ಹುಳಿಯಾರು ಎಪಿಎಂಸಿ ಚುನಾವಣೆಯಲ್ಲಿ ಈ ಬಾರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅನ್ನು ಮುಂದಿನ ತಾಪಂ,ಜಿಪಂ ಚುನಾವಣೆಯಲ್ಲೂ ಸಹ ಅಧಿಕಾರಕ್ಕೆ ತಂದು ಕೂರಿಸುವುದೇ ನನ್ನ ಗುರಿ ಎಂದು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಘೋಷಿಸಿದರು.
ಹುಳಿಯಾರು ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಸಿ.ಸಿದ್ಧರಾಮಯ್ಯ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡರುಗಳು. |
ಹುಳಿಯಾರು ಎಪಿಎಂಸಿ ಅಧ್ಯಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸಂತಸ ಹಂಚಿಕೊಳ್ಳಲು ವೈ.ಸಿ.ಸಿದ್ಧರಾಮಯ್ಯ ಅವರ ಮನೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ನಾನು ಸೋಲುಂಡಿದ್ದರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಇದರ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ೬೦ ಸಾವಿರಕ್ಕೂ ಹೆಚ್ಚು ಮತಗಳು ಲಭಿಸಿದ್ದು ಅಲ್ಲದೆ ನಂತರದ ಎಲ್ಲ ಚುನಾವಣೆಗಳಲ್ಲೂ ಮುನ್ನಡೆ ಸಾಧಿಸುತ್ತಾ ನಡೆದಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತಿರುವ ಸೂಚನೆಯಾಗಿದೆ .ಸಧ್ಯ ಬರಲಿರುವ ತಾಪಂ,ಜಿಪಂ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಗೆ ಅಧಿಕಾರ ಹಿಡಿಯುವಂತೆ ಮಾಡುವುದೇ ನನ್ನ ಗುರಿ ಎಂದರು.
ನೂತನ ಎಪಿಎಂಸಿ ಅಧ್ಯಕ್ಷ ವೈ.ಸಿ.ಸಿದ್ಧರಾಮಯ್ಯ ಮಾತನಾಡಿ ತಮ್ಮ ಮೇಲಿನ ವಿಶ್ವಾಸವಿಟ್ಟು ಗೆಲುವಿಗೆ ಕಾರಣರಾದ ಎಲ್ಲರಿಗೂ ತಾನು ಋಣಿಯಾಗಿದ್ದು ಎಪಿಎಂಸಿಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಣ್ಣಯ್ಯ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವೆಂಕಟೇಶ್, ಸಿ.ಬಸವರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ,ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್,ಮಾಜಿ ಅಧ್ಯಕ್ಷ ಬೀರಪ್ಪ, ಜಿಪಂ ಮಾಜಿ ಅಧ್ಯಕ್ಷ ರಘುನಾಥ್, ಟಿಎಪಿಎಂಸಿ ಸದಸ್ಯ ಶಿವಕುಮಾರ್, ಶೇಷಾನಾಯ್ಕ,ಗ್ರಾಪಂ ಸದ್ಯರುಗಳಾದ ಎಲ್.ಆರ್.ಚಂದ್ರಶೇಖರ್, ವೆಂಕಟೇಶ್, ಶಶಿಕಲಾ, ದುರ್ಗಮ್ಮ, ಮುಖಂಡರಾದ ಕೃಷ್ಣೇಗೌಡ, ರುದ್ರೇಶ್, ರಹಮತ್‌ಉಲ್ಲಾಸಾಬ್, ಪ್ರಸನ್ನಕುಮಾರ್, ಮುರುಳಿ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ