ಹಂದನಕೆರೆಯ ಶ್ರೀ ಗುರುಗಿರಿಸಿದ್ದೇಶ್ವರ ಸ್ವಾಮಿಯ ನಿಜೈಕ್ಯ ಕ್ಷೇತ್ರದ ಸನ್ನಿಧಿಗೆ ವಿಶೇಷ ಶಕ್ತಿಯಿದ್ದು ಈ ಸ್ಥಳದ ಮಹಿಮೆಯಿಂದಾಗಿಯೇ ತಮಗೆ ಇರುವ ಖಾತೆ ಜೊತೆಗೆ ಮುಜರಾಯಿ ಖಾತೆಯೂ ದೊರೆಯುವಂತಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಹಂದನಕೆರೆ ಹೋಬಳಿ ಸಬ್ಬೇನಹಳ್ಳಿ ಸಮೀಪದ ಶ್ರೀ ಗುರುಗಿರಿಸಿದ್ದೇಶ್ವರ ಸ್ವಾಮಿಯ ಮೂಲ ಸನ್ನಿಧಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದ ಲೋಕಾರ್ಪಣಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಂದನಕೆರೆ ಕ್ಷೇತ್ರಕ್ಕೆ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ಈ ಕ್ಷೇತ್ರಕ್ಕೆ ತಾವು ಧಾರ್ಮಿಕ ಸಚಿವನಾಗಿ ಆಗಮಿಸದೆ ಭಕ್ತನಾಗಿ ಆಗಮಿಸಿರುವೆ ಎಂದರು.
ಸ್ವಾಮಿಯ ಮೂಲ ಕ್ಷೇತ್ರ ಅರಣ್ಯ ಇಲಾಖೆಗೆ ಸೇರಿರುವುದರಿಂದ ಕಾನೂನಿನ ತೊಡಕಿನಿಂದ ಜೀರ್ಣೋದ್ಧಾರ ಕಾರ್ಯ ಕಷ್ಟವಾಗಿದ್ದು ಇದರ ಬದಲಿಗೆ ಹಂದನಕೆರೆ ಊರೊಳಗಿರುವ ನಿಜೈಕ್ಯ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡುವುದು ಸುಲಭದ ಕಾರ್ಯವಾಗಿದ್ದು ಕಾರ್ಯಕಾರಿ ಮಂಡಳಿ ಒಪ್ಪಿಗೆ ನೀಡಿದಲ್ಲಿ ಶಾಸಕರ ಜೊತೆ ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.
ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿ ದ್ದರು. ಸಚಿವರ ಪತ್ನಿ ನಿರ್ಮಾಲಾಜಯಚಂದ್ರ, ದೇವಸ್ಥಾನದ ಅರ್ಚಕ ರುದ್ರೇಶ್, ವಿದ್ವಾನ್ ಚಂದ್ರಶೇಖರಶಾಸ್ತ್ರಿ, ಜಿಪಂ ಸದಸ್ಯೆ ಜಾನಮ್ಮ, ತಾಪಂ ಸದಸ್ಯೆ ಹೇಮಾವತಿ, ಚೌಕಕಟ್ಟೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ನಾಗರಾಜು, ಸೀಮೆಎಣ್ಣೆ ಕೃಷ್ಣಯ್ಯ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ