ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಹಾಗೂ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಸಾರಿಗೆ ಒಕ್ಕೂಟಗಳು ಬುಧವಾರ ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಪಟ್ಟಣದಲ್ಲಿ ಯಾವುದೇ ಬೆಂಬಲ ದೊರೆಯದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಸ್ ಸಂಚಾರ ಹೊರತುಪಡಿಸಿ ಯಾವುದೇ ಸೇವೆಗಳಲ್ಲಿ ವ್ಯತ್ಯಯವಾಗದೆ ಎಲ್ಲಾ ಸೇವೆಗಳು ಎಂದಿನಂತಿತ್ತು..ಅಂಗಡಿಮುಗ್ಗಟ್ಟುಗಳು,ಕಛೇರಿಗಳು ಎಂದಿನಂತೆ ತೆರೆದಿತ್ತು.
ಹುಳಿಯಾರಿನಲ್ಲಿ ಬಂದ್ ಪ್ರಯುಕ್ತ ಸಂಚರಿಸದ ಖಾಸಗಿ ಬಸ್ಸುಗಳು ನಿಲ್ದಾಣದಲ್ಲೆ ನಿಂತಿದ್ದವು. |
ಶಾಲೆ, ಕಾಲೇಜು ರಜೆ ಘೋಷಿಸದಿದ್ದರಿಂದ ಪೋಷಕರು ಗೊಂದಲದಲ್ಲಿದ್ದರು.ಸಂಚಾರ ವ್ಯವಸ್ಥೆಯಲ್ಲಿ ಏರುಪೇರು ಆಗಿದ್ದರಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನಾನುಕೂಲವಾಯಿತು. ಅಷ್ಟೊಇಷ್ಟೊ ವಿದ್ಯಾರ್ಥಿಗಳು ಬಂದರಾದರೂ ನಂತರ ರಜೆ ಕೊಡಲಾಯಿತು.ಕ್ರೀಡಾಕೂಟಕ್ಕೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳು ಮುಷ್ಕರದಿಂದ ಕಂಗೆಟ್ಟರು.
ಸರ್ಕಾರಿ ಬಸ್‌ಗಳ ಸೇವೆ ಇರಲಿಲ್ಲ.ಮುಂಚಿತವಾಗೆ ಬಂದ್ ಬಗ್ಗೆ ತಿಳಿದಿದ್ದರಿಂದ ಪ್ರಯಾಣಿಕರು ಕೂಡ ಹೆಚ್ಚಾಗಿ ಕಂಡುಬರಲಿಲ್ಲ.ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದ್ದರಿಂದ ಬಹುತೇಕ ಖಾಸಗಿ ಬಸ್‌ಗಳು ಸಂಚರಿಸಲಿಲ್ಲ. ಮಧ್ಯಾಹ್ನದ ನಂತರ ಆಲ್ಲೊಂದು ಇಲ್ಲೊಂದು ಖಾಸಗಿ ಬಸ್ಸುಗಳು ಓಡಾಡುತ್ತಿದ್ದವು. ಆಟೋಗಳು ಸಹ ವಿರಳವಾಗಿತ್ತು.ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹಮಾಲಿಗಳು ಮುಷ್ಕರವೆಂದು ಬಾರದಿದರಿಂದ ಅಷ್ಟಾಗಿ ವಹಿವಾಟು ನಡೆಯಲಿಲ್ಲ.
ಬಸ್ ನಿಲ್ದಾಣ ಹಾಗೂ ಮಾರಕಟ್ಟೆಯಲ್ಲಿ ಜನಸಂದಣಿ ವಿರಳವಾಗಿತ್ತು.ಬ್ಯಾಂಕ್ ಹಾಗೂ ಅಂಚೆ ಸೇವೆಯಿರಲಿಲ್ಲ.ಇದನ್ನು ಹೊರತುಪಡಿಸಿ ಎಲ್ಲಾ ಅಗತ್ಯ ವಸ್ತುಗಳ ಸೇವೆ ಲಭ್ಯವಿತ್ತು.ಒಟ್ಟಾರೆ ಬಂದ್ ಬಗ್ಗೆ ಯಾವೊಂದು ಸಂಘಟನೆಗಳು ಮುಂದಾಗದಿದ್ದರಿಂದ ವಿಫಲವಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ