ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸದಸ್ಯರುಗಳು ಮರುಪಾವತಿ ಸಮಯದಲ್ಲಿ ಉದಾಸೀನ ಮಾಡಸೆ ಸಕಾಲಕ್ಕೆ ಕಟ್ಟುವ ಮೂಲಕ ಸಹಾಕಾರ ಸಂಘಗಳ ಅಭಿವೃದ್ಧಿಗೆ ಕಾರಣಿಕರ್ತರಾಗಬೇಕು ಎಂದು ಹುಳಿಯಾರು ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ರಾಮಯ್ಯ ಮನನಿ ಮಾಡಿದರು.
ಅವರು ಪಟ್ಟಣದಲ್ಲಿ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಳಿಯಾರಿನ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಕೆ.ಎಂ.ರಾಮಯ್ಯ ಉದ್ಘಾಟಿಸಿದರು. |
ಸಹಕಾರ ತತ್ವದಡಿ ಸೊಸೈಟಿ ಸ್ಥಾಪಿಸಲಾಗಿದ್ದು ಹಿಂದುಳಿದವರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಮ್ಮಲ್ಲಿ ಸಾಲ ಸೌಲಭ್ಯ ಸುಲಭವಾಗಿ ದೊರೆಯುತ್ತಿದ್ದು, ಇದನ್ನು ದುರ್ಬಳಕೆ ಮಾಡದೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕೆಂದು ತಿಳಿಸಿದರು. ಸಾಲ ಪಡೆದವರು ಮರುಪಾವತಿಗೆ ಹೆಚ್ಚು ಒತ್ತು ನೀಡಿದಲ್ಲಿ ಉಳಿದ ಸದಸ್ಯರಿಗೂ ಸಾಲದ ಯೋಜನೆ ಸಹಕಾರಿಯಾಗುತ್ತದೆ ಎಂದರು.
ಕಳೆದೆರಡು ವರ್ಷಗಳಿಂದ ಲೆಖ್ಖಪರಿಶೋಧಕರ ಸಮಸ್ಯೆಯಾಗಿದ್ದು ಬೇರೊಬ್ಬರನ್ನು ತೆಗೆದುಕೊಳ್ಳುವಂತೆ ತಿಳಿಸಿದ ಅವರು ಸಂಘದ ಸದಸ್ಯರುಗಳು ಬ್ಯಾಂಕಿನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮುಖಾಂತರ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು.
ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಸದಸ್ಯರುಗಳಾದ ಜಗದೀಶಯ್ಯ,ಹೆಚ್.ಎಸ್.ರಾಮು,ಹೂವಿನ ಮಲ್ಲೇಶಣ್ಣ,ಸಣ್ಣರಂಗಯ್ಯ,ಮಂಜುನಾಥ್,ಡಾಬಾ ಸೂರಪ್ಪ,ಮುಕುಂದಯ್ಯ,ಶ್ರೀಮತಿ ಅಂಜಮ್ಮ ,ದಿವಾಕರ, ದಿವ್ಯಶ್ರೀ,ರಘುನಾಥ್,ಯೋಗೀಶ್ ಮತ್ತಿತರರಿದ್ದರು.ಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ