವೀಕರಿಸಲಾಗಿದ್ದು ಫಲಾನುಭವಿಗಳ ಅಂತಿಮ ಆಯ್ಕೆಯಷ್ಟೆ ಬಾಕಿಯಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಜಯಚಂದ್ರ,ಸಂಸದ ಮುದ್ದಹನುಮೇಗೌಡ,ಶಾಸಕ ಸುರೇಶ್ ಬಾಬು,ತಾಪಂ ಅಧ್ಯಕ್ಷೆ ಜಯಲಕ್ಷ್ಮಿ,ಉಪಾಧ್ಯಕ್ಷ ನಿರಂಜನಮೂರ್ತಿ,ಜಿಪಂ ಸದಸ್ಯೆ ಮಂಜುಳಾ,ತಾಪಂ ಸದಸ್ಯರಾದ ಬೀಬಿ ಫಾತೀಮಾ,ನವೀನ್,ಗ್ರಾಪಂ ಉಪಾಧ್ಯಕ್ಷ ಗಣೇಶ್,ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಆಗಮಿಸಲಿದ್ದಾರೆ.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್ ಕೋರಿದ್ದಾರೆ.

ಟಾರ್ಪಾಲ್ ಕೊಳ್ಳಲು ರೈತ ಸಂಪರ್ಕ ಕೇಂದ್ರದ ಮುಂದೆ ಮುಗಿಬಿದ್ದ ರೈತರು

ಹುಳಿಯಾರು:ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ತಡಪಾಲುಗಳನ್ನು ವಿತರಿಸಲಾಗುತ್ತಿದೆ ಎಂದರಿತ ರೈತರು ಕೊಳ್ಳಲು ನಾಮುಂದು ತಾಮುಂದು ಎಂದು ಜಮಾಯಿಸಿದ್ದರಿಂದ ಗೊಂದಲವುಂಟಾಗಿ ಕೊನೆಗೆ ಲಾಟರಿ ಮೂಲಕ ವಿತರಿಸಿದ ಪ್ರಸಂಗ ಸೋಮವಾರ ನಡೆಯಿತು. ಪ್ರತಿ ಬಾರಿಯಂತೆ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ 168 ತಡಪಾಲುಗಳು ಬಂದಿದ್ದವು. ಟಾರ್ಪಲ್ ಪಡೆಯಲು ರೈತರು ಪಹಣಿ ಪತ್ರ,ಮತದಾನದಗುರುತಿನ ಚೀಟಿ,ಭಾವಚಿತ್ರ ಹಾಗೂ ಜಾತಿ ಪ್ರಮಾಣ ಪತ್ರ ಹಿಡಿದು ಬೆಳಗ್ಗಿನಿಂದಲೆ ರೈತ ಸಂಪರ್ಕ ಕೇಂದ್ರದ ಮುಂದೆ ಸರದಿ ಸಾಲಿನಲ್ಲಿ ನಿಂತು.ಕಾಯುತ್ತಿದ್ದರು.ಆದರೆ ಅವುಗಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು ಗೊಂದಲಕ್ಕೆ ಕಾರಣವಾಯಿತು. ಪರಿಶಿಷ್ಟ ಜಾತಿ ಕೋಟಾದಡಿ ಸುಮಾರು 20 ತಡಪಾಲುಗಳನ್ನು ವಿತರಿಸಿದ ನಂತರ ಇನ್ನು ಕೇವಲ 12 ಮಾತ್ರ ಇದ್ದು ಮತ್ತಿನ್ಯಾವಗಲೊ ಬರುವುದು ಎಂದರಿತ ರೈತರು ಸರದಿ ಸಾಲು ಬಿಟ್ಟು ಒಂದೇ ಬಾರಿ ನಮಗೆ ನಮಗೆ ಎಂದು ಮುಗಿಬಿದ್ದರು. ಸ್ಥಳದಲ್ಲಿದ್ದ ಸಹಾಯಕ ಕೃಷಿ ಅಧಿಕಾರಿ ಕರಿಬಸವಯ್ಯ ಕೇವಲ 168 ತಡಪಾಲುಗಳು ಬಂದಿದ್ದು ಅವುಗಳಲ್ಲಿ ಪರಿಶಿಷ್ಟ ಜಾತಿಗೆ 32, ಪರಿಶಿಸಷ್ಟ ಪಂಗಡಕ್ಕೆ 18 ಹಾಗೂ ಸಾಮಾನ್ಯ ವರ್ಗಕ್ಕೆ 118 ಮೀಸಲಿವೆ ಎಂದು ತಿಳಿ ಹೇಳಿದರೂ ಒಪ್ಪದ ಕೆಲ ರೈತರು ಪಂಚಾಯಿತಿವಾರು ವಿತರಣೆ ಮಾಡಿ ಎಂದು ಪಟ್ಟು ಹಿಡಿದರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಆ ರೀತಿ ಮಾಡಲು ಸಾಧ್ಯವಿಲ್

ರಾ.ಹೆದ್ದಾರಿ ಮಾರ್ಜಿನ್ ಬಗ್ಗೆ ಆತಂಕಬೇಡ :ಶಾಸಕ ಸಿ.ಬಿ.ಎಸ್

ಪಟ್ಟಣದಲ್ಲಿ ಮಂಗಳೂರು– ವಿಶಾಖಪಟ್ಟಣ ಹಾಗೂ ಬೀದರ್– ಶ್ರೀರಂಪಟ್ಟಣ ಎರಡು ರಾ.ಹೆದ್ದಾರಿ ಹಾದುಹೋಗಲಿದ್ದು ರಸ್ತೆ ವಿಸ್ತರಣೆಯಿಂದ ಮನೆ ಅಂಗಡಿಮುಂಗಟ್ಟುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು ಅನಗತ್ಯ ಭಯ ಆತಂಕ ಬೇಡ ಎಂದು ಶಾಸಕ ಸಿ.ಬಿ..ಸುರೇಶ್ ಬಾಬು ಮನವಿ ಮಾಡಿದರು.        ಹುಳಿಯಾರಿನ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಹೆದ್ದಾರಿ ಬಗ್ಗೆ ಕರೆಯಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಹುಳಿಯಾರಿನಲ್ಲಿ ಹಾದುಹೋಗುವ ರಾ.ಹೆದ್ದಾರಿ ಸಾಧಕ ಭಾದಕ ಕುರಿತಂತೆ ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿದರು.      ಈಗಾಗಲೆ ಪಟ್ಟಣದಲ್ಲಿ ಕಳೆದ ಹಲವಾರು ದಿನಗಳಿಂದ ಹೆದ್ದಾರಿ ವಿಸ್ತರಣೆ ಬಗ್ಗೆ ಎದ್ದಿರುವ ಉಹಾಪೋಹಗಳು ನನ್ನ ಗಮನಕ್ಕೆ ಬಂದಿದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹೆದ್ದಾರಿ ಅಧಿಕಾರಿಗಳನ್ನು ನಿಮ್ಮ ಸ್ಥಳಕ್ಕೆ ಕರೆದುಕೊಂಡು ಬಂದಿದ್ದು ರಸ್ತೆ ಅಗಲೀಕರಣದ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.                  ರಾಷ್ಟೀಯ ಹೆದ್ದಾರಿ ಅಗಲೀಕರಣ ಕುರಿತು ರಾ.ಹೆ.ಪ್ರಾಧಿಕಾರದ ತುಮಕೂರು ವಿಭಾಗದ ಎಇಇ ಶಿವಕುಮಾರ್ ಮಾಹಿತಿ ನೀಡಿ ಹುಳಿಯಾರು ಪಟ್ಟಣ ಬಳಸಿಕೊಂಡು ಎರಡು ರಾಷ್ಟ್ರೀಯ ಹೆದ್ದಾರಿ ಹಾದುಹೋಗಲಿದ್ದು ಹೆದ್ದಾರಿ ಸಂಖ್ಯೆ ೧೫೦ ಎ ಜೇವರ್ಗಿ ಯಿಂದ ಶ್ರೀರಂಗಪಟ್ಟಣಕ್ಕೆ ಹೋಗುವ ರಾಷ್ಟೀಯ ಹೆದ್ದಾರಿಯಾಗಿದ್ದು ಸದ್ಯ ಇದು ರಾಜ್ಯದ ಅತ