Add caption |
ಹುಳಿಯಾರು ಸಮೀಪದ ದಸೂಡಿಯಲ್ಲಿ ಗಣಪತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು
. ಶ್ರೀ ವಿನಾಯಕಾಂಜನೇಯಸ್ವಾಮಿ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶವಮುರ್ತಿಯನ್ನು ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ರಾಜಬೀದಿಯಲ್ಲಿ ಬೆಳ್ಳಿಯರಥದಲ್ಲಿ ಕೂರಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಜನರು ವಿಘ್ನ ನಿವಾರಕನಿಗೆ ಜಯಕಾರ ಹಾಕಿದರು.
ಈ ಸಂದರ್ಭದಲ್ಲಿ ವಿನಾಯಕನ ಕಾಯ್ರಕ್ರಮವನ್ನು ಗ್ರಾಮದಲ್ಲಿ ಯಶಸ್ವಿಯಾಗಿ ನೆರವೇರಿಸಿದ ಶ್ರೀ ವಿನಾಯಕಾಂಜನೇಯಸ್ವಾಮಿ ಸಂಘದ ಕಾರ್ಯಕರ್ತರಾದ ಪ್ರಸನ್ನ ನಾಯ್ಕ ದಸೂಡಿ, ಪ್ರಶಾಂತ್, ಹಿರಣ್ಣಯ್ಯ, ಸಂಗಮ್ , ಶ್ರೀನಿವಾಸ್, ಕುಮಾರ್, ಶರತ್ ಮತ್ತು ಇನ್ನಿತರರಿಗೆ ಯುವ ಮುಖಂಡರಾದ ಆರ್. ಜನಾರ್ಧನ್ ಅಭಿನಂದನೆ ತಿಳಿಸಿ ಸನ್ಮಾನ ಮಾಡಿದರು.ರಂಗಸ್ವಾಮಯ್ಯ ಉಪಸ್ಥಿತರಿದ್ದರು.
ಅದ್ದೂರಿ ಉತ್ಸವದ ನಂತರ ವಿಶೇಷ ಪೂಜೆ ಹಾಗೂ ಮಂಗಳಾರತಿ ಸಲ್ಲಿಸಿ ಕೆರೆಯಲ್ಲಿ ಶ್ರೀ ಸ್ವಾಮಿಯನ್ನು ವಿಸರ್ಜಿಸಲಾಯಿತು,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ