ಹುಳಿಯಾರು ಪಟ್ಟಣದಲ್ಲಿ ಶನಿವಾರ ಮುಂಜಾನೆಯಿಂದದ ಸತತ ಮೂರು ಘಂಟಗಳ ಕಾಲ ಬಂದ ಮಳೆಯಿಂದಾಗಿ ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಯಿತು. ಗುರುವಾರ ರಾತ್ರಿ ಕೂಡ ಗುಡುಗು ಸಹಿತ ಮಳೆಯಾಗಿತ್ತು.ಹವಮಾನ ಇಲಾಖೆಯ ಪ್ರಕಾರ ಬಂಗಾಳ ಕೊಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಭಾನುವಾರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯಲು ಕಾರಣ ಎನ್ನಲಾಗಿದೆ.
ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲೂ ಕೂಡ ಮಳೆಯಾಗಿದ್ದು ಕೆರೆಕಟ್ಟೆಗಳಿಗೆ ನೀರು ಬರಲು ಸಹಕಾರಿಯಾಗಿದೆ.ಎಲ್ಲಡೆ ತೋಟತುಡಿಕೆಗಳಲ್ಲಿ ನೀರು ನಿಲ್ಲುವ ಮಟ್ಟಕ್ಕೆ ಮಳೆಯಾಗಿದ್ದು ತೆಂಗುಬೆಳೆಗಾರರಿಗೆ ಹರ್ಷ ಮೂಡಿಸಿದೆ.ಎರಡುಮೂರು ದಿನದೀಂದ ಬರುತ್ತಿರುವ ತುಂತುರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
![]() |
ಭಾನುವಾರ ಬಂದ ಮಳೆಯಿಂದ ಬಸ್ ನಿಲ್ದಾಣ ತುಂಬಿ ಸಂಚಾರಕ್ಕೆ ಅಡಿಯಾಗಿರುವುದು. |
ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲೂ ಕೂಡ ಮಳೆಯಾಗಿದ್ದು ಕೆರೆಕಟ್ಟೆಗಳಿಗೆ ನೀರು ಬರಲು ಸಹಕಾರಿಯಾಗಿದೆ.ಎಲ್ಲಡೆ ತೋಟತುಡಿಕೆಗಳಲ್ಲಿ ನೀರು ನಿಲ್ಲುವ ಮಟ್ಟಕ್ಕೆ ಮಳೆಯಾಗಿದ್ದು ತೆಂಗುಬೆಳೆಗಾರರಿಗೆ ಹರ್ಷ ಮೂಡಿಸಿದೆ.ಎರಡುಮೂರು ದಿನದೀಂದ ಬರುತ್ತಿರುವ ತುಂತುರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಮುಂಜಾನೆ ಸುರಿದ ಮಳೆಯಿಂದ ಬಸ್ ನಿಲ್ದಾಣದಲ್ಲಿ ನೀರು ನಿಂತು ಓಡಾಡಲು ಕಷ್ಟವಾಗಿ ಪರಿಣಮಿಸಿತು.ಈ ಬಗ್ಗೆ ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಿಸದಿರುವುದು ಕಾರಣವಾಗಿದ್ದು ಇನ್ನೂ ಹೆಚ್ಚಿನ ಮಳೆ ಆದಲ್ಲಿ ಸಾಕಷ್ಟು ಸಮಸ್ಯೆಯಾಗಲಿದ್ದು ಈ ಬಗ್ಗೆ ಪಂಚಾಯ್ತಿಯವರು ತುರ್ತಾಗಿ ಗಮನ ಹರಿಸುವ ಅವಶ್ಯಕತೆಯಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ